ಇತ್ತೀಚಿನ ದಿನಗಳಲ್ಲಿ ಯಾವ ರೀತಿಯ ಸೌಕರ್ಯಗಳು ಇದಿಯೋ ಇಲ್ಲವೋ ಗೊತ್ತಿಲ್ಲ ಆದರೆ ಫ್ರೀಜ್ ಗಳಿಗೆ ಬರವಿಲ್ಲ. ಪ್ರತಿಯೊಬ್ಬರ ಮನೆಗಳಲ್ಲೂ ಫ್ರೀಜ್ ಗಳಿವೆ.
ಫ್ರೀಜ್ ಅನ್ನು ಕನ್ನಡದಲ್ಲಿ ತಂಗಲು ಪೆಟ್ಟಿಗೆ ಎಂದು ಕರೆಯುತ್ತಾರೆ. ಫ್ರಿಜ್ ಇದೆ ಎಂದು ಸಿಕ್ಕ ಸಿಕ್ಕ ತಿನ್ನುವ ಎಲ್ಲ ವಸ್ತುಗಳನ್ನೂ ಇಟ್ಟು ತಿಂದರೆ ನೀವು ಆಸ್ಪತ್ರೆ ಸೇರುವುದು ನಿಶ್ಚಿತ.
ಕೆಲವು ವಸ್ತುಗಳು ತಾಜವಾಗಿರಲಿ ಎಂದು ಫ್ರೀಜ್ ಬಳಸುವುದು ಸರಿ ಆದರೆ ಫ್ರೀಜ್ ಇದೆ ಎಂದು ಎಲ್ಲವನ್ನು ತುಂಬುವುದು ಅಲ್ಲ.ಕೆಲವರ ಮನೆಯಲ್ಲಿ ಫ್ರೀಜ್ ಬಾಗಿಲನ್ನು ಮುಚ್ಚಲು ಆಗುವುದಿಲ್ಲ ಅಷ್ಟು ತುಂಬಿರುತ್ತದೆ.
ಆದರೆ ಫ್ರೀಜ್ ನಲ್ಲಿ ಎಲ್ಲ ವಸ್ತುಗಳನ್ನು ಇಡಬಾರದು ಅವುಗಳು ಯಾವುವು ಎಂದು ತಿಳಿಯೋಣ
ಟೊಮೊಟೊ ಇದು ಗಾಳಿ ಆಡುವ ಜಾಗದಲ್ಲಿ ಇರಬೇಕು. ಫ್ರೀಜ್ ನಲ್ಲಿ ಇಟ್ಟರೆ ಬಿಳಿಚಿಕೊಂಡು ಗಟ್ಟಿಯಾಗುತ್ತವೆ.
ಆಲೂಗೆಡ್ಡೆ ಇದು ಸಹ ಗಾಳಿ ಆಡುವ ಸ್ಥಳದಲ್ಲಿ ಇರಬೇಕು. ಫ್ರೀಜ್ ನಲ್ಲಿ ಇಟ್ಟರೆ ಸ್ಟಾರ್ಚ್ ಕಡಿಮೆಯಾಗುತ್ತದೆ ಜೊತೆಗೆ ರುಚಿ ಬದಲಾವಣೆ ಆಗುತ್ತದೆ.
ಈರುಳ್ಳಿಯನ್ನು ಸ್ವಲ್ಪ ಮಟ್ಟಿಗೆ ಗಾಳಿ ಆಡುವ ಬಳಿ ಕವರ್ ನಲ್ಲಿ ಹಾಕಿ ಇಡೀ. ಇದನ್ನು ಫ್ರೀಜ್ ನಲ್ಲಿ ಇಟ್ಟರೆ ತೇವಾಂಶಕ್ಕೆ ಕೊಳೆತು ಹೋಗುತ್ತವೆ.
ಜೇನುತುಪ್ಪವನ್ನು ಹೊರಗಡೆ ಇಟ್ಟರೆ ತುಂಬಾ ಫ್ರೆಶ್ ಆಗಿ ಇರುತ್ತದೆ. ಫ್ರೀಜ್ ನಲ್ಲಿ ಇಟ್ಟರೆ ಗಟ್ಟಿಯಾಗಿ ರುಚಿ ಹೋಗುತ್ತದೆ.
ಬೆಳ್ಳುಳ್ಳಿಯನ್ನು ಹೊರಗೆ ಇಡಬೇಕು ಫ್ರೀಜ್ ನಲ್ಲಿ ಇಟ್ಟರೆ ವಾಸನೆ ಹೋಗುತ್ತದೆ. ರುಚಿಯು ಇರುವುದಿಲ್ಲ. ಬೆಳ್ಳುಳ್ಳಿ ಸ್ವಲ್ಪ ಹಸಿ ಇದ್ದರೆ ಕೊಳೆತು ಹೋಗುತ್ತದೆ.
ಕಾಫೀ ಪುಡಿ. ಟೀ ಪುಡಿಗಳನ್ನು ತೇವ ಇರುವ ಜಗಕ್ಕೆ ಇಟ್ಟರೆ ಗಟ್ಟಿಯಾಗುತ್ತದೆ. ಅದಕ್ಕಾಗಿ ಗಾಳಿ ಅಡದ ಹಾಗೆ ಮುಚ್ಚಿ ಇಡಬೇಕು.
ಬ್ರೆಡ್ ಗಳನ್ನು ಹೊರಗೆ ಗಾಳಿ ಆಡದ ಹಾಗೆ ಮುಚ್ಚಿ ಇಡಬೇಕು. ಫ್ರೀಜ್ ಒಳಗೆ ಇಟ್ಟರೆ ನಾರಿನಂತೆ ಆಗುತ್ತವೆ. ಜೊತೆಗೆ ರುಚಿನು ಸಹ ಇರುವುದಿಲ್ಲ.
ಸೇಬು. ಕಿತ್ತಳೆ. ಬಾಳೆಹಣ್ಣು.ಇವುಗಳನ್ನು ಫ್ರೀಜ್ ನಲ್ಲಿ ಇಟ್ಟರೆ ಒಣಗುತ್ತವೆ ಜೊತೆಗೆ ರುಚಿಯು ಹೋಗುತ್ತದೆ.
ತುಪ್ಪವನ್ನು ಫ್ರೀಜ್ ನಲ್ಲಿ ಇಟ್ಟರೆ ತುಪ್ಪದಲ್ಲಿ ಇರುವ ಪೋಷಕಾಂಶಗಳು ಹೋಗುತ್ತವೆ.
ಎಣ್ಣೆಯನ್ನು ಫ್ರೀಜ್ ನಲ್ಲಿ ಇಡಬಾರದು ಇಟ್ಟರೆ ಅದನ್ನು ಯಾವುದಕ್ಕೂ ಬಳಸಲು ಸಾಧ್ಯವಾಗುವುದಿಲ್ಲ.
ಫ್ರೀಜ್ ಇದೆ ಎಂದು ಎಲ್ಲವನ್ನು ತುಂಬುವ ಮುಂಚೆ ಯಾವುದನ್ನು ಇಡಬೇಕು ಯಾವುದು ಇಡಬಾರದು ಎಂದು ತಿಳಿದು ಇಟ್ಟುಕೊಂಡು ಬಳಸಿ.