ಹೃದಯ ಆರೋಗ್ಯವಾಗಿ ಇರ್ಬೇಕು ಅಂದ್ರೆ ಇವುಗಳನ್ನ ತಿನ್ನಿ

0
1412

ಆರೋಗ್ಯ ಪೂರ್ಣವಾಗಿರಲು, ಹೃದಯ ಸಂಬಂಧಿ ತೊಂದರೆಗಳನ್ನು ತಡೆಗಟ್ಟಲು ಸಮತೋಲನ ಆಹಾರ ಮತ್ತು ಜೀವನ ಶೈಲಿಯಲ್ಲಿನ ಬದಲಾವಣೆಗಳು ಬಹಳ ಪ್ರಮುಖ ಅಸ್ತ್ರಗಳು.

ಪ್ರಪಂಚದಲ್ಲಿ ಇಂದು ಹೆಚ್ಚಿನ ಸಾವಿನ ಪ್ರಕರಣಗಳಿಗೆ ಕಾರಣ, ಹೃದಯಕ್ಕೆ ಸಂಬಂಧಿಸಿದ ತೊಂದರೆಗಳೇ ಆಗಿವೆ.  ಹೃದಯದ ತೊಂದರೆಗಳು ಎಲ್ಲ ವಯಸ್ಸಿನವರಲ್ಲೂ ಕಂಡುಬರುತ್ತವೆ. ಆದರೆ ಮಧ್ಯ ವಯಸ್ಕರ ಅಪಧಮನಿಗಳ ಒಳಮಯ್ಯಲ್ಲಿ ಮೇದಸ್ಸು ಶೇಖರವಾಗುವುದರಿಂದ ಹೃದಯಾಘಾತ ಸಂಭವ ಹೆಚ್ಚು.

ಇದಕ್ಕೆಲ್ಲ ಪ್ರಮುಖ ಕಾರಣ ಸರಿಯಿಲ್ಲದ ಆಹಾರ ಕ್ರಮ ಹಾಗೂ ಜೀವನಶೈಲಿ ಎಂದು ತಿಳಿಯಬಹುದು.  ಹಾಗಾದರೆ ಇದಕ್ಕೆಲ್ಲ ಪರಿಹಾರ ಉತ್ತಮ ಪೋಷಕಾಂಶ ಇರುವ ಆಹಾರಗಳು.
ಅವುಗಳನ್ನು ತಿಳಿಯೋಣ.

ಬೆರಿಹಣ್ಣು ಇದು ದೇಹದ ಕೊಬ್ಬಿನ ಅಂಶವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಬಲ್ಲದು.

ಪಪ್ಪಾಯಿ ಹಣ್ಣು ಹೃದಯ ರೋಗ ಇರುವವರಿಗೆ ಒಳ್ಳೆಯದು. ಪ್ರತಿದಿನ ರಾತ್ರಿ ಊಟದ ಬಳಿಕ ಪಪ್ಪಾಯ ಸೇವನೆ ಒಳ್ಳೆಯದು.

ದ್ರಾಕ್ಷಿ ಸಹ ಹೃದಯ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಬಹಳ ಸಹಕಾರಿಯಾಗಿದೆ.

ಬೆಳ್ಳುಳ್ಳಿಯು ಬಿ.ಪಿ, ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ತನ್ಮೂಲಕ ಹೃದಯ ಸಮಸ್ಯೆಗಳನ್ನು ನಿಯಂತ್ರಿಸಲು ಸಹಕರಿಸುತ್ತದೆ.

ಬಾದಾಮಿ, ಗೋಡಂಬಿ, ಪಿಸ್ತಾ, ವಾಲ್​ನಟ್, ಶೇಂಗಾ ಸೇವನೆಯಿಂದ ದೇಹದಲ್ಲಿನ ಕೆಟ್ಟ ಕೊಬ್ಬು ಕರಗಿ ದೇಹದ ಆರೋಗ್ಯವನ್ನು ಕಾಪಾಡುತ್ತದೆ.

ಶುಂಠಿಯ ಸೇವನೆ ಹೃದಯದ ಆರೋಗ್ಯಕ್ಕೆ ಉತ್ತಮ. ಹಾಗೂ ಜೀರ್ಣಕಾರಿಯೂ ಆಗಿರುವುದರಿಂದ ಅನಗತ್ಯ ಕೊಬ್ಬನ್ನು ಇದು ತೆಗೆಯುತ್ತದೆ.

ದಾಳಿಂಬೆಹಣ್ಣು, ಹಸಿರು ಸೊಪ್ಪುಗಳು ಅದರಲ್ಲೂ ಮೆಂತ್ಯಸೊಪ್ಪು ಉತ್ತಮ.

ಅರಿಶಿಣದಲ್ಲಿನ ಕರ್ಕ್ಯೂಮಿನ್ ಹೃದಯ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ

ಅಗಸೇ ಬೀಜದ ಸೇವನೆಯಿಂದ ಎಎಲ್​ಎ ರೂಪದ ಒಮೆಗಾ-3 ದೊರೆಯುತ್ತದೆ. ಒಮೆಗಾ-3 ಯು ಹೃದಯದ ಆರೋಗ್ಯಕ್ಕೆ ಬೇಕೆಂದು ಅಧ್ಯಯನಗಳು ಸ್ಪಷ್ಟಪಡಿಸಿವೆ.

ನೀರಿನಲ್ಲಿ ಕರಗುವ ನಾರಿನಾಂಶ ಹೊಂದಿರುವ ಇಸಬ್​ಗೋಲು, ಓಟ್ಸ್​ಗಳ ಬಳಕೆ ಒಳ್ಳೆಯದು. ಆಲಿವ್ ಆಯಿಲ್, ಎಕ್ಸ್​ಟ್ರಾ ವರ್ಜಿನ್ ಕೊಕೋನಟ್ ಆಯಿಲ್ ಉತ್ತಮ.

ಪ್ರತಿದಿವಸದ ಆಹಾರದಲ್ಲಿ ಬೀನ್ಸ್ ಬಳಸಿದರೆ ಒಳ್ಳೆಯದು. ಬೀಟ್​ರೂಟ್, ಕ್ಯಾರೆಟ್​ಗಳಿಂದ ಎಲ್ಲ ರೀತಿಯ ಪೋಷಕಾಂಶಗಳು ದೊರೆಯುತ್ತದೆ.

ಸಾಲ್ಮನ್ ಮೀನು ಇದು ರಕ್ತನಾಳಗಳನ್ನು ಮುಚ್ಚಿಕೊಳ್ಳದಂತೆ ನೋಡಿಕೊಳ್ಳುತ್ತದೆ.ಇದರಲ್ಲಿ ಒಮೆಗಾ 3 ಕೊಬ್ಬಿನ ಆಮ್ಲ ಇದ್ದು ಇದು ಹೃದಯ ರಕ್ತನಾಳಗಳ ಉರಿಯೂತ ಹಾಗೂ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.

ಶತವಾರಿ ಇದು ಆರೋಗ್ಯಕಾರಿ ಹಸಿರು ತರಕಾರಿ ರಕ್ತನಾಳವನ್ನು ಶುದ್ಧಿಕರಿಸುತ್ತದೆ.

ಕಲ್ಲಂಗಡಿ ಹಣ್ಣು ಹೊಟ್ಟೆಯಲ್ಲಿ ಕೊಬ್ಬಿನ ಶೇಕರಣೆಯನ್ನು ಕಡಿಮೆ ಮಾಡಿ ಹೃದಯದ ಕಾಯಿಲೆಯನ್ನು ತಪ್ಪಿಸುತ್ತದೆ.

ಈ ಆಹಾರಗಳನ್ನು ಹೆಚ್ಚು ಹೆಚ್ಚು ಬಳಸಿ ನಿಮ್ಮ ಹೃದಯದ ಸಮಸ್ಯೆಗಳಿಂದ ದೂರವಿರಿ

LEAVE A REPLY

Please enter your comment!
Please enter your name here