ಈ ಚಿಹ್ನೆಗಳು ಅಂಗೈಯಲ್ಲಿದೆಯೇ ನೀವೇ ಅದೃಷ್ಟವಂತರು

0
1015

ಕಷ್ಟ ಬಂದಾಗ ನಾವು ಭವಿಷ್ಯದ ಬಗ್ಗೆ ಬಹಳ ಕಾಳಜಿ ಹಾಗೂ ಕುತೂಹಲ ವಹಿಸುವುದು ಹೆಚ್ಚು. ಅದಕ್ಕಾಗಿ ಹಲವಾರು ಜ್ಯೋತಿಷಿಗಳ ಬಳಿ ಹೋಗುತ್ತೇವೆ. ಅವರು ಹೇಳುವ ಆಚಾರ ವಿಚಾರಗಳನ್ನು ಮಾಡಿಸುತ್ತೇವೆ. ನಾವು ಸ್ವಲ್ಪ ತಾಳ್ಮೆಯನ್ನು ತೆಗೆದುಕೊಂಡು ಜೀವನವನ್ನು ನಡೆಸಿದರೆ ಬದುಕು ಸರಳ ಹಾಗೂ ಸುಲಭವಾಗಿ ಕಾಣುತ್ತದೆ. ಜೀವನದಲ್ಲಿ ಒಮ್ಮಿಂದೊಮ್ಮೆಲೇ ಅದೃಷ್ಟ ಎನ್ನುವುದು ಬರುವುದಿಲ್ಲ. ನಾವು ಮಾಡುವ ಕೆಲಸದಲ್ಲೂ ನಂಬಿಕೆ ಹಾಗೂ ಪರಿಪೂರ್ಣತೆ ಎನ್ನುವುದು ಇರಬೇಕಾಗುತ್ತದೆ. ನಮ್ಮ ಅಂಗೈಯಲ್ಲಿ ಪ್ರತಿಯೊಂದು ಭಾಗಕ್ಕೂ ವಿಶೇಷವಾದ ಸ್ಥಾನ ಹಾಗೂ ಹೆಸರುಗಳಿವೆ. ಅವುಗಳ ಮೇಲೆ ಇರುವ ಅಪರೂಪದ ಚಿಹ್ನೆಗಳು ನಮ್ಮ ಭವಿಷ್ಯದ ಬಗ್ಗೆ ತಿಳಿಸಿಕೊಡುತ್ತದೆ. ಅದು ಅದೃಷ್ಟ ಇರಬಹುದು ಅಥವಾ ದುರಾದೃಷ್ಟದ ಸಂಗತಿಗಳೇ ಆಗಿರಬಹುದು. ಅವುಗಳನ್ನು ಗಮನಿಸುವುದು ಹಾಗೂ ಗುರುತಿಸುವ ಸಾಮರ್ಥ್ಯ ನಮ್ಮಲ್ಲಿರಬೇಕು ಅಷ್ಟೇ.

ನಮ್ಮ ಅಂಗೈಯಲ್ಲಿ ಇರುವ ಕೆಲವು ರೇಖೆಯ ಚಿಹ್ನೆಗಳು ನಮ್ಮ ಶ್ರೀಮಂತಿಕೆ ಹಾಗೂ ಸಮೃದ್ಧಿಯ ಬಗ್ಗೆ ಹೇಳುತ್ತವೆ. ನಿಮಗೂ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಬೇಕು, ಯಾವ ಬಗೆಯ ಅದೃಷ್ಟದ ಚಿಹ್ನೆ ನಿಮ್ಮ ಅಂಗೈಯಲ್ಲಿದೆ? ಅದು ಏನನ್ನು ಸೂಚಿಸುತ್ತದೆ ಎನ್ನುವುದನ್ನು ತಿಳಿಯಲು ಈ ಕೆಳಗಿರುವ ವಿವರಣೆಯನ್ನು ಗಮನಿಸಿ

ನೀವು ಆಕರ್ಷಕರಾಗಿದ್ದೀರಾ? ಜನರು ನಿಮಗೆ ಆಕರ್ಷಿತರಾಗಿದ್ದಾರೆಯೇ ಅಥವಾ ಇಲ್ಲವೇ ಎನ್ನುವುದನ್ನು ತಿಳಿಯಲು ನೀವು ಕುತೂಹಲರಾಗಿದ್ದರೆ ನಿಮ್ಮ ಅಂಗೈಯಲ್ಲಿ ಈ ಚಿಹ್ನೆ ಇದೆಯೇ ಎನ್ನುವುದನ್ನು ಗಮನಿಸಿ. ಆಕರ್ಷಣೀಯ ವ್ಯಕ್ತಿತ್ವ ಹೊಂದಿದ್ದೀರಿ ಎನ್ನುವುದಾದರೆ ಈ ಮೇಲೆ ತೋರಿಸಿರುವ ಚಿತ್ರದಲ್ಲಿರುವ ಹಾಗೆ ನಿಮ್ಮ ಅಂಗೈನಲ್ಲೂ ಧಾನ್ಯದಂತಹ ಆಕೃತಿ ಹೊಂದಿರುತ್ತೀರಿ ಎನ್ನಲಾಗುತ್ತದೆ. ಹೆಬ್ಬೆರಳ ಮೇಲೆ ಇರುವ ಧಾನ್ಯದ ಆಕೃತಿಯು ವ್ಯಕ್ತಿಗೆ ಕಾಂತೀಯ ವ್ಯಕ್ತಿತ್ವ ಇದೆ ಎನ್ನುವುದನ್ನು ಸೂಚಿಸುತ್ತದೆ. ಅಲ್ಲದೆ ಜನರು ಹೆಚ್ಚು ಆಕರ್ಷಣೆಗೆ ಒಳಗಾಗಿರುತ್ತಾರೆ.

ಬುಧ ಪರ್ವತ ಈ ಮೇಲೆ ತೋರಿಸುವ ಚಿತ್ರದಂತೆಯೇ ನಿಮ್ಮ ಅಂಗೈಯಲ್ಲಿ ಬುಧ ಪರ್ವತದ ಮೇಲೆ ಈ ಚಿಹ್ನೆಯಿದ್ದರೆ ವ್ಯಕ್ತಿಗೆ ಅತ್ಯುತ್ತಮ ಸಂಹನ ಕೌಶಲ್ಯವಿದೆ ಎಂದು ಹೇಳಲಾಗುತ್ತದೆ. ಅಲ್ಲದೆ ತನ್ನ ಮಾತುಗಾರಿಕೆಯಿಂದಲೇ ವ್ಯಕ್ತಿ ಹಣವನ್ನು ಗಳಿಸುವ ಸಾಧ್ಯತೆ ಇರುತ್ತದೆ. ಆ ಕೌಶಲ್ಯವನ್ನು ವ್ಯಕ್ತಿ ಹೇಗೆ ಉಪಯೋಗಿಸಿಕೊಳ್ಳುತ್ತಾನೆ ಎನ್ನುವುದರ ಮೇಲೆ ಹಣವನ್ನು ಗಳಿಸಬಹುದಾಗಿದೆ.

ಸೂರ್ಯನ ಪರ್ವತ ಉಂಗುರ ಬೆರಳಿನ ಕೆಳಭಾಗವನ್ನು ಸೂರ್ಯನ ಪರ್ವತ ಎಂದು ಕರೆಯಲಾಗುತ್ತದೆ. ಈ ಭಾಗದಲ್ಲಿ 6-8 ಸಾಲುಗಳಿರುವ ನಕ್ಷತ್ರದ ಚಿಹ್ನೆಯನ್ನು ಹೊಂದಿದ್ದರೆ, ನೀವು ಬಹಳ ಪ್ರಸಿದ್ಧರಾಗುತ್ತೀರಿ ಎನ್ನುವುದನ್ನು ತೋರಿಸುತ್ತದೆ. ಈ ಅದೃಷ್ಟವು ನಿಮಗೆ ಪ್ರಸಿದ್ಧ ಗಣ್ಯ ವ್ಯಕ್ತಿಗಳಾಗಿ ಮಿಂಚುವ ಸಾಧ್ಯತೆಗಳಿವೆ ಎಂದು ಹೇಳಲಾಗುವುದು.

ಚಂದ್ರ ಪರ್ವತ ಈ ಮೇಲೆ ತೋರಿಸಿರುವ ಚಿತ್ರದಂತೆ ನಿಮ್ಮ ಅಂಗೈಯಲ್ಲಿರುವ ಚಂದ್ರ ಪರ್ವತದ ಮೇಲೆ ನಕ್ಷತ್ರದ ಆಕೃತಿಯಿದ್ದರೆ. ಅಂತಹವರಿಂದ ಜನರು ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ಇವರು ತಮ್ಮ ರಕ್ತಸಂಬಂಧಿಗಳ ಅಥವಾ ತಾಯಿ ಮಾತನ್ನು ಕೇಳಿ, ಕೆಲಸವನ್ನು ಮಾಡಿದರೆ ಯಶಸ್ವಿಯಾಗುತ್ತಾರೆ. ಇಲ್ಲವಾದರೆ ಅವಕಾಶಗಳು ನಿಷ್ಪ್ರಯೋಜಕವಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಗುರು ಪರ್ವತ ತೋರು ಬೆರಳಿನ ಕೆಳಭಾಗವನ್ನು ಗುರು ಪರ್ವತ ಎಂದು ಕರೆಯುತ್ತಾರೆ. ಈ ಭಾಗದಲ್ಲಿ ಸ್ಟಾರ್ ಚಿಹ್ನೆ ಹೊಂದಿದ್ದರೆ ವ್ಯಕ್ತಿಯ ಆಡಳಿತ ಕೌಶಲ್ಯ ಭವ್ಯವಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಇದು ಶ್ರೇಷ್ಠ ನಾಯಕತ್ವದ ಗುಣವನ್ನು ತೋರಿಸುತ್ತದೆ. ವ್ಯಕ್ತಿ ಈ ಚಿಹ್ನೆ ಹೊಂದಿದ್ದರೆ ಭವಿಷ್ಯದಲ್ಲಿ ಸಮರ್ಥ ನಾಯಕನಾಗುವುದನ್ನು ಯಾರು ತಡೆಯಲು ಸಾಧ್ಯವಿಲ್ಲ.

ಜೀವ ರೇಖೆಯ ಮೇಲೆ ತ್ರಿಭುಜಾಕೃತಿ ವ್ಯಕ್ತಿ ಜೀವ ರೇಖೆಯ ಮೇಲೆ ಒಳ ಹಾಗೂ ಹೊರ ಭಾಗದಲ್ಲಿ ತ್ರಿಭುಜಾಕೃತಿಯನ್ನು ಹೊಂದಿದ್ದರೆ ನಿಮ್ಮ ವಯಸ್ಸು ಹಾಗೂ ಸಮಯದ ಆಧಾರದ ಮೇಲೆ ಶ್ರೀಮಂತರಾಗುತ್ತೀರಿ ಎನ್ನುವುದನ್ನು ತೋರಿಸುತ್ತದೆ. ಈ ಚಿಹ್ನೆ ಹೊಂದಿದ್ದರೆ ವ್ಯಕ್ತಿ ಪ್ರಸಿದ್ಧತೆ ಪಡೆಯುತ್ತಾನೆ ಎಂದು ಸಹ ಹೇಳಲಾಗುತ್ತದೆ.

ಜೀವ ರೇಖೆ ಮತ್ತು ಬುಧ ರೇಖೆಯ ನಡುವೆ ತ್ರಿಭುಜ ಈ ಮೇಲಿನ ಚಿತ್ರದಲ್ಲಿ ತೋರಿಸಿದಂತೆ ಜೀವ ರೇಖೆ ಮತ್ತು ಬುಧ ರೇಖೆಯ ನಡುವೆ ತ್ರಿಭುಜಾಕೃತಿಯಿದ್ದರೆ ವೃತ್ತಿ ಜೀವನದಲ್ಲಿ ಪ್ರಸಿದ್ಧತೆಯನ್ನು ಪಡೆಯುತ್ತಾರೆ ಎನ್ನಲಾಗುವುದು. ಅದು ಅವನು ಅಥವಾ ಅವಳು ಯಾರೇ ಆಗಿದ್ದರೂ ಈ ರೇಖೆ ಹೊಂದಿದ್ದರೆ ಉತ್ತಮ ಸ್ಥಾನ ಹಾಗೂ ಜನಪ್ರಿಯತೆ ಹೊಂದುವರು.

LEAVE A REPLY

Please enter your comment!
Please enter your name here