ಆಕೆ ಫೋನ್ ಮಾಡಿ ಹೆಲೋ ಎಂದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಮಾಯಾ

0
1253

ಇಂಟರ್ನೆಟ್ ಇದೊಂದು ಮಾಯಾ ಲೋಕ, ಇದನ್ನು ಸರಿಯಾಗಿ ಉಪಯೋಗಿಸಲು ಬರುವವರು ಏನಾದರೂ ಸಾಧಿಸಬಲ್ಲರು… ಒಂದು ವೇಳೆ ಅದರ ಬಗ್ಗೆ ನಿಜವಾದ ಜಾಗೃತೆ ಇಲ್ಲದೆ ಬಳಸಿದರೆ ಅದನ್ನು ಮೀರಿದ ಅಪಾಯ ಇನ್ನೊಂದಿಲ್ಲ… ಮುಖ್ಯವಾಗಿ ಸಮಾಜಿಕ ಜಾಲತಾಣಗಳಿಂದ ಎಷ್ಟು ಉಪಯೋಗಗಳಿವೆಯೊ ಅಷ್ಟೇ ಅಪಾಯವೂ ಇವೆ. ಹೆಜ್ಜೆ ಹೆಜ್ಜೆಗೂ ನಿಮ್ಮ ಅಮಾಯಕತ್ವವನ್ನು ಬಳಸಿಕೊಳ್ಳುವ ಕಳ್ಳರಿದ್ದಾರೆ… ಅವರಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ, ಈ ಮಧ್ಯೆ ಆನ್ಲೈನ್ ಸ್ಕ್ಯಾಮ್ ಹೆಚ್ಚಾಗಿ ಹೋಗಿದೆ, ಈ ಸ್ಕ್ಯಾಮ್ ಮಾಡುವುದು ಕೂಡ ಮಹಿಳೆಯರೆ… ಸಿಂಗಲ್ ಹುಡುಗರ ಮೇಲೆ ಇವರ ಕಣ್ಣು… ಇಷ್ಟಕ್ಕೂ ಇವರು ಹೇಗೆ ಟ್ರಾಪ್ ಮಾಡುತ್ತಾರೋ ಗೊತ್ತೇ

ಒಬ್ಬ ಹುಡುಗಿ ನಿಮಗೆ ಫೇಸ್ ಬುಕ್ ನಲ್ಲಿ ಮೆಸೇಜ್ ಮಾಡಿದರೆ ಏನು ಮಾಡುವಿರಿ…? ನೀವು ಯಾರು…? ನಾನು ನಿಮಗೆ ಹೇಗೆ ಗೊತ್ತು…? ನನಗೆ ಏಕೆ ಮೆಸೇಜ್ ಮಾಡುತಿದ್ದಿ…? ನಿಜಕ್ಕೂ ನಮ್ಮಲ್ಲಿ ಹೆಚ್ಚು ಜನರು ಈ ಪ್ರಶ್ನೆ ಕೇಳುವುದಿಲ್ಲ… ಹುಡುಗಿ ಎಂದು ತಿಳಿದರೆ ಸಾಕು ಎಂದು ಕಾಯುತ ಮೆಸೇಜ್ ಗೆ ರಿಪ್ಲೇ ಕೊಡುತ್ತಾರೆ… ಹೀಟ್ ನಿಂದ ಶುರುವಾಗುವ ಆಕೆಯ ಮೆಸೇಜ್ ಎಲ್ಲೆಲ್ಲಿಗೋ ಹೋಗುತ್ತದೆ.

ನಿಮನ್ನು ನಿದಾನವಾಗಿ ಬುಟ್ಟಿಗೆ ಹಾಕಿಕೊಳ್ಳತ್ತಾರೆ, ವಿಡಿಯೋ ಕಾಲ್ ಮಾಡೋಣ ಎಂದು ಮೆಲೇರಿಸುತ್ತಾರೆ… ವಿಡಿಯೋ ಕಾಲ್ ಕೂಡಾ ಮಾಡುತ್ತಾರೆ… ಆದರೆ ಆ ನಂತರ ಇರುತ್ತದೆ ಮಾರಿಹಬ್ಬ… ಮೆಲ್ಲಗೆ ನಿಮ್ಮ ಪರ್ಸನಲ್ ವಿಷಯಗಳನ್ನು ನಿಮ್ಮ ಬಾಯಲ್ಲೆ ಹೇಳಿಸುತ್ತಾರೆ, ನಿಮ್ಮ ಬ್ಯಾಂಕ್ ಪಾಸ್ ವರ್ಡ್ ತಿಳಿದುಕೊಳ್ಳುತ್ತಾರೆ… ನೀವು ಕಣ್ಣು ಮುಚ್ಚಿ ತಗೆಯುವುದರೊಳಗೆ ನಿಮ್ಮ ಹಣವನ್ನು ದೋಚಿರುತ್ತಾರೆ… ಇನ್ನೇನು ಎಷ್ಟು ಕಷ್ಟಪಟ್ಟರೂ ಅವರನ್ನು ಹಿಡಿಯಲು ಆಗುವುದಿಲ್ಲ. ಇಂತಹ ಘಟನೆ ಒಂದು ತಿರುಪತಿಯಲ್ಲಿ ನಡೆದಿದೆ…

ಮೈಸೂರು ನಲ್ಲಿ ಒಬ್ಬ ವ್ಯಕ್ತಿಗೆ ಹತ್ತು ದಿನಗಳ ಹಿಂದೆ ಒಂದು ಮಿಸ್ ಕಾಲ್ ಬಂದಿದೆ. ಮೊದಲು ಅದರ ಬಗ್ಗೆ ತಲೆಕೆಡಸಿಕೊಳ್ಳಲಿಲ್ಲ. ಮರು ದಿನ ಅದೇ ನಂಬರ್ ನಿಂದ ಮಿಸ್ ಕಾಲ್ ಬಂದಿದೆ ಯಾರೋ ಗೊತ್ತಿರುವವರು ಎಂದು ಕಾಲ್ ರಿಸೀವ್ ಮಾಡಿದನು. ಹುಡುಗಿಯ ದ್ವನಿ ಕೇಳಿ ಯಾರೆಂದು ಕೇಳಿದನು. ಆ ಯುವತಿಯು ಸಾರಿ ಪವನ್ ಏನೋ ಎಂದು ಮಾತುಗಳು ಬೆಳೆಸಿದಳು. ಅವನು ಸಾರಿ ರಾಂಗ್ ನಂಬರ್ ಎಂದು ಕರೆ ಕಟ್ ಮಾಡಿದನು… ಮತ್ತೆ ಅದೇ ದಿನ ವಾಟ್ಸಪ್ ನಲ್ಲಿ ದರ್ಶನ ನೀಡಿದಳು, ಇನ್ನೇನು ಹುಡುಗಿ ನಮಗೆ ಬಿದ್ದಿದ್ದಾಳೆ ಎಂದು ಭ್ರಮೆಯಲ್ಲಿ ಅವಳೊಂದಿಗೆ ರಾತ್ರಿ ಎಲ್ಲಾ ಕರೆಗಳು, ಚಾಟಿಂಗ್ ಗಳು ಶುರುವಾಯಿತು

ಅವಲನ್ನು ಗರ್ಲ್ ಫ್ರೆಂಡ್ ಎಂದು ಊಹಿಸಿಕೊಂಡನು, ಆದರೆ ಒಂದು ದಿನ ಆಕೆ ಅಳುತ್ತ ಕರೆ ಮಾಡಿ ಸ್ವಲ್ಪ ಸಮಸ್ಯೆ ಇದೆ ಅರ್ಜೆಂಟಾಗಿ ಹತ್ತು ಸಾವಿರ ಬೇಕು ಯಾರನ್ನು ಕೇಳುವುದು ಎಂದು ತಿಳಿಯುತಿಲ್ಲ ಅಳಲಾರಂಬಿಸಿದಳು. ಹುಡುಗಿ ಅತ್ತರೆ ಕರಗದ ಹುಡುಗರಿದ್ದಾರಾ.. ತಕ್ಷಣ ಆಕೆಯ ಅಕೌಂಟ್ ಡಿಟೈಲ್ಸ ಕೇಳಿದಳು… ಅವನು ಸ್ವಲ್ಪವೂ ತಡ ಮಾಡದೆ ಅಕೌಂಟ್ ಡಿಟೈಲ್ಸ್ ಕೊಡುವುದು ಅಲ್ಲದೆ ಆನ್ ಲೈನ್ ಪಾಸ್ವರ್ಡ ಎಲ್ಲವನ್ನು ಹೇಳಿ ಆಕೆಯ ಅಕೌಂಟ್ ಗೆ ಹತ್ತು ಸಾವಿರ ರೂಪಾಯಿ ಕಳುಹಿಸುತ್ತಾನೆ. ಇನ್ನೇನಿದೆ ಮರುದಿನದಿಂದ ಫೋನ್ ಸ್ವಿಚ್ ಆಫ್‌ ಫೋನು ಇಲ್ಲ ಮೆಸೇಜು ಇಲ್ಲ. ನಿಜ ತಿಳಿದು ಆ ಸಾಫ್ಟ್ ವೇರ್ ಹುಡುಗ ನರಳಿ ಹೋದನು. ಬೆಂಗಳೂರು ಜೆ ಪಿ ನಗರದಲ್ಲಿ ಸಹ ಇದೇ ಸೀನ್ ನಡೆದಿದೆ… ಈ ಬಾರಿ ಆ ಹುಡುಗಿ 20 ಸಾವಿರಕ್ಕೆ ಜಂಪ್ ಆಗಿದ್ದಾಳೆ…ಹುಡುಗಿಯರು ತುಂಬಾ ಚಾಲಾಕಿಗಳಗಿದ್ದಾರೆ ಹುಷಾರ್.. ಹುಡುಗಿ ಕಾಣಿಸಿದರೆ ಜೊಳ್ಳು ಸುರಿಸುವುದು… ಮಾತನಾಡಿದರೆ ಚಂಬು ಕಾಯಿಸುವುದನ್ನು ಕಡಿಮೆ ಮಾಡಿ.

LEAVE A REPLY

Please enter your comment!
Please enter your name here