ಬೀಟ್​ರೂಟ್ ತಿನ್ನೋಕೆ ಹಲವರು ಕಾರಣ ಇದೆ

0
1292

ನಾವು ದಿನನಿತ್ಯ ಬಳಸುವ ಆಹಾರ ಪದಾರ್ಥಗಳ ಉಪಯೋಗವನ್ನು ವೈಜ್ಞಾನಿಕ ದೃಷ್ಟಿಯಲ್ಲಿ ತೋರಿಸಿ ನಮ್ಮನ್ನು ಆ ಪದಾರ್ಥದ ಬಳಕೆಗಾಗಿ ಪ್ರೇರೇಪಿಸುತ್ತದೆ. ಅಂತಹ ವೈಜ್ಞಾನಿಕ ಭದ್ರ ನೆಲೆಗಟ್ಟನ್ನು ಹೊಂದಿರುವ ಆಹಾರ ಪದಾರ್ಥದ ಬಳಕೆಯು ಆರೋಗ್ಯವರ್ಧನೆಗೆ ನೂರಕ್ಕೆ ನೂರು ಪೂರಕ. ಅಂತಹ ಒಂದು ಪದಾರ್ಥವು ಮತ್ತೇನೂ ಆಗಿರದೆ ನಾವು ದಿನನಿತ್ಯ ಬಳಸುವ ತರಕಾರಿ ಬೀಟ್ರೂಟ್.

ವೈಜ್ಞಾನಿಕವಾಗಿ ಹೇಗೆ ಬಳಸಿದಾಗ ಇದರ ಪರಿಣಾಮವು ಹೇಗಿರುತ್ತದೆ ಎಂಬುದರತ್ತ ಗಮನಹರಿಸೋಣ. ಯಾವ ಖಾಯಿಲೆಗಳಿಗೆ ಅಥವಾ ತೊಂದರೆಗಳಿಗೆ ಇದು ಲಾಭದಾಯಕ ಎಂಬುದನ್ನು ಅರಿತು ಬಳಸೋಣ.

ಪೋ›ಟೀನ್, ಫಾಸ್ಪರಸ್, ಜಿಂಕ್, ಮ್ಯಾಂಗನೀಸ್, ಮ್ಯಾಗ್ನೇಷಿಯಂ, ಪೊಟ್ಯಾಷಿಯಂ, ಕಬ್ಬಿಣ, ಜೀವಸತ್ವ ಬಿ6, ತಾಮ್ರ ಹಾಗೂ ನಾರಿನ ಹೇರಳವಾದ ಅಂಶಗಳನ್ನು ಹೊಂದಿರುವ ಬೀಟ್ರೂಟ್ ದೇಹದಲ್ಲಿ ರಕ್ತವನ್ನು ಹೆಚ್ಚು ಮಾಡುತ್ತದೆ. ರಕ್ತದಲ್ಲಿನ ಹಿಮೊಗ್ಲೋಬಿನ್ ಅಂಶವು ಅಧಿಕವಾಗುತ್ತದೆ. ಶುದ್ಧ ರಕ್ತದ ಸಂಚಲನ ಉಂಟಾಗುತ್ತದೆ.

ಕ್ಯಾಲ್ಶಿಯಂ ಕೊರತೆಯನ್ನು ನೀಗಿಸಿ ಮೂಳೆಗಳನ್ನು ಧೃಡಗೊಳಿಸುವ ಅಂಶವನ್ನೂ ಸಹ ಹೊಂದಿದೆ. ದೇಹದಲ್ಲಿನ ಕಲ್ಮಶ ಪದಾರ್ಥಗಳನ್ನು ಹೊರಹಾಕಲು ಇದು ಪರಿಣಾಮಕಾರಿ.

ಮನೆಮದ್ದುಗಳು: ಬೀಟ್ರೂಟ್, ಮೂಲಂಗಿ ಹಾಗೂ ಕ್ಯಾರೆಟ್ನ್ನು ಸಮಪ್ರಮಾಣದಲ್ಲಿ ರುಬ್ಬಿಕೊಂಡು ಅದಕ್ಕೆ ಕೆಂಪುಕಲ್ಲುಸಕ್ಕರೆ ಹಾಕಿ ಜ್ಯೂಸ್ ಮಾಡಿಕೊಂಡು ಪ್ರತಿನಿತ್ಯ ಕುಡಿದಾಗ ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ಜೊತೆಯಲ್ಲಿ ಚರ್ಮದ ತೊಂದರೆಯೂ ಸಹ ಕಡಿಮೆಯಾಗುತ್ತದೆ. ಇದೇ ಮೇಲಿನ ಜ್ಯೂಸ್ಗೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಕುಡಿದರೆ ಬೊಜ್ಜಿನ ಸಮಸ್ಯೆಯು ಪರಿಹಾರವಾಗುತ್ತದೆ. ಬೀಟ್ರೂಟ್ನ ಪೇಸ್ಟ್ ಮಾಡಿಕೊಂಡು ಅದಕ್ಕೆ ಮದರಂಗಿ (ಮೆಹೆಂದಿ)ಯನ್ನು ಸೇರಿಸಿ ತಲೆಗೆ ಲೇಪಿಸಿ ನಂತರದಲ್ಲಿ ಸ್ನಾನಮಾಡಿದಾಗ ಬೆಳ್ಳಗಾಗಿರುವ ಕೂದಲೂ ಸಹ ಕಪ್ಪಾಗುತ್ತದೆ. ಅರ್ಧಗ್ಲಾಸ್ ಬೀಟ್ರೂಟ್ರಸ, ಅರ್ಧನಿಂಬೆಹಣ್ಣಿನ ರಸ ಹಾಗೂ ಒಂದುಚಮಚ ಜೇನುತುಪ್ಪವನ್ನು ಮಿಶ್ರಣಮಾಡಿ ಪ್ರತಿದಿನ ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ ಸೇವಿಸುತ್ತ ಬಂದಲ್ಲಿ ಬೊಜ್ಜು ಕರಗುತ್ತದೆ.

ಬಿಸಿಮಾಡಿದ ಎಳ್ಳೆಣ್ಣೆಗೆ ಅರ್ಧಚಮಚ ಬೀಟ್ರೂಟ್ ಪೇಸ್ಟ್ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಬೇಕು. ತಣ್ಣಗಾದ ನಂತರ ಇದನ್ನು ಗಾಯದ ಕಲೆಗಳಿಗೆ ನಿರಂತರವಾಗಿ ಹಚ್ಚಿದಾಗ ಕಲೆಗಳು ನಿಧಾನವಾಗಿ ಕಡಿಮೆಯಾಗುತ್ತದೆ.

ಮಲಬದ್ಧತೆ ಹಾಗೂ ಮೂಲವ್ಯಾಧಿಗೆ ಬೀಟ್ರೂಟ್ನ ಸೇವನೆ ಪರಿಣಾಮಕಾರಿ. ನೀರನ್ನು ಬಿಸಿಮಾಡಿ ಅದಕ್ಕೆ ಬೀಟ್ರೂಟ್ನ್ನು ಸಣ್ಣಸಣ್ಣ ಚೂರುಗಳನ್ನಾಗಿ ಮಾಡಿ ಹಾಕಿ ಕುದಿಸಬೇಕು. ಅದಕ್ಕೆ ಕೆಂಪುಕಲ್ಲುಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣಮಾಡಿ ರಾತ್ರಿ ಮಲಗುವ ಮೊದಲು ಒಂದು ಲೋಟ ಕುಡಿಯುತ್ತ ಬಂದರೆ ಮೂಲವ್ಯಾಧಿ ಹಾಗೂ ಮಲಬದ್ಧತೆ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಹೀಗೆ ಉತ್ತಮ ಆರೋಗ್ಯಕ್ಕಾಗಿ ಬೀಟ್ರೂಟ್ನ ಸೇವನೆಯನ್ನು ನಾವು ಮಾಡಬೇಕು. ಹೇಗೆ ಅತ್ಯಂತ ಸುಂದರವಾದ ಬಣ್ಣವನ್ನು ಬೀಟ್ರೂಟ್ ಹೊಂದಿರುವುದೋ ಅಂತೆಯೇ ಇದರ ಬಳಕೆಯು ದೇಹದ ಸೌಂದರ್ಯವನ್ನು, ಆರೋಗ್ಯವನ್ನು ವರ್ಧಿಸಲು ಸಹಾಯಮಾಡುತ್ತದೆ.

ಡಯಾಬಿಟಿಸ್ ಇರುವವರು ಬೀಟ್ರೂಟ್ ತಿನ್ನಲೇಬಾರದು ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. 100ಗ್ರಾಂ ಬೀಟ್ರೂಟ್ನಲ್ಲಿ 10 ಗ್ರಾಂ ನಷ್ಟು ಮಾತ್ರ ಕಾರ್ಬೆಹೈಡ್ರೇಟ್ ಅಂದರೆ ಸಕ್ಕರೆ ಅಂಶ ಇದೆ. ಜೊತೆಗೆ ಮೇಲೆ ತಿಳಿಸಿದ ಪೋಷಕಾಂಶಗಳು ಸಾಕಷ್ಟಿದೆ. ಆದರೆ ನಾವು ಮಧುಮೇಹ ನಿಯಂತ್ರಿಸಲು ಬಳಸುತ್ತಿರುವ 100ಗ್ರಾಂ ಗೋಧಿ, ರಾಗಿ, ಜೋಳಗಳಲ್ಲಿ 70 ರಿಂದ 80 ಗ್ರಾಂನಷ್ಟು ಕಾಬೋಹೈಡ್ರೇಟ್ಸ್ (ಸಕ್ಕರೆ ಅಂಶ) ಇದೆ. ಇದರಿಂದ ನಾವು ಅರ್ಥ ಮಾಡಿಕೊಳ್ಳಬೇಕಾದ ಅಂಶವೆಂದರೆ ಮಧುಮೇಹ ಹೊಂದಿರುವವರು ಹಸಿ ತರಕಾರಿ ಸಲಾಡ್, ಪಲ್ಯಗಳು, ನಟ್ಸ್ಗಳನ್ನು ಜಾಸ್ತಿ ಸೇವಿಸುತ್ತಾ ಕಾರ್ಬೆಹೈಡ್ರೇಟ್ಸ್ ಜಾಸ್ತಿ ಇರುವ ಆಹಾರವನ್ನು ಕಡಿಮೆ ಸೇವಿಸಬೇಕು.

LEAVE A REPLY

Please enter your comment!
Please enter your name here