ರಾಮನಗರ : ಇತ್ತೇಚೆಗೆ ಕನಕಪುರದ ಕೊಳಗೊಂಡನಹಳ್ಳಿಯಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ವಿರೋಧ ಪಕ್ಷಗಳು ಕೂಡ ನಮ್ಮ ಇಲ್ಲಿನ ರಸ್ತೆ ಅಭಿವೃದ್ಧಿಯನ್ನು ಮೆಚ್ಚಿದ್ದಾರೆ. ಕನಕಪುರ ತಾಲೂಕು ಸಮಗ್ರ ಅಭಿವೃದ್ಧಿಯಾಗಿದೆ ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಜನರು ಮೆಚ್ಚಿದ್ದಾರೆ ಮುಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್ ಗೆದ್ದೇ ಗೆಲ್ಲುವುದು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದಾರೆ.
ಇಡೀ ದೇಶದಲ್ಲಿ ರಾಜ್ಯದ ಇಂಧನ ಇಲಾಖೆ ಮಾದರಿ ಕೆಲಸವನ್ನ ನಾನು ಸಚಿವನಾದ ಮೇಲೆ ಮಾಡಿದೆ. ಇನ್ನು 25 ವರ್ಷಗಳ ಕಾಲ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇರದು. ನನಗೆ ಕಾಂಗ್ರೆಸ್ ಪಕ್ಷ ಹೆಚ್ಚಿನ ಜವಾಬ್ದಾರಿ ನೀಡಿದೆ. ಅದ್ದರಿಂದ ನಾನು ಹೆಚ್ಚಾಗಿ ರಾಜ್ಯ ಪ್ರವಾಸ ಮಾಡಬೇಕಿದೆ. ನೀವೆ ಅಭ್ಯರ್ಥಿ ಎಂದು ತಿಳಿದು ಈ ಚುನಾವಣೆಯಲ್ಲಿ ಕೆಲಸ ಮಾಡಿ. ನಾನು ವಿರೋಧ ಪಕ್ಷದವರಿಗೂ ತೊಂದ್ರೆ ಕೊಟ್ಟಿಲ್ಲ. ಅವರಿಗೂ ಸಿಗಬೇಕಾದ ಸವಲತ್ತುಗಳನ್ನ ಕೊಡಿಸಿದ್ದೇನೆ
ರಾಜ್ಯದಲ್ಲಿ ಕಾಂಗ್ರೆಸ್ ಉತ್ತಮ ವಾತಾವರಣ ಇದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗೋದು ಕನಸು. ನಾನು ಮಾತಿಗೆ ತಪ್ಪಿಲ್ಲ, ನುಡಿದಂತೆ ನಡೆದಿದ್ದೇನೆ. ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಎಂದು ಡಿಕೆಶಿ ಮತದರಲ್ಲಿ ಮನವಿ ಮಾಡಿಕೊಂಡರು.
ಡಿ.ಕೆ. ಶಿವಕುಮಾರ್ ಅವರು ನೀಡಿರುವ ಹೇಳಿಕೆಗೆ ಜೆ ಡಿ ಎಸ್ ಕಾರ್ಯಕರ್ತರು ಇದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದ್ದರೆ, ಕುಮಾರಸ್ವಾಮಿ ಆಡಳಿತವನ್ನ ಜನರು ಮೆಚ್ಚಿದ್ದಾರೆ ಯಾರು ಏನೇ ಹೇಳಿದರು ಈ ಬಾರಿ ಕುಮಾರಸ್ವಾಮಿ ಅವರು ಮುಖಮಂತ್ರಿ ಆಗೋದು ಖಚಿತ ಎನ್ನುವುದು ಜೆ ಡಿ ಎಸ್ ಕಾರ್ಯಕರ್ತರಲ್ಲಿ ಬಲವಾಗಿ ನಿಂತಿದೆ.