ನಮ್ಮ ದೇಹದ ಸ್ವಚ್ಛತೆ ನಮ್ಮ ದೇಹದ ಆರೋಗ್ಯವನ್ನು ಕಾಪಾಡುತ್ತದೆ. ನಾವು ದಿನ ನಿತ್ಯ ಯಾವುದಾದರೊಂದು ಕೆಲಸವನ್ನು ನಿರ್ವಹಿಸಲು ಹೊರಗಿನ ಓಡಾಟ. ಸುತ್ತಾಟ ಇದ್ದೆ ಇರುತ್ತದೆ. ಆ ಹೊರಗಿನ ಧೂಳು. ಬಿಸಿಲು.ಗಾಳಿಗೆ ನಮ್ಮ ದೇಹದ ಮೇಲೆ ಹಲವಾರು ಕ್ರಿಮಿ ಕೀಟಗಳು ಬಂದು ಸೇರಿರುತ್ತದೆ. ಅದರಿಂದ ನಮಗೆ ಹಲವಾರು ರೀತಿಯ ಆರೋಗ್ಯ ಸಮಸ್ಯೆ ಬರುತ್ತವೆ. ಇದರಿಂದ ಆಸ್ಪತ್ರೆ. ಔಷಧಿ. ಎಂದು ಸುತ್ತಾಡಿ ಆರೋಗ್ಯವನ್ನು ಹೆಚ್ಚು ಮಾಡಿಕೊಳ್ಳುತ್ತೇವೆ. ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ ಪಡೆಯಲು ನಾವು ಸ್ವಚ್ಛವಾಗಿರಬೇಕು.
ನಾವು ಪ್ರತಿದಿನ ಸ್ನಾನ ಮಾಡಿ ನಮ್ಮ ದೇಹವನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಯಾವುದೇ ಸಮಸ್ಯೆಗಳು ನಮ್ಮ ಬಳಿ ಬರದ ಹಾಗೆ ಕಾಪಾಡಬಹುದು.ಹಾಗಾಗಿ
ಮಾನವನ ಜೀವನದಲ್ಲಿ ಸ್ನಾನ ಒಂದು ಪ್ರಮುಖ ಪಾತ್ರವನ್ನು ವಹಿಸಿದೆ ಎನ್ನಬಹುದು.
ನಾವು ಸ್ನಾನಕ್ಕೆ ಯಾವ ರೀತಿಯ ನೀರನ್ನು ಬಳಕೆ ಮಾಡುತ್ತೇವೆ ಎಂಬುದು ಸಹ ನಮ್ಮ ಸ್ವಚ್ಛತೆ ಹಾಗೂ ಆರೋಗ್ಯಕ್ಕೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೌದು ಹೆಚ್ಚಾಗಿ ಎಲ್ಲರು ಸ್ನಾನಕ್ಕೆ ಬಿಸಿ ನೀರನ್ನು ಬಳಸುತ್ತಾರೆ. ಕೆಲವರು ಮಾತ್ರ ತಣ್ಣೀರು ಸ್ನಾನ ಮಾಡುವುದು.
ಆದರೆ ನಮ್ಮ ದೇಹಕ್ಕೆ ತಣ್ಣೀರು ಸ್ನಾನ ತುಂಬಾ ಒಳ್ಳೆಯದು ಎಂದು ಯಾರಿಗೂ ತಿಳಿದಿಲ್ಲ.
ತಣ್ಣೀರಿನಲ್ಲಿ ಮಾಡುವ ಸ್ನಾನ ನಮ್ಮ ಆರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೇಗೇ ತಿಳಿಯೋಣ
ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುವ ಕೆಲಸವನ್ನು ತಣ್ಣೀರು ಮಾಡುತ್ತದೆ.
ತಣ್ಣೀರು ಸ್ನಾನ ನಮ್ಮ ಆಂತರಿಕ ಮತ್ತು ಬೌದ್ಧಿಕ ಸ್ವಾಸ್ಥ್ಯಕ್ಕೆ ಮುಖ್ಯವಾಗಿರುತ್ತದೆ.
ತಣ್ಣೀರು ಸ್ನಾನದಿಂದ ನಮ್ಮ ಬಿಳಿ ರಕ್ತಕಣಗಳು ಹೆಚ್ಚು ಕಾರ್ಯತತ್ಪರವಾಗಿ ವೈರಸ್ ವಿರುದ್ಧ ಹೋರಾಡುತ್ತದೆ.
ತಣ್ಣೀರು ಸ್ನಾನದಿಂದ ದೇಹದ ಒಳಗೆ ತಂಪು ಉಂಟಾಗಿ ಸಾಮಾನ್ಯ ಶೀತದಿಂದ ನಮಗೆ ತ್ವರಿತ ಉಪಶಮನ ದೊರೆಯುತ್ತದೆ.
ತಣ್ಣೀರು ಸ್ನಾನ ದೇಹದಲ್ಲಿರುವ ಬ್ರೌನ್ ಫ್ಯಾಟ್ ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ ನೀಡುತ್ತದೆ. ಈ ಫ್ಯಾಟ್ ಗಳು ಗ್ಲುಕೋಸ್ ಅನ್ನಬಳಸಿಕೊಂಡು ಶಕ್ತಿಯನ್ನ ಉತ್ಪಾದಿಸುತ್ತದೆ, ಈ ಮೂಲಕ ದೇಹದ ತೂಕ ಇಳಿಯುತ್ತದೆ.
ತಣ್ಣೀರು ದೇಹದ ಅಧಿಕ ಕೊಬ್ಬನ್ನು ನಿವಾರಿಸಿ ನಮಗೆ ಸುಂದರ ಕಾಯವನ್ನು ನೀಡುತ್ತದೆ. ರಕ್ತ ಪರಿಚಲನೆಯ ಅಭಿವೃದ್ಧಿ ರಕ್ತ ಪರಿಚಲನೆಯ ತೊಂದರೆ ಇರುವವರು ನಿತ್ಯವೂ ತಣ್ಣೀರು ಸ್ನಾನ ಮಾಡುವುದು ಉತ್ತಮವಾಗಿರುತ್ತದೆ.
ಆರ್ಗನ್ಗಳು ಮತ್ತು ತ್ವಚೆಯ ನಡುವೆ ಇರುವ ರಕ್ತ ಪರಿಚಲನೆ ಸಮಸ್ಯೆಯನ್ನು ತಣ್ಣೀರು ದೂರ ಮಾಡುತ್ತದೆ.
ತಣ್ಣೀರು ಸ್ನಾನ ಚಯಾಪಚಯ ವ್ಯವಸ್ಥೆಯ ಅಭಿವೃದ್ಧಿಗೆ ಕಾರಣವಾಗುತ್ತದೆ.
ತಣ್ಣೀರು ಸ್ನಾನದಿಂದ ಮನಸ್ಸು ಶಾಂತವಾಗುತ್ತದೆ ಮತ್ತು ಒತ್ತಡ ನಿವಾರಣೆಯಾಗುತ್ತದೆ ಹಾಗೂ ದೇಹ ಚಟುವಟಿಕೆಯಿಂದ ಕೂಡಿರುತ್ತದೆ. ನಮ್ಮ ಟೆಂಪರೇಚರ್ ನಿಯಂತ್ರಿಸುತ್ತದೆ.
ಬೇಸಿಗೆಯಲ್ಲಿ ಸಾಮಾನ್ಯವಾಗಿ ನಾವು ವಿಪರೀತ ಬೆವರುತ್ತೇವೆ ಈ ಬೆವರುವಿಕೆಯನ್ನು ಕಡಿಮೆ ಮಾಡಲು ತಣ್ಣೀರು ಉತ್ತಮವಾಗಿರುತ್ತದೆ.
ಇದು ನಮ್ಮ ಶ್ವಾಸಕೋಶವನ್ನು ತೆರೆದು ಒಂದು ವಿಧದ ವ್ಯಾಯಾಮವನ್ನು ನೀಡುತ್ತದೆ.
ನಮ್ಮ ದೇಹದ ಶಕ್ತಿ ಹೆಚ್ಚಿಸುತ್ತದೆ ಜೊತೆಗೆ
ತಣ್ಣೀರು ಸ್ನಾನ ಮಾಡುವುದರಿಂದ ದೇಹಕ್ಕೆ ಹೆಚ್ಚಿನ ಆಮ್ಲಜನಕ ಸಿಗಿತ್ತದೆ ಮತ್ತು ಸುಸ್ತಾಗುವುದನ್ನ ತಡೆಯುತ್ತದೆ.
ಮಧ್ಯಾಹ್ನದ ನಂತರ ತಣ್ಣೀರು ಸ್ನಾನ ಮಾಡುವುದು ದೇಹಕ್ಕೆ ಉಲ್ಲಾಸವನ್ನು ನೀಡುತ್ತದೆ.
ನಮ್ಮ ಹಾರ್ಮೋನ್ ವೃದ್ಧಿಯಲ್ಲಿ ತಣ್ಣೀರು ಪ್ರಮುಖ ಪಾತ್ರ ವಹಿಸುತ್ತದೆ.
ತ್ವಚೆಯ ಆರೋಗ್ಯ ಹಾಗೂ ಹೊಳಪನ್ನು ಹೆಚ್ಚಿಸಲು ತಣ್ಣೀರ ಸ್ನಾನ ನೆರವಾಗುತ್ತದೆ. ಇದು ತ್ವಚೆಯ ಸೂಕ್ಷ್ಮ ರಂಧ್ರಗಳನ್ನು ಭದ್ರಗೊಳಿಸುವುದರ ಮೂಲಕ ಹೊರ ಪೊರೆಯನ್ನು ಬಿಗಿಗೊಳಿಸುತ್ತದೆ.
ಕೆಲವು ಪುರುಷರಲ್ಲಿ ಕಂಡು ಬರುವ ಬಂಜೆತನ ಸಮಸ್ಯೆ ದೂರವಾಗಿಸುವಲ್ಲಿ ತಣ್ಣೀರು ಸ್ನಾನ ಉಪಯುಕ್ತವಾಗಿದೆ.
ಪೆಟ್ಟು ಬಿದ್ದಿರುವ ಶರೀರದ ಭಾಗವನ್ನು ತಣ್ಣೀರಲ್ಲಿ ಮುಳಿಗಿಸಿ ಮಾಲೀಷ್ ಮಾಡಿದರೆ ಬೇಗನೆ ಗುಣವಾಗುವುದು.
ಮನುಷ್ಯ ದಿನನಿತ್ಯದ ಜಂಜಾಟದ ಬದುಕಿನಲ್ಲಿ ಯಾವುದಾದರೂ ಒಂದು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾನೆ. ಅಂತಹ ಮಾನಸಿಕ ಒತ್ತಡ ನಿವಾರಣೆಗೆ ಹಾಗೂ ಖನ್ನತೆ ಶಮನಗೊಳಿಸಲು ತಣ್ಣೀರಿನಿಂದ ಸ್ನಾನ ಮಾಡಿ.
ಆದ್ದರಿಂದ ಇನ್ನು ಮೇಲೆ ಬಿಸಿ ನೀರಿನಲ್ಲಿ ಸ್ನಾನ ಮಾಡುವ ಬದಲು ತಣ್ಣೀರು ಸ್ನಾನ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ.