ಇಂದು ಗುರುವಾರ ರಾಯರ ಮಹಿಮೆ ತಪ್ಪದೇ ಓದಿ

0
1208

ಶ್ರೀ ರಾಘವೇಂದ್ರ ಸ್ವಾಮಿಗಳ ಬಾಲ್ಯದ ಹೆಸರು ವೆಂಕಣ್ಣಭಟ್ಟರೆಂದು. ಮುಂದೆ ಯತಿಗಳಾಗಿ ಸಿದ್ಧಿಪಡೆದು ಶ್ರೀರಾಘವೆಂದ್ರ ಸ್ವಾಮಿಗಳೆಂದು ಜಗದ್ವಿಖ್ಯಾತರಾದರು. ಅವರು ಸ್ಥಾಪಿಸಿದ ಶ್ರೀಮಠವು, ಆಂಧ್ರಪ್ರದೇಶದ ಮಂತ್ರಾಲಯಂ ರೋಡ್ ರೈಲ್ವೆ ನಿಲ್ದಾಣಕ್ಕೆ ೮ ಕಿ.ಮೀ.ದೂರದಲ್ಲಿದೆ. ಮಂತ್ರಾಲಯವು ಆಂಧ್ರ ಪ್ರದೇಶ ದಲ್ಲಿ ಕರ್ನೂಲು ಜಿಲ್ಲೆಯ ಆದವಾನಿ ತಾಲ್ಲೂಕಿನ ಒಂದು ಊರು. ಶ್ರೀ ರಾಘವೇಂದ್ರ ಸ್ವಾಮಿ ರವರ ನೆಲೆವೀಡಾಗಿದ್ದರಿಂದ ಪ್ರಖ್ಯಾತಿಗೊಂಡ ಸ್ಥಳ. ತುಂಗಭದ್ರಾ ನದಿಯ ದಂಡೆಯಲ್ಲಿದೆ.

ರಾಘವೇಂದ್ರ ಸ್ವಾಮಿಗಳ ಗಂಥ ಸಂಪತ್ತು ತುಂಬಾ ದೊಡ್ಡದು. ಬಹಳ ಸರಳ ಹಾಗೂ ಸುಲಭ. ಇವರ ಧ್ಯಾನದಲ್ಲಿ ತೊಡಗಿದರೆ ನೆಮ್ಮದಿ, ಶಾಂತಿಯುತ ಬದುಕು ನಡೆಸಬಹುದು ಎಂಬ ನಂಬಿಕೆ ಇಂದಿಗೂ ಸಾವಿರಾರು ಜನರಲ್ಲಿದೆ.

ರಾಯರ ಸನ್ನಿಧಿಗೆ ಹೋಗಲು ಎಲ್ಲರಿಗೂ ಎಲ್ಲಾ ಕಾಲದಲ್ಲಿಯೂ ಅವಕಾಶ ಸಿಗದೆಯೂ ಇರಬಹುದು. ಅಂತಹವರು ಮನೆಯಲ್ಲೇ ರಾಯರ ಪೂಜೆಯನ್ನು ಮಾಡಬಹುದು. ಅದು ಹೇಗೆ ಎಂಬುದನ್ನು ತಿಳಿಸುತ್ತಿದ್ದೇವೆ.

ಚಂದ್ರಿಕಾಚಾರ್ಯರ ಚಂದ್ರಿಕಾ ಗ್ರಂಥ, ತರ್ಕತಾಂಡವ ಗ್ರಂಥಗಳಿಗೂ ಇವರ ವ್ಯಾಖ್ಯಾನಗಳಿವೆ. ಇವಲ್ಲದೇ ತಾತ್ಪರ್ಯ ನಿರ್ಣಯದ ಸಂಗ್ರಹವನ್ನು, ಪ್ರಮೇಯ ನವಮಾಲಿಕೆಯ ವ್ಯಾಖ್ಯಾನ, ಪ್ರಾತಃಸಂಕಲ್ಪ ಗದ್ಯ ಮುಂತಾದ ಸ್ವತಂತ್ರ ಗ್ರಂಥಗಳನ್ನು ರಚನೆ ಮಾಡಿ ಭಕ್ತರಿಗೆ ಪ್ರೀತಿ ಪಾತ್ರರಾಗಿದ್ದಾರೆ.

ಈ ಮೇಲೆ ಹೇಳಿದ ಯಾವುದಾದರೂ ಒಂದು ಗ್ರಂಥವನ್ನು ತೆಗೆದುಕೊಳ್ಳೊ. ನಂತರ ದೇವದಾರಿನ ಮಣೆಯನ್ನು ಶುದ್ಧವಾಗಿ ತೊಳೆದಿಟ್ಟುಕೊಳ್ಳಬೇಕು. ಸಾಧ್ಯವಾದರೆ ಮನೆಯ ವಿಶಾಲವಾದ ಕೊಠಡಿಯಲ್ಲಿ, ಪ್ರದಕ್ಷಿಣೆ ಬರಲಿಕ್ಕೆ ಅನುಕೂಲವಾಗುವಂತೆ ಸ್ಥಳವನ್ನು ಶುದ್ಧ ಮಾಡಿ ರಂಗೋಲಿ ಹಾಕಿ ಅದರ ಮೇಲೆ ಮಣೆ ಇಡಬೇಕು. ದೇವರ ಮನೆಯಲ್ಲಿಯೇ ಮಣೆ ಇಟ್ಟರೆ ಇನ್ನು ಒಳ್ಳೆಯದು.

ದೇವರ ಮನೆಯಲ್ಲಿ ಪ್ರದಕ್ಷಿಣೆ ಹಾಕಲು ಅನುಕೂಲವಿಲ್ಲದಿದ್ದರೆ ಆ ಮಣೆಯ ಮೇಲೆ ಸೂತ್ರ-ಭಾಷ್ಯ-ತತ್ವಪ್ರಕಾಶಿಕಾ-ಚಂದ್ರಿಕಾ ಸಮೇತವಾದ ರಾಘವೇಂದ್ರ ಸ್ವಾಮಿಗಳ ಪ್ರಕಾಶಿಕ ಗ್ರಂಥ, ಪರಿಮಳ ಅಥವಾ ರಾಘವೇಂದ್ರಸ್ವಾಮಿಗಳ ಗ್ರಂಥ ಇಡಬೇಕು. ಅದರ ಹಿಂಭಾಗದಲ್ಲಿ ಪರಮ ಮಂಗಳವಾದ ಮೂಲವೃಂದಾವನದ ಚಿತ್ರವನ್ನಿಡಬೇಕು. ಮಣೆ ಮುಂದೆ ದೀಪವನ್ನು ಹಚ್ಚಿಡಬೇಕು. ರಾಘವೇಂದ್ರಸ್ತೋತ್ರ, ಅಥವಾ ಬಾರದಿದ್ದರೆ ರಾಘವೇಂದ್ರ ಸ್ವಾಮಿ ನಮಃ ಎಂದು ಹೇಳುತ್ತಾ ಹೂಗಳನ್ನು ಏರಿಸಬೇಕು. ಬಳಿಕ ಎದ್ದು ನಿಂತು ರಾಘವೇಂದ್ರ ಸ್ವಾಮಿಗಳನ್ನು ನೆನೆದು ಶ್ರೀ ಗುರುಭ್ಯೋ ನಮಃ ಎನ್ನುತ್ತಾ ಶ್ರೀ ರಾಘವೇಂದ್ರಾಯ ನಮಃ ಎನ್ನುತ್ತಾ ಮಾಂ ಪಾಹಿ ಮಾಂ ಪಾಹಿ ಎನ್ನುತ್ತಾ ಪ್ರದಕ್ಷಿಣೆ ಬಂದು ನಮಸ್ಕಾರಗಳನ್ನು ಹಾಕಬೇಕು.
ನಂತರ ನಮಗೆ ಈಡೇರಬೇಕಾದ ಕೆಲವು ಬೇಡಿಕೆಗಳನ್ನು ದೇವರ ಮುಂದಿರಿಸಿ ಭಕ್ತಿ ಪೂರ್ವಕವಾಗಿ ನಮಸ್ಕಾರ ಮಾಡಬೇಕು. ಗುರುರಾಯರನ್ನು ಭಕ್ತಿಯಿಂದ ನೆನೆಯಬೇಕು. ಸಾಧ್ಯವಾದರೆ ಕೆಲವರಿಗೆ ಅನ್ನಸಂತಾರ್ಪಣೆ ಏರ್ಪಡಿಸಬೇಕು.

ನಂತರ ರಾಘವೆಂದ್ರ ಸ್ವಾಮಿಗಳ ಭಜನೆಯನ್ನು ಹೇಳಿದರೆ ಇನ್ನೂ ಉತ್ತಮ. ರಾಯರ ನೆನದವರಿಗೆ ಕಷ್ಟಗಳಿಲ್ಲ. ರಾಯರ ಭಕ್ತಿಯಿಂದ ನೆನೆದರೆ ಎಂತಹ ಸಮಸ್ಯೆ ಬಂದರೂ ನಿವಾರಣೆಯಾಗುವುದು ಖಂಡಿತ.

LEAVE A REPLY

Please enter your comment!
Please enter your name here