ಇತ್ತೀಚಿನ ದಿನಗಳ ಕೆಲಸ. ಒತ್ತಡ. ಜವಾಬ್ದಾರಿ. ಸುತ್ತಾಟಗಳಿಂದ ಮಹಿಳೆಯರು ಬೇಗ ವಯಸ್ಸಾದಂತೆ ಕಾಣುತ್ತಾರೆ. ಆದರೆ ಮಹಿಳೆಯರಿಗೆ ಎಷ್ಟು ವಯಸ್ಸಾದರು ಅವರು ಎಂಗ್ ಅಂಡ್ ಕ್ವೀನ್ ಆಗಿ ಕಾಣಲು ಇಷ್ಟ ಪಡುತ್ತಾರೆ.
ಅದಕ್ಕಾಗಿ ಹಲವಾರು ರೀತಿಯ ಬ್ಯುಟಿ ಪಾರ್ಲರ್ ಗಳಿಗೆ ಹೋಗಿ ಹಲವಾರು ರೀತಿಯ ಪ್ರಯೋಗಗಳನ್ನು ಮಾಡುತ್ತಾರೆ. ಆದರು ವಯಸ್ಸಾದಂತೆಯೇ ಕಾಣುತ್ತಾರೆ.ಅದರಲ್ಲೂ ವಯಸ್ಸಾದಂತೆ ಕಾಣುವುದು ಅವರ ಬೊಜ್ಜು ಇತ್ತೀಚೆಗೆ ಎಲ್ಲರಲ್ಲೂ ಬೊಜ್ಜು ಹೆಚ್ಚಾಗಿ ಅದು ವಯಸ್ಸಾದಂತೆ ಕಾಣುತ್ತದೆ. ಜೊತೆಗೆ ಅವರು ಸೇವಿಸುವ ಆಹಾರವು ಸಹ ಇದಕ್ಕೆ ಕಾರಣ ಆಗುತ್ತದೆ.
ಆದ್ದರಿಂದ ಮಹಿಳೆಯರು ವಯಸ್ಸಾದಂತೆ ಕಾಣದಿರಲು ಅನುಸರಿಸಬೇಕಾದ ಮಾರ್ಗಗಳು.
ಹೆಚ್ಚು ಹೆಚ್ಚು ಚಟುವಟಿಕೆಯಿಂದ ಇರಬೇಕು.
ನೀವು ಎಷ್ಟು ಚಟುವಟಿಕೆಯಿಂದ ಇರುತ್ತಿರೋ ಅಷ್ಟು ಆರೋಗ್ಯವಾಗಿ ಇರುತ್ತೀರಿ.
ಮಹಿಳೆಯರು ತಾವು ಸೇವಿಸುವ ಆಹಾರದಲ್ಲಿ ಆಂಟಿ ಆಕ್ಸಿಡೆಂಟ್ ಗಳು. ವಿಟಮಿನ್ ಗಳು. ಮಿನರಲ್ ಗಳು. ಹೆಚ್ಚಿಗಿ ಇರುವಂತೆ ನೋಡಿಕೊಳ್ಳಬೇಕು.
ಬ್ಲೂ ಬೆರ್ರಿ. ಸ್ಟ್ರಾಬೆರಿ. ಕ್ರಾನ್ ಬೆರ್ರಿ. ಗುಸ್ ಬೆರ್ರಿ. ಪ್ಲಾವೊನೋಯ್ಡ್.ಗಳು ಅಧಿಕ ಪ್ರಮಾಣದಲ್ಲಿ ಇದ್ದು ಇವು ಸಮೃದ್ಧವಾದ ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿದ್ದು ಮಹಿಳೆಯರು ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ.
ಆಗು ಈ ಒಂದು ಬೆರ್ರಿಯನ್ನು ತಿಂದರೆ ಸಾಕು ಅದು ನಮ್ಮ ಮೆದುಳಿನ ಕ್ರಿಯೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಜೊತೆಗೆ ನಮ್ಮ ಮನಸ್ಸಿನ ಮೇಲೆ ಉಂಟಾಗುವ ಒತ್ತಡವನ್ನು ಕಡಿಮೆ ಮಾಡುತ್ತದೆ, ಉರಿಯನ್ನು ಸಹ ಕಡಿಮೆ ಮಾಡುತ್ತದೆ ಮತ್ತು ಮೆದುಳಿನ ಕೋಶಗಳನ್ನು ಆರೋಗ್ಯಯುತಗೊಳಿಸುತ್ತದೆ.
ಆಲಿವ್ ಆಯಿಲ್ ನಮ್ಮ ದೇಹಕ್ಕೆ ಅತ್ಯಗತ್ಯವಾಗಿರುವ ಪರಿಶುದ್ಧವಾದ ಮತ್ತು ಆರೋಗ್ಯಯುತವಾದ ಕೊಬ್ಬನ್ನು ಒದಗಿಸಿ ನಮ್ಮ ಕೂದಲು ಮತ್ತು ಚರ್ಮವನ್ನು ಜೀವನಪರ್ಯಂತ ಆರೋಗ್ಯಶಾಲಿಯನ್ನಾಗಿಸುತ್ತದೆ.
ಈ ಆಲಿವ್ ಎಣ್ಣೆಯಲ್ಲಿ “ಆರೋಗ್ಯಯುತ ಕೊಬ್ಬು” ಅಂದರೆ ಮೊನೊಅನ್ಸ್ಯಾಚುರೇಟೆಡ್ ಕೊಬ್ಬುಗಳು ಲಭ್ಯವಿರುತ್ತವೆ.
ಮಹಿಳೆಯರು ತಮ್ಮ ತ್ವಚೆಯನ್ನು ಮೃದುವಾಗಿಟ್ಟುಕೊಳ್ಳಲು ಸಾಲ್ಮನ್ ಮೀನನ್ನು ತಿನ್ನಬೇಕು.
ಕಡು ಹಸಿರು ಬಣ್ಣದ ಸೊಪ್ಪುಗಳಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, ಫೊಲಿಕ್ ಆಮ್ಲ, ಕಬ್ಬಿಣಾಂಶ, ಪೊಟಾಶಿಯಂ, ಕ್ಯಾಲ್ಸಿಯಂ ಮತ್ತು ಮ್ಯಗ್ನೀಶಿಯಂಗಳು ಅಧಿಕ ಪ್ರಮಾಣದಲ್ಲಿರುತ್ತವೆ. ವಿಟಮಿನ್ ಬಿ ಯು ಹೃದಯದ ಆರೋಗ್ಯಕ್ಕೆ ಮತ್ತು ನೆನಪಿನ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.
ವಿಟಮಿನ್ ಎ ತ್ವಚೆಯ ಕೋಶಗಳನ್ನು ನವೀಕರಿಸುತ್ತದೆ.
ಎಲ್ಲ ಬಗೆಯ ಸೊಪ್ಪುಗಳಲ್ಲಿ ಕಂಡು ಬರುವ ಲುಟೇನ್ ನಮ್ಮ ದೃಷ್ಟಿಯನ್ನು ಕಾಪಾಡುತ್ತದೆ.
ಸೊಪ್ಪುಗಳಲ್ಲಿರುವ ಅಂಟಿ ಆಕ್ಸಿಡೆಂಟ್ಗಳು ತ್ವಚೆಯ ಮೇಲೆ ಸುಕ್ಕುಗಳು ಉಂಟಾಗದಂತೆ ಕಾಪಾಡುತ್ತವೆ.
ಲೈಕೊಪೀನ್, ಲೂಟೇನ್ ಮತ್ತು ಬೀಟಾ- ಕ್ಯಾರೋಟಿನ್ಗಳು ಸೊಪ್ಪುಗಳಲ್ಲಿ ಸಾಮಾನ್ಯವಾಗಿ ದೊರೆಯುತ್ತವೆ. ಇವು ನೇರಳಾತೀತ ಕಿರಣಗಳನ್ನು ತಡೆದು, ತ್ವಚೆಯು ವಯಸ್ಸಾದಂತೆ ಕಾಣುವುದನ್ನು ತಡೆಯುತ್ತವೆ.
ಸೊಪ್ಪಿನಲ್ಲಿರುವ ಪೋಷಕಾಂಶಗಳು ಹೃದ್ರೋಗಗಳನ್ನು, ಅಸ್ತಮಾ, ಸಂಧಿವಾತ ಮತ್ತು ಇನ್ನಿತರ ಕ್ಯಾನ್ಸರ್ಗಳನ್ನು ಬರದಂತೆ ತಡೆಯುತ್ತವೆ.
ಬೆಳ್ಳುಳ್ಳಿಯು ಅಲ್ಲಿಯುಮ್ಸ್ ಎಂಬ ತರಕಾರಿಗಳ ಗುಂಪಿಗೆ ಸೇರಿದ್ದು. ಇದು ನಮ್ಮ ಕರುಳಿನ ಸ್ವಾಭಾವಿಕ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಕರುಳಿನಲ್ಲಿರುವ ವಿಷಕಾರಕಗಳನ್ನು ಮತ್ತು ಕಾರ್ಸಿನೊಜೆನ್ಗಳನ್ನು ತೊಲಗಿಸುತ್ತದೆ. ಕೋಶಗಳು ಹಾಳಾಗದಂತೆ ಕಾಪಾಡುತ್ತದೆ. ಹೃದ್ರೋಗಗಳನ್ನು ತಡೆಯುತ್ತದೆ. ಇದರಲ್ಲಿ ಅಂಟಿ ಆಕ್ಸಿಡೆಂಟ್ಗಳು ಅಧಿಕ ಪ್ರಮಾಣದಲ್ಲಿದ್ದು ಇದು ಅತಿರೇಕದಿಂದ ಕೂಡಿದ ಕೋಶಗಳು ಬೆಳೆಯದಂತೆ ತಡೆಯಲು ಮತ್ತು ಮೆದುಳಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸಲು ನೆರವಾಗುತ್ತದೆ.
ವ್ಯಾಯಾಮ. ಕೆಲಸಗಳನ್ನು ಹೆಚ್ಚು ಚಟುವಟಿಕೆಯಿಂದ ಮಾಡುವುದು ಒಳ್ಳೆಯದು.
ಇವುಗಳನ್ನು ಪಾಲಿಸುತ್ತ ಬಂದರೆ ಮಹಿಳೆಯರು ವಯಸ್ಸಾದಂತೆ ಕಾಣುವುದನ್ನು ತಡೆದು .ಸುಂದರವಾಗಿ ಕಾಣಬಹುದು.