ಆಸಿಡಿಟಿ ಸಮಸ್ಯೆಗೆ ಇದ್ರೆ ಮಾತ್ರೆ ತೆಗೆದುಕೊಳ್ಳದೇ ಆಸಿಡಿಟಿ ಸರಿ ಹೋಗುತ್ತೆ.

0
1320

ಅಸಿಡಿಟಿ ಆದಾಗ ನಾವೆಲ್ಲಾ ಮಾಡುವ ಒಂದು ದೊಡ್ಡ ತಪ್ಪು ಎಂದರೆ ಮಾತ್ರೆ ನುಂಗುವುದು. ಮಾತ್ರೆ ನುಂಗೋ ಮುಂಚೆ ಈ‌ ಮನೆಮದ್ದುಗಳ್ನ ಟ್ರೈ ಮಾಡಿ ಮನೇಲಿ ದಿನಾ ಬಳಸೋ ಪದಾರ್ಥಗಳು ನಮಗೆ ಏನೆಲ್ಲಾ ರೋಗಗಳಿಂದ ಮುಕ್ತಿ ಕೊಡುತ್ತದೆ.

ಇದು ಇತ್ತೀಚಿನ ದಿನಗಳಲ್ಲಿ ಜನರನ್ನ ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯಾಗಿದೆ. ಹೊತ್ತಿಗೆ ಸರಿಯಾಗಿ ತಿನ್ನದಿರುವುದು.. ಕರಿದ ತಿಂಡಿಗಳು, ಖಾರದ ತಿಂಡಿಗಳ ಸೇವನೆ ಹೆಚ್ಚಿನ ಪ್ರಮಾಣದಲ್ಲಿ ಮಸಾಲಾ ಪಧಾರ್ಥಗಳ ಸೇವನೆ ಮುಂತಾದ ಕಾರಣಗಳಿಂದ ಗ್ಯಾಸ್ಟ್ರಿಕ್ ಬರಿಸಿಕೊಂಡು ಒದ್ದಾಡುತ್ತಿರುತ್ತಾರೆ. ಎಲ್ಲರ ಜೀವನದಲ್ಲೂ ಒಂದಲ್ಲ ಒಂದ್ ಸಲ ಆಸಿಡಿಟಿ ಆಗೇ ಆಗತ್ತೆ. ಯಾವುದೋ ಫಂಕ್ಷನ್ ಅಲ್ಲಿ ಒಂದು ಗುಲಾಬ್ ಜಾಮೂನ್ ಹೆಚ್ಚಾಗಿ ತಿಂದ್ರೆ ಅಥವಾ ಕಾಫೀ ಜೊತೆ ಖಾರಖಾರವಾಗಿ ಸಮೋಸ ತಿಂದರೆ ಹುಳೀತೇಗು ಹೊಟ್ಟೆಶೂಲೆ ಶುರು ಆಗತ್ತೆ. ಬೇಕರಿ ಐಟಂ ತಿನ್ನುವವರಿಗಂತೂಆಸಿಡಿಟಿ ಸಮಸ್ಯೆ ತಪ್ಪಿದ್ದಲ್ಲ.  ಅಂತಹ ಸಮಯದಲ್ಲಿ ಒಂದು ಬಾಟಲ್ ಆಂಟಾಸಿಡ್  ಜೆಲುಸಿಲ್, ಈನೋ ಖಾಲೀ ಮಾಡ್ಲೇ ಬೇಕಾಗತ್ತೆ. ಆದ್ರೆ ಇದರ ಬದಲು ನ್ಯಾಚುರಲ್ ಆಗಿ ದಿನಾ ಸಿಗೋ ಅಂತ, ನಮ್ಮ ಮನೇಗಳಲ್ಲಿ ಇರೋ ಅಂತ ವಸ್ತುಗಳೇ ನಮ್ಮ ಅಸಿಡಿಟಿ ಕಮ್ಮಿ ಮಾಡತ್ತೆ ಅಂತ ನಿಮಗೆ ಗೊತ್ತಾ?

ಅಸಿಡಿಟಿ ಕಮ್ಮಿ ಆಗುವುದಕ್ಕೆ ಈ 9 ಮನೆಮದ್ದು ತಿಂದು ನೋಡಿ. ಇದರಿಂದ ಕಡಿಮೆ ಆಗದೇ ಹೋದರೆ ಮಾತ್ರ ಡಾಕ್ಟರ್ ಹತ್ರ ಹೋಗಿ.

ಬಾಳೆಹಣ್ಣು:
ಇವು ಹೆಚ್ಚು ಖನಿಜಾಂಶ ಹೊಂದಿದ್ದು, ದೇಹದ ಪಿಎಚ್ ಜಾಸ್ತಿ ಮಾಡಿ ಅಸಿಡಿಟಿ ಕಮ್ಮಿ ಆಗತ್ತೆ. ಬಾಳೆಹಣ್ಣಲಿರೋ ನಾರಿನ ಅಂಶ ಆಹಾರ ಜೀರ್ಣ ಆಗುವುದಕ್ಕೆ ಸಹಾಯ ಮಾಡತ್ತೆ. ಹೆಚ್ಚು ಬಾಳೆಹಣ್ಣು ತಿಂದಷ್ಟೂ ಬೇಗ ಆಸಿಡಿಟಿ ಕಮ್ಮಿ ಆಗತ್ತೆ.

ತುಳಸಿ:
ಇದರಲ್ಲಿ ಹುಣ್ಣುಗಳನ್ನು, ಹೊಟ್ಟೆ ಅಲ್ಸರ್ ಗಳನ್ನೂ ತಡ್ಯೋ ಗುಣ ಇದೆ. ಇದು ಹೊಟ್ಟೆಗೆ ಹೆಚ್ಚಿನ ಮ್ಯೂಕೋಸ್ ಸಿಗೋದಿಕ್ಕೆ ಸಹ ಸಹಾಯ ಮಾಡತ್ತೆ. ಇದರಿಂದ ಗ್ಯಾಸ್ ಆಗೋದು ಕಮ್ಮಿ ಆಗತ್ತೆ. ಅಸಿಡಿಟಿಯಿಂದ ಬೇಗ ಮುಕ್ತಿ ಸಿಗಕ್ಕೆ ನಾಕೈದು ತುಳಸಿ ಎಲೆ ತಿನ್ನಬಹುದು.

ಹಾಲು:
ಹಾಲಲ್ಲಿ ತುಂಬಾ ಹೆಚ್ಚಿನ ಮಟ್ಟದಲ್ಲಿ ಖನಿಜಾಂಶಗಳು ಇರತ್ತೆ. ಇದು ಹೆಚ್ಚಿನ ಆಸಿಡ್ ಹೀರಿಕೊಂಡು ಅಸಿಡಿಟಿ ಕಮ್ಮಿ ಮಾಡತ್ತೆ; ತಣ್ಣಗಿರೋ ಹಾಲು ಕುಡ್ಯೋದ್ರಿಂದ ಗಂಟಲುರಿ ಕಮ್ಮಿ ಆಗತ್ತೆ. ಆದರೆ ಇದರ ಜೊತೆ ಸಕ್ಕರೆ, ಜೇನುತುಪ್ಪ ಏನೂ ಸೇರಿಸ್ಕೋಬಾರದು. ಹಾಗೇ ಕುಡೀಬೇಕು. ಒಂದು ಚಮಚ ತುಪ್ಪ ಹಾಕಿಕೊಂಡು ಕುಡಿದ್ರೆ ಇನ್ನೂ ಒಳ್ಳೇದು.

ಸೋಂಪು:
ಸೋಂಪು ತಿನ್ನೋದ್ರಿಂದ ಹೊಟ್ಟೆ ಬಿಗಿತ ಕಮ್ಮಿ ಆಗತ್ತೆ. ಇದರಲ್ಲಿ ಹೊಟ್ಟೆಯ ಅಲ್ಸರ್ ಕಮ್ಮಿ ಮಾಡೋ ಗುಣ ಸೋಂಪಿಗೆ ಇದೆ. ಅದಕ್ಕೇ ಇದನ್ನ ಹೋಟೆಲ್ ಗಳಲ್ಲಿ ಕೊಡೋದು.

ಜೀರಿಗೆ:
ಇದು ಆಹಾರ ಜೀರ್ಣ ಆಗಕ್ಕೆ ಮಾತ್ರ ಅಲ್ಲ, ದೇಹದ ಜೀರ್ಣ ಕ್ರಿಯೆ ಚೆನ್ನಾಗಾಗಕ್ಕೂ ಸಹಾಯ ಮಾಡತ್ತೆ. ಗ್ಯಾಸ್ ಕಮ್ಮಿ ಮಾಡಿ ಹೊಟ್ಟೆಯ ಎಷ್ಟೋ ಸಮಸ್ಯೆಗಳನ್ನ ಕಮ್ಮಿ ಮಾಡತ್ತೆ. ಇದನ್ನ ನೀರಲ್ಲಿ ಕುದಿಸಿ, ಆರಿಸಿ ಕುಡ್ಯೋದ್ರಿಂದ ಆಸಿಡಿಟಿ ಕಮ್ಮಿ ಆಗತ್ತೆ.

ಲವಂಗ:
ಲವಂಗ ತಿನ್ನೋದ್ರಿಂದ ಹೊಟ್ಟೇಲಿ ಆಹಾರ ಚಲಿಸೋಕೆ ಸಹಾಯ ಆಗತ್ತೆ. ಮತ್ತೆ ಇದರ ಘಾಟು ವಾಸನೆಯಿಂದ ಹೆಚ್ಚಿನ ರಸಗಳು ಒಸರಿ, ಜೀರ್ಣಕ್ಕೆ ಸಹಾಯ ಆಗತ್ತೆ. ಒಂದು ಲವಂಗ ಅಗಿದು, ಬಾಯಲ್ಲಿ ಒತ್ತರಿಸಿ ಇಟ್ಕೊಳ್ಳೋದ್ರಿಂದ ನಿಧಾನವಾಗಿ ಅದರ ರಸ ಒಸರ್ತಾ ಇರೋ ಹಾಗೆ, ಅಸಿಡಿಟಿ, ಗಂಟಲುರಿ ಎಲ್ಲಾ ಕಮ್ಮಿ ಆಗ್ತಾ ಹೋಗತ್ತೆ.

ಏಲಕ್ಕಿ:
ಏಲಕ್ಕಿ ಕಫ, ಪಿತ್ತ, ವಾತ ಮೂರಕ್ಕೂ ಒಳ್ಳೇದು ಅಂತ ಆಯುರ್ವೇದದಲ್ಲಿ ಹೇಳಿದ್ಯಂತೆ. ಇದು ಹೊಟ್ಟೆ ಹಿಂಡೋದನ್ನ ಕಮ್ಮಿ ಮಾಡತ್ತೆ. ಒಂದೆರಡು ಏಲಕ್ಕೀನ ನೀರಲ್ಲಿ ಕುದಿಸಿ, ಆರಿಸಿ ಆ ನೀರನ್ನ ಕುಡಿದ್ರೆ ಅಸಿಡಿಟಿ ಕಮ್ಮಿ ಆಗತ್ತೆ.

ಶುಂಠಿ:
ಇದು ನಮ್ ದೇಶದಲ್ಲಿ ಬಹುಶಃ ಎಲ್ಲಾರ್ ಮನೇಲೂ ಇದ್ದೇ ಇರತ್ತೆ. ಇದು ಹೊಟ್ಟೇಲಿ ಆಹಾರ ಹೀರಿಕೊಳ್ಳೋದಕ್ಕೆ ಸಹಾಯ ಮಾಡಿ, ಜೀರ್ಣ ಆಗೋ ಹಾಗೆ ಮಾಡತ್ತೆ. ಅಲ್ದೇ ಇದು ನಿಮ್ಮ ಆಹಾರದಲ್ಲಿರೋ ಪ್ರೋಟೀನ್ ಗಳನ್ನೂ ಸಹ ಬೇರೆ ಮಾಡತ್ತೆ. ಎಷ್ಟೋ ಹೊಟ್ಟೆ ಹುಣ್ಣುಗಳು ಶುಂಠಿ ತಿನ್ನೋದ್ರಿಂದ ಕಮ್ಮಿ ಆಗತ್ವೆ. ಒಂಚೂರು ಹಸಿಶುಂಠಿ ಹಾಗೇ ಕಚ್ಚಿ ತಿನ್ಬೋದು; ಇಲ್ಲಾ ಅದನ್ನ ನೀರಲ್ಲಿ ಕುದಿಸಿ, ಆರಿಸಿ ಆ ನೀರು ಕುಡೀಬಹ್ದು. ಇಲ್ಲಾ ಒಂಚೂರು, ಶುಂಠೀನೂ, ಸಕ್ಕರೇನೂ ದವಡೇ ಹತ್ತಿರ ಒತ್ತರಿಸಿ ಕಚ್ಚಿ ನಿಧಾನವಾಗಿ ಅದರ ರಸ ಹೀರಬಹುದು. ಆಸಿಡಿಟಿ ಬೇಗ ಕಮ್ಮಿ ಆಗತ್ತೆ.

ನೆಲ್ಲಿಕಾಯಿ:
ನೆಲ್ಲೀಕಾಯಿಲಿ ಆಸ್ಕಾರ್ಬಿಕ್ ಆಸಿಡ್ ಅಂತ ಇರತ್ತಂತೆ. ಇದು ಕಫ, ಪಿತ್ತ ಎರಡನ್ನೂ ಕಮ್ಮಿ ಮಾಡತ್ತೆ. ಒಂದು ಟೀ ಚಮಚ ನೆಲ್ಲೀಕಾಯಿ ಪುಡೀನ ದಿನ ತಿಂದ್ರೆ, ಜೀರ್ಣಕ್ಕೆ ಒಳ್ಳೇದು. ಆಸಿಡಿಟೀನೂ ಕಮ್ಮಿ ಆಗತ್ತದೆ.

ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಇವುಗಳಿಂದ ದೂರವಿರಿ:

ಹೆಚ್ಚು ಕರಿದ ತಿಂಡಿ, ಕೊಬ್ಬಿನಾಂಶವುಳ್ಳ ಆಹಾರವನ್ನ ತ್ಯಜಿಸಿ

ಉಪ್ಪಿನಕಾಯಿ ತಿನ್ನುವುದನ್ನ ನಿಲ್ಲಿಸಿ, ಮೆಣಸು ಸೇರಿದಂತೆ ಮಸಾಲೆ ಪದಾರ್ಥಗಳ ಸೇವನೆ ನಿಲ್ಲಿಸಿ

ವಿನೇಗರ್ ಮತ್ತು ವಿನೇಗರ್ ಬಳಸಿ ತಯಾರಿಸಿದ ಆಹಾರ ಸೇವಿಸಬೇಡಿ.

ಕೆಫಿನ್, ಆಲ್ಕೋಹಾಲ್, ಸಿಟ್ರಿಕ್ ಆಸಿಡ್ ಇರುವ ಪಾನೀಯಗಳ ಸೇವನೆಗೆ ಫುಲ್ ಸ್ಟಾಪ್ ಇಡಿ. ಸಾಫ್ಟ್ ಡ್ರಿಂಕ್ಸ್ ಗಳು ಆಸಿಡಿಟಿ ಹೆಚ್ಚಿಸುತ್ತವೆ.

ಕೊಲೆಸ್ಟ್ರಾಲ್ ಹೆಚ್ಚಿರುವ ಆಹಾರ ಪದಾರ್ಥಗಳ ಸೇವನೆಯನ್ನ ಕಡಿಮೆ ಮಾಡಿ, ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಗೆ ಈ ಫ್ಯಾಟಿ ಫುಡ್ ಗಳನ್ನ ಜೀರ್ಣಿಸಿಕೊಳ್ಳುವುದು ಕಠಿಣ.

ಕರಿದ ಮೀನು, ಹಂದಿಮಾಂಸದ ಸೇವನೆ ನಿಲ್ಲಿಸಿ.

ಮಿಲ್ಕ್ ಶೇಕ್, ಚೀಸ್, ಐಸ್ ಕ್ರೀಮ್ ಸೇವನೆಯೂ ಆಸಿಡಿಟಿ ಹೆಚ್ಚಿಸುತ್ತದೆ.

ಚಾಕೋಲೇಟ್‘ಗಳ ಸೇವನೆ, ಬಟರ್ ಬಿಸ್ಕೆಟ್, ಕೇಕ್ ಸೇರಿದಂತೆ ಕಂದುಬಣ್ಣದ ಆಹಾರಗಳ ಸೇವನೆ ಬೇಡ.

ಎಲ್ಲಕ್ಕಿಂತ ಮುಖ್ಯವಾಗಿ ಆಸಿಡಿಟಿ ಇರುವವರು ಹೊಟ್ಟೆ ತುಂಬಾ ತಿನ್ನಲೇಬಾರದು. ಹೆಚ್ಚು ತಿಂದರೆ ಅರಗಿಸಿಕೊಳ್ಳುವುದು ಕಷ್ಟವಾಗುತ್ತದೆ. ಮಿತವಾಗಿ ತಿನ್ನಿ, ಆಹಾರದಲ್ಲಿ ತರಕಾರಿ, ಹಣ್ಣುಗಳು ಹೆಚ್ಚಾಗಿರಲಿ.

LEAVE A REPLY

Please enter your comment!
Please enter your name here