ದಾಸವಾಳ ಎಲೆಗಳ ಇಪ್ಪತ್ತು ಪ್ರಯೋಜನ.

0
1714

ಎಲ್ಲರಿಗೂ ಗೊತ್ತಿರುವಂತಹ ದಾಸವಾಳ ಹೂ.ಇದನ್ನು ನಾವು ದೇವರ ಪೂಜೆಗೆ ಬಳಸುತ್ತೇವೆ. ಆದರೆ ಈ ದಾಸವಾಳ ಕೇವಲ ಹೂವಿನ ಗಿಡವಲ್ಲ. ಔಷಧ ಗಿಡವಾಗಿಯೂ ಪ್ರಸಿದ್ದಿ ಪಡೆದಿದೆ. ಜೊತೆಗೆ ಇದರ ಬೇರಿನಿಂದ ಹಿಡಿದು ಎಲೆ, ಹೂವು ಎಲ್ಲವೂ ಔಷಧೀಯ ಗುಣ ಹೊಂದಿವೆ. ತೀರ ಸಾಮಾನ್ಯ ರೋಗಗಳಿಂದ ಹಿಡಿದು ದೀರ್ಘಾವಧಿ ಕಾಯಿಲೆಯ ನಿವಾರಣೆಯವರೆಗೂ ಇದು ಸಹಕಾರಿ.

ಈ ದಾಸವಾಳವನ್ನು “ಮಾರ್ಷ್ ಮ್ಯಾಲೋ” ಎಂದು ಸಹ ಕರೆಯಲಾಗುತ್ತದೆ. ದಾಸವಾಳದ ಎಲೆಗಳು ಆಯುರ್ವೇದದಲ್ಲಿ ಹಲವಾರು ರೋಗಗಳಿಗೆ ಚಿಕಿತ್ಸೆಯಾಗಿ ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ.

ದಾಸವಾಳದ ಎಲೆಗಳ ಆರೋಗ್ಯ ಲಾಭಗಳನ್ನು ನೋಡೋಣ

ಈ ಎಲೆಗಳನ್ನು ರಕ್ತದೊತ್ತಡ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುವವರಿಗೆ ಚಿಕಿತ್ಸೆಗೆ ಬಳಸಬಹುದು.

ದಾಸವಾಳದ ಎಲೆಗಳ ಚಹಾವನ್ನು ವಿವಿಧ ರಾಷ್ಟ್ರಗಳಿಂದ ರಫ್ತು, ಆಮದು ಮಾಡಿಕೊಳ್ಳಲಾಗುತ್ತದೆ. ದಾಸವಾಳದ ಎಲೆಯ ಚಹಾ ಕಿಡ್ನಿಯ ತೊಂದರೆ, ಜೀರ್ಣಾಂಗ ಸಮಸ್ಯೆ, ಮೂತ್ರಕೋಶದ ಸೋಂಕು ಮತ್ತು ರಕ್ತದೊತ್ತಡ ಕಡಿಮೆ ಮಾಡಲು ತುಂಬಾ ಒಳ್ಳೆಯದು.

ದಾಸವಾಳದ ಎಲೆಗಳು ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣಗಳನ್ನು ಹೊಂದಿರುವ ಕಾರಣ ಈ ಎಲೆಗಳನ್ನು ಬಿಸಿ ನೀರಿನಲ್ಲಿ ಹಾಕಿ ಸೇವಿಸಬೇಕು. ಕ್ಯಾನ್ಸರ್ ನಿಂದ ಆಗಿರುವಂತಹ ಗಾಯಕ್ಕೆ ಇದರ ಪೇಸ್ಟ್ ಮಾಡಿ ಹಚ್ಚಬಹುದು.

ದಾಸವಾಳದ ಎಲೆಯಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದ್ದು ಇದು ಕೆಮ್ಮು, ಶೀತ ಮತ್ತು ತಲೆನೋವು ನಿವಾರಿಸುತ್ತದೆ.

ದಾಸವಾಳದ ಎಲೆಗಳು ನಮ್ಮ ಶಕ್ತಿ ಮತ್ತು ಪ್ರತಿರಕ್ಷಣಾ ಮಟ್ಟವನ್ನು ಹೆಚ್ಚಳ ಮಾಡುತ್ತದೆ.

ಮಹಿಳೆಯರ ಋತುಚಕ್ರದ ವೇಳೆ
ದಾಸವಾಳದ ಎಲೆಗಳನ್ನು ಜಗಿದರೆ ಅವರಲ್ಲಿ ಬರುವ ಸ್ನಾಯು ಸೆಳೆತ ಕಡಿಮೆ ಆಗುತ್ತದೆ. ಜೊತೆಗೆ ಹಾಟ್ ಫ್ಯ್ಲಾಷಸ್ ಅನ್ನು ದಾಸವಾಳದ ಎಲೆ ನಿವಾರಿಸುತ್ತದೆ.

ಮನುಷ್ಯನಲ್ಲಿ ಹೆಚ್ಚಾಗಿ ಮೂಡುವ ಮೊಡವೆ ಮತ್ತು ವಯಸ್ಸಾಗುವುದಕ್ಕೆ ಪರಿಹಾರ ದಾಸವಾಳದ ಎಲೆ ಉತ್ತಮ ಔಷಧಿ.

ನಮ್ಮ ದೇಹದ ಚಯಾಪಚಯಾ ಕ್ರಿಯೆಯನ್ನು ವೃದ್ಧಿಸುತ್ತದೆ.

ನಮ್ಮ ದೇಹದಲ್ಲಿನ ನೀರಿನಾಂಶದ ಸಮತೋಲನವನ್ನು ನಿರ್ವಹಿಸುತ್ತದೆ.ಹಾಗೂ ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸುತ್ತದೆ.

ನಮ್ಮ ದೇಹದ ಉಷ್ಣತೆ ಕಾಪಾಡುತ್ತದೆ.ಮತ್ತು ಕೂದಲು ಉದುರುವಿಕೆ ತಡೆಯುತ್ತದೆ.

ದಾಸವಾಳದ ಎಲೆಗಳ ಪೇಸ್ಟ್ ಮಾಡಿ ಅದನ್ನು ಶಾಂಪೂ ಹಾಕಿದ ಬಳಿಕ ಹಚ್ಚಬೇಕು. ಇದು ನಮ್ಮ ಕೂದಲಿಗೆ ಕಂಡೀಷನರ್ ಆಗಿ ಕೆಲಸ ಮಾಡಿ ಕೂದಲು ಉದುರುವಿಕೆ ತಡೆಯುತ್ತದೆ.

ದಾಸವಾಳದ ಎಲೆ ಜೀರ್ಣಕ್ರಿಯೆ ಮತ್ತು ತೂಕ ಇಳಿಸಲು ಸಹಕಾರಿ.

ದಾಸವಾಳ ಎಳೆಯ ಅತ್ಯಂತ ಲಾಭಕಾರಿ ಪೌಷ್ಠಿಕಾಂಶ ಗುಣಗಳೆಂದರೆ ಇದನ್ನು ಆಹಾರ ಉತ್ಪನ್ನಗಳ ಬಣ್ಣ ಮತ್ತು ಬೇಕಿಂಗ್ ಗೆ ಬಳಸಲಾಗುತ್ತದೆ.

ನೋಡಿದರಲ್ಲ ದಾಸವಾಳ ಹೂ ಜೊತೆಗೆ ಅದರ ಎಲೆಯು ಕೂಡ ಎಷ್ಟೊಂದು ಲಾಭದಾಯಕ ಅಂಶಗಳನ್ನು ಹೊಂದಿದೆ ಎಂದು.

LEAVE A REPLY

Please enter your comment!
Please enter your name here