ಅಯಿಲ್ ಸ್ಕಿನ್ ಇದ್ರೆ ಮುಕ್ತಿ ಪಡೆಯಲು ಇವುಗಳನ್ನು ಮಾಡಿ ಸಾಕು

0
901

ಎಲ್ಲರಿಗು ತಾವು ಸುಂದರವಾಗಿ ಕಾಣಬೇಕು ಎಂದು ತುಂಬಾ ಆಸೆ ಇರುತ್ತದೆ.  ಆದರೆ ಅವರ ಕೆಲಸ. ಒತ್ತಡ. ಓಡಾಟ. ಧೂಳು. ಗಾಳಿ. ನೀರು. ಆಹಾರಗಳಿಂದ ಸಹ ಅವರ ಸೌಂದರ್ಯ ಹಾಳಾಗಿರುತ್ತದೆ. ಅದರಲ್ಲೂ ಈ ಚರ್ಮವನ್ನು ನಾವು ಎರಡು ಬಗೆಯಲ್ಲಿ ನೋಡಬಹುದು. ಕೆಲವರಿಗೆ ಯಾವಾಗಲೂ ಅವರ ಮುಖ ಎಣ್ಣೆ ಎಣ್ಣೆಯ ಹಾಗೆ ಇರುತ್ತದೆ.
ಕೆಲವರಿಗೆ ಯಾವಾಗಲೂ ಒಣಗಿದ ಹಾಗೆ ಇರುತ್ತದೆ.

ಇದರಲ್ಲಿ ತುಂಬಾ ಸಮಸ್ಯೆ ಅನುಭವಿಸುವವರು ಎಣ್ಣೆಯ ಮುಖದವರು. ಇವರಿಗೆ ಮುಖದಲ್ಲಿ ಬೇಗ ಮೊಡವೆಗಳು ಹೇಳುತ್ತವೆ. ಇವರು ನೆರಳಿನಲ್ಲಿ ಇದ್ದರು ಅವರ ಮುಖ ಹೆಚ್ಚು ಬೆವರುತ್ತದೆ. ಚರ್ಮ ಬೇಗ ಕಪ್ಪಾಗುತ್ತದೆ. ಅದಕ್ಕಾಗಿ ಇವರು ಇವುಗಳಿಂದ ತಪ್ಪಿಸಿಕೊಳ್ಳಲು ಹಲವಾರು ಪ್ರಯತ್ನ ಮಾಡಿದರು ಸಾಧ್ಯವಾಗುವುದಿಲ್ಲ. ಅಗಾಗಿ ಇದರಿಂದ ತಪ್ಪಿಸಿಕೊಳ್ಳಲು ಕೆಲವು ಆಹಾರ ಪದ್ಧತಿಯನ್ನು ಅನುಸರಿಸಿ ಈ ಅಯಿಲ್ ಸ್ಕಿನ್ ನಿಂದ ಮುಕ್ತಿ ಪಡೆಯಬಹುದು. ಅದು ಏನೆಂದು ನೋಡೋಣ.

ಒಮೆಗಾ 3 ಅಂಶಗಳನ್ನು ಹೊಂದಿರುವ ಡ್ರೈ ಫ್ರೂಟ್ಸ್ ಗಳ ಸೇವನೆಯಿಂದ ಎಣ್ಣೆಯುಕ್ತ ಚರ್ಮವನ್ನು ಹೋಗಲಾಡಿಸಲು ಸಾಧ್ಯವಿದೆ.

ವಿಟಮಿನ್ ಸಿ ಯನ್ನು ಒಳಗೊಂಡಿರುವ ಕಿತ್ತಳೆ. ನಿಂಬೆಹಣ್ಣು. ಗಳ ಹೆಚ್ಚು ಸೇವನೆ ಜೊತೆಗೆ ಫೇಸ್ ಪ್ಯಾಕ್ ತರ ಬಳಸುವುದರಿಂದ ಮುಖದಲ್ಲಿ ಇರುವ ಎಣ್ಣೆ ಅಂಶವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.

ಹೆಚ್ಚು ನೀರಿನ ಅಂಶವನ್ನು ಮತ್ತು ಉತ್ಕಷ್ರನ ನಿರೋಧಕ ಗುಣವನ್ನು ಹೊಂದಿರುವ ಸೌತೆಕಾಯಿಯನ್ನು ಸೇವಿಸುವುದರಿಂದ ಹಾಗೂ ಮುಖಕ್ಕೆ ಫೇಸ್ ಮಾಸ್ಕ್ ತರ ಹಚ್ಚಿಕೊಳ್ಳುವುದರಿಂದ ಎಣ್ಣೆ ಅಂಶ ಹೋಗುತ್ತದೆ.

ದ್ರಾಕ್ಷಿ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಆಗು ನೀರಿನ ಅಂಶ ಇದ್ದು .ಇದು ನಮ್ಮ ದೇಹದಿಂದ ಜೀವಾಣುಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.

ಒಮೆಗಾ 3 ಅಂಶಗಳನ್ನು ಹೊಂದಿರುವ ಮೀನು. ಮೊಡವೆಗಳನ್ನು ಹೋಗಿಸುತ್ತದೆ. ಆಗು ಉರಿಯುತವನ್ನು ಕಡಿಮೆ ಮಾಡಿ ಎಣ್ಣೆಯುಕ್ತ ತ್ವಚೆಯಿಂದ ಮುಕ್ತಿ ಕೊಡುತ್ತದೆ.

ಹೆಚ್ಚು ಪೌಷ್ಟಿಕತೆಯನ್ನು ಹೊಂದಿರುವ ಅಣಬೆ ಮತ್ತು ದ್ವಿದಳ ಧಾನ್ಯಗಳನ್ನು ಬಳಸುವುದರಿಂದ ಎಣ್ಣೆಯ ಉತ್ಪತ್ತಿಯನ್ನು ಕಡಿಮೆ ಮಾಡುತ್ತದೆ.

ಯಾವುದೇ ಕೊಬ್ಬಿನ ಅಂಶವನ್ನು ಹೊಂದಿರದ. ಫೈಬರ್ ನಿಂದ ಸಮೃದ್ಧ ವಾಗಿರುವ ಹಸಿ ತರಕಾರಿ. ಹಸಿ ಸೊಪ್ಪುಗಳ ಸೇವನೆಯಿಂದ ಎಣ್ಣೆಯುಕ್ತ ಚರ್ಮವನ್ನು ಹೋಗಲಾಡಿಸಲು ಸಾಧ್ಯವಿದೆ.

ಹೆಚ್ಚು ಫೈಬರ್ ಅನ್ನು ಹೊಂದಿರುವ ಧಾನ್ಯಗಳ ಸೇವನೆಯಿಂದ ಎಣ್ಣೆಯುಕ್ತ ಚರ್ಮವನ್ನು ಹೋಗಲಾಡಿಸಬಹುದು.ಜೊತೆಗೆ ಮೊದವೇಗಳಿಂದ ಮುಕ್ತಿ ಪಡೆಯಬಹುದು.

ವಿಟಮಿನ್ ಸಿ ಅಂಶವನ್ನು ಹೊಂದಿರುವ ಬ್ರೋಕೊಲಿಗ್ ನಿಂದ ಮೊಡವೆ ಮತ್ತು ಎಣ್ಣೆಯ ಮುಖವನ್ನು ಹೋಗಲಾಡಿಸಲು ಸಾಧ್ಯವಿದೆ.

ತಿನ್ನಲು ತುಂಬಾ ರುಚಿಯಾದ ಡಾರ್ಕ್ ಚಾಕೊಲೇಟ್ ಹೆಚ್ಚು ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿದ್ದು ಇದು ಎಣ್ಣೆ ಮುಖ ಹಾಗೂ ಮೊಡವೆಯನ್ನು ನಿಯಂತ್ರಣದಲ್ಲಿ ಇಡುತ್ತದೆ.

ಎಲ್ಲರೂ ಇಷ್ಟ ಪಡುವ ಬಾಳೆಹಣ್ಣನಲ್ಲಿ ಫಾಸ್ಪೇಟ್. ಪೊಟ್ಯಾಸಿಯಂ. ವಿಟಮಿನ್ ಇ. ಅಧಿಕವಿದ್ದು ಇದು ಮುಖದ ಮೇಲಿನ ರಂಧ್ರಗಳನ್ನು ಮುಚ್ಚಲು. ಮೊಡವೆಗಳಿಂದ ಮುಕ್ತಿ ಪಡೆಯಲು. ಹಾಗೂ ಎಣ್ಣೆಯುಕ್ತ ಮುಖವನ್ನು ಹೋಗಿಸಲು ಸಹಾಯ ಮಾಡುತ್ತದೆ.

ಎಣ್ಣೆಯ ಮುಖವನ್ನು ಹೊಂದಿರುವವರು ಯಾವುದೇ ಚಿಂತೆ ಇಲ್ಲದೆ ಈ ಆಹಾರಗಳು ಪಾಲಿಸುತ್ತ ಬಂದರೆ ಎಣ್ಣೆಯುಕ್ತ ಮುಖದಿಂದ ಮುಕ್ತಿ ಪಡೆದು ನೀವು ನಿಮ್ಮ ಅಂದವನ್ನು ಕಾಪಾಡಿಕೊಳ್ಳಬಹುದು.

LEAVE A REPLY

Please enter your comment!
Please enter your name here