ಕೆಂಪು, ಹಳದಿ, ಕಿತ್ತಳೆ ಬಣ್ಣದಲ್ಲಿ ಇರುವ ಈ ದಾರವನ್ನು ಯಾಕೆ ಕೈಗೆ ಕಟ್ಟುತ್ತಾರೆ ಗೊತ್ತಾ?

0
1383

ಯಾವುದೇ ಹೋಮ ಹವನಗಳನ್ನು ಮಾಡುವಾಗ ಪಂಡಿತರು ನಮ್ಮ ಕೈಗೆ ಕೆಂಪು, ಹಳದಿ, ಕಿತ್ತಳೆ ಬಣ್ಣಗಳು ಸೇರಿ ಒಂದೇ ದಾರದಲ್ಲಿರುವ ದಾರವನ್ನು ಕಟ್ಟುತ್ತಾರೆ. ಇದರ ಬಗ್ಗೆ ನಿಮಗೆ ಗೊತ್ತೇ..! ಪೂಜೆ, ವ್ರತಗಳನ್ನು ಮಾಡುವಾಗ, ಶುಭ ಕಾರ್ಯಗಳಲ್ಲಿ ಕೈಗೆ ಕಟ್ಟುತ್ತಾರಲ್ಲ ಅದೇ ದಾರ.

ಇನ್ನು ದೇವಾಲಯಗಳಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿಸಿದಾಗ ಸಹ ಪೂಜಾರಿಗಳು ಕೈಗೆ ಕಟ್ಟುತ್ತಾರೆ,  ಇದನ್ನು ಮೌಳಿ ದಾರ ಎಂದು ಕರೆಯುತ್ತಾರೆ.

ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋದಗಂತೂ ೯೦ ಪ್ರತಿಶತ ಜನರು ಇದನ್ನು ಖರೀದಿಸಿ ಕೈಗೆ ಕಟ್ಟಿಕೊಳ್ತಾರೆ. ಯಾಕೆಂದೆ ಇದರಿಂದ ನಮ್ಮ ಎಲ್ಲಾ ಕಷ್ಟಗಳೂ ದೂರವಾಗುತ್ತವೆ ಎಂಬ ನಂಬಿಕೆ ಜನರಲ್ಲಿ ಮನೆ ಮಾಡಿವೆ.

ಈ ದಾರವನ್ನು ಕಟ್ಟುವುದರ ಹಿಂದಿನ ಉದ್ದೇಶ ಏನು ಗೊತ್ತಾ?

ಶ್ರೀಮಹಾವಿಷ್ಣುವಿನ ಅವತಾರಗಳಲ್ಲಿ ಒಂದಾದ ವಾಮನಾವತಾರ ಬಗ್ಗೆ ಗೊತ್ತಲ್ಲವೇ. ಬಲಿ ಚಕ್ರವರ್ತಿ ಬಳಿಗೆ ಬಂದು ಒಂದು ವರ ಕೋರುತ್ತಾನೆ. ಮೂರು ಹೆಜ್ಜೆಗಳಿಡಲು ಸ್ಥಳ ಬೇಕೆಂದು ಕೇಳಿದ್ದಕ್ಕೆ ವಾಮನನು ಒಂದು ಹೆಜ್ಜೆ ಭೂಮಿ ಮೇಲೆ, ಇನ್ನೊಂದು ಹೆಜ್ಜೆ ಆಕಾಶದ ಮೇಲೆ ಇಡುತ್ತಾನೆ. ಇನ್ನು ಮೂರನೇ ಹೆಜ್ಜೆ ಎಲ್ಲಿಡಬೇಕೆಂದು ವಾಮನ ಕೇಳಿದ್ದಕ್ಕೆ ಆಗ ಬಲಿ ಯಾವುದೇ ರೀತಿ ಆಲೋಚಿಸದೆ ತನ್ನ ತಲೆಯ ಮೇಲೆ ಇಡು ಎನ್ನುತ್ತಾನೆ. ಇದರಿಂದ ವಾಮನ ತನ್ನ ಕಾಲನ್ನು ಬಲಿ ನೆತ್ತಿಯ ಮೇಲೆ ಇಟ್ಟ ಮೇಲೆ ಪಾತಾಳಕ್ಕೆ ಹೋಗುತ್ತಾನೆ. ಇದರಿಂದ ಬಲಿಯ ದಾನಗುಣಗಳನ್ನು ಮೆಚ್ಚಿದ ವಾಮನ ಬಲಿಗೆ ಮೃತ್ಯುಂಜಯನಾಗಿ ಇರುವಂತೆ ವರ ಕೊಡುತ್ತಾ ಮೇಲೆ ತಿಳಿಸಿದ ಮೌಳಿ ಎಂಬ ದಾರವನ್ನು ಕಟ್ಟುತ್ತಾನೆ. ಹಾಗಾಗಿ ಅಂದಿನಿಂದ ಇಂದಿನವರೆಗೂ ಅದನ್ನು ಕೈಗೆ ಕಟ್ಟುತ್ತಾ ಬಂದಿದ್ದಾರೆ.

ಆ ರೀತಿಯಾಗಿ ಮೌಳಿ ದಾರ ಕಟ್ಟಿದರೆ ಯಾವುದೇ ಕೇಡು ಸಂಭವಿಸುವುದಿಲ್ಲವಂತೆ. ಮೃತ್ಯು ಅಷ್ಟು ಬೇಗ ಸಮೀಪಿಸುವುದಿಲ್ಲವಂತೆ. ಹೆಚ್ಚಿನ ಕಾಲ ಸುಖವಾಗಿ ಬದುಕುತ್ತಾರಂತೆ. ಸಾಕ್ಷಾತ್ ಬ್ರಹ್ಮ, ವಿಷ್ಣು, ಮಹೇಶ್ವರರು, ಅವರ ಪತ್ನಿಯರಾದ ಸರಸ್ವತಿ, ಲಕ್ಷ್ಮಿ, ಪಾರ್ವತಿಯರು ಕಾಪಾಡುತ್ತಾರಂತೆ. ಯಾವುದೇ ಕಷ್ಟಗಳನ್ನೂ ಬರದಂತೆ ಕಾಪಾಡುತ್ತಾರಂತೆ. ಹಾಗಾಗಿ ಮೌಳಿ ದಾರವನ್ನು ಕಟ್ಟುತ್ತಾರೆ. ಇದು.. ಆ ದಾರ ಕಟ್ಟುವ ಹಿಂದಿನ ಉದ್ದೇಶ.

ಮೌಳಿ ದಾರದಲ್ಲಿ ಇರುವ ಮೂರು ಬಣ್ಣಗಳು ಯಾಕೆಂದರೆ… ಆ ಮೂರು ಬಣ್ಣಗಳು ನವಗ್ರಹಗಳಲ್ಲಿನ ಮೂರನ್ನು ಪ್ರತಿಬಿಂಬಿಸುತ್ತವೆ. ಅವು ಬೃಹಸ್ಪತಿ, ಕುಜ, ಸೂರ್ಯ. ಇವರು ವ್ಯಕ್ತಿಗಳ ಐಶ್ವರ್ಯಕ್ಕೆ, ಸುಖಕ್ಕೆ, ಶಿಕ್ಷಣಕ್ಕೆ, ಆರೋಗ್ಯ ಪ್ರದಾತರಂತೆ. ಹಾಗಾಗಿ ಆ ಗ್ರಹಗಳ ಪೀಡೆ ಇರಬಾರದೆಂಬ ಉದ್ದೇಶದಿಂದ ಆ ಬಣ್ಣಗಳಲ್ಲಿನ ಮೌಳಿ ದಾರವನ್ನು ಕಟ್ಟುತ್ತಾರೆ. ಇದನ್ನು ಪುರುಷರ ಬಲಗೈಗೆ, ಸ್ತ್ರೀಯರಿಗೆ ಎಡಗೈಗೆ ಕಟ್ಟುತ್ತಾರೆ. ಮದುವೆಯಾಗದ ಸ್ತ್ರೀಯರಿಗೆ ಬಲಗೈಗೆ ಕಟ್ಟುತ್ತಾರೆ.

ಬೂತ, ಪ್ರೇತ ಫಿಶಾಚಿಗಳ ಕಾಟವಿರುವವರು ಇದನ್ನು ಕೈಗೆ ಕಟ್ಟುವುದರಿಂದ ಯಾವ ಭಯ ಪಡುವ ಅವಶ್ಯವಿರುವುದಿಲ್ಲ. ಅಷ್ಟು ಶಕ್ತಿ ಈ ದಾರದಲ್ಲಿದೆ. ಅಲ್ಲದೇ ಕೆಟ್ಟ ಕೆಟ್ಟ ಕನಸು ಕಾಣುವವರಿಗಂತೂ ಇದು ಒಳ್ಳೆಯ ಉಪಾಯ. ಇದನ್ನು ಕೈಗೆ ಕಟ್ಟಿಕೊಂಡರೆ ಯಾವ ಕಾಟವೂ ಇರುವುದುಲ್ಲ.

ಯಾವುದೇ ದೇವಾಲಯಕ್ಕೆ ಹೋದರೂ ಇದನ್ನು ತಂದು ಕಟ್ಟಿಕೊಳ್ಳುವುದನ್ನು ಮರೆಯಬೇಡಿ.

LEAVE A REPLY

Please enter your comment!
Please enter your name here