ಎಸಿ ಬಳಕೆ ಮಾಡ್ತಾ ಇದ್ದೀರಾ ಅಂದ್ರೆ ಈ ಮಾಹಿತಿ ಒಮ್ಮೆ ಓದಿ

0
1050

ಹವಾನಿಯಂತ್ರಿತದ ಬಳಕೆಯಿಂದ ಆಗುವ ತೊಂದರೆಗಳು.

ಬೇಸಿಗೆ ಬಂದರೆ ಸಾಕು ಎಲ್ಲರ ಮನೆಯಲ್ಲೂ ಹವಾನಿಯಂತ್ರಿತದೇ ಕಾರುಬಾರು. ಹೊರಗೆ ಬಿಸಿಲಿನ ದೆಗೆ. ಪ್ರಕೃತಿಯ ನೈಸರ್ಗಿಕ ಗಾಳಿ ಬರಲು ನಮ್ಮ ಜನರು ಎಲ್ಲ ಗಿಡ ಮರಗಳನ್ನು ಕಡಿದು ದೊಡ್ಡ ದೊಡ್ಡ ಕಂಪನಿ. ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಅಗಾಗಿ ಇಂದು ಎಲ್ಲ ಕೆಚೇರಿ. ಮನೆ.ಸ್ಕೂಲ್.ಇನ್ನಿತರ ಸ್ಥಳಗಳಲ್ಲೆಲ್ಲ ಸೆಕೆಯಿಂದ ತಪ್ಪಿಸಿಕೊಳ್ಳಲು ಹವಾನಿಯಂತ್ರಿತ ಬಳಕೆ ಮಾಡುತ್ತಾರೆ. ಅಂದ್ರೆ ಎ.ಸಿ. ಬಳಕೆ ಆದರೆ ಇದರಿಂದ ಎಷ್ಟು ತೊಂದರೆಗಳು ಎದುರಾಗುತ್ತವೆ ಎಂಬುದನ್ನು ಗಮನಿಸುವುದಿಲ್ಲ. ಸೆಕೆಯಿಂದ ಮುಕ್ತರಾಗಬೇಕು ಅಷ್ಟೇ. ಕೆಲವರಿಗೆ ಇದ್ದಕಿದ್ದಂತೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆದ್ರೆ ಅದನ್ನ ಗಂಭೀರವಾಗಿ ನಾವು ತೆಗೆದುಕೊಳ್ಳುವುದಿಲ್ಲ ಹೇಗೆ ಬಂತು ಎಂದು ಸಹ ಯೋಚನೆ ಮಾಡಲ್ಲ, ನಾವು ಮಾಡುವ ಸಣ್ಣ ಸಣ್ಣ ತಪ್ಪುಗಳು ನಮ್ಮ ಜೀವಕ್ಕೆ ಆಪತ್ತು ಬರಬಹುದು, ನಮ್ಮ ಅನುಕೂಲಕ್ಕೆ ಮಾಡಿಕೊಳ್ಳುವ ಆಧುನಿಕ ಜಗತ್ತು ನಮ್ಮ ಜೀವಕ್ಕೆ ಕುತ್ತು ತರಬಹುದು.

ಈ ಹವಾನಿಯಂತ್ರಿತದಿಂದ ಎದುರಾಗುವ ತೊಂದರೆಗಳು.

ಹವಾನಿಯಂತ್ರಿತದಿಂದ ಬರುವ ಗಾಳಿಯು ಬಿಸಿ ಬಿಸಿ ಗಾಳಿಯಾಗಿದ್ದು ಇದರಿಂದ ಹೃದ್ರೋಗ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚು.

ಹವಾನಿಯಂತ್ರಿತದ ವಾತಾವರಣವು ಉಸಿರಾಟದ ತೊಂದರೆಗಳನ್ನು ತಂದೊಡ್ಡುವ ಸಾಧ್ಯತೆ ಹೆಚ್ಚು ಇದರಿಂದ ಶ್ವಾಸಕೋಶದ ಸಮಸ್ಯೆಗಳೆಲ್ಲ ನಮ್ಮನ್ನು ಕಾಡುತ್ತದೆ.

ಹವಾನಿಯಂತ್ರಿತದ ತಪಮಾನವು ಚರ್ಮವನ್ನು ಹೆಚ್ಚು ಒಣಗಿಸಿ.ನಮ್ಮ ಚರ್ಮದಲ್ಲಿ ಮೊಡವೆ. ತುರಿಕೆ.ಗಳು ಹೆಚ್ಚಾಗುತ್ತವೆ.

ಕೆಲವು ಹವಾನಿಯಂತ್ರಿತಗಳು ಹೆಚ್ಚು ಶಬ್ದವನ್ನು ತರುತ್ತವೆ ಇದರಿಂದ ಕಿರಿಕಿರಿಯಾಗಿ ನಿದ್ರೆ ಬರುವುದಿಲ್ಲ. ನಿದ್ರೆ ಬರದೆ ತಲೆನೋವು ಉಂಟಾಗುತ್ತದೆ.

ಈ ಹವಾನಿಯಂತ್ರಿತದ ಗಾಳಿಯಿಂದ ನೆಗಡಿ. ಗಂಟಲು ಕಟ್ಟಿಕೊಳ್ಳುವ ಸಾಧ್ಯತೆ ಕೂಡ ಹೆಚ್ಚು ಇರುತ್ತದೆ.

ಹವಾನಿಯಂತ್ರಿತ ವಾತಾವರಣದಿಂದ ಕಣ್ಣಿನ ಸಮಸ್ಯೆಗಳು ಉದ್ಭವಿಸುತ್ತವೆ.

ಹವಾನಿಯಂತ್ರಿತ ವಾತಾವರಣಕ್ಕೆ ಹೆಚ್ಚು ಒಗ್ಗಿಕೊಳ್ಳುವುದರಿಂದ ಆ ವಾತಾವರಣ ಬಿಟ್ಟು ಬಿಸಿಲಿಗೆ ಹೋದರೆ ಆ ಬಿಸಿಲು ತಡೆಯದೆ ಸುಸ್ತು. ಆಯಾಸ. ಅಲರ್ಜಿ.ಬೇಗ ಬೆವರುವ ಸಾಧ್ಯತೆ ತುಂಬಾ ಇರುತ್ತದೆ.

ಆದ್ದರಿಂದ ಆದಷ್ಟು ಹವಾನಿಯಂತ್ರಿತ ವಾತಾವರಣದಿಂದ ದೂರವಿರಲು ಪ್ರಯತ್ನಿಸಿ.

LEAVE A REPLY

Please enter your comment!
Please enter your name here