ಕುಂಠಿತಗೊಂಡ ನಿಮ್ಮ ಲೈಂಗಿಕ ಶಕ್ತಿ ವೃದ್ಧಿಸಬೇಕೇ ಇವುಗಳನ್ನು ತಿನ್ನಿ

0
1294

ಇಂದಿನ ದಿನಗಳಲ್ಲಿ ಧೂಮಪಾನ, ಮದ್ಯಪಾನಗಳ ದಾಸರಾಗಿರುವ ಯುವಜನತೆ ತಮ್ಮ ಲೈಂಗಿಕ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಲೈಂಗಿಕ ಶಕ್ತಿಯ ವೃದ್ಧಿಗೆ ಯಾವ್ಯಾವುದೋ ಮಾರ್ಗದ ಮೊರೆ ಹೋಗುತ್ತಿದ್ದಾರೆ. ಆದರೆ ನಾವು ದಿನನಿತ್ಯ ಸೇವಿಸುವ ಆಹಾರಗಳಲ್ಲೇ ಲೈಂಗಿಕ ಶಕ್ತಿಯನ್ನು ಹೆಚ್ಚಿಸಬಹುದು. ಲೈಂಗಿಕ ಶಕ್ತಿ ವೃದ್ಧಿಗೆ ಇಲ್ಲಿದೆ ಸರಳ ಉಪಾಯಗಳು.

ಈರುಳ್ಳಿ ಪ್ರಿಯರಾಗಿ: ನೀವು ಪದಾರ್ಥಗಳಲ್ಲಿ ಈರುಳ್ಳಿಯನ್ನು ಇಷ್ಟಪಡುವುದಿಲ್ಲವಾದರೆ ಇಂದಿಗೇ ಆ ಸಂಪ್ರದಾಯಕ್ಕೆ ಫುಲ್ ಸ್ಟಾಪ್ ಹಾಕಿ. ಏಕೆಂದರೆ ಈರುಳ್ಳಿ ವೀರ್ಯ ಹೆಚ್ಚಿಸಲು ಸಹಕಾರಿ.

ಬಾಳೆಹಣ್ಣು: ದಿನನಿತ್ಯ ಬಾಳೆಹಣ್ಣುಗಳನ್ನು ಸೇವಿಸಿ. ಬಾಳೆಹಣ್ಣುಗಳು ಆರೋಗ್ಯ ವೃದ್ಧಿಗೆ, ಜೀರ್ಣಕ್ರಿಯೆ ಮಾತ್ರವಲ್ಲದೆ ವೀರ್ಯ ಉತ್ಪತ್ತಿಯಲ್ಲೂ ಸಹಕಾರಿ.

ಚಿಕ್ಕು ಹಣ್ಣು ತಿನ್ನಿ: ಹೇರಳವಾಗಿ ಸಿಗುವ ಚಿಕ್ಕು ಹಣ್ಣುಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಈ ಹಣ್ಣಿನಲ್ಲಿರುವ ಆರೋಗ್ಯಕರ ಅಂಶಗಳ ಬಗ್ಗೆ ಯಾರಿಗೂ ಗೊತ್ತಿಲ್ಲ. ಚಿಕ್ಕು ಕೂಡ ವೀರ್ಯ ವೃದ್ಧಿಗೆ ಸಹಕಾರಿ.

ನುಗ್ಗೆ ಕಾಯಿ: ನುಗ್ಗೆ ಕಾಯಿಯ ಮಹತ್ವದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೂ ಕೆಲವರಿಗೆ ಇದೆಂದರೆ ಅಲರ್ಜಿ, ನಿಮ್ಮ ಲೈಂಗಿಕ ಶಕ್ತಿ ಹೆಚ್ಚಬೇಕೆ ಹಾಗಾದರೆ ಆ ಅಲರ್ಜಿಯನ್ನು ಇಂದೇ ತೊಡೆದುಹಾಕಿ.

ಡಾರ್ಕ್ ಚಾಕೊಲೇಟ್: ಚಾಕೊಲೆಟ್ ಎಲ್ಲರಿಗೂ ಪ್ರಿಯ. ಡಾರ್ಕ್ ಚಾಕೊಲೇಟ್ ಗಳಲ್ಲಿರುವ ಕೆಲ ಅಂಶಗಳೂ ಸಹ ವೀರ್ಯ ವೃದ್ಧಿಗೆ ಸಹಕಾರಿ.

ಧೂಮಪಾನ, ಮದ್ಯಪಾನ ಬಿಟ್ಟುಬಿಡಿ: ಇಂದಿನ ಯುವಜನತೆಗೆ ಚಟವಾಗಿ ಅಂಟಿಕೊಂಡಿರುವ ಧೂಮಪಾನ, ಮದ್ಯಪಾನಗಳು ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲ ಲೈಂಗಿಕತೆಯ ದೃಷ್ಟಿಯಿಂದಲೂ ಒಳ್ಳೆಯದಲ್ಲ. ನೀವೆಷ್ಟೇ ಆರೋಗ್ಯವಂತರಾಗಿದ್ದರೂ ಇವುಗಳ ಚಟ ನಿಮ್ಮ ಲೈಂಗಿಕ ಶಕ್ತಿಯನ್ನು ಕುಗ್ಗಿಸಿಯೇ ತೀರುತ್ತದೆ. ಸೋ ಇವುಗಳನ್ನು ಬಿಟ್ಟು ಬಿಡಿ.

LEAVE A REPLY

Please enter your comment!
Please enter your name here