ಈ ಹಣ್ಣಿನ ಪ್ರಯೋಜನ ಗೊತ್ತಾದ್ರೆ ಈಗಲೇ ತಿನ್ನೋಕೆ ಶುರು ಮಾಡ್ತೀರ

0
972

ಒಣ ಏಪ್ರಿಕಾಟ್‍ಗಳಿಂದ ಆಗುವ ಪ್ರಯೋಜನಗಳು.

ಈ ಏಪ್ರಿಕಾಟ್‍‍ಗಳಲ್ಲಿ ಯಾವ ಹಣ್ಣಿನಲ್ಲೂ ಇಲ್ಲದ ಅತೀಯಾದ  ಕ್ಯಾಲ್ಸಿಯಂ, ಪೊಟಾಶಿಯಂ, ರಂಜಕ, ವಿಟಮಿನ್ ಎ, ಕಬ್ಬಿಣಾಂಶ ಮತ್ತು ವಿಟಮಿನ್ ಸಿ ಗಳು ಲಭ್ಯವಿವೆ. ಇದು ನಮ್ಮ ದೇಹಕ್ಕೆ ಬೇಕಾಗುವ ಸಂಪೂರ್ಣ ಶಕ್ತಿ ಒದಗಿಸುತ್ತದೆ.

ಒಂದು ಕಪ್ ಒಣ ಏಪ್ರಿಕಾಟ್‍‍ಗಳಿಂದ 158 ಮೈಕ್ರೊಗ್ರಾಮ್‍ಗಳಷ್ಟು ವಿಟಮಿನ್ ಎ.ನಮಗೆ ದೊರಕುತ್ತದೆ. ಈ ಒಣ ಹಣ್ಣುಗಳು ನಮ್ಮ ದೇಹಕ್ಕೆ ಅಗತ್ಯವಾಗಿರುವ ರೋಗ ನಿರೋಧಕ ಶಕ್ತಿಯನ್ನು ಒದಗಿಸುವುದರ ಜೊತೆಗೆ ಹಲವು ರೋಗಗಳನ್ನು ಸಹ ತಡೆಯಲು ನೆರವಾಗುತ್ತದೆ.

ಹಾಗಾದರೆ ಒಣ ಏಪ್ರಿಕಾಟ್‍‍ಗಳಿಂದ ದೊರೆಯುವ ಆರೋಗ್ಯಕರವಾದ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಒಣ ಏಪ್ರಿಕಾಟ್‍ಗಳು ಅನಿಮಿಯಾದ ಮೇಲೆ ಹೋರಾಡಲು ಅತ್ಯಗತ್ಯವಾಗಿರುವ ಕಬ್ಬಿಣಾಂಶದ ಮೂಲವಾಗಿದೆ. ಒಣ ಏಪ್ರಿಕಾಟ್‍ನಲ್ಲಿ ತಾಮ್ರವು ಸಹ ಇದ್ದು, ಅದು ಕಬ್ಬಿಣಾಂಶವನ್ನು ಹೀರಿಕೊಳ್ಳುತ್ತದೆ. ಋತು ಚಕ್ರದ ಅವಧಿಯಲ್ಲಿ ಅಧಿಕ ರಕ್ತ ಸ್ರಾವದಿಂದ ಬಳಲುವ ಹೆಂಗಸರು ತಮ್ಮ ದಿನ ನಿತ್ಯದ ಆಹಾರದಲ್ಲಿ ಏಪ್ರಿಕಾಟ್‍ಗಳನ್ನು ಸೇವಿಸುವುದರಿಂದ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.

ಒಣ ಎಪ್ರಿಕಾಟ್ ಸೇವನೆಯಿಂದ ರಕ್ತದಲ್ಲಿ ಹಿಮೊಗ್ಲೋಬಿನ್ ಪ್ರಮಾಣ ಹೆಚ್ಚಾಗಿ ರಕ್ತ ಹೀನತೆಯ ಸಮಸ್ಯೆ ಕಡಿಮೆಯಾಗುತ್ತದೆ. ಒಣ ಏಪ್ರಿಕಾಟ್‍ಗಳಲ್ಲಿ ಪೆಕ್ಟಿನ್ ಎಂಬ ಅಂಶವು ಕಂಡು ಬರುತ್ತದೆ. ಜೊತೆಗೆ ಇವುಗಳಲ್ಲಿ ಸೆಲ್ಯೂಲೋಸ್ ಎಂಬ ಅಂಶವು ಸಹ ಕಂಡು ಬರುತ್ತದೆ. ಇವುಗಳು ಮಲವನ್ನು ಮೆದುಗೊಳಿಸುವ ಶಕ್ತಿಯನ್ನು ಹೊಂದಿವೆ. ಈಗಾಗಿ ಇದು ಮಲಬದ್ಧತೆಗೆ ಅತ್ಯಂತ ಪರಿಣಾಮಕಾರಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ.

ಒಣ ಏಪ್ರಿಕಾಟ್‍ಗಳಲ್ಲಿ ಅಲ್ಕಾಲಿ ಎಂಬ ಅಂಶವಿದ್ದು, ಇದು ಉದರದಲ್ಲಿ ಬಿಡುಗಡೆಯಾಗುವ ಆಮ್ಲಗಳನ್ನು ತಟಸ್ಥಗೊಳಿಸುವ ಶಕ್ತಿಯನ್ನು ಹೊಂದಿದೆ.
ಆದ್ದರಿಂದ ಊಟಕ್ಕೆ ಮೊದಲು ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಒಣ ಏಪ್ರಿಕಾಟ್‍ಗಳು ಜ್ವರವನ್ನು ಕಡಿಮೆ ಮಾಡಲು ಉಪಯೋಗಕ್ಕೆ ಬರುತ್ತವೆ.

ಸ್ವಲ್ಪ ಪ್ರಮಾಣದ ಜೇನು ತುಪ್ಪವನ್ನು ನೀರಿನೊಂದಿಗೆ ಬೆರೆಸಿ ಅದಕ್ಕೆ ಏಪ್ರಿಕಾಟ್‍ಗಳನ್ನು ಸೇರಿಸಿ ಒಂದು ದ್ರಾವಣವನ್ನು ತಯಾರಿಸಿಕೊಂಡು ಸೇವಿಸುತ್ತ ಬಂದರೆ ಬಾಯಾರಿಕೆಯು ಸಹ ಪರಿಹಾರವಾಗುತ್ತದೆ.

ತ್ವಚೆ; ತುರಿಕೆ, ಸನ್‍ಬರ್ನ್, ಕಜ್ಜಿ ಮತ್ತು ಹುರುಪುಗಳನ್ನು ನಿವಾರಿಸಲು ಒಣ ಏಪ್ರಿಕಾಟ್‍ಗಳ ರಸವನ್ನು ಬಳಸಬಹುದು. ಜೊತೆಗೆ ಇದರಿಂದ ಮೊಡವೆ ಮುಂತಾದ ತ್ವಚೆಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

ಏಪ್ರಿಕಾಟ್‍ನ ಸ್ಕ್ರಬ್ ಅನ್ನು ತ್ವಚೆಯ ಎಕ್ಸ್‌ಫೋಲಿಯೇಷನ್ ಮಾಡಲು ಸಹ ಬಳಸಲಾಗುತ್ತದೆ.

ಒಣ ಏಪ್ರಿಕಾಟ್‍ಗಳನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿರುವ ಕಶ್ಮಲಗಳನ್ನು ನಿವಾರಿಸಿಕೊಳ್ಳಬಹುದು. ಏಕೆಂದರೆ ಏಪ್ರಿಕಾಟ್‍ಗಳು ನಮ್ಮ ದೇಹದ ಕಶ್ಮಲಗಳನ್ನು ಮೆದುಗೊಳಿಸಿ, ಜೀರ್ಣಾಂಗ ವ್ಯೂಹ ಸರಾಗವಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ.

ಒಣ ಏಪ್ರಿಕೋಟ್ ನಮ್ಮ ದೇಹದಲ್ಲಿ ಜೀರ್ಣ ಶಕ್ತಿಯನ್ನು ಹೆಚ್ಚಿಸುವ ರಸಗಳನ್ನು ಬಿಡುಗಡೆಯಾಗಲು ಸಹಕರಿಸುತ್ತದೆ ಮತ್ತು ಜೀರ್ಣಾಂಗ ವ್ಯೂಹದಲ್ಲಿ ಹೆಚ್ಚಿನ ಅಲ್ಕಾಲೀನ್ ವಾತಾವರಣವನ್ನು ನಿರ್ಮಿಸಲು ನೆರವಾಗುತ್ತದೆ.

ಒಣ ಏಪ್ರಿಕಾಟ್‍ಗಳನ್ನು ಗರ್ಭಿಣಿಯರಿಗೆ ಮನೆಮದ್ದಾಗಿ ನೀಡುತ್ತ ಬಂದಿದ್ದಾರೆ ಇದು ಬಂಜೆತನ,ರಕ್ತಸ್ರಾವ ಮತ್ತು ಸೆಳೆತಗಳನ್ನು ನಿವಾರಿಸಲು ನೆರವಾಗುತ್ತದೆ.

ಒಣ ಏಪ್ರಿಕಾಟ್‍ನ ಪೇಸ್ಟ್ ಜನನಾಂಗದ ಇನ್‍ಫೆಕ್ಷನ್‍ ಅನ್ನು ನಿವಾರಿಸುವ ಗುಣಗಳನ್ನು ಹೊಂದಿದೆ. ಗರ್ಭಿಣಿಯರು ಮತ್ತು ಬಾಣಂತಿಯರು ಏಪ್ರಿಕಾಟ್‍ಗಳನ್ನು ನಿಯಮಿತವಾಗಿ ಸೇವಿಸಬೇಕು.

ಒಣ ಏಪ್ರಿಕೋಟ್ ಹೃದಯದ ಬಡಿತವನ್ನು ಕ್ರಮಬದ್ಧಗೊಳಿಸುತ್ತದೆ.

ಒಣ ಏಪ್ರಿಕಾಟ್‍ಗಳಲ್ಲಿ ಯಥೇಚ್ಛವಾದ ಪೊಟಾಶಿಯಂ ಅಂಶವು ಅಡಗಿರುತ್ತದೆ. ಪೊಟಾಶಿಯಂ ಎಂಬುದು ಒಂದು ಉತ್ತಮ ಖನಿಜ ಮತ್ತು ಎಲೆಕ್ಟ್ರೋಲೈಟ್ ಆಗಿದ್ದು, ಇದು ನಮ್ಮ ದೇಹದಲ್ಲಿನ ದ್ರವಗಳ ಸಮತೋಲನ ಮಾಡಲು ನೆರವಾಗುತ್ತದೆ.

ಇದು ನಮ್ಮ ದೇಹದ ಸ್ನಾಯುಗಳ ಕಾರ್ಯವನ್ನು ಸುಗಮಗೊಳಿಸಿ, ಹೃದಯದ ಬಡಿತವನ್ನು ಸುಲಲಿತಗೊಳಿಸುತ್ತದೆ.

ಒಣ ಏಪ್ರಿಕಾಟ್‍ಗಳಲ್ಲಿ ವಿಟಮಿನ್ ಎ‍ ಯಂತಹ ಪೋಷಕಾಂಶಗಳು ಯಥೇಚ್ಛವಾಗಿ ಇವೆ. ಇದರಿಂದ ನಮ್ಮ ದೃಷ್ಟಿಯು ಮತ್ತಷ್ಟು ಸುಧಾರಿಸುತ್ತದೆ.

ವಿಟಮಿನ್ ಎಯು ಒಂದು ಪ್ರಬಲವಾದ ಅಂಟಿ ಆಕ್ಸಿಡೆಂಟ್ ಆಗಿದ್ದು, ಇದು ನಮ್ಮ ದೇಹದಲ್ಲಿರುವ ಫ್ರೀ ರಾಡಿಕಲ್ಸ್‌ಗಳನ್ನು ಹೊಡೆದೊಡಿಸುತ್ತದೆ ಮತ್ತು ದೇಹದ ಜೀವ ಕೋಶಗಳ ಮತ್ತು ಅಂಗಾಂಶಗಳ ಆರೋಗ್ಯವನ್ನು ಕಾಪಾಡುತ್ತದೆ.

ಫ್ರೀ ರಾಡಿಕಲ್‍ಗಳು ಹಾನಿಗೊಳಗಾಗುವುದರಿಂದ ನಮ್ಮ ಕಣ್ಣಿನ ಮಸೂರಗಳು ಹಾನಿಗೊಳಗಾಗಿ, ನಮ್ಮ ಕಣ್ಣಿಗೆ ಪೊರೆಗಳು ಬರುವ ಸಂಭವವಿರುತ್ತದೆ. ಒಣ ಏಪ್ರಿಕಾಟ್‍ಗಳನ್ನು ಸೇವಿಸುವುದರ ಮೂಲಕ ಕಣ್ಣಿನ ಪೊರೆಗಳು ಬರುವುದನ್ನು ತಡೆಯಬಹುದು.

ಒಣ ಏಪ್ರಿಕಾಟ್‍ಗಳನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಹಿಮೊಗ್ಲೋಬಿನ್ ಪ್ರಮಾಣವು ಹೆಚ್ಚಾಗುತ್ತದೆ. ಇದು ಅನಿಮಿಯಾದ ವಿರುದ್ಧ ಹೋರಾಡಲು ನಮಗೆ ನೆರವಾಗುತ್ತದೆ.

ಏಪ್ರಿಕಾಟ್‍ಗಳಲ್ಲಿ ಕಬ್ಬಿಣಾಂಶ ಮತ್ತು ತಾಮ್ರದಂತಹ ಖನಿಜಾಂಶಗಳು ಲಭ್ಯವಿದ್ದು, ಇವು ಹಿಮೊಗ್ಲೋಬಿನ್ ಉತ್ಪಾದಿಸಲು ನೆರವಿಗೆ ಬರುತ್ತವೆ.

ಒಣ ಏಪ್ರಿಕಾಟ್‍ಗಳನ್ನು ಸೇವಿಸುವುದರಿಂದ ಅಸ್ತಮಾ, ಕ್ಷಯ ಮತ್ತು ಗೂರಲು ಮುಂತಾದ ರೋಗಗಳಿಂದ ಕಾಪಾಡುತ್ತದೆ.

ಒಣ ಏಪ್ರಿಕಾಟ್‍ನ ಎಣ್ಣೆಯು ಅತ್ಯುತ್ತಮವಾದ ಸ್ಕಿನ್ ಕೇರ್ ಉತ್ಪನ್ನವಾಗಿ ನೆರವಾಗುತ್ತದೆ. ಇದನ್ನು ಹಚ್ಚಿಕೊಳ್ಳುವುದರಿಂದ ತ್ವಚೆಯು ಉತ್ತಮ ಕಾಂತಿಯನ್ನು ಪಡೆಯುತ್ತದೆ. ಜೊತೆಗೆ ಇದು ಕಿವಿ ಸೋರುವಿಕೆಗು ಸಹ ಉತ್ತಮ ಔಷಧಿಯಾಗಿರುತ್ತದೆ.

ಆದ್ದರಿಂದ ಒಣ ಏಪ್ರಿಕೋಟ್ ಅನ್ನು ಬಳಸಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.

LEAVE A REPLY

Please enter your comment!
Please enter your name here