ಆ ಹುಡುಗಿ ಮಾಡಿದ ಸಣ್ಣ ತಪ್ಪಿಗೆ ಪ್ರಾಣವನ್ನೇ ಕಳೆದುಕೊಂಡಳು

0
1128

ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ವಿಷಯ

ಸಿನಿಮಾ ನೋಡಿ ಮನೆಗೆ ಹೋಗುತಿದ್ದ ಸಮಯ ರಾತ್ರಿ 9 ದಾಟ್ಟಿತ್ತು. ನೋಡಿದ ಸಿನಿಮಾದಲ್ಲಿನ ಟೈಟಲ್ ಹಾಡನ್ನು ಗುನುಗುತ್ತ ನನ್ನ ಬೈಕ್ ಮೇಲೆ 40 ವೇಗದಲ್ಲಿ ಹೋಗುತಿದ್ದೆ… ಅಷ್ಟರಲ್ಲಿ ಒಂದು ಹುಡುಗಿ ನನ್ನನ್ನು ಕ್ರಾಸ್ ಮಾಡಿಕೊಂಡು ಹೋದಳು. ವೈಟ್ ಆಕ್ಟೀವಾ ಮೇಲೆ ವೈಟ್ ಡ್ರೆಸ್ ಹಾಕಿಕೊಂಡು ಮುಖಕ್ಕೆ ಬ್ಲಾಕ್ ಸ್ಕಾರ್ಫ್ ಕಟ್ಟಿಕೊಂಡಿದ್ದಳು. ಹುಡುಗಿ ನನ್ನನ್ನು ಕ್ರಾಸ್ ಮಾಡಿ ಹಾಗೆ ಹೋಗುದ್ದಕ್ಕೆ ನನ್ನಲ್ಲಿರುವ ಇಗೋ ನನ್ನನ್ನು ಡಿಸ್ಟರ್ಬ ಮಾಡಿತು. ಹುಡುಗಿ ಸ್ಕೂಟಿ ಹಾಕಿಕೊಂಡು ನಿನ್ನನ್ನು ಕ್ರಾಸ್ ಮಾಡಿದಳು ನೀನೇನು ಪಲ್ಸರ್ ಇಟ್ಟುಕೊಂಡು ಮುದುಕರ ಹಾಗೆ ಓಡಿಸುತಿರುವೆ ಎಂದು ಅಷ್ಟೇ ಎಕ್ ಸ್ಲೇಟರ್ ರೈಸ್ ಮಾಡಿ ನನ್ನ ಗಾಡಿಯೂ ಕೂಡ 70ರ ವೇಗದಲ್ಲಿ ಮುನ್ನುಗಿತು.

ಆ ವೈಟ್ ಡ್ರೆಸ್ ಹುಡುಗಿ ಕಣ್ಮುಂದೆನೇ ಇದ್ದಳೆ. ಆ ಹುಡುಗಿಯನ್ನು ನೋಡುತ್ತಲೇ ಒಂದು ನಾಯಿ ಬೊಗಳುತ್ತಾ ಆ ಹುಡುಗಿ ಹಿಂದೆ ಬಿದ್ದಿತ್ತು. ಆಕೆ ಕೂಡ ಆ ಟೆಂಕ್ಷನ್ ನಲ್ಲಿ ನಾಯಿಯಿಂದ ತಪ್ಪಿಸಿಕೊಳ್ಳಲು ಇನ್ನೂ ಎಕ್ ಸ್ಲೇಟರ್ ರೈಸ್ ಮಾಡುತ್ತಲೇ ಇದ್ದಳು. ನಾನು ಹಿಂದಿನಿಂದ ನಿಲ್ಲು ನಿಲ್ಲು ನಾಯಿ ಏನೂ ಮಾಡುವುದಿಲ್ಲ ಸ್ಕಾರ್ಫ ತಗೆದುಹಾಕು ಎನ್ನುತ್ತಲೇ ಇದ್ದೆ…. ಆದರೂ ಆ ಹುಡುಗಿಗೆ ಆ ಮಾತುಗಳು ಕೇಳಿಸಲೇ ಇಲ್ಲ…. ನಾಯಿ ಹಿಂಬಾಲಿಸುತಿದೆ ಎಂದು ಇನ್ನೂ ವೇಗವಾಗಿ ಗಾಡಿ ಓಡಿಸುತಿದ್ದಳು.

ಒಂದು ಸ್ಪೀಡ್ ಬ್ರೇಕರ್ ಬಳಿ ಅಷ್ಟೆತ್ತರಕ್ಕೆ ಹಾರಿ ಬಿದ್ದಳು… ಇನ್ನು ನಾಯಿ ಆಕೆಯನ್ನು ಹಿಬಾಲಿಸುತ್ತಲೇ ಇತ್ತು. ಒಂದೊಮ್ಮೆ ನಾಯಿಯನ್ನು ನೋಡಲು ಹಿಂತಿರುಗಿ ನೋಡಿದ್ದಾಳೆ. ನಾಯಿ ತುಂಬಾ ಹತ್ತಿರ ಇದೆ…. ಆ ಸಮಯದಲ್ಲಿ ಮುಂದೆ ನೋಡಿಕೊಳ್ಳದೆ…. ಎಕ್ಸ್ಲೇಟರ್ ಕೊಟ್ಟಳಷ್ಟೆ. ಕಂಟ್ರೋಲ್‌ ಕಳೆದುಕೊಂಡು ಆಕ್ಟೀವಾ…. ಎದುರಿಗಿದ್ದ ಗೇಟ್ ಗೆ ಬಲವಾಗಿ ಗುದ್ದುತ್ತಾಳೆ. 70 ರ ವೇಗದಲ್ಲಿ ಕಬ್ಬಿಣದ ಗೇಟ್ ಗೆ ಗುದ್ದುವಷ್ಟರಲ್ಲಿ ತಲೆಹೊಡೆದು ಅಲ್ಲೇ ಸತ್ತು ಬಿದ್ದಿದಳು.

ಸಾಧಾರಣವಾಗಿ ನಾಯಿಗಳು ಕಾರುಗಳ ಹಿಂದೆ, ಬೈಕ್ ಗಳ ಹಿಂದೆ ಬೀಳುತಿರುತ್ತವೆ… ಕಾರಿನಲ್ಲಾದರೆ ಡೋರ್ ಇರುತ್ತದೆ ನೋ ಪ್ರಾಬ್ಲಮ್… ಆದರೆ ಬೈಕ್ ಸವಾರರು ನಾಯಿಗಳು ಹಿಂಬೀಳುತ್ತಲೇ ನಿಲ್ಲಬೇಕು. ಹಾಗೆ ನಿಲ್ಲುವುದರಿಂದ ನಾಯಿಗಳು ಕೂಡ ನಿಲ್ಲುತ್ತದೆ… ಈ ಹುಡುಗಿ ಸ್ಕಾರ್ಫ್ ಕಟ್ಟಿಕೊಂಡು ತುಂಬಾ ವೇಗವಾಗಿ ಹೊದ್ದರಿಂದ ನಾಯಿಯೂ ಸಹ ತುಂಬಾ ದೂರ ಹಿಂಬಾಲಿಸಿತು. ಆ ಸಮಯದಲ್ಲಿ ಆ ಹುಡುಗಿ ತನ್ನ ಗಾಡಿ ಅನ್ನು ನಿಲ್ಲಿಸಿದ್ದರೆ..‌‌. ಇಂತಹ ಘಟನೆ ನಡೆಯುತಿರಲಿಲ್ಲ.

LEAVE A REPLY

Please enter your comment!
Please enter your name here