ಊಟ ಮಾಡಿದ ನಂತರ ಈ ತಪ್ಪು ಮಾಡಬೇಡಿ ಏನು ಎಂದು ತಿಳಿದುಕೊಳ್ಳಿ

0
1419

ಇತ್ತೀಚೆಗೆ ಭಾರತದಲ್ಲಿ ಆಯುರ್ವೇದ ಶಾಸ್ತ್ರಕ್ಕೆ ತುಂಬಾ ಮಾನ್ಯತೆ ನೀಡಿದ್ದಾರೆ.ಆಯುರ್ವೇದದಲ್ಲಿ ಹಲವಾರು ಸಮಸ್ಯೆಗಳಿಗೆ ಔಷಧಿಗಳನ್ನು ನೀಡಿ ಗುಣಪಡಿಸಿದ್ದಾರೆ ಜೊತೆಗೆ ಮನುಷ್ಯರು ಯಾವ ವಿಧಾನದಿಂದ ತಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬುದನ್ನು ಸಹ ತಿಳಿಸಿದ್ದಾರೆ. ಅದರಲ್ಲಿ ಒಂದಾಗಿರುವ ವಿಷಯವೆಂದರೇ..
ಊಟ ಮಾಡಿದ ನಂತರ ಯಾವ ಕೆಲಸಗಳನ್ನು ಮಾಡಬಾರದು ಎಂದು ತಿಳಿಸಿದ್ದಾರೆ.

ಇಂದಿನ ಜೀವನ ಬರಿ ಕೆಲಸ. ಒತ್ತಡ. ಹಿಂಸೆ. ಆಯಾಸ. ಇವುಗಳಿಂದಲೇ ಮುಗಿದು ಹೋಗುವ ಆಗಿದೆ. ಒಬ್ಬ ವ್ಯಕ್ತಿ ಕೆಲಸ ಮುಗಿಸಿ ಮನೆಗೆ ಬಂದ ತಕ್ಷಣ ಮಲಗಬೇಕು ಎಂದು ಊಟ ಮುಗಿಸಿ ತಕ್ಷಣ ಮಲಗುತ್ತಾರೆ. ಇನ್ನು ಬೆಳಿಗ್ಗೆಯಿಂದ ಮನೆಯಲ್ಲೆ ಇದ್ದು ಜೀವನ ನೆಡೆಸುವವರು ಇದ್ದರೆ ಅವರು ಊಟ ಅದ ತಕ್ಷಣ ದಪ್ಪ ಅಗುತ್ತೆವೆ ಎಂದು ನೆಡೆಯಲು ವ್ಯಾಯಾಮ ಮಾಡಲು ಹೋಗುತ್ತಾರೆ. ಇದು ಸರೀನಾ?

ಹಾಗಾದರೇ ಊಟ ಅದ ನಂತರ ಯಾವ ಕೆಲಸ ಮಾಡಬಾರದು?

ಕೆಲವರು ಊಟ ಮಾಡಿದ ತಕ್ಷಣ ಹಣ್ಣುಗಳನ್ನು ತಿನ್ನುತ್ತಾರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಏಕೆಂದರೆ ತಿಂದ ಆಹಾರ ಬೇಗ ಜೀರ್ಣವಾಗಿರುವುದಿಲ್ಲ ಅದರ ಜೊತೆ ಹಣ್ಣಿನ ಸೇವನೆ ಮಾಡಿದರೆ ತಿಂದ ಆಹಾರ ಜೀರ್ಣವಾಗದೆ ಅಜೀರ್ಣ ಸಮಸ್ಯೆ. ಫುಡ್ ಫಾಯಿಜನ್ ಆಗುವ ಸಾಧ್ಯತೆ ಇರುತ್ತದೆ.

ಊಟ ಮುಗಿದ ತಕ್ಷಣ ಟಿ. ಕಾಫಿ ಕುಡಿಯುವ ಅಭ್ಯಾಸ ಕೆಲವರಿಗೆ ಇರುತ್ತದೆ ಆದರೆ ಇದನ್ನು ಮಾಡಿದರೆ ಅಧಿಕ ಪ್ರಮಾಣದಲ್ಲಿ ಯಾಸಿಡ್ ಬಿಡುಗಡೆಯಾಗಿ ಜೀರ್ಣಕ್ರಿಯೆ ನಿಧಾನವಾಗಿ ನೆಡೆಯುತ್ತದೆ.

ಕೆಲವರು ಊಟ ಮಾಡಿದ ತಕ್ಷಣ ವಾಕಿಂಗ್. ವ್ಯಾಯಾಮ ಎಂದು ಹೊರಡುತ್ತಾರೆ ಆದರೆ ಹೀಗೆ ಮಾಡಿದರೆ ಊಟ ಜೀರ್ಣವಾಗದೆ ಅಧಿಕ ಪ್ರಮಾಣದಲ್ಲಿ ಯಾಸಿಡ್ ಬಿಡುಗಡೆಯಾಗಿ ಹೊಟ್ಟೆಯಲ್ಲಿ ಹುರಿ ಕಾಣಿಸುತ್ತದೆ.ಆದ್ದರಿಂದ ಊಟದ ನಂತರ 1 ಗಂಟೆ ಬಿಟ್ಟು ವಾಕಿಂಗ್. ವ್ಯಾಯಾಮ ಮಾಡುವುದು ಉತ್ತಮ.

ಬೆಲ್ಟ್ ಲೂಸ್ ಮಾಡಿಕೊಳ್ಳಬಾರದು. ರಕ್ತ ಸಂಚಲನೆಯು ಸರಾಗವಾಗಿ ನೆಡೆಯದೆ ತೊಂದರೆ ಆಗುತ್ತದೆ.

ಊಟ ಮುಗಿದ ತಕ್ಷಣ ಸ್ನಾನ ಮಾಡಬಾರದು. ರಕ್ತವು ದೇಹಕ್ಕೆಲ್ಲ ಹರಿದು ಹೊಟ್ಟೆ ಹೊಟ್ಟೆಯ ಹತ್ತಿರ ಕಡಿಮೆಯಾಗಿ ಜೀರ್ಣಕ್ರಿಯೆಯು ನಿದಾನವಾಗುತ್ತದೆ.

ಊಟ ಮಾಡಿದ ತಕ್ಷಣ ನಿದ್ದೆ ಮಾಡಬಾರದು ಆಹಾರವು ಸರಿಯಾಗಿ ಜೀರ್ಣವಾಗದೆ ಗ್ಯಾಸ್ಟ್ರಿಕ್ ಇನ್ಫೆಕ್ಷನ್ ಆಗುವ ಸಾಧ್ಯತೆ ಹೆಚ್ಚು.

ಊಟದ ನಂತರ ಈಜಾಡ ಬಾರದು ಏಕೆಂದರೆ ರಕ್ತ ಪ್ರಸರಣ ವೇಗ ಅಧಿಕವಾಗಿ ಶರೀರದ ಮಾಂಸಕಂಡಗಳು ಸ್ಥಗಿತಗೊಳ್ಳುತ್ತವೆ.

ಧೂಮಪಾನ. ಮದ್ಯಪಾನ ಮಾಡಬಾರದು ಇದು ಶ್ವಾಸಕೋಶಕ್ಕೆ ತೊಂದರೆ ಉಂಟು ಮಾಡುತ್ತದೆ.

ಚಾಕೊಲೇಟ್. ಐಸ್ ಕ್ರೀಮ್ ಗಳ ಸೇವನೆ ಮಾಡಬಾರದು.

ಊಟದ ನಂತರ ಇವುಗಳನ್ನು ಮಾಡುವುದು ನಿಂತರೆ ಆರೋಗ್ಯ ಉತ್ತಮವಾಗುತ್ತದೆ. ಜೊತೆಗೆ ಹಲವಾರು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

LEAVE A REPLY

Please enter your comment!
Please enter your name here