ಮಂಡಿ ನೋವಿಗೆ ಸುಲಭ ಉಪಾಯ.
ಇತ್ತೀಚಿನ ದಿನಗಳಲ್ಲಿ ಎಲ್ಲರನ್ನು ಕಾಡುವ ಸಮಸ್ಯೆ ಮಂಡಿ ನೋವು. ಅದರಲ್ಲು ವಯಸ್ಸಾದವರು ಈ ಸಮಸ್ಯೆಯಿಂದ ತುಂಬಾ ನೋವನ್ನು ಅನುಭವಿಸುತ್ತಾರೆ.
ಮಂಡಿ ನೋವಿಗೆ ಮುಖ್ಯ ಕಾರಣ ಮಂಡಿಯನ್ನು ಬಲವಾಗಿ ಹಿಡಿದಿಡುವಂತಹ ಧಿರಿಸುಗಳು ಮತ್ತು ಸೆಳೆತವಾಗಿದೆ. ಈ ಮಂಡಿ ನೋವು ಮೊದಲು ಸಾಧಾರಣವಾಗಿದ್ದು ಕ್ರಮೇಣ ಅದು ತೀವ್ರವಾಗುತ್ತದೆ ನಂತರ ಸಹಿಸಲಾಗದ ವೇದನೆಗೆ ಅದು ಮಾರ್ಪಡುತ್ತದೆ. ವಯಸ್ಸು, ಗಾಯ ಹಾಗೂ ಸಂಧಿವಾತ ಮಂಡಿ ನೋವಿಗೆ ಮುಖ್ಯ ಕಾರಣವಾಗಿದೆ.
ನಿರಂತರವಾಗಿ ಕುರ್ಚಿಯಲ್ಲಿ ಕೂರುವುದರಿಂದ, ಬಹಳ ಕಾಲ ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದರಿಂದಲೇ ಬೆನ್ನು ನೋವು, ಮಂಡಿ ನೋವು ಬರುತ್ತದೆ.
ಈ ಮಂಡಿನೋವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆಂದು ನೋಡೋಣ ಬನ್ನಿ.
ಈ ಮಂಡಿ ನೋವನ್ನು ನಿವಾರಿಸಿಕೊಳ್ಳಲು ಎಲ್ಲರೂ ವ್ಯಾಯಾಮಗಳ ಮೊರೆ ಹೋಗುವುದು ಅತ್ಯವಶ್ಯಕವಾಗಿದೆ.ಹಾಗೂ ಮನೆ ಮದ್ದುಗಳ ಶುಶ್ರೂಷೆ ಕೂಡ ಮಂಡಿನೋವಿಗೆ ಅಗತ್ಯವಾಗಿರುತ್ತದೆ.
ನಮ್ಮ ದಿನನಿತ್ಯದ ಆಹಾರದಲ್ಲಿ ಈರುಳ್ಳಿ, ಕ್ಯಾರೇಟ್, ಮೆಂತೆ ಬೀಜಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದೂ ಕೂಡ ಮಂಡಿ ನೋವಿಗೆ ಉಪಶಮನವನ್ನು ನೀಡುತ್ತದೆ.
ಸರಿಯಾದ ಪ್ರಮಾಣಬದ್ಧವಾದ ಡಯೆಟ್ ಅನ್ನು ಅನುಸರಿಸುವುದೂ ಕೂಡ ನೋವಿನ ಉಪಶಮನಕ್ಕೆ ಸಹಕರಿಸುತ್ತದೆ.
ವೈದ್ಯರ ಸಲಹೆಗಳು ಕೆಲವೊಂದು ಮಾತ್ರೆಗಳು ಕೂಡ ಮಂಡಿ ನೋವನ್ನು ಕಡಿಮೆ ಮಾಡುತ್ತದೆ.
ಆದರೆ ನೈಸರ್ಗಿಕವಾಗಿ ಮಂಡಿ ನೋವನ್ನು ನಿವಾರಿಸುವ ಕೆಲವು ಮನೆಮದ್ದುಗಳನ್ನು ನೋಡೋಣ.
ರಾತ್ರಿ ಪೂರ್ತಿ ಮೆಂತೆ ಬೀಜಗಳನ್ನು ನೀರಿನಲ್ಲಿ ನೆನೆಸಿ. ಆ ನೀರನ್ನು ಬಸಿದು ಬೀಜಗಳನ್ನು ಅಗೆಯಿರಿ. ಮಂಡಿ ನೋವಿಗೆ ಇದು ಸರಳ ಮದ್ದು.
ಜೊತೆಗೆ ಅದೇ ಮೆಂತೆ ಬೀಜವನ್ನು ರುಬ್ಬಿ ಪೇಸ್ಟ್ನಂತೆ ಮಾಡಿಕೊಂಡು ಮಂಡಿಗೆ ಹಚ್ಚುವುದು ಕೂಡ ಮಂಡಿ ನೋವನ್ನು ಹೋಗಿಸುತ್ತದೆ.
ಪ್ರತಿದಿನ ಬೆಳಗ್ಗೆ, ಸಂಜೆ ಒಂದು ಗ್ಲಾಸ್ ಪ್ರಮಾಣದಲ್ಲಿ ಉಗುರು ಬೆಚ್ಚಗಿನ ಮೇಕೆ ಹಾಲಿನಲ್ಲಿ ಒಂದು ಸ್ಪೂನ್ ಎಳ್ಳುಪುಡಿ, ಸಣ್ಣ ಬೆಲ್ಲದ ಚೂರು ಸೇರಿಸಿ ಕುಡಿಯುವುದರಿಂದ ಮಂಡಿ ನೋವು ಹೋಗುತ್ತದೆ.
ಓಂ ಕಾಲುಗಳನ್ನು ನುಣ್ಣಗೆ ಅರೆದು ಅದನ್ನು ನೋವಿರುವ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ.
ಪುದೀನ ಎಣ್ಣೆಯನ್ನು ನೋವಿರುವ ಜಾಗಕ್ಕೆ ಹಚ್ಚಿ ಚೆನ್ನಗಿ ಮಸಾಜ್ ಮಾಡಿ ಬಿಸಿ ನೀರಿನಲ್ಲಿ ತೊಳೆಯಬೇಕು.ಇದರಿಂದ ನೋವು ಕಡಿಮೆಯಾಗುತ್ತದೆ.
ಕರ್ಪುರದ ಎಣ್ಣೆಯನ್ನು ಮಸಾಜ್ ಮಾಡುವುದು. ಇದು ರಕ್ತ ಪರಿಚಲನೆ ಹೆಚ್ಚುತ್ತದೆ. ಸೆಳೆತ ಒತ್ತಡ ಕಡಿಮೆಯಾಗುತ್ತದೆ.
ಸಲ್ಫರ್ ಹಾಗೂ ಉತ್ಕರ್ಷಣ ನಿರೋಧಿ ಗುಣಗಳಿಂದ ಶ್ರೀಮಂತವಾಗಿರುವ ಈರುಳ್ಳಿ ನೋವನ್ನು ಉಂಟು ಮಾಡುವ ಎಂಜೀಮ್ಗಳನ್ನು ನಿಯಂತ್ರಿಸುತ್ತದೆ. ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಈರುಳ್ಳಿ ಕರುಳಿನ ಚಲನೆಗೂ ಉತ್ತಮವಾಗಿದೆ.
ಕ್ಯಾರೇಟ್ ಅಸ್ಥಿರಜ್ಜುಗಳನ್ನು ಪಾಲನೆ ಮಾಡಿ ಮಂಡಿ ನೋವನ್ನು ನಿವಾರಿಸುತ್ತದೆ. ಹಸಿಯಾಗಿ ಇಲ್ಲವೇ ಬೇಯಿಸಿ ಕ್ಯಾರೇಟ್ ಅನ್ನು ಸೇವಿಸಿ.
ಮಂಡಿ ನೋವಿಗೆ ನಿಮ್ಮ ಅತಿಯಾದ ತೂಕವು ಸಹ ಕಾರಣವಾಗಿದ್ದು. ನೀವು ನಿಮ್ಮ ತೂಕ ಇಳಿಸುವುದು ನಿಮ್ಮ ಮಂಡಿ ನೋವಿಗೆ ಮನೆಮದ್ದು.
ಬೆಚ್ಚಗಿನ ತೆಂಗಿನೆಣ್ಣೆಯನ್ನು ನೋವಿರುವ ಮಂಡಿಗೆ ಮಸಾಜ್ ಮಾಡುವುದೂ ಕೂಡ ಮಂಡಿ ನೋವಿನಿಂದ ಮುಕ್ತ ಪರಿಹಾರವನ್ನು ಒದಗಿಸುತ್ತದೆ.
ಪಾಲವ್ ಎಲೆಗಳನ್ನು ಜಜ್ಜಿ ಅದರಿಂದ ರಸವನ್ನು ತೆಗೆದು ನೋವಿರುವ ಮಂಡಿಗೆ ಮಸಾಜ್ ಮಾಡುತ್ತ ಬಂದರು ನೋವು ಕಡಿಮೆಯಾಗುತ್ತದೆ.
ಅರಶಿನ ಬೆರೆತ ಹಾಲು ಸೇವನೆ ಮಂಡಿ ನೋವಿಗೆ ಉಪಶಮನವನ್ನು ಒದಗಿಸುವ ಒಂದು ಮನೆಮದ್ದಾಗಿದ್ದು ನಿಮಗೆ ತಕ್ಷಣ ಆರಾಮವನ್ನು ನೀಡುತ್ತದೆ.
ಮಂಡಿ ನೋವನ್ನು ಕಡಿಮೆ ಮಾಡುವ ಹಲವಾರು ಯೋಗಗಳನ್ನು ಅಭ್ಯಾಸ ಮಾಡಿ ದಿನ ನಿತ್ಯ ತಪ್ಪದೆ ಮಾಡುತ್ತ ಬಂದರೆ ಮಂಡಿ ನೋವು ಕಡಿಮೆಯಾಗುತ್ತದೆ.
ಮಂಡಿ ನೋವಿರುವ ಜಾಗಕ್ಕೆ 15 ರಿಂದ 20 ನಿಮಿಷಗಳ ಕಾಲ ಐಸ್ಗಳನ್ನು ಇಟ್ಟುಕೊಳ್ಳುವುದರಿಂದ ರಕ್ತದ ಹರಿವು ಸರಾಗವಾಗುತ್ತದೆ. ಅಲ್ಲದೇ ಅಂಗಾಂಶ ಊತ ನಿವಾರಣೆಯಾಗುತ್ತದೆ. ಐಸ್ ಥೆರಪಿ ಕೂಡ ಮಂಡಿ ನೋವಿನ ರಿಲೀಫ್ ಚಿಕಿತ್ಸೆಗಳಲ್ಲಿ ಒಂದು.
ಇವುಗಳನ್ನು ಪಾಲಿಸಿ ನಿಮ್ಮ ಮಂಡಿ ನೋವನ್ನು ಕಡಿಮೆ ಮಾಡಿಕೊಳ್ಳಿ.