ರಾತ್ರಿಯ ಸಮಯದಲ್ಲಿ ಕನ್ನಡಿಯನ್ನು ಏಕೆ ನೋಡಬಾರದು

0
1235

ರಾತ್ರಿಯ ಸಮಯವು ರಜ-ತಮಾತ್ಮಕ ವಾಯುವಿಗೆ ಪೂರಕವಾಗಿರುವುದರಿಂದ, ಅದು ಸೂಕ್ಷ್ಮ ರಜ-ತಮಾತ್ಮಕ ಚಲನವಲನಗಳೊಂದಿಗೆ ಮತ್ತು ಕೆಟ್ಟ ಶಕ್ತಿಗಳ ಚಟುವಟಿಕೆಗಳೊಂದಿಗೆ ಸಂಬಂಧಿತವಾಗಿರುತ್ತದೆ. ಕನ್ನಡಿಯಲ್ಲಿ ಕಾಣಿಸುವ ದೇಹದ ಪ್ರತಿಬಿಂಬವು ಅತಿ ಹೆಚ್ಚು ಪ್ರಮಾಣದಲ್ಲಿ ದೇಹದಿಂದ ಪ್ರಕ್ಷೇಪಿತವಾಗುವ ಜೀವದ ಸೂಕ್ಷ್ಮಲಹರಿಗಳಿಗೆ ಸಂಬಂಧಿಸಿರುವುದರಿಂದ ಈ ಪ್ರತಿಬಿಂಬದ ಮೇಲೆ ವಾತಾವರಣದಲ್ಲಿನ ಶಕ್ತಿಶಾಲಿ ಕೆಟ್ಟ ಶಕ್ತಿಗಳು ಬೇಗನೆ ಹಲ್ಲೆ ಮಾಡಬಲ್ಲವು.

ಇದಕ್ಕೆ ವಿರುದ್ಧವಾಗಿ ಬೆಳಗ್ಗಿನ ಸಮಯದಲ್ಲಿ ವಾಯುಮಂಡಲವು ಸಾತ್ತ್ವಿಕ ಲಹರಿಗಳಿಂದ ತುಂಬಿರುವುದರಿಂದ ಕನ್ನಡಿಯಲ್ಲಿ ಕಾಣಿಸುವ ಪ್ರತಿಬಿಂಬದ ಮೇಲೆ ವಾಯುಮಂಡಲದಲ್ಲಿನ ಸಾತ್ತ್ವಿಕ ಲಹರಿಗಳ ಸಹಾಯದಿಂದ ಆಧ್ಯಾತ್ಮಿಕ ಉಪಚಾರವಾಗಿ ಸ್ಥೂಲದೇಹಕ್ಕೆ ತನ್ನಿಂದತಾನೇ ಹಗುರತನವು ಪ್ರಾಪ್ತವಾಗುತ್ತದೆ. ಇದರಿಂದ ಬೆಳಗ್ಗಿನ ಸಮಯದಲ್ಲಿ ಕನ್ನಡಿಯಲ್ಲಿ ಪ್ರತಿಬಿಂಬವನ್ನು ನೋಡುವುದು ಲಾಭದಾಯಕವಾಗಿದ್ದು; ಅದೇ ಪ್ರತಿಬಿಂಬವನ್ನು ರಾತ್ರಿಯ ರಜ-ತಮಾತ್ಮಕ ಚಲನವಲನಗಳಿಗೆ ಪೂರಕವಾಗಿರುವಂತಹ ಕಾಲದಲ್ಲಿ ನೋಡಿದರೆ ಅಪಾಯಕಾರಿಯಾಗುವ ಸಾಧ್ಯತೆಯಿದೆ.

ಕನ್ನಡಿಯಲ್ಲಿ ಮೂಡಿದ ವ್ಯಕ್ತಿಯ ಪ್ರತಿಬಿಂಬದ ಮೇಲೆ ವಾತಾವರಣದಲ್ಲಿನ ಶಕ್ತಿಶಾಲಿ ಕೆಟ್ಟ ಶಕ್ತಿಗಳು ಹಲ್ಲೆ ಮಾಡಿದರೆ ಅದರಿಂದ ವ್ಯಕ್ತಿಯ ಮೇಲೆ ಏನು ಪರಿಣಾಮವಾಗುತ್ತದೆ ?
ಜೀವಕ್ಕೆ ಸಂಬಂಧಿಸಿದ ಪ್ರತಿಬಿಂಬದಲ್ಲಿನ ಲಹರಿಗಳು ಅತಿಹೆಚ್ಚು ಪ್ರಮಾಣದಲ್ಲಿ ಅವನ ಸೂಕ್ಷ್ಮದೇಹಕ್ಕೆ ಸಂಬಂಧಿಸಿರುವುದರಿಂದ ಕೆಟ್ಟ ಶಕ್ತಿಗಳ ಹಲ್ಲೆಗಳ ಹೆಚ್ಚಿನ ಪರಿಣಾಮವು ಆಧ್ಯಾತ್ಮಿಕ ಸ್ತರದಲ್ಲಿ ಆಗುತ್ತದೆ. ಈ ಹಲ್ಲೆಯಿಂದ ಜೀವಗಳ ಶರೀರ ಮತ್ತು ಮನಸ್ಸಿನ ಮೇಲೆ ಪರಿಣಾಮವಾಗುತ್ತದೆ. ಪ್ರಾಣಶಕ್ತಿ ಕಡಿಮೆಯಾಗುವುದು, ಆಯಾಸವಾಗುವುದು, ಅಸ್ವಸ್ಥವೆನಿಸುವುದು, ಮನಸ್ಸಿನಲ್ಲಿ ಆತ್ಮಹತ್ಯೆಯ ವಿಚಾರಗಳು ಬರುವುದು, ಕೆಟ್ಟ ಶಕ್ತಿಗಳು ದೇಹದಲ್ಲಿ ಸೇರಿಕೊಳ್ಳುವುದು, ಕೆಟ್ಟ ಶಕ್ತಿಗಳ ಪ್ರಭಾವದಿಂದಾಗಿ ಸ್ವಂತದ ಅಸ್ತಿತ್ವವು ಕಡಿಮೆಯಾಗುವುದು ಮುಂತಾದ ಆಧ್ಯಾತ್ಮಿಕ ತೊಂದರೆಗಳನ್ನು ಜೀವವು ಎದುರಿಸಬೇಕಾಗುತ್ತದೆ.

ಪ್ರತ್ಯಕ್ಷ ವ್ಯಕ್ತಿಯ ಮೇಲೆ ಹಲ್ಲೆ ಮಾಡುವುದಕ್ಕಿಂತ ವ್ಯಕ್ತಿಯ ಪ್ರತಿಬಿಂಬದ ಮಾಧ್ಯಮದಿಂದ ವ್ಯಕ್ತಿಯ ಮೇಲೆ ಹಲ್ಲೆ ಮಾಡುವುದು ಕೆಟ್ಟ ಶಕ್ತಿಗಳಿಗೆ ಹೆಚ್ಚು ಲಾಭದಾಯಕವಾಗಿದೆಯೇ ?
ವ್ಯಕ್ತಿಯ ಪ್ರತಿಬಿಂಬದ ಮಾಧ್ಯಮದಿಂದ ಕೆಟ್ಟ ಶಕ್ತಿಗಳಿಗೆ ಜೀವದ ಒಂದು ಸೂಕ್ಷ್ಮ ರೂಪವೇ ಪ್ರತ್ಯಕ್ಷ ದೃಶ್ಯರೂಪದಲ್ಲಿ ಸಿಗುತ್ತದೆ. ಸೂಕ್ಷ್ಮರೂಪದ ಮೇಲೆ ಹಲ್ಲೆಯನ್ನು ಮಾಡಿದರೆ ಹಲ್ಲೆಯ ಪರಿಣಾಮವು ಆ ಜೀವದ ಮೇಲೆ ದೀರ್ಘಕಾಲ ಉಳಿದುಕೊಳ್ಳುತ್ತದೆ ಮತ್ತು ಹಲ್ಲೆಯ ಪರಿಣಾಮವು ದೇಹದಲ್ಲಿ ತುಂಬಾ ಆಳವಾಗಿ ಆಗುವುದರಿಂದ ಅದನ್ನು ಉಪಯೋಗಿಸಿ ಕೆಟ್ಟ ಶಕ್ತಿಗಳಿಗೆ ಜೀವದ ಸೂಕ್ಷ್ಮಕೋಶಗಳಲ್ಲಿ ತ್ರಾಸದಾಯಕ ಶಕ್ತಿಯ ಸ್ಥಾನಗಳನ್ನು ಮಾಡಲು ಸುಲಭವಾಗುತ್ತದೆ. ಆದುದರಿಂದ ಸ್ಥೂಲದೇಹದ ಮೇಲೆ ಹಲ್ಲೆಯನ್ನು ಮಾಡುವುದಕ್ಕಿಂತ ವ್ಯಕ್ತಿಯ ಸೂಕ್ಷ್ಮರೂಪವನ್ನು ಉಪಯೋಗಿಸಿಕೊಂಡು, ಜೀವಕ್ಕೆ ದೀರ್ಘಕಾಲ ತೊಂದರೆ ನೀಡಲು ಮತ್ತು ಅದರ ದೇಹದಲ್ಲಿ ನುಗ್ಗಲು ಕೆಟ್ಟ ಶಕ್ತಿಗಳಿಗೆ ಸುಲಭವಾಗುತ್ತದೆ.

LEAVE A REPLY

Please enter your comment!
Please enter your name here