ಆಫೀಸ್ನಲ್ಲಿ ಸಿಕ್ಕಾಪಟ್ಟೆ ಸ್ಟ್ರೆಸ್ ಆಗಿದ್ಯ ಇದನ್ನ ತಿನ್ನಿ

0
775

ಒತ್ತಡ ನಿವಾರಣೆಗೆ ಸುಲಭ ಮಾರ್ಗ.

ಇತ್ತೀಚಿನ ಜಾಂಜಾಟ ಜೀವನವು ಸಾಕಪ್ಪಾ ಅನ್ನುವಷ್ಟು ಬೇಸರವನ್ನು ಹುಟ್ಟಿಸಿಬಿಡುತ್ತದೆ. ಏಕೆಂದರೆ ಎಲ್ಲರಿಗೂ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲುಗುವವರೆಗೂ ಒಂದಲ್ಲಾ ಒಂದು ಕೆಲಸ. ಜವಾಬ್ದಾರಿಗಳು ಇದ್ದೆ ಇರುತ್ತವೆ. ಕೆಲಸಕ್ಕೆ ಎಂದು ಹೋದರೆ ಅಲ್ಲಿನ ಕೆಲಸ. ಕಾರ್ಯ. ಒತ್ತಡಗಳು. ಮನೆಗೆ ಬಂದರೆ ಮನೆಯಲ್ಲಿನ ಸಮಸ್ಯೆಗಳ ಒತ್ತಡ. ಒಟ್ಟಾರೆ ಜೀವನವೇ ಒಂದು ಒತ್ತಡದ ಜೀವನವಾಗಿದೆ.

ಈ ಒತ್ತಡದಿಂದ ಹೊರಬಂದು ಜೀವನದಲ್ಲಿ ಸಂತೋಷವಾಗಿ ಇರಬೇಕು ಎಂದು ತುಂಬಾ ಪ್ರಯತ್ನಗಳನ್ನು ಮಾಡಿದರು ಅದಕ್ಕೆ ಸಫಲತೆ ಸಿಗುವುದು ತುಂಬಾ ಕಷ್ಟ. ಅದಾಗಿಯೂ ಈ ಒತ್ತಡದಿಂದ ಮನುಷ್ಯನು ಹಲವಾರು ರೋಗಗಳಿಗೆ ಗುರಿಯಾಗುತ್ತಾನೆ. ಆದ್ದರಿಂದ ಮನುಷ್ಯನು ತಾವು ದಿನನಿತ್ಯ ಸೇವಿಸುವ ಆಹಾರದಲ್ಲಿ ಬದಲಾವಣೆ ಮಾಡಿಕೊಂಡು ತಮ್ಮ ಆರೋಗ್ಯವನ್ನು ಸುದಾರಿಸಿಕೊಂಡರೆ. ತಮ್ಮ ಒತ್ತಡವು ಸಹ ಕಡಿಮೆಯಾದಂತೆ. ಆದ್ದರಿಂದ ಮನುಷ್ಯನು ತನ್ನ ಒತ್ತಡಗಳಿಂದ ದೂರವಿರಲು ಕೆಲವು ಆಹಾರಗಳನ್ನು ಸೇವಿಸಬೇಕು. ಅವುಗಳು ಯಾವುವು ಎಂದು ತಿಳಿದುಕೊಳ್ಳೋಣ

ಹಾಲಿನಲ್ಲಿ ವಿಟಮಿನ್ ಎ.ಡಿ. ಪ್ರೊಟೀನ್.ಕ್ಯಾಲ್ಸಿಯಂ. ಆಂಟಿ ಆಕ್ಸಿಡೆಂಟ್ಸ್ ಗಳು ಹೇರಳವಾಗಿ ಇದೆ. ಆದ್ದರಿಂದ ಪ್ರತಿದಿನ ಹಾಲನ್ನು ಸೇವಿಸುತ್ತಾ ಬಂದರೆ ನಾವು ನಮ್ಮ ಒತ್ತಡದಿಂದ ಮುಕ್ತಿ ಪಡೆಯಬಹುದು. ತಿಳಿದುಕೊಳ್ಳಿ ಪ್ರತಿ ದಿನ ರಾತ್ರಿ ದೊಡ್ಡ ಲೋಟ ಹಾಲು ಸೇವನೆ ತುಂಬಾ ಒಳ್ಳೇದು.

ಡಾರ್ಕ್ ಚಾಕೊಲೇಟ್ ಮೆಗ್ನಿಶಿಯಂನಿಂದ ಕೂಡಿದ್ದು ಇದನ್ನು ಹಾಲಿನ ಜೊತೆ ಸೇವನೆ ಮಾಡಿದರೆ ನಮ್ಮ ದಣಿವು. ಒತ್ತಡ.ಆಯಾಸ. ಖಿನ್ನತೆ.ಯನ್ನು ದೂರಮಾಡುತ್ತದೆ.ನಮ್ಮ ಮನಸ್ಸು ರಿಲೀಫ್ ಆಗುತ್ತದೆ.

ಕಿತ್ತಳೆ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ಸ್.ವಿಟಮಿನ್ ಎ. ಬಿ. ಸಿ. ಅಂಶಗಳು ಹೇರಳವಾಗಿ ಇರುವುದರಿಂದ ಇದನ್ನು ನಮ್ಮ ದಿನನಿತ್ಯದ ಆಹಾರವಾಗಿ ಸೇವಿಸುತ್ತಾ ಬಂದರೆ ನಮ್ಮ ಒತ್ತಡಗಳು ದೂರವಾಗುತ್ತವೆ.

ವಿಟಮಿನ್ ಈ. ಸಿ. ಅಂಶವನ್ನು ಹೊಂದಿರುವ ಬಾದಾಮಿಯನ್ನು ಸೇವನೆ ಮಾಡುವುದರಿಂದ ಒತ್ತಡ ಸಹ ದೂರವಾಗುತ್ತದೆ.

ವಿಟಮಿನ್. ಎ. ಈ.ಮೆಗ್ನಿಶಿಯಂ ಗಳಿಂದ ಕೂಡಿರುವ ಕಪ್ಪು ದ್ರಾಕ್ಷಿ ಯನ್ನು ಸೇವಿಸುವುದರಿಂದ ತೂಕ ಕಡಿಮೆಯಾಗುತ್ತದೆ.ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ.

ಬಸಳೆ ಸೊಪ್ಪು. ಪಾಲಾಕ್ ಸೊಪ್ಪು. ಕೊತ್ತಂಬರಿ ಸೊಪ್ಪು. ಇತ್ಯಾದಿ ಸೊಪ್ಪುಗಳಲ್ಲಿ ವಿಟಮಿನ್ ಎ. ಬಿ. ಸಿ. ಅಂಶಗಳು ಇದ್ದು ಇವು ನಮ್ಮ ಅನಗತ್ಯ ಒತ್ತಡವನ್ನು ದೂರ ಮಾಡುತ್ತದೆ.

ಆದ್ದರಿಂದ ಈ ಹಣ್ಣುಗಳ ಸೇವನೆ ಮಾಡಿ ಆರೋಗ್ಯ ಸುಧಾರಿಸಿಕೊಳ್ಳಿ.

LEAVE A REPLY

Please enter your comment!
Please enter your name here