ಶಿವನು ಮೂರನೇ ಕಣ್ಣನ್ನು ತೆರೆದಿದ್ದು ಇಲ್ಲೇ

0
964

ಶಿವ ಅಂದ್ರೆ ಪ್ರೀತಿಗೆ ಈಶ್ವರ ದುಷ್ಟರಿಗೆ ವೀರಭದ್ರ ಇದು ಎಲ್ಲರಿಗು ತಿಳಿದಿದೆ, ಹಾಗೇ  ಹಿಂದೂ ಪುರಾಣಗಳಲ್ಲಿ ಮನ್ಮಥನ ಬಗ್ಗೆ ಎಲ್ಲರಿಗೂ ತಿಳಿದಿದೆ. ಸುಂದರವಾದ ರೂಪ, ಕಬ್ಬಿನ ಜಲ್ಲೆಯ ಬಿಲ್ಲು, ಬಾಣಗಳು, ಸುವಾಸನೆಯನ್ನು ಬೀರುವ ಹೂವುಗಳೊಂದಿಗೆ ಎಲ್ಲರಲ್ಲೂ ತಾಪವನ್ನು ಮೂಡಿಸುತ್ತಾನೆ. ಆದರೆ, ಒಂದು ಸಂದರ್ಭದಲ್ಲಿ ಮನ್ಮಥ ಶಿವ ಮೂರನೇ ಕಣ್ಣಿನಿಂದ ನೋಡಿದ ಕಾರಣ ಭಸ್ಮವಾಗುತ್ತಾನೆ. ಹಾಗೆ ಮನ್ಮಥ ಭಸ್ಮವಾದ ಪ್ರದೇಶ ನಮ್ಮ ಭಾರತದ ‘ಕಾಮೇಶ್ವರ್ ಧಾಮ್’ ನಲ್ಲಿದೆ. ಶಿವ ಮನ್ಮಥನನ್ನು ಭಸ್ಮ ಮಾಡಿದ ಕಾರಣವನ್ನು ಈಗ ತಿಳಿದುಕೊಳ್ಳೋಣ.

ಒಂದು ಕಾಲದಲ್ಲಿ ತಾರಕಾಸುರನೆಂಬ ರಾಕ್ಷಸನು, ಭೂಲೋಕದಲ್ಲಿ ಮಾನವರನ್ನು ಹಾಗೂ, ದೇವ ಲೋಕದಲ್ಲಿ ದೇವತೆಗಳನ್ನು ಪೀಡಿಸಿ ಚಿತ್ರ ಹಿಂಸೆ ನೀಡುತ್ತಿರುತ್ತಾನೆ. ಹೇಗಾದರೂ ಸರಿ ತಾರಕಾಸುರನನ್ನು ವಧಿಸಬೇಕೆಂದು ದೇವತೆಗಳು ತೀರ್ಮಾನಿಸುತ್ತಾರೆ. ಆ ಕೆಲಸವನ್ನು ಶಿವನ ಕುಮಾರನಿಂದ ಮಾತ್ರ ಮಾಡಲು ಸಾಧ್ಯ. ಆದರೆ, ಶಿವ ಆಗಿನ್ನೂ ಬ್ರಹ್ಮಚಾರಿಯಾಗಿಯೇ ಇದ್ದ. ಪಾರ್ವತಿಯನ್ನು ವಿವಾಹವಾಗಿರಲಿಲ್ಲ. ಈ ನಿಟ್ಟಿನಲ್ಲಿ ಶಿವ ತಪಸ್ಸಿನಲ್ಲಿ ನಿರತನಾಗಿರುವಾಗ, ಆತನ ತಪಸ್ಸಿಗೆ ಭಂಗವನ್ನುಂಟುಮಾಡಿ, ಆತನಲ್ಲಿ ವಿರಹ ತಾಪವನ್ನು ಮೂಡಿಸಿ ಪಾರ್ವತಿಗೆ ಹತ್ತಿರವಾಗುವಂತೆ ಮಾಡಿ, ಪುತ್ರನನ್ನು ಹೊಂದುವಂತೆ ಮಾಡಬೇಕೆಂದು ದೇವತೆಗಳು ಭಾವಿಸುತ್ತಾರೆ. ಆಗ ದೇವತೆಗಳೆಲ್ಲರೂ ಸೇರಿ ಶಿವನ ತಪಸ್ಸಿಗೆ ಭಂಗವನ್ನು ಉಂಟು ಮಾಡಲೆಂದು ಮನ್ಮಥನನ್ನು ಕಳುಹಿಸುತ್ತಾರೆ.

ಮನ್ಮಥ ತಪಸ್ಸು ಮಾಡುತ್ತಿರುವ ಶಿವನ ಮೇಲೆ ಹೂವಿನ ಬಾಣ ಬಿಡುತ್ತಾನೆ. ತಪಸ್ಸಿಗೆಭಂಗವಾದುದರಿಂದ ಕುಪಿತನಾದ ಶಿವ , ತನ್ನ ಮೂರನೇ ಕಣ್ಣನ್ನು ತೆರೆದು ಮನ್ಮಥನನ್ನು ಸುಟ್ಟು ಭಸ್ಮ ಮಾಡುತ್ತಾನೆ. ದೇವತೆಗಳೆಲ್ಲರೂ ಬಂದು ವಿಷಯವನ್ನು ತಿಳಿಸಿ ಮನಥನನ್ನು ಬದುಕಿಸೆಂದು ಬೇಡಿಕೊಂಡಾಗ, ನಿಜವನ್ನು ಅರಿತ ಶಿವ ಮನಥನನ್ನು ಮತ್ತೆ ಬದುಕಿಸುತ್ತಾನೆ. ಹೀಗೆ ಶಿವ ಮನಥನನ್ನು ಭಸ್ಮ ಮಾಡಿದ ಪ್ರದೇಶವೇ ಇಂದು ‘ಕಾಮೇಶ್ವರ ಧಾಮ್’ ಆಗಿ ಪ್ರಸಿದ್ಧಿಯಾಗಿದೆ. ಶಿವ ಮೂರನೇ ಕಣ್ಣು ತೆರೆದ್ದನಾದ್ದರಿಂದ ಒಂದು ಮಾವಿನ ಮರದ ಕಾಂಡ ಭಾಗಶ: ಸುಟ್ಟು ಹೋಗುತ್ತದೆ. ಆದರೆ, ಆ ಮರ ಇಂದಿಗೂ ‘ಕಾಮೇಶ್ವರ್ ಧಾಮ್’ ನಲ್ಲಿದೆ. ಅದು ಭಾಗಶ: ಸುಟ್ಟಿರುವುದನ್ನು ಇಂದಿಗೂ ನೋಡಬಹುದು. ಒಮ್ಮೆ ರಾಮನೂ ಸಹ ಆ ಪ್ರದೇಶವನ್ನು ಧರ್ಶಿಸಿದನೆಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಉತ್ತರ ಪ್ರದೇಶದ ಬಲ್ಲಿಯಾ ಪ್ರದೇಶದಲ್ಲಿ ಕಾಮೇಶ್ವರ್ ಧಾಮ್ ಇದೆ. ಬೇಕಾದಲ್ಲಿ ಭಕ್ತರು ಹೋಗಿ ಆ ಮರವನ್ನು ಹಾಗೂ ದೇವಾಲಯವನ್ನು ದರ್ಶಿಸಬಹುದು.

LEAVE A REPLY

Please enter your comment!
Please enter your name here