ಈ ಕೆಟ್ಟ ಅಭ್ಯಾಸ ಇದ್ರೆ ಬಿಟ್ಟು ಬಿಡಿ ಜೀವನ ಸುಪರ್ ಆಗಿರುತ್ತೆ

0
994

ಮನುಷ್ಯನ ಕೆಟ್ಟ ಅಭ್ಯಾಸಗಳು. ಪ್ರತಿಯೊಬ್ಬ ಮನುಷ್ಯನಲ್ಲು ಒಂದಲ್ಲ ಒಂದು ಕೆಟ್ಟ ಅಭ್ಯಾಸಗಳು ಇದ್ದೆ ಇರುತ್ತವೆ. ಅವುಗಳಲ್ಲಿ ಕೆಲವು ಹೊರಗಿನ ಪ್ರಪಂಚಕ್ಕೆ ಕಾಣಿಸುತ್ತವೆ.ಕೆಲವು ಹೊರಗಿನ ಪ್ರಪಂಚಕ್ಕೆ ಕಾಣಿಸುವುದಿಲ್ಲ. ಆದರೂ ಎಲ್ಲವೂ ಸಹ ತಪ್ಪುಗಳೇ. ಈ ಕೆಟ್ಟ ಅಭ್ಯಾಸಗಳು ಮನುಷ್ಯನ ಜೀವನದಲ್ಲಿ ತುಂಬಾ ಪರಿಣಾಮ ಬೀರುತ್ತವೆ. ಅವನು ತುಂಬಾ ಮುಜುಗರಕ್ಕೆ ಒಳಗಾಗುತ್ತಾನೆ. ಇನ್ನು ಕೆಲವು ತಮ್ಮ ಪ್ರಾಣವನ್ನೇ ತೆಗೆಯುವ ಹಂತಕ್ಕೂ ಸಹ ಇರುತ್ತವೆ. ಆದ್ದರಿಂದ ಪ್ರತಿಯೊಬ್ಬ ಮನುಷ್ಯನು ತಮ್ಮಲ್ಲಿರುವ ಕೆಟ್ಟ ಅಭ್ಯಾಸಗಳನ್ನು ಗುರುತಿಸಿಕೊಂಡು. ಮುಂಜಾಗ್ರತೆವಹಿಸಿ ಕೆಟ್ಟ ಅಭ್ಯಾಸಗಳಿಂದ ಮುಕ್ತಿ ಪಡೆಯಬೇಕು.

ಹಾಗಾದರೆ ಮನುಷ್ಯನ ಕೆಟ್ಟ ಅಭ್ಯಾಸಗಳು ಯಾವುವು ಎಂದು ನೋಡೋಣ ಬನ್ನಿ.

ಎಲ್ಲರಿಗೂ ತಿಳಿದಿರುವ. ತಿಳಿದರು ತಪ್ಪು ಮಾಡುವ ಕೆಟ್ಟ ಅಭ್ಯಾಸ ಧೂಮಪಾನ ಮತ್ತು ಮದ್ಯಪಾನ. ಇದು ತಮ್ಮ ದೇಹವನ್ನು ಸುಟ್ಟು ಬಿಡುತ್ತದೆ. ಜೊತೆಗೆ. ಹಂತ ಹಂತವಾಗಿ ತಮ್ಮ ಪ್ರಾಣವನ್ನೇ ತೆಗೆದುಬಿಡುವ ಅಭ್ಯಾಸವಿದು. ಧೂಮಪಾನ ಬಿಡೋಕೆ ಆಗ್ತಾ ಇಲ್ಲ ಅಂದ್ರೆ ಅದಕ್ಕೆ ಮೆಡಿಕಲ್ ನಲ್ಲಿ ಸಾಕಷ್ಟು ಮದ್ದು ಸಿಗುತ್ತೆ ಸೂಕ್ತ ವೈದ್ಯರ ನೆರವು ಪಡೆದು ಬಿಡಬಹುದು.

ಮೂಗಿಗೆ ಯಾವಾಗಲೂ ಕೈ ಹಾಕಿರುವುದು. ಇದು ಸಹ ಒಂದು ಮುಜುಗರಕ್ಕೆ ಒಳಗಾಗುವ ಅಭ್ಯಾಸ ಜೊತೆಗೆ ಹೀಗೆ ಮಾಡುವುದರಿಂದ ವೈರಸ್ ಗಳು ಹರಡಿ ಫ್ಲೋ. ನೆಗಡಿಯಂತಹ ಸಮಸ್ಯೆ ಕಾಣಿಸುತ್ತವೆ.

ರಾತ್ರಿ ತಡವಾಗಿ ನಿದ್ದೆ ಮಾಡುವುದು ಸಹ ಕೆಟ್ಟ ಅಭ್ಯಾಸ ಇಗೆ ಮಾಡುವುದರಿಂದ ದೇಹಕ್ಕೆ ಸರಿಯಾದ ನಿದ್ರೆ ಆಗದೆ ದೇಹವು ಒತ್ತಡದಿಂದ ಕೂಡಿರುತ್ತದೆ. ಯಾವುದೇ ಕೆಲಸ ಮಾಡಲು ಮನಸ್ಸು ಆಗುವುದಿಲ್ಲ. ಬೆಳಿಗ್ಗೆ ಬೇಗ ಏಳಲು ಆಗುವುದಿಲ್ಲ. ತಲೆನೋವು ಕಂಡು ಬರುತ್ತದೆ. ಮತ್ತು ಕೆಲವರಿಗೆ ಅನೀಮಿಯ ಖಾಯಿಲೆ ಶುರು ಆಗುತ್ತೆ. ರಾತ್ರಿ ಸಮಯ ನಿದ್ರೆ ಬರಲ್ಲ ಅಂದ್ರೆ ಅದು ಕೂಡ ಒಂದು ರೋಗ.

ಮಹಿಳೆಯರು ಮೇಕಪ್ ತೆಗೆಯದೆ ಮಲಗುವುದು. ಸಹ ಅತ್ಯಂತ ಕೆಟ್ಟ ಅಭ್ಯಾಸ. ಹೀಗೆ ಮಾಡುವುದರಿಂದ ಚರ್ಮದ ಅಲರ್ಜಿ. ಚರ್ಮ ರೋಗಗಳು ಆಗುತ್ತವೆ.

ರಾತ್ರಿ ಊಟದ ಬಳಿಕ ಹಲ್ಲುಜ್ಜದೆ ಮಲಗುವುದು. ಹೀಗೆ ಮಾಡುವುದರಿಂದ ಕ್ರಿಮಿಕೀಟಗಳು ಹಲ್ಲುಗಳಲ್ಲಿ ಸೇರಿಕೊಂಡು ದಂತ ಸಮಸ್ಯೆ ಉಂಟಾಗುತ್ತದೆ. ರಾತ್ರಿ ಹಲ್ಲು ಉಜ್ಜದೆ ಬೆಳ್ಳಗೆ ಸಮಯ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವ ಅಭ್ಯಾಸ ಇದ್ದವರಿಗೆ ಹಲವು ರೀತಿಯ ರೋಗಗಳು ಬರಲು ಶುರು ಆಗುತ್ತೆ.

ಹೊಟ್ಟೆ ತುಂಬಿದರು ಸ್ನ್ಯಾಕ್ಸ್ ತಿನ್ನುವುದು. ಇದು ಹೆಚ್ಚಾಗಿ ಸ್ನ್ಯಾಕ್ಸ್ ಪ್ರಿಯರು ಮಾಡುವ ಕೆಟ್ಟ ಅಭ್ಯಾಸ. ಹೊಟ್ಟೆ ತುಂಬಿ. ಹೊಟ್ಟೆ ಬಾರ ಎನ್ನಿಸಿದರು ಸ್ನ್ಯಾಕ್ಸ್ ತಿನ್ನುವುದರಿಂದ ಹಲವಾರು ಸಮಸ್ಯೆಗಳು ಕಾಣಿಸುತ್ತವೆ.

ಊಟ ಮಾಡುವಾಗ ತುಂಬಾ ಬೇಗ ಬೇಗ ಊಟ ಮಾಡಬಾರದು. ನಿಧಾನವಾಗಿ ಜಗಿದು ತಿನ್ನಬೇಕು ಇಲ್ಲವಾದಲ್ಲಿ ಹೊಟ್ಟೆಗೆ ಸಂಭಂದಪಟ್ಟ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಸರಿಯಾಗಿ ನಿದ್ದೆ ಮಾಡದಿರುವುದು. ನಿಮ್ಮ ಆರೋಗ್ಯಕ್ಕೆ ತುಂಬಾ ಪರಿಣಾಮ ಬೀರುತ್ತದೆ. ನಿಮ್ಮ ದೇಹಕ್ಕೆ ವಿಶ್ರಾಂತಿ ಇದ್ದಷ್ಟು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ಎತ್ತರವಾದ ಚಪ್ಪಲಿಗಳನ್ನು ಧರಿಸುವುದು. ಮಹಿಳೆಯರು ಹೆಚ್ಚಾಗಿ ಎತ್ತರವಾದ ಚಪ್ಪಲಿಗಳನ್ನು ಧರಿಸುತ್ತಾರೆ ಇದು ಅವರ ಹಿಮ್ಮಡಿ.ಪಾದ. ಕಾಲುಗಳಿಗೆ.ಹಾಗೂ ತಮ್ಮ ದೇಹಕ್ಕೆ ಸಮಸ್ಯೆಯನ್ನು ತರುತ್ತದೆ.

ತುಂಬಾ ಭಾರವನ್ನು ಹೆತ್ತುವುದು. ನಮ್ಮ ದೇಹಕ್ಕೆ ಒತ್ತಡವನ್ನು ಕೊಟ್ಟಂತೆ. ನಮಗೆ ಎಷ್ಟು ಎತ್ತಲು ಸಾಧ್ಯವಾಗುತ್ತದೋ ಅಷ್ಟನ್ನು ಮಾತ್ರ ಎತ್ತಬೇಕು ಅದು ಬಿಟ್ಟು ತುಂಬಾ ಬಲವಂತವಾಗಿ ಭಾರ ಎತ್ತಿದರೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಉಗುರು ಕಚ್ಚುವುದು. ಇದರಿಂದ ಕೀಟನುಗಳು ನಮ್ಮ ಬಾಯಿಯ ಒಳಗೆ ಹೋಗಿ ಸಮಸ್ಯೆಗಳು ಉದ್ಭವಿಸುತ್ತವೆ.

ಊಟ ತಪ್ಪಿಸುವುದು. ಇದರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿ ನಮ್ಮ ಜೀರ್ಣಕ್ರಿಯೆಗೆ ಸಮಸ್ಯೆ ಆಗುತ್ತದೆ.

ಯಾವಾಗಲು ಏನಾದರು ತಿನ್ನುತ್ತಿರುವುದು.ಇದರಿಂದ ನಮ್ಮ ಹೊಟ್ಟೆಯ ಸಮಸ್ಯೆ. ಜೀರ್ಣಕ್ರಿಯೆ ಸಮಸ್ಯೆ ಕಾಣಿಸುತ್ತದೆ.

ಈ ಎಲ್ಲ ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಒಳ್ಳೆಯ ಅಭ್ಯಾಸವನ್ನು ರೂಢಿಸಿಕೊಳ್ಳಿ ಆಗ ನಿಮ್ಮ ಆರೋಗ್ಯವೂ ಉತ್ತಮವಾಗಿ ಇರುತ್ತದೆ. ನೀವು ಸಂತೋಷವಾಗಿ ಇರುತ್ತೀರಿ.

LEAVE A REPLY

Please enter your comment!
Please enter your name here