ಈ ರಸ ಕುಡಿಯುವವರಿಗೆ ಡಾಕ್ಟರ್ ಅವಶ್ಯಕತೆ ಇಲ್ಲ

0
1196

ನೆಲ್ಲಿಕಾಯಿ ಯಾರಿಗೆ ಇಷ್ಟ ಇಲ್ಲ ಹೇಳಿ ನಾವು ನಮ್ಮ ಬಾಲ್ಯದಲ್ಲಿ ಹಳ್ಳಿಯಲ್ಲಿ ಸಿಗುತ್ತಿದ್ದ ನೆಲ್ಲಿಕಾಯಿ ಉಪ್ಪಿನೊಂದಿಗೆ ತಿನುತ್ತಿದ್ದ ನೆನಪು ಮರೆಯಲು ಹೇಗೆ ಸಾಧ್ಯ ತನ್ನ ನೈಸರ್ಗಿಕ ಔಷಧೀಯ ಗುಣಗಳಿಗಾಗಿ ನೆಲ್ಲಿಕಾಯಿ ಹೆಸರಾಗಿದೆ. ಆಯುರ್ವೇದ ದಲ್ಲಿ ನೆಲ್ಲಿಕಾಯಿಗೆ ಮಹತ್ವದ ಸ್ಥಾನವಿದೆ. ಸಿ ವಿಟಾಮಿನ್ ಸಮೃದ್ಧವಾಗಿರುವ ನೆಲ್ಲಿಕಾಯಿ ಕಬ್ಬಿಣ ಮತ್ತು ಕ್ಯಾಲ್ಸಿಯಂ ಅನ್ನು ಒಳಗೊಂಡಿದೆ. ನೆಲ್ಲಿಕಾಯಿ ರಸವು ನಮ್ಮ ಶರೀರಕ್ಕೆ ಹಲವಾರು ಆರೋಗ್ಯಲಾಭಗಳನ್ನು ನೀಡುತ್ತದೆ. ಪ್ರತಿದಿನ ಈ ರಸದ ಸೇವನೆಯಿಂದ ಅಕ್ಷರಶಃ ವೈದ್ಯರನ್ನು ದೂರವಿಡಬಹುದು.

ಮಧುಮೇಹ ನಿಯಂತ್ರಣ
ಸಾಕಷ್ಟು ಪ್ರಮಾಣದಲ್ಲಿ ನೆಲ್ಲಿಕಾಯಿ ರಸವನ್ನು ಸೇವಿಸಿದರೆ ಅದು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಮೂಲಕ ಮಧುಮೇಹಿಗಳಿಗೆ ದಿಢೀರ್ ಸಕ್ಕರೆ ಮಟ್ಟ ಏರಿಕೆ ಅಥವಾ ಇಳಿಕೆಯಿಂದ ಸಂಭಾವ್ಯ ಅಪಾಯಗಳ ವಿರುದ್ಧ ರಕ್ಷಣೆ ನೀಡುತ್ತದೆ.

ಹೃದಯದ ಆರೋಗ್ಯ
ನೆಲ್ಲಿಕಾಯಿ ರಸವು ರಕ್ತ ಪರಿಚಲನೆ ಒತ್ತಡವನ್ನು ತಗ್ಗಿಸುವುದಕ್ಕೆ ಹೆಸರಾಗಿದೆ. ಅದರಲ್ಲಿ ರುವ ಪೊಟ್ಯಾಷಿಯಂ ಅಭಿಧಮನಿಗಳಲ್ಲಿಯ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ತನ್ಮೂಲಕ ಅಭಿಧಮನಿಗಳು ಬಿರುಸಾಗುವುದನ್ನು ತಡೆದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯಗಳನ್ನು ನಿವಾರಿಸುತ್ತದೆ.

ಬೆಳವಣಿಗೆ ಹೆಚ್ಚಿಸುತ್ತದೆ
ನೆಲ್ಲಿಕಾಯಿಯಲ್ಲಿರುವ ವಿಟಾಮಿನ್ ಸಿ ತ್ವಚೆಯ ಆರೋಗ್ಯಕ್ಕೆ ಅಗತ್ಯವಾಗಿರುವ ಕೊಲಾಜೆನ್‌ನ ಮೂಲಭೂತವಾದ ಭಾಗವಾಗಿದೆ. ಅದು ಶರೀರದ ಬೆಳವಣಿಗೆಗೆ ಮತ್ತು ಸುಸ್ಥಿತಿಗೆ ನೆರವಾಗುತ್ತದೆ, ತ್ವಚೆಯನ್ನು ಆರೋಗ್ಯಯುತವಾಗಿರಿಸುತ್ತದೆ.

ಕೊಲೆಸ್ಟ್ರಾಲ್ ತಗ್ಗಿಸುತ್ತದೆ.
ನೆಲ್ಲಿಕಾಯಿ ರಸದ ಸೇವನೆಯಿಂದ ಹೃದಯಕ್ಕೆ ಅಪಾಯಕಾರಿಯಾದ ಕೆಟ್ಟ ಕೊಲೆಸ್ಟ್ರಾಲ್‌ನ ಮಟ್ಟವನ್ನು ಯಶಸ್ವಿಯಾಗಿ ತಗ್ಗಿಸಬಹುದು ಎನ್ನುವುದು ಅಧ್ಯಯನಗಳಿಂದ ಬೆಳಕಿಗೆ ಬಂದಿದೆ. ಶರೀರದ ಮುಖ್ಯ ಜೀವಕೋಶಗಳಿಗೆ ಹೆಚ್ಚಿನ ಶಕ್ತಿಯನ್ನು ನೀಡುವ ತನ್ನ ಸಾಮರ್ಥ್ಯದಿಂದಾಗಿ ಅದು ಇಂದು ಹಲವಾರು ಚಿಕಿತ್ಸೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಉಸಿರಾಟ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ
ಉಸಿರಾಟ ವ್ಯವಸ್ಥೆಯನ್ನು ಉತ್ತಮಗೊಳಿಸಲು ನೆಲ್ಲಿಕಾಯಿ ರಸವು ಸಹಕಾರಿಯಾಗಿದೆ. ಅದು ಶ್ವಾಸನಾಳದಲ್ಲಿಯ ಕಾಯಿಲೆಗಳನ್ನು ತಡೆಯುತ್ತದೆ.

ಕ್ಯಾನ್ಸರ್ ವಿರುದ್ಧ ರಕ್ಷಣೆ
ನೆಲ್ಲಿಕಾಯಿಯು ಇಲಾಜಿಕ್ ಕೊರೊಸಿವ್, ಗಾಲಿವ್ ಕೊರೊಸಿವ್ ಮತ್ತು ವಿವಿಧ ಫ್ಲಾವೊನಾಯ್ಡಾಗಳನ್ನು ಒಳಗೊಂಡಿದ್ದು, ಇವು ಶರೀರದಲ್ಲಿ ಗಡ್ಡೆಗಳು ಬೆಳೆಯುವುದನ್ನು ತಡೆಯುವಲ್ಲಿ ನೆರವಾಗುತ್ತವೆ. ಜೊತೆಗೆ ಶರೀರದಲ್ಲಿ ಫ್ರೀ ರ್ಯಾಡಿಕಲ್‌ಗಳ ಚಟುವಟಿಕೆ ಗಳನ್ನು ಕಡಿಮೆಗೊಳಿಸುತ್ತದೆ ಮತ್ತು ತನ್ಮೂಲಕ ಕ್ಯಾನ್ಸರ್ ಅಪಾಯದ ವಿರುದ್ಧ ರಕ್ಷಣೆ ನೀಡುತ್ತದೆ.

ಎಲುಬುಗಳ ಆರೋಗ್ಯವನ್ನು ಹೆಚ್ಚಿಸುತ್ತದೆ
ನೆಲ್ಲಿಕಾಯಿಯು ಎಲುಬುಗಳ ಆರೋಗ್ಯ ಮತ್ತು ರಕ್ತ ಪರಿಚಲನೆಗೆ ಅಗತ್ಯವಾಗಿರುವ ಕಬ್ಬಿಣ ಮತ್ತು ಕ್ಯಾಲ್ಸಿಯಂ ಅನ್ನು ಒಳಗೊಂಡಿದೆ. ಅದು ಹೀಮೊಗ್ಲೋಬಿನ್ ಅಥವಾ ಕೆಂಪು ರಕ್ತಕಣಗಳ ಪ್ರಮಾಣವನ್ನು ಹೆಚ್ಚಿಸುವ ಮೂಲಕ ರಕ್ತದಲ್ಲಿಯ ಆಮ್ಲಜನಕ ಮಟ್ಟವನ್ನೂ ಹೆಚ್ಚಿಸುತ್ತದೆ. ಇದು ನೆಲ್ಲಿಕಾಯಿ ರಸ ಸೇವನೆಯ ಅತ್ಯುತ್ತಮ ಲಾಭಗಳ ಲ್ಲೊಂದಾಗಿದೆ.

ತ್ವಚೆಯ ಆರೋಗ್ಯ
ನೆಲ್ಲಿಕಾಯಿಯು ತ್ವಚೆಯ ಆರೋಗ್ಯಕ್ಕೆ ಅಗತ್ಯವಾಗಿರುವ ವಿಟಾಮಿನ್ ಎ ಅನ್ನು ಸಮೃದ್ಧವಾಗಿ ಹೊಂದಿದೆ. ವಿಟಾಮಿನ್ ಎ ವಯಸ್ಸಾಗುವುದನ್ನು ನಿಧಾನಗೊಳಿಸು ವುಲ್ಲಿಯೂ ನೆರವಾಗುತ್ತದೆ. ಅದು ಕೊಲಾಜೆನ್ ಉತ್ಪಾದನೆ ಕಡಿಮೆಯಾಗುವುದನ್ನೂ ನಿಯಂತ್ರಿಸುತ್ತದೆ.

LEAVE A REPLY

Please enter your comment!
Please enter your name here