ಕಣ್ಣಿನ ದೃಷ್ಟಿ ಹೆಚ್ಚಿಸುವ ಮನೆಮದ್ದು.
ಇಂದಿನ ಯುಗ ತಂತ್ರಜ್ಞಾನದ ಯುಗ ಇವುಗಳು ಇಲ್ಲದೆ ಕೆಲಸವೇ ಸಾಗುವುದಿಲ್ಲ . ಇವುಗಳ ಜೊತೆಗೆ ಮೊಬೈಲ್. ಈ ಮೊಬೈಲ್ ಅಂತೂ ಆಗ ಹುಟ್ಟಿದ ಮಕ್ಕಳ ಕೈಯಲ್ಲೂ ಸಹ ಇರುತ್ತವೆ. ಅಷ್ಟು ಮುಂದುವರಿದಿದೆ ಈ ತಂತ್ರಜ್ಞಾನದ ಯುಗ. ಆದರೆ ಇವುಗಳಿಂದ ಕೆಲಸಗಳು ಸುಲಭವಾಗಿ ವೇಗವಾಗಿ ಸಾಗುತ್ತವೆ ಆದರೆ ಮನುಷ್ಯನ ಆರೋಗ್ಯ ಕೆಡುತ್ತದೆ. ಇವುಗಳ ಅತಿಯಾದ ಬಳಕೆಯಿಂದ ಮನುಷ್ಯನ ಹೃದಯ. ಕಿಡ್ನಿ. ಮೆದುಳು. ಕ್ಯಾನ್ಸರ್. ಕಣ್ಣಿನ ತೊಂದರೆಗಳು ಹೇದುರಾಗುತ್ತವೆ.
ಅದರಲ್ಲೂ ಹೆಚ್ಚಾಗಿ ಎಲ್ಲರನ್ನೂ ಕಾಡುವ ಸಮಸ್ಯೆ ದೃಷ್ಟಿಯ ಸಮಸ್ಯೆ. ಈ ಕಣ್ಣಿನ ದೃಷ್ಟಿ ಹಾಳಾಗುತ್ತ ಹೋದಂತೆ ಮನುಷ್ಯ ಹಲವಾರು ರೀತಿಯ ಶಸ್ತ್ರಚಿಕಿತ್ಸೆ ಗಳನ್ನು ಮಾಡಿಸಿಕೊಳ್ಳುತ್ತಾನೆ. ಆದರೆ ಈ ಕಣ್ಣಿನ ದೃಷ್ಟಿಗೆ ಸುಲಭವಾಗಿ ನಿಮ್ಮ ಮನೆಯಲ್ಲಿ ನೀವೇ ತಯಾರಿಸಿಕೊಳ್ಳಬಹುದಾದ ಔಷಧಿ ಗಳನ್ನು ತಿಳಿದುಕೊಳ್ಳೋಣ ಬನ್ನಿ…
ಸ್ಟ್ರಾಬೆರಿ ಹಣ್ಣು . ಸ್ಟ್ರಾಬೆರ್ರಿಯಲ್ಲಿರುವ ಫ್ಲೆವನಾಯ್ಡ್ಸ್. ಫಿನಾಲಿಕ್. ಪೈಟೊ ಕೆಮಿಕಲ್ಸ್. ಮತ್ತು ಎಲಾಜಿಕ್ ಆ್ಯಸಿಡ್.ಗಳು ಕಣ್ಣಿನ ಸಮಸ್ಯೆ ನಿವಾರಣೆಗೆ ಅತಿ ಉಪಯುಕ್ತವಾಗಿದೆ.
ಕೆರೋಟಿನಾಯ್ಡ್ ಮತ್ತು ಲ್ಯುಟಿನ್ ಹೇರಳವಾಗಿರುವ ಪಿಸ್ತಾ ಕಣ್ಣಿನ ಆರೋಗ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.ಇದು ಕಣ್ಣಿನ ಅವಶ್ಯಕ ಕೋಶಗಳ ಬೆಳವಣಿಗೆಗೆ ಸಹಕರಿಸಿ ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ.
ಹಾಲಿನ ಜೊತೆ ಸ್ವಲ್ಪ ಕ್ಯಾರೆಟ್ ಜ್ಯೂಸ್ ಸೇರಿಸಿ. ಸೇವಿಸುವುದರಿಂದ ಕಣ್ಣಿನ ದೃಷ್ಟಿ ಉತ್ತಮವಾಗುತ್ತದೆ.
ನುಗ್ಗೆಸೊಪ್ಪಿನಲ್ಲಿ ಕ್ಯಾಲ್ಸಿಯಂ. ಪೊಟ್ಯಾಸಿಯಂ. ವಿಟಮಿನ್ ಸಿ. ವಿಟಮಿನ್ ಎ ಹೇರಳವಾಗಿ ಇರುವುದರಿಂದ ಇದು ಕಣ್ಣಿನ ದೃಷ್ಟಿಗೆ ಒಳ್ಳೆಯದು.
ಜೇನುತುಪ್ಪದ ಜೊತೆ ನೆಲ್ಲಿಕಾಯಿ ರಸವನ್ನು ಸೇವಿಸುತ್ತಾ ಬಂದರೆ ಕಣ್ಣಿನ ದೃಷ್ಟಿ ಉತ್ತಮವಾಗಿತ್ತದೆ.
ಶುದ್ಧ ಜೇನುತುಪ್ಪವನ್ನು ದಿನಕ್ಕೆ ಒಂದು ಬಾರಿ 1-2 ಹನಿಗಳಷ್ಟು ಕಣ್ಣಿಗೆ ಹಾಕಬೇಕು.
ಶುದ್ಧ ಹರಳೆಣ್ಣೆಯನ್ನು ರಾತ್ರಿ ಮಲಗುವ ಮುನ್ನ ಕಣ್ಣಿನ ಸುತ್ತಲೂ ಮೇಲಿನ ಮತ್ತು ಕೆಳಗಿನ ರೆಪ್ಪೆಗಳಿಗೆ ಲೇಪಿಸಿ ಮಲಗಿದರೆ ಡ್ರೈ ಐ ಸೇರಿದಂತೆ, ಕಣ್ಣಿನ ಉರಿ, ನೋವು. ದೃಷ್ಟಿ ಸಮಸ್ಯೆ ಹೋಗುತ್ತದೆ.
ಶುದ್ಧ ಗುಲಾಬಿ ಜಲವನ್ನು ಕಂಗಳಿಗೆ 4 ಹನಿಗಳಷ್ಟು ನಿತ್ಯ 1-2 ಬಾರಿ ಹಾಕಿದರೆ ಶೀತಲ ಗುಣದಿಂದಾಗಿ ಕಣ್ಣಿನ ದೋಷಗಳನ್ನು ನಿವಾರಿಸುತ್ತದೆ.
ಹಲಸಿನ ಬೀಜದಲ್ಲಿ ವಿಟಮಿನ್ ಎ ಇರುವುದರಿಂದ ಕಣ್ಣಿನ ದೃಷ್ಟಿ ದೋಷ ನಿವಾರಣೆಗೆ ಇದು ನೆರವಾಗುತ್ತದೆ.
ನಿಮ್ಮ ಆಹಾರದಲ್ಲಿ ಒಮೆಗಾ -3 ಕೊಬ್ಬಿನ ಆಮ್ಲಗಳ ತುಂಬಿಕೊಂಡಿರುವ ಮೀನನ್ನು ಸೇರಿಸಿ.ಸೇವಿಸಿದರೆ ಕಣ್ಣಿನ ದೃಷ್ಟಿ ಚೆನ್ನಾಗಿರುತ್ತದೆ.
ನೀರು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ. ನಿಯಮಿತವಾಗಿ ನೀರನ್ನು ಕುಡಿಯುವುದರಿಂದ ಡಿಹೈಡ್ರೇಶನ್ ನಿಂದ ದೃಷ್ಟಿಯು ಸುಧಾರಿಸುತ್ತದೆ.
ಮೊಟ್ಟೆಗಳು ನಿಮ್ಮ ಸರಿಯಾದ ದೃಷ್ಟಿಗೆ ಮತ್ತು ಕುರುಡು ಮಾಡಬಲ್ಲ ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಕಾಯಿಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪಾಲಕ್ ಸೊಪ್ಪಿನಲ್ಲಿ ಲ್ಯೂಟೀನ್ ಮತ್ತು ವಿವಿಧ ಇತರ ಪೋಷಕಾಂಶಗಳಿಂದ ತುಂಬಿದೆ. ಅಗಾಗಿ ಇದರ ಸೇವನೆಯಿಂದ ಕಣ್ಣಿನ ಮತ್ತು ತೆಳುವಾದ ದೃಷ್ಟಿತ್ವ ಹಾಗೂ ಇನ್ನಿತರ ಅನೇಕ ಕಣ್ಣಿನ ಸಂಬಂಧಿತ ಸಮಸ್ಯೆಗಳನ್ನು ತಡೆಯಲು ಸಹಾಯವಾಗುತ್ತದೆ.
ಕ್ಯಾರೆಟ್, ಏಪ್ರಿಕಾಟ್ ಮತ್ತು ಬೆರಿಹಣ್ಣುಗಳು ಇಂತಹ ಕಣ್ಣಿನ ಆರೋಗ್ಯ ಹೆಚ್ಚಿಸುವ ಆಹಾರಗಳು ನಿಮ್ಮ ಕಣ್ಣುಗಳಿಗೆ ಪುಷ್ಟಿ ನೀಡುತ್ತವೆ. ಈ ಎಲ್ಲಾ ಆಹಾರಗಳಲ್ಲಿ ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದೆ ಮತ್ತು ಇದು ನಿಮ್ಮ ಕಣ್ಣುಗಳು ಒಳ್ಳೆಯದು.
ನಿಮ್ಮ ಕಣ್ಣಿನ ದೃಷ್ಟಿ ಸಮಸ್ಯೆ ಹೋಗಿಸಲು ಇವುಗಳನ್ನು ಮಾಡಿ ನಿಮ್ಮ ಕಣ್ಣಿನ ಆರೈಕೆ ಮಾಡಿ.