ಮನೆಗೆ ಅದೃಷ್ಟ ತರುವ ಗಿಡಗಳು

0
1217

ಈ  ಗಿಡಗಳು ಮನೆಗಳಿಗೆ ಅದೃಷ್ಟ ತರುತ್ತವೆ.

ಎಲ್ಲರ ಮನೆಯ ಮುಂದೆ. ಮನೆಯ ಒಳಗೆ ಹಸಿರು ಗಿಡಗಳು ಇದ್ದರೆ. ಒಳ್ಳೆಯದು ಇದು ಒಳ್ಳೆಯ ಗಾಳಿಯನ್ನು ಕೊಡುತ್ತದೆ. ಜೊತೆಗೆ ಮನೆಯ ಅಂದವನ್ನು ಹೆಚ್ಚಿಸುತ್ತದೆ. ಇನ್ನು ಹೂ ಗಿಡಗಳು ಇದ್ದರೆ ದೇವರ ಪೂಜೆಗೆ. ತಲೆಗೆ ಮುಡಿಯಲು ಆಗುತ್ತವೆ. ಆದರೆ ಈ ಗಿಡಗಳು ಕೇವಲ ಅಂದ. ಪೂಜೆ. ಹಾಗೂ ಮುಡಿಯಲು ಮಾತ್ರವಲ್ಲದೆ. ಮನೆಗೆ ಅದೃಷ್ಟವನ್ನು ತರುವ ಗಿಡಗಳನ್ನು ಸಹ ನಾವು ನೋಡಿರಬಹುದು.

ಹೌದು ಕೆಲವು ಗಿಡಗಳು ಮನೆಯ ಅಂದವನ್ನು ಕಾಪಾಡುವುದರ ಜೊತೆಗೆ ಮನೆಯ ಶುಚಿತ್ವವನ್ನು ಕಾಪಾಡುತ್ತದೆ.ಜೊತೆಗೆ ಮನೆಯಲ್ಲಿನ ದುಷ್ಟ ಶಕ್ತಿಗಳನ್ನು ಹೊಡಿಸಿ ಅದೃಷ್ಟವನ್ನು ಕೊಡುತ್ತವೆ. ಹಾಗಾದರೆ ಆ ಗಿಡಗಳು ಯಾವುದು ಎಂದು ನೋಡೋಣ ಬನ್ನಿ..

ಮನೆಯಲ್ಲಿ ಲೋಳೆಸರದ ಗಿಡ ಇದ್ದರೆ ಒಳ್ಳೆಯದು.ಇದು ಗಾಳಿಯನ್ನು ಶುದ್ಧೀಕರಿಸುವುದು ಮಾತ್ರವಲ್ಲ, ಹೊಟ್ಟೆ ನೋವು, ತುರಿಕೆ ಕಂಡು ಬಂದಾಗ ಔಷಧಿಯಾಗಿ ಕಾರ್ಯ ನಿರ್ವಹಿಸುತ್ತದೆ.

ಗೋಲ್ಡನ್ ಪೋಥೋಸ್ ಗಿಡ ಮನೆಯಲ್ಲಿದ್ದರೆ ಅದು ಗಾಳಿಯಲ್ಲಿರುವ ರಾಸಾಯನಿಕಗಳಾದ ಫಾರ್ಮಲ್ ಡೀ ಹೈಡ್, ಬೆಂಜೀನ್ ಈ ರೀತಿಯ ವಿಷಕಾರಿ ಅಂಶಗಳನ್ನು ಹೋಗಲಾಡಿಸಿ, ಶುದ್ಧ ಗಾಳಿಯನ್ನು ನೀಡುತ್ತದೆ.

ಸ್ಪೈಡರ್ ಪ್ಲಾಂಟ್ ಈ ಗಿಡ ಗಾಳಿಯಲ್ಲಿರುವ ವಿಷಕಾರಿ ಅಂಶವನ್ನು ಹೋಗಲಾಡಿಸಿ, ಮನೆಯೊಳಗೆ ಶುದ್ಧವಾದ ಗಾಳಿಯನ್ನು ಬಿಡುತ್ತದೆ. ಅದರಲ್ಲೂ ಈ ಗಿಡವನ್ನು ಅಡುಗೆ ಮನೆಯ ಸಮೀಪದಲ್ಲಿ ಇಟ್ಟರೆ ಕಾರ್ಬನ್ ಮಾನೋಕ್ಸೈಡ್ ಹೀರಿಕೊಂಡು ಶುದ್ಧವಾದ ಗಾಳಿಯನ್ನು ನೀಡುತ್ತದೆ.

ಫೆರ್ನ್ಸ್ ಈ ಗಿಡ ಕೂಡ ಮನೆಯೊಳಗೆ ಇದ್ದರೆ ಶುದ್ಧ ಗಾಳಿಯನ್ನು ಉಸಿರಾಡಲು ನಮಗೆ ನೆರವಾಗುತ್ತದೆ.

ಐವಿ ಇದರ ಎಲೆ ವಿಷ ಪೂರಕವಾಗಿದ್ದರೂ ಈ ಎಲೆ ಗಾಳಿಯಿಂದ ಉಂಟಾಗುವ ಅಲರ್ಜಿಯನ್ನು ತಡೆಯುತ್ತದೆ. ಅಸ್ತಮಾ, ಅಲರ್ಜಿ ಸಮಸ್ಯೆ ಇರುವವರು ಈ ಗಿಡವನ್ನು ಮನೆಯ ಎದುರುಗಡೆ ನೆಡುವುದು ಒಳ್ಳೆಯದು.

ಅರೆಕಾ ಪಾಮ್ ಇದು ತುಂಬಾ ಸೆನ್ಸಿಟಿವ್ ಆದ ಗಿಡವಾಗಿದ್ದು, ಮನೆಯಲ್ಲಿ ಶುದ್ಧ ಗಾಳಿ ತುಂಬುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಇದನ್ನು ಮನೆಯಲ್ಲಿ ಎಲ್ಲಿ ಬೇಕಾದರೂ ಇಡಬಹುದು. ಇದನ್ನು ವರಾಂಡದಲ್ಲಿ, ಕಾರಿಡಾರ್ ಪಕ್ಕದಲ್ಲಿ ಇಟ್ಟರೆ ಗಾಳಿಯಲ್ಲಿರುವ ಬೇಡದ ರಾಸಾಯನಿಕಗಳನ್ನು ಹೋಗಲಾಡಿಸಿ ಶುದ್ಧವಾದ ಗಾಳಿಯನ್ನು ತುಂಬುತ್ತದೆ.

ಗೋಲ್ಡನ್ ಪಾಥೋಸ ಇದು ದುಷ್ಟಶಕ್ತಿಗಳ ವಿರುದ್ಧ ಹೋರಾಡುವ ಗಿಡವೆಂದು ಮನೆಯೊಳಗೆ ಇಡುತ್ತಾರೆ. ಈ ಗಿಡ ಗಾಳಿಯಲ್ಲಿರುವ ದುಷ್ಟಶಕ್ತಿಗಳಾದ ಫಾರ್ಮಲ್ ಡೀಹೈಡ್, ಬೆಂಜೀನ್, xylene ಇವುಗಳ ವಿರುದ್ಧ ಹೋರಾಡಿ ನಮ್ಮ ಆರೋಗ್ಯವನ್ನು ರಕ್ಷಿಸುತ್ತದೆ.

ಚೈನೀಸ್ ಎವರ್ಗ್ರೀನ್ ಈ ಗಿಡ ಕೂಡ ಗಾಳಿಯನ್ನು ಶುದ್ಧೀಕರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. .

ಸ್ನೇಕ್ ಪ್ಲಾಂಟ್ ನೋಡಲು ತುಂಬಾ ಆಕರ್ಷಕವಾಗಿರುವ, ಸುಲಭವಾಗಿ ಬೆಳಸಬಹುದಾದ ಈ ಗಿಡ ಕೂಡ ಮನೆಯೊಳಗೆ ಇದ್ದರೆ ಶುದ್ಧ ಗಾಳಿಯನ್ನು ಸೇವಿಸಬಹುದು.

ಮಾರ್ಗ್ನೇಟ್ ಈ ಗಿಡ ಗಾಳಿಯಲ್ಲಿರುವ ಕಶ್ಮಲಗಳನ್ನು ಹೊರ ಹಾಕಿ, ನಮ್ಮ ಆರೊಗ್ಯಕ್ಕೆ ವೃದ್ಧಿಸುತ್ತದೆ. ಆದರೆ ನಾಯಿ ಇರುವವರು ಇದನ್ನು ಸಾಕದು ಒಳ್ಳೆಯದಲ್ಲ, ಏಕೆಂದರೆ ಈ ಗಿಡಗಳ ಗಾಳಿ ಸೋಕಿದರೆ ನಾಯಿಯ ಆರೋಗ್ಯ ಹಾಳಾಗುವುದು.

ಪೀಸ್ ಲಿಲ್ಲಿ ನೋಡಲು ಮನಮೋಹಕವಾಗಿರುವ ಈ ಗಿಡ ಕಲ್ಮಶವಾದ ಗಾಳಿಯನ್ನು ಶುದ್ಧೀಕರಿಸುತ್ತದೆ.

ಮನಿ ಪ್ಲಾಂಟ್ ಈ ಗಿಡವನ್ನು ಮನೆಯ ಒಳಗೆ ಅಥವಾ ಹೊರಗೆ ಬೆಳೆಸಿದರೆ ಮನೆಯ ಆರ್ಥಿಕ ಸಮಸ್ಯೆ ಬೇಗ ದೂರವಾಗುತ್ತವೆ.

ಆದ್ದರಿಂದ ನೀವು ಸಹ ನಿಮ್ಮ ಮನೆಯ ಮುಂದೆ ಹಾಗೂ ನಿಮ್ಮ ಮನೆಯ ಒಳಗೆ ಈ ಗಿಡಗಳನ್ನು ಬೆಳೆಸಿ.

LEAVE A REPLY

Please enter your comment!
Please enter your name here