ಕಣ್ಣಿನ ಉರಿಯನ್ನು ಕಡಿಮೆ ಮಾಡಿಕೊಳ್ಳುವ ಸುಲಭ ಉಪಾಯಗಳು

0
1197

ಎಲ್ಲರೂ ಕೆಲಸಕ್ಕೆ ಎಂದು ಹೊರಗೆ ಹೋಗುತ್ತಾರೆ. ಆ ಹೊರಗಿನ ಧೂಳು. ಗಾಳಿ. ಬಿಸಿಲು. ವಾಹನಗಳ ಬಿಸಿ ಗಾಳಿ. ಇವುಗಳು ನಮ್ಮ ಕಣ್ಣಿನ ಹೊಳಗೆ ಸೇರಿ ಕೊಳ್ಳುತ್ತವೆ. ಇದರ ಜೊತೆಗೆ ತಂತ್ರಾಂಶಗಳ ಕೆಲಸ ಈ ಕಂಪ್ಯೂಟರ್. ಮೊಬೈಲ್.ಗಳನ್ನು ನೋಡಿ ನೋಡಿ ನಮ್ಮ ಕಣ್ಣುಗಳು ಹಾನಿಯಾಗುತ್ತವೆ. ಇವುಗಳ ಜೊತೆಗೆ ಫ್ಯಾಕ್ಟ್ರಿಯಲ್ಲಿ ಕೆಲಸ ಮಾಡುವವರು ಆ ಮಿಸ್ಸಾನ್ಸ್ ಗಳ ಧೂಳು. ಹೊಗೆ ಇವುಗಳಿಂದ ನಮ್ಮ ಕಣ್ಣುಗಳು ಹಾಳಾಗುತ್ತವೆ. ಜೊತೆಗೆ ಮನೆಯಲ್ಲಿ ಇರುವ ಮಹಿಳೆಯರು ಕೆಲಸ ಮುಗಿಸಿ ಟಿ ವಿ ಮುಂದೆ ಕುಳಿತರೆ ಅವರನ್ನು ಮಾತನಾಡಿಸುವುದು ಕಷ್ಟ ಅಂತಹ ಮಹಿಳೆಯರಿಗೂ ಕಣ್ಣಿನ ಸಮಸ್ಯೆ ಕಾಡುತ್ತದೆ.

ಇನ್ನು ವಿದ್ಯಾರ್ಥಿಗಳು ತಮ್ಮ ಓದುವಾಗ ಸಮಯಕ್ಕೆ ಬಿಡುವು ಕೊಡೋದೆ ನಿರಂತರವಾಗಿ 4 ರಿಂದ 5 ಗಂಟೆಗಳ ಕಾಲ ಓದುವುದು. ಬರೆದುವುದು ಮಾಡುವವರಿಗೂ ಕಣ್ಣಿನ ಸಮಸ್ಯೆ ಕಾಡುತ್ತದೆ. ಇವರಿಗೆಲ್ಲ ಹೆಚ್ಚಿಗಿ ಕಣ್ಣಿನಲ್ಲಿ ಕಾಣಿಸುವ ಸಮಸ್ಯೆ ಅವರ ಕಣ್ಣುಗಳು ವಿಪರೀತವಾಗಿ ಉರಿಯುವುದು. ಚುಚ್ಚುವುದು ಮಾಡುತ್ತವೆ. ಅದಕ್ಕಾಗಿ ಇಂತಹ ಎಲ್ಲ ಸಮಸ್ಯೆಗಳಿಂದ ಮುಕ್ತಿ ಪಡೆದು ನಿಮ್ಮ ಕೆಲಸವನ್ನು ಸುಲಭವಾಗಿ ಮಾಡುತ್ತ ಜೊತೆಗೆ ನಿಮ್ಮ ಕಣ್ಣುಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವ ಸುಲಭ ಮಾರ್ಗವೆಂದರೆ.

ಪ್ರತಿ ದಿನ 3 ರಿಂದ 4 ಲೀಟರ್ ನೀರನ್ನು ಕುಡಿಯಬೇಕು.

ಸೌತೆಕಾಯಿಯ ತಿರುಳನ್ನು ಕಣ್ಣಿಗೆ ಉಜ್ಜಿಕೊಂಡರೆ ಕಣ್ಣು ಉರಿ ಕಡಿಮೆಯಾಗುವುದು.

ಬಾಳೆಹಣ್ಣನ್ನು ಮೊಸರನ್ನದಲ್ಲಿ ಕಿವುಚಿ ತಿಂದರೆ ಉರಿ ಕಡಿಮೆಯಾಗುವುದು.

ಆಲೂಗಡ್ಡೆಯನ್ನು ಕತ್ತರಿಸಿ ಕಣ್ಣಿನ ಮೇಲೆ 10 ನಿಮಿಷಗಳ ಕಾಲ ಇರಿಸಿಕೊಳ್ಳುವುದರಿಂದ ಕಣ್ಣಿನ ಉರಿ ಕಡಿಮೆಯಾಗುತ್ತದೆ.

ಅಡುಗೆ ಸೋಡಾವನ್ನು ನೀರಿಗೆ ಬೆರೆಸಿ ಅದರಿಂದ ದಿನಕ್ಕೆ 3 ರಿಂದ 4 ಬಾರಿ ಕಣ್ಣು ತೊಳೆದುಕೊಳ್ಳುವುದೂ ಕಣ್ಣಿನ ಉರಿ ಕಡಿಮೆಯಾಗುತ್ತದೆ.

ವಿಟಮಿನ್ ಎ ಹೆಚ್ಚಿರುವ ಆಹಾರವನ್ನು ಹೆಚ್ಚು ಸೇವಿಸಬೇಕು. ಕ್ಯಾರೆಟ್​ನಿಂದ ಹೆಚ್ಚಿನ ವಿಟಮಿನ್ ಎ ಸಿಗುತ್ತದೆ. ಟೊಮ್ಯಾಟೊ ಕಣ್ಣಿನ ಆರೋಗ್ಯಕ್ಕೆ ಸಹಾಯ ಮಾಡುವಂತಹ ಅಂಶಗಳನ್ನು ಹೊಂದಿದೆ. ವಿಟಮಿನ್ ಬಿ ಸಹ ಅಗತ್ಯ. ಬಾಳೆಹಣ್ಣು ಸಹಾಯಕಾರಿ. ನಟ್ಸ್​ಗಳ ಸೇವನೆ ಒಳ್ಳೆಯದು. ಹಸಿತರಕಾರಿ ಹಾಗೂ ಹಣ್ಣುಗಳನ್ನು ಹೆಚ್ಚು ಸೇವಿಸಬೇಕು.

ಅಲೋವೆರಾದ ಚೂರನ್ನು ತೆಗೆದುಕೊಂಡು ಅದರ ಹಸಿರು ಭಾಗವನ್ನು ಸಂಪೂರ್ಣವಾಗಿ ತೆಗೆದು ಕೇವಲ ಅಂಟಾದ ಬಿಳಿಭಾಗವನ್ನು ಒಂದು ಶುದ್ಧವಾದ ಬಟ್ಟೆಯಲ್ಲಿಟ್ಟು ಕಣ್ಣಿನ ಮೇಲಿಡಬೇಕು. ಅದರಿಂದ ಕಣ್ಣಿಗೆ ತಂಪು ದೊರೆತು ಉರಿ ಕಡಿಮೆಯಾಗುತ್ತದೆ.

ಸೌತೆಕಾಯಿ ಅಥವಾ ಕ್ಯಾರೆಟ್ ಪೇಸ್ಟ್ ಮಾಡಿಕೊಂಡು ಅದನ್ನು ಸಹ ಶುದ್ಧ ಬಟ್ಟೆಯಲ್ಲಿ ಕಟ್ಟಿ ಕಣ್ಣಿನ ಮೇಲಿಡುವುದರಿಂದಲೂ ಕಣ್ಣಿಗೆ ತಂಪು ದೊರೆಯುವುದು.

ರೋಸ್ ವಾಟರ್ ನಿಂದ ಕಣ್ಣು ಶುಚಿಗೊಳಿಸಿದರೆ ಕಣ್ಣು ತಂಪಾಗುವುದು, ಇದರಿಂದ ಕಣ್ಣು ಉರಿ ಉಂಟಾಗುವುದಿಲ್ಲ.

ರಾತ್ರಿ ಮಲಗುವ ಮುಂಚೆ ಹರೆಳೆಣ್ಣೆಯನ್ನು ಕಣ್ಣಿನ ರೆಪ್ಪೆಯ ಮೇಲೆ ಹಾಗೂ ಕಣ್ಣಿನ ಸುತ್ತ ಹಚ್ಚಿಕೊಳ್ಳಿ. ಜೊತೆಗೆ ತಲೆಯ ನೆತ್ತಿಯ ಮೇಲೆ ಹರಳೆಣ್ಣೆಯನ್ನು ಹಚ್ಚಿಕೊಂಡರೆ ಕಣ್ಣಿನ ಉರಿ ಕಡಿಮೆಯಾಗುತ್ತದೆ.

ಕಣ್ಣಿಗೆ ಹಚ್ಚಿಕೊಳ್ಳುವ ಕಾಡಿಗೆ ಮತ್ತು ಇನ್ನಿತರ ಮೇಕಪ್ ಗಳನ್ನು ಅತಿಯಾಗಿ ಮಾಡಿಕೊಳ್ಳಬಾರದು. ಜೊತೆಗೆ ರಾತ್ರಿ ಮಲಗುವ ಮುಂಚೆ ಮೇಕಪ ಎಲ್ಲ ತೆಗೆದು ಶುದ್ಧ ನೀರಿನಲ್ಲಿ ತೊಳೆದು ಮಲಗಬೇಕು.

ತಲೆಗೆ ಎಣ್ಣೆಯನ್ನು ಹಚ್ಚುವುದರಿಂದ ಸಹ ನಿಮ್ಮ ಕಣ್ಣಿನ ಉರಿ ಕಡಿಮೆಯಾಗುತ್ತದೆ.

ಆದ್ದರಿಂದ ನಿಮ್ಮ ಕಣ್ಣುಗಳು ಸಹ ಉರಿಯನ್ನು ಉಂಟುಮಾಡುತ್ತಿದ್ದರೆ ಈ ಪ್ರಯೋಗಗಳನ್ನು ಮಾಡಿ. ಕಣ್ಣಿನ ಉರಿ ತಪ್ಪಿಸಿಕೊಳ್ಳಿ.

ಶುದ್ಧ ತಣ್ಣನೆಯ ನೀರಿನಲ್ಲಿ ಹತ್ತಿ ಅದ್ದಿ ಅದನ್ನು ಕಣ್ಣಿನ ಮೇಲೆ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಇರಿಸಿಕೊಳ್ಳುವುದರಿಂದ ಕಣ್ಣಿನ ಉರಿ ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here