ಬಣ್ಣಗಳಲ್ಲಿ ಒಂದಾದ ಕಪ್ಪು ಬಣ್ಣವನ್ನು ಕಂಡರೆ ಕೆಲವರಿಗೆ ತುಂಬಾ ಇಷ್ಟ. ಆದರೆ ಕೆಲವರು ಕಪ್ಪು ಬಣ್ಣವನ್ನು ಅಪಶಕುನ ಎಂದು ಭಾವಿಸುತ್ತಾರೆ. ಆದರೆ ಈ ಕಪ್ಪು ಬಣ್ಣದ ಮಹತ್ವವನ್ನು ತಿಳಿದುಕೊಂಡರೆ ಎಲ್ಲರೂ ಕೂಡ ಈ ಬಣ್ಣವನ್ನು ಇಷ್ಟ ಪಡುತ್ತಾರೆ. ಕಪ್ಪು ಬಣ್ಣವನ್ನು ಹೊಂದಿರುವ ಕಾಡಿಗೆ ಯನ್ನು ಚಿಕ್ಕ ಮಕ್ಕಳಿಗೆ ಹಿಡುತ್ತಾರೆ. ಜೊತೆಗೆ ಕಪ್ಪು ದಾರವನ್ನು ಮಕ್ಕಳ ಕಾಲಿಗೆ. ಕೈಯಿಗೆ ಕಟ್ಟುತ್ತಾರೆ.ಜೊತೆಗೆ ಇತ್ತೀಚೆಗೆ ದೊಡ್ಡವರು ಸಹ ಕಪ್ಪು ದಾರವನ್ನು ಕಾಲಿಗೆ ಕಟ್ಟಿಕೊಳ್ಳುತ್ತಿದ್ದರೆ. ಹಾಗಾದರೆ ಯಾಕೆ ಎಲ್ಲರೂ ಈ ಕಪ್ಪು ಕಾಡಿಗೆಯನ್ನು ಹಚ್ಚಿಕೊಳ್ಳುತ್ತಾರೆ. ಕಪ್ಪುದಾರವನ್ನು ಕಟ್ಟಿಕೊಳ್ಳುತ್ತಾರೆ.ಇದನ್ನು ಕಟ್ಟಿಕೊಳ್ಳುವುದರಿಂದ ಏನು ಲಾಭ ನೋಡೋಣ ಬನ್ನಿ.
ಮಕ್ಕಳಿಗೆ ಮನುಷ್ಯರಿಗೆ ದೃಷ್ಟಿ ಆಗುವುದು ಸಹಜ . ಈ ದೃಷ್ಟಿ ಬಿದ್ದರೆ ಯಶಸ್ಸಿನಿಂದ ಪಾತಾಳಕ್ಕೆ ಇಳಿದು ಬಿಡುತ್ತಾನೆ ಎಂಬುದು ಹಿರಿಯರ ನಂಬಿಕೆ. ಅದಕ್ಕಾಗಿ ಕೆಟ್ಟ ದೃಷ್ಟಿ ಗಳು ಬೀಳಬಾರದೆಂದು ಹಿಂದಿನ ಕಾಲದಿಂದಲೂ ಹಲವಾರು ರೀತಿಯ ನಂಬಿಕೆಗಳನ್ನು ರೂಡಿಸಿಕೊಂಡಿದ್ದರು.. ಮೆಣಸಿನ ಕಾಯಿಯಲ್ಲಿ ದೃಷ್ಟಿ ತೆಗೆಯುವುದು. ಕುಂಕುಮದ ನೀರು, ಬರಲು, ಇದ್ದಿಲು, ವಿಲ್ಲೆದೆಲೆ. ಅರಶಿನ ನೀರು. ಮೊಟ್ಟೆ ಇತ್ಯಾದಿಗಳಿಂದ ದೃಷ್ಟಿ ತೆಗೆಯುತ್ತಿದ್ದರು. ಅದೇ ರೀತಿಯಾಗಿ ಕಪ್ಪು ದಾರ ಕಟ್ಟಿಕೊಳ್ಳುವುದು ಕೂಡ ಅಭ್ಯಾಸವಿತ್ತು.
ಕಪ್ಪು ದಾರವನ್ನು ಕೈಗೆ, ಕತ್ತಿಗೆ ಅಥವಾ ಕಾಲಿಗೆ, ಅಥವಾ ಸೊಂಟಕ್ಕೆ ಕಟ್ಟಿಕೊಳ್ಳುತ್ತಾರೆ.
ಯಾವ ಕೆಟ್ಟ ದೃಷ್ಟಿಯೂ ಬೀಳದಂತೆ ತಡೆಯಲು ಕಪ್ಪು ದಾರ ಒಂದೇ ಸಾಕು. ದೃಷ್ಠಿ ತಾಕದಿರಲಿ ಎನ್ನುವ ಕಾರಣಕ್ಕೆ ಈ ಕಪ್ಪು ದಾರವನ್ನ ಬಳಸಲಾಗುತ್ತದೆ.
ಕಪ್ಪು ದಾರ ಮನುಷ್ಯನ ಮೇಲೆ ಬೀಳುವ ಕೆಟ್ಟ ದೃಷ್ಟಿಯನ್ನು ತಡೆಯುವ ಶಕ್ತಿಯುಳ್ಳದ್ದು..
ಮಕ್ಕಳಿಗೆ ಕಪ್ಪಗಿನ ದೃಷ್ಟಿ ಬೊಟ್ಟು ಇಡುವುದರಿಂದ ಅವರಿಗೆ ದೃಷ್ಟಿ ತಾಕಲ್ಲವಂತೆ. ಅಷ್ಟೇ ಅಲ್ಲ, ಯಾರಾದರೂ ಅಂತಹ ಮಕ್ಕಳನ್ನು ನೋಡಿದ ಕೂಡಲೆ ಅವರ ದೃಷ್ಟಿ ಮೊದಲು ಆ ಬೊಟ್ಟಿನ ಮೇಲೆ ಬೀಳುತ್ತದೆ. ಇದರಿಂದ ಮಕ್ಕಳಿಗೆ ದೃಷ್ಟಿ ತಾಕುವುದಿಲ್ಲ ಎಂಬ ನಂಬಿಕೆಯಿಂದ ಮಕ್ಕಳಿಗೆ ಬೊಟ್ಟು ಇಡುತ್ತಾರೆ.
ಕಪ್ಪು ದಾರ ಇತರೆ ಯಾವುದೇ ನೆಗಟಿವ್ ಎನರ್ಜಿ ದೇಹವನ್ನು ಪ್ರವೇಶಿಸಲು ಬಿಡುವುದಿಲ್ಲ..ದೇಹಕ್ಕೆ ಸಕಾರಾತ್ಮಕ ಮತ್ತು ಧನಾತ್ಮಕ ಶಕ್ತಿಯನ್ನು ನೀಡುತ್ತದೆ..
ಈ ಕಪ್ಪುದಾರವು ದೇಹದ ಸಮತೋಲನವನ್ನು ಕಾಪಾಡುತ್ತದೆ. ಆರೋಗ್ಯವನ್ನು ಹೆಚ್ಚಿಸುತ್ತದೆ.ದೇಹದ ತೂಕವನ್ನು ಕಡಿಮೆ ಮಾಡುವ ಶಕ್ತಿ ಕೂಡ ಇದಕ್ಕೆ ಇದೆ.
ಮನೆಯ ಮುಖ್ಯ ದ್ವಾರಕ್ಕೆ ಕಪ್ಪು ದಾರವನ್ನು ಕಟ್ಟಿದರೆ ಮನೆಯ ಒಳಗೆ ನಕಾರಾತ್ಮಕ ಶಕ್ತಿ ಬರುವುದನ್ನು ತಡೆಯಬಹುದು.
ಕೆಲವರು ವಾಹನಗಳು ಅಪಘಾತ ವಾಗದಿರಲಿ ಎಂದು ಕಪ್ಪು ದಾರವನ್ನು ವಾಹನಗಳಿಗೂ ಕಟ್ಟುವುದು ವಾಡಿಕೆ ಇದೆ.
ನೋಡಿ ಅಪಶಕುನ ಎಂದು ಹೇಳುವ ಕಪ್ಪು ಬಣ್ಣವೂ ಎಷ್ಟೆಲ್ಲ ಮಹತ್ವವನ್ನು ಹೊಂದಿದೆ.