ಜೀವನದಲ್ಲಿ ಗೆಲುವನ್ನು ಸಾಧಿಸಲು ಹೀಗೆ ಮಾಡಿ.

0
792

ಸೋಲು, ಅವಮಾನದಿಂದ ಹೊರಬನ್ನಿ, ಜೀವನದಲ್ಲಿ ಗೆಲುವನ್ನು ಸಾಧಿಸಲು ಹೀಗೆ ಮಾಡಿ.

ನೀವು ನಿಮ್ಮ ಜೀವನದಲ್ಲಿ ಅನೇಕ ಬಾರಿ ಸೋಲನ್ನು ಅನುಭವಿಸಿರಬಹುದು. ಇನ್ನೇನೂ ಮಾಡಲು ದಾರಿಯೇ ಇಲ್ಲ ಎಂದುಕೊಂಡಿರಬಹುದು. ಹತಾಶರಾಗಿರಬಹುದು. ಗೆಲುವು ಅನ್ನೋದು ಸುಲಭವಾಗಿ ಬರುವಂತದ್ದಲ್ಲ. ಅದಕ್ಕೆ ಅಧಿಕ ಶೃಮ ಅಗತ್ಯ. ಪರಿಶ್ರಮದಿಂದ ಎಲ್ಲವೂ ಸಾಧ್ಯ. ಇನ್ನು ನೀವು ಜೀವನದಲ್ಲಿ ಸೋತಿದ್ದು, ನೊಂದಿದ್ದು, ಅವಮಾನ ಪಟ್ಟಿದ್ದು ಸಾಕು. ಇನ್ನಾದರೂ ಬದಲಾಗಿ.. ನಿಮ್ಮೊಳಗಿರುವ ಅತ್ಮಬಲವನ್ನು ಹೊರಹಾಕಲು ಹೀಗೆ ಮಾಡಿ.

ಜೀವನದಲ್ಲಿ ಸೋಲು ಎಂಬುದು ಸಹಜ, ನಿರಾಸೆ ಎಂಬುದು ಕೂಡ ಸಹಜ,ಆದರೆ ಸೋಲು ಎದುರಾದಾಗ ಆ ಸೋಲನ್ನೇ ಗೆಲುವಿನ ಮೆಟ್ಟಿಲಾಗಿ ಸ್ವೀಕರಿಸಬೇಕು. ಒಮ್ಮೆ ಸೋತೆ ಎಂದು ಕೈ ಕಟ್ಟಿ ಕೂತರೆ ಸೋಲು ನಮ್ಮ ಮನೆಯ ನೆಂಟನಾಗಿಬಿಡುತ್ತಾನೆ..

 

ಅದಕ್ಕಾಗಿ ನಾವೇನು ಮಾಡಬೇಕು?? ಇಲ್ಲಿದೆ ನೋಡಿ.

1. ಸೋಲನ್ನು ಮರೆಯಬೇಡಿ. ಒಮ್ಮೆ ಗೆದ್ದರೆ ನಾವು ಹಿಂದಿನ ಸೋಲನ್ನು ಮರೆತುಬಿಡುತ್ತೇವೆ. ಇದು ಸಹಜ. ಆದರೆ ಸೋತೆ ಎಂಬ ಹತಾಶ ಭಾವನೆ ಬರಬಾರದು ಹಾಗಂತ ನಮ್ಮ ಸೋಲಿನ ಕ್ಷಣಗಳನ್ನು ಎಂದಿಗೂ ಮರೆಯಬಾರದು.. ನಾವು ಗೆಲ್ಲುವ ತನಕವಷ್ಟೇ ಅಲ್ಲ ಗೆದ್ದ ಮೇಲೂ ಕೂಡ ಆ ಸೋಲು ನಮಗೆ ನೆನಪಿನಲ್ಲೇ ಇರಬೇಕು.. ಏಕೆಂದರೆ ಆ ಕ್ಷಣವೇ ನಮ್ಮ ಮುಂದಿನ ಗೆಲುವಿಗೆ ಸ್ಪೂರ್ತಿ ಎಂದರೆ ತಪ್ಪಾಗಲಾರದು..

2. ನಿರಾಶೆಯಿಂದ ಹೊರಬನ್ನಿ. ಸೋಲು ನೆನಪಿರಲಿ ಆದರೆ ನಿರಾಸೆ ಬೇಡ. ನಿರಾಸೆಯಿಂದ ಮುಂದಿನ ಚಟುವಟಿಕೆ ನಿಂತು ಬಿಡುತ್ತವೆ. ನೋವು ಯಾವುದೇ ಆಗಿರಬಹುದು.. ಮೊದಲು ನಾವು ಅನುಭವಿಸಿದ ಆ ನೋವಿನಿಂದ ಹೊರಬರಬೇಕೆಂದರೆ ನಮ್ಮ ಆಸಕ್ತಿಯುಳ್ಳ ಇತರೆ ಚಟುವಟಿಕೆಯಲ್ಲಿ ತೊಡಗಬೇಕು.. ಆ ಅಭ್ಯಾಸ ಯಾವುದೇ ಆಗಿರಲಿ ಅದರಲ್ಲಿ ತಲ್ಲೀನರಾದರೆ ಹಳೆಯ ನೋವು ಮರೆಯಲು ಉಪಯುಕ್ತ..

3. ಅವಮಾನ ಮಾಡಿದವರನ್ನು ಮರೆಯಬೇಡಿ. ಕೆಲವು ಸಮಯದಲ್ಲಿ ನಮಗೆ ಯಾರಿಂದಲೋ ಅವಮಾನ ಆಗಿರಬಹುದು. ಅದರಿಂದ ಕೋಪಗೊಂಡ ನಮಗೆ ತಾಳ್ಮೆ ಕಳೆದುಕೊಂಡು ಕೂಗಾಡಿ, ರೇಗಾಡಿ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ನಮಗೆ ಅವಮಾನ ಮಾಡಿದ ವ್ಯಕ್ತಿಗಳನ್ನು ಎಂದಿಗೂ ಮರೆಯಬಾರದು. ಬದಲಾಗಿ ನಮ್ಮ ಸಕ್ಸಸ್ ನ ಮೂಲಕ ಕೊಡುವ ತಿರುಗೇಟಿಗಿಂತ ತೀವ್ರವಾದದ್ದು ಬೇರೇನಿಲ್ಲ. ನಾವು ಅವರ ಎದುರೇ ಅವರಿಗಿಂತ ಚನ್ನಾಗಿ ಬದುಕಿ ತೋರಿಸಬೇಕು. ಅದು ಅವರು ಮಾಡಿದ ಅವಮಾನಕ್ಕೆ ಉತ್ತರವಾಗಿರುತ್ತದೆ.

4. ನಿರ್ದಿಷ್ಟ ಗುರಿಯನ್ನು ರೂಪಿಸಿಕೊಳ್ಳಿ. ಏನೇ ಆದರೂ ನಮ್ಮ ಗುರಿ ತಲುಪುವವರೆಗೆ ನಮ್ಮ ಹಠ ಸಾಧನೆಯನ್ನು ಬಿಡಬಾರದು. ಕ್ರಮೇಣ ನಾವು ಚೇತರಿಸಿಕೊಂಡ ನಂತರ ನಮ್ಮ ಗುರಿಯನ್ನು ರೂಪಿಸಿಕೊಳ್ಳಬೇಕು.. ಅದು ಸುಲಭವೋ ಅಥವಾ ಕಠಿಣವೋ ಎಂದು ಯೋಚಿಸಬಾರದು..

5. ಆತ್ಮ ಬಲವನ್ನು ಹೊರಹಾಕಿ. ನಮ್ಮ ಎಲ್ಲಾ ಬಲಗಳಿಗಿಂತ ತುಂಬಾ ಶಕ್ತಿಯುತವಾದದ್ದೇ ಈ ಆತ್ಮಬಲ.. ಅಂದುಕೊಂಡಿದ್ದನ್ನು ಸಾಧಿಸಿಯೇ ತೀರುತ್ತೇನೆ ಎಂಬ ಛಲದ ಜೊತೆಗೆ ನಮ್ಮ ಪರಿಶ್ರಮ ವಿದ್ದರೇ ಅಷ್ಟೇ ಸಾಕು. ಅತಿ ವೇಗವಾಗಿ ನಾವು ಗುರಿ ತಲುಪಬಹುದು.. ನಿಮ್ಮೊಳಗಿರುವ ನಿಮಗೇ ತಿಳಿಯದ ಆ ಮಹಾನ್ ಶಕ್ತಿಯನ್ನು ಒಮ್ಮೆ ಹೊರಹಾಕಿ ನೋಡಿ.. ನಿಮ್ಮಿಂದ ಎಲ್ಲವೂ ಸಾಧ್ಯ.. ಅಸಾಧ್ಯವೆಂಬುದು ಈ ಜಗತ್ತಲ್ಲಿ ಯಾವುದೂ ಇಲ್ಲ ನೆನಪಿರಲಿ

LEAVE A REPLY

Please enter your comment!
Please enter your name here