ದುಷ್ಟಶಕ್ತಿಗಳಿಂದ ದೂರವಿರಲು ಹೀಗೆ ಮಾಡಿ, ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ

0
1087

ದುಷ್ಟಶಕ್ತಿಗಳಿಂದ ದೂರವಿರಲು ಹೀಗೆ ಮಾಡಿ, ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ.

ದೇವರು ಇರುವಂತೆ ಈ ಜಗತ್ತಿನಲ್ಲಿ ದೆವ್ವ, ಭೂತಗಳು ಸಹ ಇವೆ ಎಂದು ನಂಬುವವರು ಬಹಳಷ್ಟು ಮಂದಿ ಇದ್ದಾರೆ. ಈ ಹಿನ್ನೆಲೆಯಲ್ಲಿ ಅಂತಹವರು ತಮ್ಮ ಬಳಿಗೆ ದುಷ್ಟಶಕ್ತಿಗಳು ಬಾರದಂತೆ ತಾಯತ ಕಟ್ಟಿಕೊಳ್ಳುವುದು, ದೇವರ ಫೋಟೋಗಳನ್ನು ಹತ್ತಿರ ಇಟ್ಟುಕೊಳ್ಳುವುದು,ದೇವರ ನಾಮ ಜಪಗಳನ್ನು ಮಾಡುವುದು ಇತರೆ ಕೆಲಸಗಳನ್ನು ಮಾಡುತ್ತಿರುತ್ತಾರೆ. ಆದರೆ ದುಷ್ಟಶಕ್ತಿಗಳ ಕಾಟಕ್ಕೆ ಸಿಗದೆ ಇರಬೇಕೆಂದರೆ ಇವಿಷ್ಟೇ ಅಲ್ಲ. ಇನ್ನೂ ಕೆಲವು ಸೂಚನೆಗಳು ಇವೆ. ಅವುಗಳನ್ನು ಪಾಲಿಸಿದರೆ ದುಷ್ಟಶಕ್ತಿಗಳಷ್ಟೇ ಅಲ್ಲ ನೆಗೆಟಿವ್ ಎನರ್ಜಿ ಸಹ ಹತ್ತಿರ ಸುಳಿಯಲ್ಲ.

ಇದರಿಂದ ಅದೃಷ್ಟ ಕೂಡಿ ಬರುತ್ತದೆ. ಅಂದುಕೊಂಡ ಕೆಲಸಗಳು ನೆರವೇರುತ್ತವೆ. ಹಾಗಿದ್ದರೆ ಸೂಚನೆಗಳು ಏನು ಎಂದು ಈಗ ತಿಳಿದುಕೊಳ್ಳೋಣ.

1. ಕೆಲವು ತುಳಸಿ ಎಲೆಗಳನ್ನು ತೆಗೆದುಕೊಂಡು ಅವುಗಳ ರಸ ತೆಗೆಯಬೇಕು. ಅದನ್ನು ಸಿದ್ಧವಾದ ನೀರಿನಲ್ಲಿ ಕಲಿಸಬೇಕು. ಆ ಬಳಿಕ ದೇವರನ್ನು ಪ್ರಾರ್ಥಿಸಿ ಆ ದ್ರವವನ್ನು ಮನೆಯಲ್ಲಿ ಚೆಲ್ಲಬೇಕು. ಇದರಿಂದ ದುಷ್ಟಶಕ್ತಿಗಳು ಬರದಂತೆ ಇರುತ್ತವೆ. ಮನೆಯಲ್ಲಿರುವ ನೆಗೆಟಿವ್ ಎನರ್ಜಿ ಹೊರಗೆ ಹೋಗುತ್ತದೆ.

2. ಕನಿಷ್ಠ ತಿಂಗಳಿಗೊಮ್ಮೆ ಮನೆಯಲ್ಲಿ ಪಂಡಿತರ ಕೈಯಲ್ಲಿ ಯಜ್ಞ ಮಾಡಿಸಬೇಕು.
ಇದರಿಂದ ಅವರು ಓದುವ ಮಂತ್ರಗಳು ಯಜ್ಞದಿಂದ ಬರುವ ಹೊಗೆಗೆ ದುಷ್ಟಶಕ್ತಿಗಳು ಓಡಿ ಹೋಗುತ್ತವೆ. ಎಲ್ಲವೂ ಶುಭವಾಗುತ್ತದೆ, ಪಾಸಿಟಿವ್ ಎನರ್ಜಿ ಮನೆಯಲ್ಲಿರುತ್ತದೆ ಧನವನ್ನು ಅದು ಆಕರ್ಷಿಸುತ್ತದೆ.

3. ಉರಿಯುತ್ತಿರುವ ಕೆಂಡವನ್ನು ಒಂದು ಲೋಹದ ಪ್ಲೇಟ್ ಮೇಲೆ ತೆಗೆದುಕೊಂಡು ಅದರ ಮೇಲೆ ಸ್ವಲ್ಪ ಇಂಗು ಹಾಕಬೇಕು. ಇದರಿಂದ ಹೊಗೆ ಬರುತ್ತದೆ. ಅದನ್ನು ಮನೆಯಲ್ಲೆಲ್ಲ ಪಸರಿಸುವಂತೆ ತಿರುಗುತ್ತಾ ದೂಪ ಆಗಬೇಕು. ಈ ರೀತಿ ಮಾಡಿದರೆ ದುಷ್ಟಶಕ್ತಿಗಳು ಬರಲ್ಲ ನೆಗೆಟಿವ್ ಎನರ್ಜಿ ಹೋಗುತ್ತದೆ.

4. ಸ್ವಲ್ಪ ಜೀರಿಗೆ, ಉಪ್ಪನ್ನು ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಬೇಕು. ಆ ಮಿಶ್ರಣವನ್ನು ಮನೆಯ ಮುಖ್ಯ ದ್ವಾರದ ಬಳಿ ಚೆಲ್ಲಬೇಕು. ಬಳಿಕ ಉಳಿದ ಬಾಗಿಲು,ಕಿಟಕಿ ಬಳಿ ಸಹ ಮಿಶ್ರಣವನ್ನು ಚೆಲ್ಲಿದರೆ ದುಷ್ಟಶಕ್ತಿಗಳು ಬಾರದಂತೆ ಇರುತ್ತವೆ. ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ.

5. ಸ್ವಲ್ಪ ಸೌಂಡ್ ಇಟ್ಟುಕೊಂಡು ಸಂಗೀತವನ್ನು ಕೇಳುವುದು, ಮನೆಯೊಳಗೆ ಗಾಳಿ, ಸೂರ್ಯನ ಬೆಳಕು ಧಾರಾಳವಾಗಿ ಬೀಳುವಂತೆ ಮಾಡಿ. ಯಾವಾಗಲೂ ಸಂತೋಷವಾಗಿರುವುದು, ಮನರಂಜನಾ ಕಾರ್ಯಕ್ರಮಗಳನ್ನು ಮನೆಯಲ್ಲಿ ಮಾಡುತ್ತಿದ್ದರೆ ಪಾಸಿಟಿವ್ ವೈಬ್ರೇಷನ್ ಗೆ ಮನೆಯಲ್ಲಿ ದುಷ್ಟಶಕ್ತಿಗಳು ಇರಲ್ಲ. ಓಡಿಹೋಗುತ್ತವೆ ನೆಗೆಟಿವ್ ಎನರ್ಜಿ ಹೋಗುತ್ತದೆ.

6. ಸಿಲಿಕಾ ಸ್ಪಟಿಕ, ಟೈಗರ್ ಐರನ್ ಸ್ಪಟಿಕ, ಪುಷ್ಯರಾಗ ಗೋಮೇಧಿಕ ತದಿತೆರೆ ಸ್ಫಟಿಕಗಳನ್ನು, ಕಲ್ಲಿನಲ್ಲಿ ಯಾವುದಾದರೂ ಸ್ವಲ್ಪ ತೆಗೆದುಕೊಂಡು ಮನೆಯಲ್ಲಿನ ಪ್ರತಿ ಮೂಲೆ, ಪ್ರತಿ ಕೊಠಡಿಯಲ್ಲಿಡಬೇಕು ಇದರಿಂದ ದುಷ್ಟಶಕ್ತಿಗಳು ಬರಲ್ಲ, ನೆಗೆಟಿವ್ ಎನರ್ಜಿ ಹೋಗುತ್ತದೆ.

7. ಇತರರಿಗೆ ಸಹಾಯ ಮಾಡುವುದು, ದಾನ ಧರ್ಮಗಳನ್ನು ಮಾಡುವುದು, ದೈವ ಪ್ರಾರ್ಥನೆಗಳನ್ನು ಮಾಡುವಂತಹ ಕೆಲಸಗಳನ್ನು ಮಾಡುವವರಿಗೆ ದುಷ್ಟಶಕ್ತಿಗಳು ಬಾಧಿಸುವುದಿಲ್ಲ. ಅದಷ್ಟೇ ಅಲ್ಲ ನೆಗೆಟಿವ್ ಎನರ್ಜಿ ಸಹ ಅವರ ಸನಿಹ ಸುಳಿಯುವುದಿಲ್ಲ.

8. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆಯ ವೇಳೆಗೆ ದೇವರಿಗೆ ತಪ್ಪದೇ ದೀಪ ಹಚ್ಚುವುದು, ದೇವರ ಸ್ಮರಣೆ ಮಾಡುವುದರಿಂದ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ. ಜೊತೆಗೆ ಸಾಂಬ್ರಾಣಿ ಹೊಗೆಯನ್ನು ಮನೆಯಲ್ಲೆಲ್ಲಾ ಹಾಕುವುದರಿಂದ ಮನೆಯ ವಾತಾವರಣ ಕೂಡ ಶುಭ್ರವಾಗಿರುತ್ತದೆ.

9. ಆದಷ್ಟು ಗಾಯತ್ರಿ ಮಂತ್ರವನ್ನು ಹೇಳಿಕೊಳ್ಳುತ್ತಿರುವುದರಿಂದ ದೆವ್ವ ಬೂತಗಳು ಮಾತ್ರವಲ್ಲ, ಎಲ್ಲಾ ಸಮಸ್ಯೆಗಳೂ ತನ್ನಿಂದ ತಾನೇ ದೂರವಾಗುತ್ತಾ ಹೋಗುತ್ತದೆ

LEAVE A REPLY

Please enter your comment!
Please enter your name here