ಬರೀ ತಲೆಗೆ ಹಚ್ಚೋಕೆ ಮಾತ್ರ ಅಲ್ಲ ಇದ್ರಿಂದ ಬೇರೆ ಇಪ್ಪತ್ತು ಲಾಭ ಇದೆ

0
1146

ಎಲ್ಲರೂ ಕೇಳಿರಬಹುದು ಹರೆಳೆಣ್ಣೆಯನ್ನು. ಇದನ್ನು ಹರಳು ಎಂಬ ಸಣ್ಣ ಸಣ್ಣ ಬೀಜಗಳನ್ನು ಬೇಯಿಸಿ ಮಾಡುವಂತಹ ನೈಸರ್ಗಿಕ ಹಾಗೂ ಆರೋಗ್ಯದಾಯಕ ಎಣ್ಣೆಯಾಗಿದೆ. ಇಂದಿನ ಕಾಲದಲ್ಲಿ ಕೇವಲ ಹರಳೆಣ್ಣೆಯ ಬಳಕೆ ಮಾತ್ರ ಇದ್ದಿದ್ದು. ಈ ಎಣ್ಣೆಯಿಂದ ಎಷ್ಟು ಉಪಯೋಗ ಪಡೆದುಕೊಳ್ಳುತ್ತಿದ್ದರು ಎಂದರೆ ಅವರ ಆರೋಗ್ಯವೇ ಅದನ್ನು ಹೇಳುತ್ತಿತ್ತು.

ಇಂದಿನ ಕಾಲದಲ್ಲಿ ಹೆಚ್ಚಾಗಿ ಚಿಕ್ಕ ಮಕ್ಕಳಿಂದಲು ಕಣ್ಣಿನ ಸಮಸ್ಯೆ ಕಾಡುತ್ತದೆ ಚಿಕ್ಕ ವಯಸ್ಸಿಗೆ ಕನ್ನಡಕ ಹಾಕಿಕೊಳ್ಳುತ್ತಾರೆ .ಆದರೆ ಹಿಂದಿನ ಕಾಲದ ಜನರು ಕನ್ನಡಕವನ್ನೇ ನೋಡಿಲ್ಲ ಅಷ್ಟು ಆರೋಗ್ಯವಾಗಿ ಇರುತ್ತಿದ್ದವು ಅವರ ಕಣ್ಣುಗಳು.ಅದಕ್ಕೆ ಕಾರಣ ಅವರು ಹರೆಳೆಣ್ಣೆಯನ್ನು ಹೆಚ್ಚು ಉಪಯೋಗಿಸುತ್ತಿದ್ದರು. ಇಂದಿನ ಕೆಲವು ಜನರು ಹರಳೆಣ್ಣೆ ಎಂದರೆ ದೂರ ಸರಿಯುತ್ತಾರೆ ಏಕೆಂದರೆ ಅದು ತುಂಬಾ ಅಂಟು ಅಂಟು ತೊಳೆಯಲು ತುಂಬಾ ಕಷ್ಟ ಎಂದು ಹಿಂಜರಿಯುತ್ತಾರೆ. ಆದರೆ ಈ ಹರಳೆಣ್ಣೆಯನ್ನು ಉಪಯೋಗಿಸುವುದರಿಂದ ಆಗುವ ಲಾಭಗಳನ್ನು ಜೊತೆಗೆ ಈ ಹರಳೆಣ್ಣೆ ಹೇಗೆ ಉಪಯೋಗವಾಗುತ್ತದೆ ಎಂದು ನೋಡೋಣ ಬನ್ನಿ.

ಔಷಧೀಯ ಗುಣ ಹೊಂದಿರುವ ಹರಳೆಣ್ಣೆ ಮಲಬದ್ಧತೆ ಅಥವಾ ಡಯೆರಿಯಾ ಕಾಯಿಲೆಗೆ ಪ್ರಯೋಜನಕಾರಿ. ಇದರಲ್ಲಿರುವ ರಿಸಿನೋಲಿಕ್ ಆಸಿಡ್ ಮುಟ್ಟು ತಡವಾಗಿ ಆಗುವುದು ಅಥವಾ ಅಧಿಕ ದಿನಗಳ ರಕ್ತಸ್ರಾವದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.

ಗಾಯಗಳಾದಾಗ, ಸೂರ್ಯನ ಕಿರಣಗಳಿಂದ ಮುಖ ಕಪ್ಪಾದಾಗ, ಮೊಡವೆ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸಲು ಪ್ರಯೋಜನಕಾರಿ.

ಮಲಗುವ ಮುನ್ನ ಹರಳೆಣ್ಣೆಯನ್ನು ಮುಖಕ್ಕೆ ಹಚ್ಚುವುದರಿಂದ ಕಣ್ಣಿನ ಸುತ್ತ ಇರುವ ಕಪ್ಪು ವರ್ತುಲವನ್ನು ಹೋಗಲಾಡಿಸುತ್ತದೆ.

ಕಣ್ಣಿನ ರೆಪ್ಪೆ ತುಂಬಾ ತೆಳುವಾಗಿದ್ದರೆ ನಿರಂತರವಾಗಿ ಹರಳೆಣ್ಣೆ ಹಚ್ಚುವುದರಿಂದ ರೆಪ್ಪೆಯ ಕೂದಲೂ ದಟ್ಟವಾಗಿ ಬೆಳೆದು ಆಕರ್ಷಕವಾಗಿ ಕಾಣುತ್ತವೆ.

ಹುಬ್ಬು ಸರಿಯಿಲ್ಲದಿದ್ದವರು ಹರಳೆಣ್ಣೆಯಿಂದ ಮಸಾಜ್ ಮಾಡಿಕೊಂಡರೆ ರಕ್ತ ಸಂಚಲನ ಸರಿಯಾಗಿ ಕೂದಲು ಬೆಳೆಯುತ್ತದೆ.

ಹರಳೆಣ್ಣೆಯಲ್ಲಿ ಆ೦ಟಿ ಆಕ್ಸಿಡೆ೦ಟ್. ಜೀವಸತ್ವ E ಹಾಗೂ ಖನಿಜಗಳ೦ತಹ ಪೋಷಕಾ೦ಶಗಳಿ೦ದ ಈ ತೈಲವು ಸಮೃದ್ಧವಾಗಿದೆ. ಈ ತೈಲವನ್ನು ನಿಯಮಿತವಾಗಿ ಬಳಸುತ್ತ ಬಂದರೆ ತ್ವಚೆಯು ಆರೋಗ್ಯಕರವಾಗಿರುತ್ತದೆ.

ಹಿಮ್ಮಡಿಗಳು ಬಿರುಕುಬಿಟ್ಟಿರುವ ತ್ವಚೆಯ ಮೇಲೆ ಹರಳೆಣ್ಣೆಯನ್ನು ಹಚ್ಚಿಕೊಂಡು ಬೆಚ್ಚಗಿನ ನೀರಿನಲ್ಲಿ ನಿಮ್ಮ ಪಾದಗಳನ್ನು ಕೆಲಕಾಲ ನೆನೆಯ ಬಿಟ್ಟರೆ ಹಿಮ್ಮಡಿಯ ತ್ವಚೆಯು ಕೋಮಲವಾಗತೊಡಗುತ್ತದೆ.

ಹರಳೆಣ್ಣೆಯನ್ನು ಕೊಂಚ ಬಿಸಿ ಮಾಡಿ ಸೊಂಟಕ್ಕೆ ಹಚ್ಚುತ್ತಾ ಬಂದರೆ ನೋವು ಕಡಿಮೆಯಾಗುತ್ತದೆ.

ಮಕ್ಕಳಿಗೆ ಹೊಟ್ಟೆಯ ಸಮಸ್ಯೆಗಳು ಇದ್ದರೆ ಹರಳೆಣ್ಣೆಯನ್ನು ಬಿಸಿ ಮಾಡಿ ವಿಲ್ಲೆದೆಲೆಗೆ ಹಚ್ಚಿ ಮಕ್ಕಳ ಹೊಟ್ಟೆಯ ಮೇಲೆ ಇಟ್ಟರೆ ಹೊಟ್ಟೆಯ ಸಮಸ್ಯೆ ದೂರವಾಗುತ್ತದೆ.

ಮಲಬದ್ಧತೆ ಸಮಸ್ಯೆಗೆ ಹರಳೆಣ್ಣೆ ಉತ್ತಮ ಔಷಧಿ.

ಹೊಟ್ಟೆ ಗಟ್ಟಿಯಿರುವ ಸಂದರ್ಭದಲ್ಲಿ ಸ್ವಲ್ಪ ಹರಳೆಣ್ಣೆಯನ್ನು ಸೇವಿಸಿದರೆ ಹೊಟ್ಟೆಯ ಗಟ್ಟಿ ಕಡಿಮೆಯಾಗುತ್ತದೆ.

ಚರ್ಮದಲ್ಲಿ ತುರಿಕೆಗಳು ಇದ್ದರೆ ಹರಳೆಣ್ಣೆಯನ್ನು ಹಚ್ಚಬೇಕು.

ದ್ವನಿ ಗಡುಸಾಗಿದ್ದರೆ ಗಂಟಲಿಗೆ ಪ್ರತಿದಿನ ಹರಳೆಣ್ಣೆಯನ್ನು ಸವರಿಕೊಂಡರೆ ದ್ವನಿಯ ಗಡಸುತನ ಕಡಿಮೆಯಾಗುತ್ತದೆ.

ಹರಳೆಣ್ಣೆಯ ಕೆಲವು ಹನಿಗಳನ್ನು ಕಿವಿಗೆ ಬಿಟ್ಟುಕೊಂಡರೆ ಕಿವಿಯ ಸಮಸ್ಯೆ ಕಡಿಮೆಯಾಗುತ್ತದೆ.

ಹರಳಣ್ಣೆಯಲ್ಲಿರುವ ರಿಸಿನೋಲಿಕ್ ಆಸಿಡ್ ಮುಟ್ಟು ತಡವಾಗಿ ಆಗುವುದು ಅಥವಾ ಅಧಿಕ ದಿನಗಳ ರಕ್ತಸ್ರಾವ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.

ಹರಳೆಣ್ಣೆಯು ಹೆರಿಗೆ ನೋವನ್ನು ಕಡಿಮೆ ಮಾಡಲು ಸಹ ಬಳಸಬಹುದು. ಹೆರಿಗೆಯ ನಂತರ ಎದೆ ಹಾಲನ್ನು ಹೆಚ್ಚಿಸಲು ಈ ಎಣ್ಣೆಯನ್ನು 1/4 ಚಮಚದಷ್ಟು ಹರಳೆಣ್ಣೆಯನ್ನು ಕುಡಿಯುವುದು ಒಳ್ಳೆಯದು.

ಹರಳೆಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವ ಸಮಸ್ಯೆ ಬರುವುದಿಲ್ಲ, ಕೂದಲು ಸಹ ದಪ್ಪವಾಗಿ ಬೆಳೆಯುತ್ತದೆ. ಇದರಲ್ಲಿರುವ ಕೊಬ್ಬಿನಂಶ ಕೂದಲಿನ ಬುಡವನ್ನು ತೇವವಾಗಿ ಇಟ್ಟುಕೊಳ್ಳಲು ಸಹಾಯಮಾಡುತ್ತದೆ.

ನೋಡಿದರಲ್ಲ ಅಂಟು. ವಾಸನೆ ಎಂದು ಹಿಂಜರಿಯುವ ಹರಳೆಣ್ಣೆಯು ಎಷ್ಟೆಲ್ಲ ಆರೋಗ್ಯದಾಯಕ ಅಂಶಗಳನ್ನು ಹೊಂದಿದೆ ಅದಕ್ಕಾಗಿ ನೀವು ಕೂಡ ಹರಳೆಣ್ಣೆಯನ್ನು ಬಳಸಿ ಉಪಯೋಗ ಪಡೆದುಕೊಳ್ಳಿ.

LEAVE A REPLY

Please enter your comment!
Please enter your name here