ಕನ್ನಡಕದ ಮೇಲಿನ ಸ್ಕ್ರಾಚ್ ಹೋಗಿಸುವುದು ತುಂಬಾ ಸುಲಭ

0
1109

ಕನ್ನಡಕದ ಮೇಲಿನ ಸ್ಕ್ರಾಚ್ ಹೋಗಿಸುವ ಸುಲಭ ಮಾರ್ಗ.

ಇಂದಿನ ದಿನಗಳು ತಂತ್ರಜ್ಞಾನದ ದಿನಗಳು ಯಾವುದೇ ಕೆಲಸ ಮಾಡಲು ತಂತ್ರಜ್ಞಾನ. ಆದರೆ ಇವುಗಳ ಹೆಚ್ಚು ಬಳಕೆ ಇಂದ ನಮ್ಮ ಆರೋಗ್ಯ ಕ್ಷೀಣಿಸುತ್ತದೆ ಅದರಲ್ಲು ನಮ್ಮ ಕಣ್ಣುಗಳಿಗೆ ತುಂಬಾ ಹಾನಿಯುಂಟಗುತ್ತದೆ. ಅದಕ್ಕಾಗಿ ನಮ್ಮ ಕಣ್ಣಿನ ರಕ್ಷಣೆ ಮಾಡಲು ಎಲ್ಲರೂ ಕನ್ನಡಕಗಳನ್ನು ಧರಿಸುತ್ತಾರೆ. ಆದರೆ ಈ ಕನ್ನಡಕಗಳು ಅತಿ ಸೂಕ್ಷ್ಮ ಸ್ವಲ್ಪ ಕೆಳಗೆ ಬಿದ್ದರು ಸ್ವಲ್ಪ ಹೆಟ್ಟಿಕೊಂಡರು ಹೊಡೆದು ಹೋಗುತ್ತವೆ ಇಲ್ಲ ಸ್ಕರ್ಚ್ ಬೀಳುತ್ತದೆ. ಈ ಕನ್ನಡಕದ ಮೇಲೆ ಸ್ಕರ್ಚ್ ಬಿದ್ದರೆ ಅದನ್ನು ಉಪಯೋಗಿಸುವುದೇ ಕಷ್ಟ ಅದಕ್ಕಾಗಿ ಮತ್ತೊಂದು ಕನ್ನಡಕ ತೆಗೆದುಕೊಳ್ಳೋತ್ತೇವೆ. ಆದರೆ ಈ ಕನ್ನಡಕದ ಮೇಲಿನ ಸ್ಕ್ರಾಚ್ ಅನ್ನು ಸುಲಭವಾಗಿ ಹೋಗಿಸಬಹುದು ಹೇಗೆ ಎಂದು ನೋಡೋಣ ಬನ್ನಿ.

ಕನ್ನಡಕದ ಗಾಜಿನ ಮೇಲೆ ಟಾಲ್ಕಂ ಪೌಡರನ್ನು ಉದುರಿಸಿ ಹರಡಿರಿ. ಇದರಿಂದ ಗಾಜಿನ ಮೇಲೆ ಎಷ್ಟು ಗೆರೆಗಳಾಗಿವೆ ಎಂದು ನಿಖರವಾಗಿ ತಿಳಿಯುತ್ತದೆ. ಜೊತೆಗೆ ಅದು ಹೋಗುತ್ತದೆ.

ಟೂಥ್ ಪೇಸ್ಟನ್ನು ಮೆತ್ತಗಿನ ಬಟ್ಟೆಗೆ ಸ್ವಲ್ಪ ಹಾಕಿ ಗಾಜಿನ ಮೇಲೆ ಸವರಬೇಕು. ಇದರಿಂದ ಎಲ್ಲಿ ಗೆರೆಯಾಗಿದೆ ಎಂದು ತಿಳಿಯುತ್ತದೆ ಹಾಗೂ ಗೆರೆಗಳೂ ಹೋಗುತ್ತದೆ. ಗಾಢ ಗೆರೆಯಿದ್ದರೆ ಸ್ವಲ್ಪ ಕಡಿಮೆಯಾಗುತ್ತದೆ.

ಅಡುಗೆ ಸೋಡಾವನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ ಕನ್ನಡಕದ ಮೇಲೆ ಹಚ್ಚಿದರೂ ಗೆರೆಗಳು ಮಾಸುತ್ತವೆ.

ಐ ಗ್ಲಾಸ್ ಗಳಿಗೆಂದೇ ಲಭ್ಯವಿರುವ ಗ್ಲಾಸ್ ಎಚಿಂಗ್ ಕಾಂಪೌಂಡ್ ಅನ್ನು ಹಚ್ಚಿದರೂ ಕನ್ನಡಕ ಹೊಸದಂತೆ ಕಾಣುತ್ತದೆ. ಆದರೆ ಇದನ್ನು ಹೆಚ್ಚು ಹಚ್ಚಬಾರದು. ಇದು ಗಾಜಿನ ಮೇಲೆ ಪರಿಣಾಮ ಬೀರುತ್ತದೆ.

ಪ್ಲಾಸ್ಟಿಕ್ ಐ ಗ್ಲ್ಯಾಸ್ ಗೆ ಘನ ಕೊಬ್ಬರಿ ಎಣ್ಣೆ ಅಥವಾ ಮೇಣ ಸೂಕ್ತ. ಕ್ಲೀನಿಂಗ್ ವ್ಯಾಕ್ಸನ್ನು ಹಚ್ಚಿ ಸ್ವಲ್ಪ ಸಮಯದ ನಂತರ ಒರೆಸಬಹುದು.

ಕನ್ನಡಕವನ್ನು ಫ್ರೀಝರ್ ನಲ್ಲಿಟ್ಟು ಸ್ವಲ್ಪ ಸಮಯದ ನಂತರ ತೆಗೆದು ಅದರ ಮೇಲಿನ ಐಸ್ ಗೆಡ್ಡೆಯನ್ನು ತೆಗೆದರೂ ಕನ್ನಡಕ ಫಳ ಫಳ ಹೊಳೆಯುತ್ತೆ.

ಇವುಗಳನ್ನು ಮಾಡಿ ನಿಮ್ಮ ಕನ್ನಡಕದ ಮೇಲಿನ ಸ್ಕ್ರಾಚ್ ಹೋಗಿಸಿ.

LEAVE A REPLY

Please enter your comment!
Please enter your name here