ಸ್ಮರಣ ಶಕ್ತಿ ಕಡಿಮೆ ಆಗಲು ಕಾರಣಗಳೇನು? ಅದನ್ನು ವೃದ್ಧಿಸಿಕೊಳ್ಳಲು ಏನು ಮಾಡಬೇಕು?

0
1132

ಸ್ಮರಣ ಶಕ್ತಿ ಕಡಿಮೆ ಆಗಲು ಕಾರಣಗಳೇನು? ಅದನ್ನು ವೃದ್ಧಿಸಿಕೊಳ್ಳಲು ಏನು ಮಾಡಬೇಕು?

ಇಂದಿನ ಮಕ್ಕಳಲ್ಲಿ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ನೆನಪಿನ ಶಕ್ತಿ ತುಂಬಾ ಕಡಿಮೆಯಾಗುತ್ತಿರುವುದು ಅತ್ಯಂತ ದುಃಖದ ವಿಷಯ. ಮಗು ಚಿಕ್ಕದಾಗಿರುವಾಗಲೇ ಓದಿದ ವಿಷಯಗಳನ್ನು ಮರುದಿನ ಕೇಳಿದರೆ ನೆನಪಿಲ್ಲ ಅನ್ನುವಂತೆ ಆಗಿದೆ. ಇದಕ್ಕೆ ಕಾರಣಗಳು ಹಲವಾರು. ಪರಿಹಾರವೂ ಇವೆ. ಆದರೆ ಈಗಿನ ಆಹಾರ ಕ್ರಮಗಳು ಸರಿಯಾಗಿಲ್ಲವಾದುದರಿಂದ ಯಾವ ಪರಿಹಾರವೂ ಸರಿಯಾಗಿ ಕೆಲಸ ಮಾಡಲಾರದು. ಕೆಲವರು ಹೇಳುವುದನ್ನು ಕೇಳಿರಬಹುದು. ನನಗೆ ಪರಚಯ ಇದೆ, ಆದ್ರೆ ಹೆಸರು ನೆನಪಿಗೆ ಬರುತ್ತಿಲ್ಲ ಎಂದು. ವಸ್ತುಗಳನ್ನು ಎಲ್ಲಿ ಇಟ್ಟಿದ್ದೇನೆ ಎಂದು ನೆನಪಿಲ್ಲ ಎಂದು. ನಮ್ಮ ಮಿದುಳಿನಲ್ಲಿ ತುಂಬಾ ಶಕ್ತಿ ಇರುತ್ತದೆ. ಆದ್ರೆ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ. ನಮ್ಮ ಮಿದುಳಿಗೆ ಎಷ್ಟು ಜಾಸ್ತಿ ಕೆಲಸ ಕೊಡುತ್ತೆವೆಯೋ ಅಸ್ಟು ಜಾಸ್ತಿ ಕೆಲಸ ಮಾಡುತ್ತದೆ.

ಮಕ್ಕಳಿಗೆ ಓದಲು ಆಸಕ್ತಿ ಇದೆ. ಆದ್ರೆ ಓದಲು ಆಗ್ತಾ ಇಲ್ಲ. ಉತ್ತಮ ಅಂಕ ಪಡೆಯುವ ಕನಸು ಕಾಣ್ತಿದ್ದಾರೆ. ಆದ್ರೆ ನೆನಪಿನ ಶಕ್ತಿ ಕಡಿಮೆ ಇದೆ. ಎಷ್ಟೇ ಓದಿದ್ರೂ ವಿಷಯ ನೆನಪಿನಲ್ಲಿರೋದಿಲ್ಲ ಎಂಬ ಸಮಸ್ಯೆ ಅನೇಕ ಮಕ್ಕಳನ್ನು ಕಾಡುತ್ತದೆ. ಪರೀಕ್ಷೆ ಹತ್ತಿರ ಬಂದಂತೆ ಮಕ್ಕಳ ಜೊತೆ ಪಾಲಕರು ಕೂಡ ಆತಂಕಕ್ಕೊಳಗಾಗ್ತಾರೆ. ಆದ್ರೆ ನೆನಪಿನ ಶಕ್ತಿ ಹೆಚ್ಚು ಮಾಡಿಕೊಂಡು ದುರ್ಬಲ ಮನಸ್ಸನ್ನು ಗಟ್ಟಿಯಾಗಿಸಿಕೊಳ್ಳೋದು ಕಷ್ಟದ ಕೆಲಸವಲ್ಲ.

ಚಿಕ್ಕ ಮಕ್ಕಳು ಕೂಡ ಕೈಲಿ ಮೊಬೈಲು ಹಿಡಿದುಕೊಂಡು ಆಡುತ್ತ ಕುಳಿತಿರುತ್ತಾರೆ. ಕಂಪ್ಯೂಟರ್ ಅಲ್ಲಿ ಆಡ್ತಾರೆ. ಇದು ಮಕ್ಕಳ ಮೆದುಳಿಗೆ ಬಹುಬೇಗ ಪರಿಣಾಮ ಬೀರುತ್ತದೆ.ಆದಸ್ಟು ಮೊಬೈಲ್, ಕಂಪ್ಯೂಟರ್ ನಿಂದ ದೂರವಿಡಿ. ಆಧುನಿಕ ಜೀವನ ಶೈಲಿ, ಒತ್ತಡ, ಅಥವಾ ಮುಂತಾದ ಕಾರಣಗಳಿಂದ ಮೆದುಳಿಗೆ ಆಯಾಸ ಆಗಬಹುದು, ಮೆದುಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಮೆದುಳಿಗೆ ವಿಶ್ರಾಂತಿಯ ಅಗತ್ಯವಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ಸರಿಯಾಗಿ ನಿದ್ರೆ ಮಾಡುವುದಿಲ್ಲ, ಹೆಚ್ಚು ಮೊಬೈಲ್ ಅನ್ನು ಬಳಸುವರು ಇದರಿಂದ ಮೆದುಳಿಗೆ ಮತಷ್ಟು ಆಯಾಸ ಆಗಬಹುದು.

ಪ್ರತಿಯೊಂದು ವಿಷಯಕ್ಕೂ ಕ್ಯಾಲ್ಕುಲೇಟರ್ ಅಥವಾ ಫೋನ್ ಅವಲಂಭಿಸುವ ಬದಲು ಬುದ್ಧಿ ಉಪಯೋಗಿಸಿದರೆ ಮೆದುಳು ಚುರುಕಾಗುವುದು. ಚಿಕ್ಕ ಪುಟ್ಟ ಲೆಕ್ಕಚಾರವನ್ನು ಯಾವುದೇ ಉಪಕರಣಗಳ ಸಹಾಯಪಡೆಯದೆ ನೀವೆ ಯೋಚಿಸಿ ಮಾಡಿ. ಶಾಪಿಂಗ್ ಗೆ ಹೋಗುವಾಗ ಮಾಡಬೇಕಾದ ಕೆಲಸಗಳನ್ನ್ನು ಲಿಸ್ಟ್ ಮಾಡಿಕೊಳ್ಳಿ. ಆದರೂ ನೀವೇ ನೆನಪಿಸಿಕೊಂಡು ಶಾಪಿಂಗ್ ಮಾಡಿ. ಆದರೂ ನೆನಪಿಗೆ ಬಾರದೆ ಇದ್ದರೆ ಮಾತ್ರ ಲಿಸ್ಟ್ ನೋಡಿ. ಆದಷ್ಟು ಬುದ್ಧಿ ಶಕ್ತಿ ಉಪಯೋಗಿಸಿ.

ಮಕ್ಕಳ ಸ್ಮರಣ ಶಕ್ತಿಯನ್ನು ಹೆಚ್ಚಿಸಲು ಹೀಗೆ ಮಾಡಿ.

 • ಒಣಹಣ್ಣುಗಳು
  ಒಣ ದ್ರಾಕ್ಷಿ, ಬಾದಾಮಿ, ಗೋಡಂಬಿ, ಖರ್ಜೂರ, ವಾಲ್ನಟ್ ನಂತಹ ಒಣ ಹಣ್ಣುಗಳನ್ನು ಸೇವಿಸುವುದರಿಂದ ಮಗುವಿನ ಸ್ಮರಣೆ ಶಕ್ತಿಯನ್ನು ಹೆಚ್ಚಿಸಬಹುದು. ಇವುಗಳಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ಮಗುವಿನ ಮೆದುಳು ಚುರುಕಾಗಿರುವಂತೆ ಮಾಡಲು ಸಹಾಯ ಮಾಡುತ್ತದೆ.
 • ಪುದೀನ
  ಪುದೀನ ಸುವಾಸನೆ ಮೆದುಳಿನ ಗ್ರಹಿಕೆ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಇದು ಮೆದುಳು ಲವಲವಿಕೆಯಿಂದ ಇರುವಂತೆ ಮಾಡುತ್ತದೆ. ಇದರ ಚಹಾವನ್ನು ಕುಡಿಯುವುದರಿಂದ ಹಲವು ಲಾಭಗಳನ್ನು ನೀವು ನಿಮ್ಮ ಮಗುವಿಗೆ ನೀಡಬಹುದು. ಕುದಿಯುತ್ತಿರುವ ನೀರಿಗೆ ಸ್ವಲ್ಪ ಒಣ ಪುದೀನ ಎಲೆಗಳನ್ನು ಸೇರಿಸಿ ಸುಮಾರು 20 ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಿ. ಇದಕ್ಕೆ ಸ್ವಲ್ಪ ನಿಂಬೆರಸ ಮತ್ತು ಸಕ್ಕರೆಯನ್ನು ಸೇರಿಸಿ ಕುಡಿಯಿಸಿ.
 • ಕೊಬ್ಬರಿ ಎಣ್ಣೆ
  ನಿಮ್ಮ ಆಹಾರದಲ್ಲಿ ಇತರೆ ರಾಸಾಯನಿಕಯುಕ್ತ ಎಣ್ಣೆಯನ್ನು ಬಳಸುವ ಬದಲು ನೈಸರ್ಗಿಕ ಕೋಬ್ಬರಿ ಎಣ್ಣೆಯನ್ನು ಬಳಸುವುದರಿಂದ ಹಲವು ಲಾಭಗಳನ್ನು ಪಡೆಯಬಹುದು. ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಇದ್ದು ಇದು ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ.
 • ಕುಂಬಳಕಾಯಿ ಬೀಜ
  ಇವುಗಳಲ್ಲಿ ಅಮೈನೋ ಆಮ್ಲಗಳು ಸಮೃದ್ಧವಾಗಿದ್ದು, ಮೆದುಳಿನ ನರಗಳು ಚಟುವಟಿಕೆಯಿಂದ ಸರಿಯಾಗಿ ಕೆಲಸ ಮಾಡುವಂತೆ ಮಾಡಲು ಸಹಾಯ ಮಾಡುತ್ತದೆ. ಇದು ಆತಂಕ ಕಡಿಮೆ ಮಾಡಲು ನೆರವಾಗುತ್ತದೆ
 • ಒಮೇಗಾತ್ರೀ: ಒಮೇಗಾತ್ರೀ ಫ್ಯಾಟಿ ಆ್ಯಸಿಡ್ ಇರುವ ಬೂತಾಯಿ, ಬಂಗುಡೆ ಮೀನುಗಳು, ಸೋಯಾಬೀನ್ ನೆನಪಿನ ಶಕ್ತಿ ವರ್ಧಿಸಲು ಸಹಾಯ ಮಾಡುತ್ತವೆ. ಮಧ್ಯಾಹ್ನದ ಊಟಕ್ಕೆ ಇವುಗಳನ್ನು ಸೇವಿಸಲು ನೀಡಿ.
  ಟೊಮ್ಯಾಟೋ, ಗಿಣ್ಣು (ಚೀಸ್), ಆಲಿವ್ ಆಯಿಲ್, ಹಸಿರೆಲೆಗಳನ್ನು ಸೇರಿಸಿ ಸಲಾಡ್ ಮಾಡಿಕೊಡಿ
  ವಿಟಾಮಿನ್ ಸಿ ಇರುವ ಪೇರಳೆ ಹಣ್ಣು, ನೆಲ್ಲಿಕಾಯಿ, ಮೂಸಂಬಿ, ಕಿತ್ತಳೆ ಮೊದಲಾದವುಗಳನ್ನು ತಿನ್ನುವುದು ಅಥವಾ ಜ್ಯೂಸ್ ಮಾಡಿ ಕುಡಿದರೆ ಒಳ್ಳೆಯದು
  ಅನೇಕ ಪೋಷಕಾಂಶಗಳಿರುವ ಮೊಟ್ಟೆ (ಪ್ರೋಟೀನ್, ಜಿಂಕ್, ವಿಟಾಮಿನ್ ಎ,ಡಿ,ಇ, ಬಿ12 ) ಸೇವಿಸುವುದು ಆರೋಗ್ಯಕ್ಕೂ, ನೆನಪಿನ ಶಕ್ತಿಗೂ ಉತ್ತಮ.
 • ವಿಟಾಮಿನ್ ಸಿ ಇರುವ ಮೂಸಂಬಿ, ಸೀಬೆಹಣ್ಣು, ನೆಲ್ಲಿಕಾಯಿ, ಕಿತ್ತಳೆ ಹಣ್ಣು ತಿನ್ನಬೇಕು ಇಲ್ಲವೇ ಇದರ ಜ್ಯೂಸ್ ಮಾಡಿ ಕುಡಿಯಬೇಕು.
 • ಒಂದು ಚೂರು ಹಸಿ ಶುಂಠಿ, ಸ್ವಲ್ಪ ಜೀರಿಗೆ ಮತ್ತು ಕಲ್ಲು ಸಕ್ಕರೆಯನ್ನು ಚೆನ್ನಾಗಿ ಅಗಿದು ತಿನ್ನುತ್ತಿದ್ದರೆ ನಾಲಿಗೆ ರುಚಿ ಹೆಚ್ಚುವುದರ ಜೊತೆ ಜ್ಞಾಪಕ ಶಕ್ತಿಯೂ ವೃದ್ಧಿಸುತ್ತದೆ.
 • ದಿನವೂ ಬೆಳಗ್ಗೆ ಬಾಳೆಹಣ್ಣನ್ನು ಮಕ್ಕಳು ತಿನ್ನುವುದು ಉತ್ತಮ. ಇದರ ಜೊತೆಗೆ ಬಾದಾಮಿ, ಗೋಡಂಬಿ, ನೆಲಕಡಲೆ ಇತ್ಯಾದಿ ತಿನ್ನಿಸಬೇಕು. ಇದರಿಂದ ಮಕ್ಕಳ ಸ್ಮರಣ ಶಕ್ತಿ ಹೆಚ್ಚುತ್ತದೆ.
 • ದಿನವೂ ಆಗಾಗ ಸ್ವಲ್ಪ ಸ್ವಲ್ಪ ನೆಲ್ಲಿಕಾಯಿಯನ್ನು ತಿನ್ನುತ್ತಿದ್ದರೆ ಜ್ಞಾಪಕ ಶಕ್ತಿ ಕ್ರಮೇಣ ಹೆಚ್ಚುತ್ತದೆ.
 • ಸಮುದ್ರದ ಮೀನಿನಲ್ಲಿರುವ ಒಮೆಗಾ 3 ಕೊಬ್ಬಿನಂಶವು ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಈ ಅಂಶವು ಆಹಾರದಿಂದ ಮಾತ್ರ ನಮ್ಮ ದೇಹ ಸೇರುವುದು.
 • ಹಾಲಿಗೆ ಏಲಕ್ಕಿ ಪುಡಿ ಸೇರಿಸಿ ಕುದಿಸಿ, ಜೇನು ತುಪ್ಪ ಬೆರೆಸಿ, ಮಕ್ಕಳಿಗೆ ಪ್ರತಿದಿನ ನೀಡಬೇಕು.
 • ಒಂದಲ್ಲ ಒಂದು ರೀತಿಯಲ್ಲಿ ಬಿಳಿ ಈರುಳ್ಳಿಯನ್ನು ದಿನಾಲು ಸೇವಿಸುವುದು ಒಳ್ಳೆಯದು.
 • ಒಂದೆಲಗದ ಸೇವನೆಯಂತೂ ಸ್ಮರಣ ಶಕ್ತಿ ಹೆಚ್ಚಿಸಲು ಹೇಳಿಮಾಡಿಸಿದ ಔಷಧ.
 • ಶುದ್ಧ ಆಕಳ ಹಾಲು 1 ಲೋಟ ಮತ್ತು 1 ಚಮಚ ಜೇನು ಪ್ರತಿದಿನರಾತ್ರಿ ಮಲಗುವಾಗ ಸೇವಿಸಬೇಕು
 • ಮೆಂತ್ಯೆ ಸೊಪ್ಪು, ಮೂಲಂಗಿಯನ್ನು ಸಣ್ಣಗೆ ಹೆಚ್ಚಿಕೊಂಡು ಎರಡನ್ನೂ ಮಿಶ್ರಣ ಮಾಡಿ ಅದಕ್ಕೆ ಉಪ್ಪು, ಮೆಣಸು, ಜೀರಿಗೆಯ ಒಗ್ಗರಣೆ ನೀಡಿ ಸೇವಿಸಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಇದನ್ನು ಹಸಿಯಾಗಿಯೂ ತಿನ್ನಬಹುದು, ಇಲ್ಲವೆಂದರೆ ಸ್ವಲ್ಪ ಬೇಯಿಸಿಯೂ ತಿನ್ನಬಹುದು.

ವಿಶೇಷ ಸಲಹೆ: ಮನೆ ಮದ್ದಿನ ಮೂಲಕ ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚುಮಾಡಬಹುದು.

ಮನೆ ಮದ್ದಿಗೆ ಬೇಕಾಗುವ ಪದಾರ್ಥಗಳು : 30 ಗ್ರಾಂ ಸುಲಿದ ಬಾದಾಮಿ, 30 ಗ್ರಾಂ ಗಸಗಸೆ, 14 ಗ್ರಾಂ ಏಲಕ್ಕಿ ಪುಡಿ, 1750 ಮಿಲಿಗ್ರಾಂ ಸ್ವರ್ಣ ಭಸ್ಮ.

ತಯಾರಿಸುವ ವಿಧಾನ : ಮೊದಲು ಬಾದಾಮಿ, ಗಸಗಸೆ, ಏಲಕ್ಕಿಯನ್ನು ಮಿಕ್ಸಿ ಮಾಡಿಕೊಳ್ಳಿ. ಇದಕ್ಕೆ ಸ್ವರ್ಣ ಭಸ್ಮವನ್ನು ಹಾಕಿ ಒಂದು ಪಾತ್ರೆಯಲ್ಲಿ ಮುಚ್ಚಿಡಿ. ಒಂದು ದಿನದ ನಂತ್ರ ಸೇವನೆ ಶುರುಮಾಡಿ. ಬೆಳಿಗ್ಗೆ ಹಾಗೂ ಸಂಜೆ 2,2 ಗ್ರಾಂ ಬೆಣ್ಣೆ ಮತ್ತು ಸಕ್ಕರೆ ಜೊತೆ ಸೇವನೆ ಮಾಡಲು ಕೊಡಿ. ನಂತ್ರ ಮಕ್ಕಳ ಮೇಲಾಗುವ ಪರಿಣಾಮ ಗಮನಿಸಿ.

LEAVE A REPLY

Please enter your comment!
Please enter your name here