ಅತ್ಯಂತ್ಯ ಶಕ್ತಿಶಾಲಿ ಎಂಟನೇ ಶತಮಾನದ ಶಿವನ ದೇಗುಲ

0
1434

ಶಿವನ ಅಂದ್ರೆ ಒಂದು ವಿಶೇಷ ಮತ್ತು ವಿಶಿಷ್ಟ ಆತನ ಶಕ್ತಿಗೆ ಜಗತ್ತೇ ಶಿರಭಾಗಿ ನಿಂತಿದೆ, ನಮ್ಮ ದೇಶದಲ್ಲಿ ಅದ್ರರಲ್ಲೂ ನಮ್ಮದೇ ರಾಜ್ಯದಲ್ಲಿ ಇರುವ ಅತ್ಯಂತ ಪ್ರಾಚೀನ ಕಾಲದ ಶಕ್ತಿಶಾಲಿ ಶಿವನ ದೇವಾಲಯಗಳ ಬಗ್ಗೆ ನಾವು ತಪ್ಪದೇ ತಿಳಿಯಬೇಕು ನಾವು ಒಮ್ಮೆ ಆದರು ಭೇಟಿ ಕೊಟ್ಟು ನಮ್ಮ ಜೀವನವನ್ನು ಪಾವನ ಮಾಡಿಕೊಳ್ಳಬೇಕು.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿರುವ ಒಂದು ಐತಿಹಾಸಿಕ ಸ್ಥಳ ಅಂದರೆ ಅದು ಬಳ್ಳಿಗಾವಿ. ಈ ಊರಿನಲ್ಲಿ ಸುಮಾರು 8 ನೇ ಶತಮಾನದಲ್ಲಿ ನಿರ್ಮಿಸಲಾದ ಅತ್ಯಂತ ಪುರಾತನವಾದ ಒಂದು ಶಿವನ ದೇವಾಲಯವಿದೆ. ಇಲ್ಲಿ ನೆಲೆಸಿರುವ ಶಿವನನ್ನು ಕೇದಾರನಾಥ, ಕೇದಾರೇಶ್ವರ ಅಂತೆಲ್ಲಾ ಕರೆಯುತ್ತಾರೆ. ಶಿಕಾರಿಪುರ ಪಟ್ಟಣದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಈ ಕೇದಾರನಾಥ್‌ ಕ್ಷೇತ್ರಕ್ಕೆ ದಕ್ಷಿಣದ ಕೇದಾರನಾಥನೆಂದೇ ಹೆಸರು. ಈ ದೇವಸ್ಥಾನವು ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಪ್ರಾರಂಭವಾಗಿ ಹೊಯ್ಸಳರ ಕಾಲದಲ್ಲಿ ಪೂರ್ಣಗೊಂಡಿತು ಎನ್ನಲಾಗುತ್ತಿದೆ.

ಶಿರಾಳಕೊಪ್ಪದಿಂದ ಕೇವಲ 3 ಕಿ.ಮೀ ದೂರದಲ್ಲಿರುವ ಈ ಪುಟ್ಟದಾದ ಊರು ಚಾಲುಕ್ಯ ಹಾಗೂ ಹೊಯ್ಸಳರ ಕಾಲದ ಸಾಕಷ್ಟು ದೇವಾಲಯಗಳನ್ನು ಒಳಗೊಂಡಿದೆ. ಶಿರಾಳಕೊಪ್ಪದ ಕೆರೆಯ ದಂಡೆಗೆ ಹೊಂದಿಕೊಂಡಂತಿರುವ ಈ ಕೇದಾರನಾಥ್‌ ದೇವಾಲಯ ತ್ರಿಕೂಟ ಶೈಲಿಯಲ್ಲಿದ್ದು ಮೂರು ಗೋಪುರಗಳನ್ನು ಹೊಂದಿದೆ. ಈ ಗೋಪುರದ ಮೇಲೆ ಶಿವ ಹಾಗೂ ವಿಷ್ಣುವಿನ ಅವತಾರಗಳಾದ ತಾಂಡವೇಶ್ವರ, ವರಾಹ, ಉಮಾ ನರಸಿಂಹ ಮತ್ತು ಭೈರವರ ಸೂಕ್ಷ್ಮವಾದ ಸುಂದರ ಕೆತ್ತನೆಗಳನ್ನು ನಾವು ಕಾಣಬಹುದಾಗಿದೆ. ಸಾಮಾನ್ಯವಾಗಿ ಕಲ್ಯಾಣಿ ಚಾಲುಕ್ಯರು ರಚಿಸಿದ ಎಲ್ಲ ದೇವಾಲಯಗಳು ಏಕ ಕೂಟ ಮತ್ತು ದ್ವಿಕೂಟದಲ್ಲಿದ್ದರೆ, ಈ ಕೇದಾರನಾಥ್‌ ದೇವಸ್ಥಾನ ತ್ರಿಕೂಟದಲ್ಲಿದೆ. ಈ ದೇವಸ್ಥಾನದಲ್ಲಿರುವ ಲಿಂಗವನ್ನು ಸ್ಥಾಪಿಸಿದ್ದು ಕಲ್ಯಾಣಿ ಚಾಲುಕ್ಯರು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಚಾಲುಕ್ಯರ ನಂತರ ಈ ದೇವಸ್ಥಾನವನ್ನು ಪೂರ್ಣಗೊಳಿಸಿದ್ದು ಹೊಯ್ಸಳರು. ಆಗ ಈ ದೇವಸ್ಥಾನದ ಶೈಲಿಯನ್ನು ತ್ರಿಕೂಟವನ್ನಾಗಿ ಬದಲಿಸಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕೆಲವೊಂದು ಬದಲಾವಣೆಗಳನ್ನು ನಾವಿಲ್ಲಿ ಕಾಣಬಹುದಾಗಿದೆ. ಸಳ ಮಹಾರಾಜ ಹುಲಿ ಕೊಲ್ಲುವ ದೃಶ್ಯದ ಕೆತ್ತನೆ ಗರ್ಭಗುಡಿಯ ಮುಂಭಾಗದ ಗೋಪುರದಲ್ಲಿ ರಾರಾಜಿಸುತ್ತಿದೆ. ದೇವಾಲಯದ ಮುಖಮಂಟಪ ದೇವಾಲಯಕ್ಕೆ ತಾಗಿಕೊಂಡು ಇಲ್ಲ. ಮುಖಮಂಟಪ ಮತ್ತು ದೇವಾಲಯಕ್ಕೆ ಸುಮಾರು 15 ಅಡಿಗಳಷ್ಟು ಅಂತರವಿದೆ. ಇಲ್ಲಿರುವ ಸುಖಾಸೀನದಲ್ಲೇ ನಂದಿ ಆಸೀನನಾಗಿದ್ದಾನೆ. ಶಿವನ ಇನ್ನಿತರ ದೇವಾಲಯಗಳಲ್ಲಿ ಮುಖ ಮಂಟಪದಲ್ಲಿ ನಂದಿ ವಿಗ್ರಹವಿದ್ದರೆ ಇಲ್ಲಿ ಸುಖನಾಸಿಯಲ್ಲಿದ್ದಾನೆ ಹೀಗಾಗಿ ಈ ದೇವಸ್ಥಾನದ ವಾಸ್ತುಶಿಲ್ಪ ಬದಲಾಗಿದೆ ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ.

ಸುಖನಾಸಿಯ ನಂತರ 44 ಕಂಬಗಳ ನವರಂಗ. ನವರಂಗದ ನಂತರ ಮೂರು ಗರ್ಭಗೃಹಗಳು. ಪ್ರಮುಖವಾದ  ಗರ್ಭಗೃಹದಲ್ಲಿ ಕೇದಾರನಾಥ್‌ ಲಿಂಗ ರೂಪದಲ್ಲಿ ನೆಲೆಸಿದ್ದಾನೆ. ಎಡಭಾಗಕ್ಕಿರುವ ಗರ್ಭಗೃಹದಲ್ಲಿ ವಿಷ್ಣುವಿನ ವಿಗ್ರಹ ಮತ್ತು ಬಲಭಾಗಕ್ಕಿರುವ ಗರ್ಭಗೃಹದಲ್ಲಿ ಬ್ರಹೆ¾àಶ್ವರನ ಲಿಂಗವಿದೆ. ನವರಂಗದಲ್ಲಿ 25 ಕ್ಕೂ ಹೆಚ್ಚು ಚಾಲುಕ್ಯ ಶೈಲಿಯ ಕೆತ್ತನೆ ಮಾಡಿದ ಸುಂದರವಾದ ಕಂಬಗಳನ್ನು ನೋಡಬಹುದು. ಇನ್ನು ಈ ದೇವಸ್ಥಾನದಲ್ಲಿ ಬ್ರಹ್ಮನ ನಾಲ್ಕುಮುಖವಿರುವ ಗ್ರಹವನ್ನೂ ಕೂಡ ನಾವು ನೋಡಬಹುದಾಗಿದೆ. ಇನ್ನು ದೇವಸ್ಥಾನದ ಒಳಭಾಗದ ಛಾವಣಿಯ ಮೇಲೆ ಸುಂದರವಾದ ಕಮಲದ ಕೆತ್ತನೆ ಇದ್ದರೆ, ಹೊರ ಮಂಟಪದ ಮೇಲ್ಭಾಗದ ಛಾವಣಿಯಲ್ಲಿ ಶಿವನ ತಾಂಡವ ನೃತ್ಯದ ಕೆತ್ತನೆ ಇದೆ. ಹಿಂದೆ ಹೊಯ್ಸಳರ ದೊರೆ ವಿಷ್ಣುವರ್ಧನನು ಈ ಪ್ರದೇಶಕ್ಕೆ ಬಂದಾಗ ಬಳ್ಳಿಗಾವಿಯವಳೇ ಆದ ನಾಟ್ಯ ರಾಣಿ ಶಾಂತಲೆಯನ್ನು ಮೆಚ್ಚಿ ಇಲ್ಲಿಯೇ ವಿವಾಹವಾದನಂತೆ. ನಂತರ ಈ ಪ್ರದೇಶವು ಹೊಯ್ಸಳರ ಆಡಳಿತಕ್ಕೆ ಒಳಪಟ್ಟಿತು ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here