ನಿಮ್ಮ ಮನೆಯಲ್ಲಿ ವಾಷಿಂಗ್ ಮಿಷನ್ ಇದ್ರೆ ಈ ಮಾಹಿತಿ ತಿಳಿದುಕೊಳ್ಳಿ

0
1598

ಇತ್ತೀಚಿನ ದಿನಗಳಲ್ಲಿ ಎಲ್ಲರೂ ಹೊರಗೆ ಕೆಲಸಕ್ಕೆ ಹೋಗುತ್ತೇವೆ ಎಂದು ಜೊತೆಗೆ ಆರೋಗ್ಯ ಸರಿಯಿಲ್ಲ ಎಂದು ಬಟ್ಟೆ ತೊಳೆಯಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಎಲ್ಲರೂ ವಾಷಿಂಗ್ ಮೆಷಿನ್ ಅನ್ನು ಬಳಸುತ್ತಾರೆ. ನಮ್ಮನ್ನು ಸುಂದರವಾಗಿ ಕಾಣುವಂತೆ ಹಾಗೂ ನಮ್ಮನ್ನು ಪ್ರತಿಬಿಂಬಿಸುವ ನಮ್ಮ ದಿನ ನಿತ್ಯದ ಬಟ್ಟೆಗಳನ್ನು ಸ್ವಚ್ಛಮಾಡುವ ಈ ವಾಷಿಂಗ್ ಮೆಷಿನ್ ಅನ್ನು ನಾವು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.

ಹಾಗಾದರೆ ವಾಷಿಂಗ್ ಮೆಷಿನ್ ಅನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಹೇಗೆ ಎಂದು ನೋಡೋಣ ಬನ್ನಿ.

ವಾಷಿಂಗ್ ಮೆಷಿನ್ ಅಲ್ಲಿ ಬಟ್ಟೆ ಒಗೆಯುವವರೆಗೆ ಸೋಪಿನ ನೀರು ಸ್ವಚ್ಛವಾಗಿರುತ್ತದೆ ಆದರೆ ತದ ನಂತರ ಬಟ್ಟೆಯ ಕೊಳೆಯಲ್ಲ ಸೇರಿ ನೀರಿನಲ್ಲಿ ಕೀಟಾಣುಗಳು ಹೆಚ್ಚು ಇರುತ್ತವೆ, ಅದನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು. ಅದು ಹೇಗೆಂದರೇ ಹಳೆಯ ಹಲ್ಲುಜ್ಜುವ ಬ್ರಷ್ ನ ಸಹಾಯದಿಂದ ಸೋಪಿನ ಹುಡಿ ಹಾಕುವ ಸ್ಥಳವನ್ನೂ ಸ್ವಚ್ಛಗೊಳಿಸಿ.

ವಾಷಿಂಗ್ ಮೆಷಿನ್ ನ ಫಿಲ್ಟರ್ ನಲ್ಲಿರುವ ಕೊಳೆಯನ್ನು ಆಗಾಗ ಸ್ವಚ್ಛಗೊಳಿಸಿ ಹಾಗೂ ಅದನ್ನು ವಾಷಿಂಗ್ ಮೆಷಿನ್ ನಿಂದ ತೆಗೆದು ಸ್ವಚ್ಛಗೊಳಿಸಿ.

ವಾಷಿಂಗ್ ಮೆಷೀನ್ ಅಂದ ಮೇಲೆ ಅದರಲ್ಲಿ ಸಾಕಷ್ಟು ರಂಧ್ರಗಳು ಮತ್ತು ಒಡಕುಗಳು ಇದ್ದೇ ಇರುತ್ತವೆ. ಇವುಗಳನ್ನೂ ಕ್ಲೀನ್ ಮಾಡದೇ ಹೋದರೇ ಒಳಗಿನ ರಂಧ್ರಗಳು ಹಾಳಾಗುತ್ತದೆ ಅದಕ್ಕಾಗಿ ಪ್ರತಿ ತಿಂಗಳು ಅಥವಾ ಕನಿಷ್ಟ ಎರಡು ತಿಂಗಳಿಗೆ ಒಮ್ಮೆಯಾದರೂ ಬರಿಯ ನೀರನ್ನಷ್ಟೇ ತುಂಬಿ ವಾಷಿಂಗ್ ಮೆಷಿನ್ಅನ್ನು ಆನ್ ಮಾಡಿ. ಸೋಡಾ ಕ್ರಿಸ್ಟಲ್ಸ್ ಗಳು ಅಥವಾ ಪಾತ್ರೆತೊಳೆಯುವ ರಾಸಾಯನಿಕಗಳು ಇದ್ದರೆ ಅದನ್ನೂ ಬಳಸಬಹುದು. ಇದು ಕೀಟಾಣುಗಳನ್ನು ನಾಶ ಪಡಿಸುತ್ತದೆ, ದುರ್ವಾಸನೆಯನ್ನು ದೂರ ಮಾಡುತ್ತದೆ ಹಾಗೂ ಮಾರ್ಜಕಗಳು ಹೋಗಿ ಒಂದೆಡೆ ಸೇರಿದ್ದರೆ ಅದನ್ನು ನಿರ್ಮೂಲನೆ ಮಾಡುತ್ತದೆ.

ವಾಷಿಂಗ್ ಮೆಷಿನ್ ಒಳಗೆ ಗಾಳಿಯಾಡದೇ ಇದ್ದರೆ ದುರ್ವಾಸನೆ ಹೆಚ್ಚು. ಹಾಗಾಗಿ ಪ್ರತಿ ಬಾರಿ ಬಳಸಿದ ನಂತರವೂ ಸ್ವಲ್ಪ ಬಾಗಿಲು ತೆರೆದಿಟ್ಟು ಗಾಳಿಯಾಡುವಂತೆ ಎಚ್ಚರ ವಹಿಸಿ.

ದ್ರವ್ಯಗಳ ಬದಲಿಗೆ ಪೌಡರ್ ಅನ್ನು ಬಳಸಿ. ದ್ರವ್ಯ ಮಾರ್ಜಕಗಳು ಮೆಷಿನ್ ನ ಒಳಭಾಗದಲ್ಲಿ ಸಂಗ್ರಹವಾಗಿ ದುರ್ವಾಸನೆ ಹೆಚ್ಚಿಸುವ ಸಾಧ್ಯತೆಗಳಿವೆ.

ಪ್ರತಿ ಬಾರಿ ವಾಷ್ ಮಾಡಿದ ನಂತರ ಒಂದು ಶುಭ್ರ ಬಟ್ಟೆಯಲ್ಲಿ ಒಳಗೆ ಮತ್ತು ಹೊರಗೆ ಹೊರೆಸಬೇಕು.

ವಾಷಿಂಗ್ ಮೆಷಿನ್ ನಲ್ಲಿ ಎಷ್ಟು ಸಾಧ್ಯವಿದೆ ಅಷ್ಟು ಮಾತ್ರ ಬಟ್ಟೆಗಳನ್ನು ವಾಷ್ ಮಾಡಿ.ಇಲ್ಲದ್ದಿದ್ದರೆ ಮೇಷನ್ ಹಾಳಾಗುತ್ತದೆ.

ಇವುಗಳನ್ನು ತಪ್ಪದೆ ಪಾಲಿಸುತ್ತ ನಿಮ್ಮ ವಾಷಿಂಗ್ ಮೆಷಿನ್ ಅನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ.

LEAVE A REPLY

Please enter your comment!
Please enter your name here