ಮನೆಯಲ್ಲೇ ಟೊಮೇಟೊ ಬೆಳೆಯುವುದು ಸುಲಭ ತಿಳಿದುಕೊಳ್ಳಿ

0
985

ಕೆಲವು ಮನೆಗಳಲ್ಲಿ ಟೊಮೊಟೊ ಇಲ್ಲದೆ ಅಡುಗೆಯೇ ಆಗುವುದಿಲ್ಲ. ಟೊಮ್ಯಾಟೋ,ಎಲ್ಲರಿಗೂ ಬೇಕಾಗಿರುವ ಹಾಗೂ ಎಲ್ಲರೂ ತಿನ್ನುವ ಅತ್ಯುತ್ತಮ ತರಕಾರಿಗಳಲ್ಲೊಂದು. ಟೊಮೇಟೊ ನಲ್ಲಿ ದೇಹಕ್ಕೆ ಬೇಕಾಗುವ ಅತ್ಯಂತ ಪೌಷ್ಟಿಕಾಂಶ ಇದೆ, ಅದಕ್ಕೆ ಪ್ರತಿ ನಿತ್ಯದ ರಸಂ ನಲ್ಲಿ ಟೊಮೇಟೊ ಇದ್ದೆ ಇರುತ್ತೆ, ಒಮ್ಮೆಮ್ಮೆ ಅಂಗಡಿಯಲ್ಲಿ ಟೊಮೇಟೊ ಬೆಲೆ ಕೇಳಿದ್ರೆ ತಲೆ ತಿರುಗಿ ಬರುತ್ತೆ ಅಷ್ಟು ದುಬಾರಿ ಆಗುತ್ತೆ, ಅದಕ್ಕೆ ಮನೆಯಲ್ಲೇ ಸುಲಭವಾಗಿ ಬೆಳೆಯುವ ವಿಧಾನ ತಿಳಿದುಕೊಳ್ಳೋಣ.

ರಸಭರಿತವಾದ ಈ ಕೆಂಪು ತರಕಾರಿ ವಿಶ್ವದಾದ್ಯಂತ ಅನೇಕ ಭಕ್ಷ್ಯಗಳಲ್ಲಿ ಒಂದು ಪ್ರಮುಖ ಪದಾರ್ಥವಾಗಿ ಬಳಸಲಾಗುತ್ತದೆ. ಟೊಮೆಟೊವಿನ ರುಚಿ ಮತ್ತು ಪರಿಮಳ ಸ್ವಲ್ಪ ಹುಳಿ ಮತ್ತು ಸಿಹಿಯಾಗಿರುತ್ತದೆ. ಈ ರೀತಿ ಎಲ್ಲರಿಗೂ ಇಷ್ಟವಾಗುವ ಟೊಮೆಟೊ, ಹಾಚ್ಚಾಗಿ ಬೇಸಿಗೆ ಕಾಲದಲ್ಲಿ ಬೆಳೆಯುತ್ತದೆ. ಟೊಮ್ಯಾಟೊ ಬೆಳೆಗೆ ಬೆಚ್ಚಗಿನ ಪರಿಸರ ಮತ್ತು ಸೂರ್ಯನ ಶಾಖ ಅಗತ್ಯ. ಆದ್ದರಿಂದ ಚಳಿಗಾಲದ ಋತು ಟೊಮ್ಯಾಟೊ ಬೆಳೆಗೆ ಅನುಕೂಲಕರವಾಗಿಲ್ಲ.

ಚಳಿಗಾಲದಲ್ಲಿ , ಮಾರುಕಟ್ಟೆಯಲ್ಲಿ ಲಭ್ಯವಿರುವ ಟೊಮ್ಯಾಟೊ ಹೆಚ್ಚಾಗಿ ರಾಸಾಯನಿಕಗಳು ಅಥವಾ ಹೈಬ್ರಿಡ್ ತಂತ್ರಜ್ಞಾನ ಬಳಸಿ ಬೆಳೆಯಲಾಗುತ್ತದೆ . ಅಂತಹ ಟೊಮ್ಯಾಟೊ ನೈಸರ್ಗಿಕ ರುಚಿಯನ್ನು ನೀಡುವುದಿಲ್ಲ. ಚಳಿಗಾಲದಲ್ಲಿ ಟೊಮ್ಯಾಟೊ ಬೆಳೆಯುವುದು ಕಷ್ಟವಾದರೂ ಸ್ಪಲ್ಪ ಹೆಚ್ಚು ಗಮನ ನೀಡಿದರೆ ನೀವು ನಿಮ್ಮ ಮನೆಯ ಹಿಂಭಾಗದ ತೋಟದಲ್ಲಿಯೇ ಟೊಮೆಟೊ ಬೆಳೆಯಬಹುದು .

ಚಳಿಗಾಲದಲ್ಲಿ ಟೊಮ್ಯಾಟೊ ಬೆಳೆಯುವುದು ಕಠಿಣ ಕೆಲಸ. ಆದರೂ ಮುನ್ನೆಚ್ಚರಿಕೆಗಳನ್ನು ಕೈಗೊಂಡು ನಿಮ್ಮ ತೋಟದಲ್ಲಿ ಟೊಮ್ಯಾಟೊ ಬೆಳೆಯುವ ಕೆಲಸವನ್ನು ನೀವು ಆನಂದಿಸಬಹುದು. ಆಗಷ್ಟೇ ಕೊಯ್ಲು ಮಾಡಿದ ಟೊಮೆಟೊ ರುಚಿ ಸಾರ್ವಕಾಲಿಕ ನಿಮ್ಮ ಪ್ರಯತ್ನದ ಮೌಲ್ಯವನ್ನು ಹೆಚ್ಚಿಸುವಂತದ್ದು. ಟೊಮ್ಯಾಟೊ ಬೆಳೆಯಲು ಹಲವಾರು ಮಾರ್ಗಗಳಿವೆ. ಅವುಗಳನ್ನು ನೋಡೋಣ.

ಟೊಮೆಟೊ ಬೆಳೆಯಲ್ಲಿ ಹಲವಾರು ವಿಧಾನಗಳಿವೆ. ಒಂದೇ ಸಮಯದಲ್ಲಿ 3 ರಿಂದ 4 ಪ್ರಭೇದಗಳನ್ನು ಬಳಸಿ. ಟೊಮ್ಯಾಟೋ ಬೆಳೆ ಬಹಳ ಸೂಕ್ಷ್ಮವಾಗಿದ್ದು, ತಾಪಮಾನ ಮತ್ತು ಸುತ್ತಮುತ್ತಲಿನ ಪರಿಸರ ಇದರ ಮೇಲೆ ನೇರ ಪರಿಣಾಮ ಬೀರುತ್ತದೆ. ಬಹಳಷ್ಟು ವಿವಿಧ ಗಿಡಗಳನ್ನು ನಿಮ್ಮ ಪ್ರದೇಶದ ನೈಸರ್ಗಿಕ ಪರಿಸ್ಥಿತಿಗಳಿಗೆ ಸೂಕ್ತವಾಗಿವೆಯೇ ಎಂಬುದನ್ನು ಗುರುತಿಸಿ ಆಯ್ಕೆ ಮಾಡಿ.

ಟೊಮ್ಯಾಟೊ ಬೆಳೆಗೆ ಹೆಚ್ಚಾಗಿ ಸೂರ್ಯನ ಬೆಳಕು ಅಗತ್ಯ. ಚಳಿಗಾಲದಲ್ಲಿ ಸೂರ್ಯನ ಬೆಳಕು ಟೊಮ್ಯಾಟೊಗೆ ಸಾಕಾಗುವುದಿಲ್ಲ . ಟೊಮ್ಯಾಟೋ ಬೆಳೆಗೆ ಕನಿಷ್ಠ ಪ್ರಾರಂಭಿಕ ಹಂತದಲ್ಲಿ ಬೆಳಕು ಸಾಕಷ್ಟು ಅಗತ್ಯವಿದೆ.

ಈ ಸಮಯದಲ್ಲಿ ನೀವು ಪ್ರತಿ ದಿನ 10-12 ಬಾರಿ ಸಸಿಗಳಿಗೆ ಕೃತಕ ಬೆಳಕನ್ನು ನೀಡಬಹುದು. ಸಾಕಷ್ಟು ಬೆಳಕಿನ ಪ್ರಮಾಣ ಈ ಸಸ್ಯದ ಮೇಲೆ ಬಿದ್ದರೆ ಇದರ ಬೆಳವಣಿಗೆ ಹೆಚ್ಚುತ್ತದೆ. ಸಸ್ಯ, ಸಸಿ ಹಂತದಿಂದ ಬೆಳೆಯುತ್ತಿದ್ದಂತೆ ಒಮ್ಮೆ ಸೂರ್ಯನ ಉತ್ತಮ ಬೆಳಕು ಈ ಸಸಿಯ ಮೇಲೆ ಬೀಳುವಂತೆ ಮನೆಯ ವರಾಂಡಕ್ಕೆ ಸ್ಥಳಾಂತರಿಸಬೇಕು.ಇಲ್ಲವೇ ನೀವು ಹಸಿರು ಮನೆಯ ಅಡಿಯಲ್ಲಿ ಟೊಮ್ಯಾಟೊ ಬೆಳೆಯನ್ನು ಬೆಳೆದರೆ ಕೃತಕ ಬೆಳಕಿನ ಶಾಖವನ್ನು ನೀಡುವ ಅಗತ್ಯ.

ಟೊಮ್ಯಾಟೊ ಬೆಳೆ ಬೆಚ್ಚಗಿನ ಮತ್ತು ಬಿಸಿ ವಾತಾವರಣದಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಆದರೆ ಚಳಿಗಾಲದಲ್ಲಿ ಮಣ್ಣು ಅಷ್ಟು ಬೆಚ್ಚಗಿರುವುದಿಲ್ಲ. ಸಸ್ಯಗಳು ಉಷ್ಣತೆ ಒದಗಿಸಲು ಯಾವುದೇ ನಿರೋಧಕ ವಸ್ತುವನ್ನು ಮಣ್ಣಿನ ರಕ್ಷಣೆಗೆ ಬಳಸಬಹುದು. ಈ ವಿಧಾನವನ್ನು ಸಸಿಯ ತಯಾರಿಕೆಯ ಹಂತದಲ್ಲಿ ಮಾಡಬೇಕು. ಸಾಮಾನ್ಯ ಪ್ಲಾಸ್ಟಿಕ್ ಹಾಳೆಗಳು ಒಂದು ನಿರೋಧಕವಾಗಿ ಬಳಸಬಹುದು. ಪ್ಲಾಸ್ಟಿಕ್ ಹಾಳೆ ಮಣ್ಣಿನಲ್ಲಿ ಶಾಖ ಉಳಿಸಿಕೊಳ್ಳಲು ಸಹಾಯಮಾಡುತ್ತದೆ. ಇದು ಚಳಿಗಾಲದಲ್ಲಿ ಟೊಮೆಟೊ ಬೆಳೆಯಲು ಸಹಾಯ ಮಾಡುತ್ತದೆ.

ಟೊಮ್ಯಾ ಟೊ ಬೆಳೆಗೆ ಮೊದಲೇ ಹೇಳಿದಂತೆ ಬೆಚ್ಚಗಿನ ಪರಿಸರದ ಅಗತ್ಯವಿದೆ. ಆದ್ದರಿಂದ, ಆಳವಾಗಿ ಮಣ್ಣಿನಲ್ಲಿ ಸಸಿಗಳನ್ನು ಹೂತು ಬೆಳೆಯಬೇಕು. ಇದು ನೀವು ಚಳಿಗಾಲದಲ್ಲಿ ಆರೋಗ್ಯಕರ ಟೊಮೆಟೊ ಬೆಳೆಯಲು ಸಹಾಯ ಮಾಡುತ್ತದೆ. ಈ ವಿಧಾನವನ್ನು ಬಳಸುವಾಗ, ಸಸಿಗಳನ್ನು ತುಂಬಾ ಹತ್ತಿರ ನೆಡಬಾರದು. ಏಕೆಂದರೆ ಸಸ್ಯ ಬೆಳವಣಿಗೆ ಇದರಿಂದ ಕುಂಠಿತವಾಗುವ ಸಾಧ್ಯತೆಗಳಿರುತ್ತವೆ.

ಟೊಮ್ಯಾಟೊ ಸಸ್ಯಗಳನ್ನು ಬೆಳೇಸುವಾಗ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಹಸಿ ಗೊಬ್ಬರ ಪದರವನ್ನು ಸರಿಯಾದ ಸಮಯದಲ್ಲಿ ಆಯಕಟ್ಟಿನಲ್ಲಿ ಬೆಳೆಸಬೇಕು. ಇದು ಮಣ್ಣಿನ ಗುಣಮಟ್ಟವನ್ನು ಸುಧಾರಿಸುತ್ತದೆ ಆದರೆ ಅದೇ ಸಮಯದಲ್ಲಿ ಮಣ್ಣಿನ ಶಾಖವನ್ನು ಕಡಿಮೆ ಮಾಡುತ್ತದೆ. ಹಸಿ ಗೊಬ್ಬರದ ಪದರದಿಂದಾಗಿ ಮಣ್ಣು ಬೆಚ್ಚಗಿರಲು ಸಾಧ್ಯವಿಲ್ಲ. ಇದರಿಂದ ಚಳಿಗಾಲದಲ್ಲಿ ಟೊಮ್ಯಾಟೊ ಬೆಳೆಯುವುದು ಕಷ್ಟವಾಗುತ್ತದೆ.

ಟೊಮ್ಯಾಟೊ ಸಸ್ಯಗಳಿಗೆ ಹಸಿಗೊಬ್ಬರವನ್ನು ಆರಂಭಿಕ ಹಂತದಲ್ಲಿ ಬಳಸದೇ ಸಸ್ಯ ಉತ್ತಮ ಮಟ್ಟದಲ್ಲಿ ಬೆಳೆದ ನಂತರ ಈ ಹಸಿಗೊಬ್ಬರ ಬಳಸುವುದು ಉತ್ತಮ,

ಇವುಗಳನ್ನು ಪಾಲಿಸಿ ನಿಮ್ಮ ಮನೆಯ ಗಾರ್ಡನ್ ಅಲ್ಲೇ ಆರೋಗ್ಯಕರವಾದ ಟೊಮ್ಯಾಟೊವನ್ನು ಬೆಳೆದು ನಿಮ್ಮ ಪರಿಶ್ರಮಕ್ಕೆ ಉತ್ತಮ ಫಲವನ್ನು ಕಂಡುಕೊಳ್ಳಿ.ಜೊತೆಗೆ ಯಾವುದೇ ಔಷಧಿಯನ್ನು ಬಳಸದೆ ನೈಸರ್ಗಿಕವಾದ ಆರೋಗ್ಯಕ್ಕೆ ಉತ್ತಮವಾದ ಟೊಮೊಟೊ ವನ್ನು ಬಳಸಿ.

LEAVE A REPLY

Please enter your comment!
Please enter your name here