ಆಭರಣಗಳ ಸ್ವಚ್ಚತೆ ಮನೆಯಲ್ಲೇ ಮಾಡಿ

0
1020

ಎಲ್ಲರಿಗೂ ಆಭರಣಗಳನ್ನು ಧರಿಸಲು ತುಂಬಾ ಇಷ್ಟ ಪಡುತ್ತಾರೆ. ಅದರಲ್ಲೂ ಮಹಿಳೆಯರಿಗೆ ಆಭರಣಗಳನ್ನು ಕಂಡರೆ ಬೇರೆ ಏನು ಬೇಕಾಗಿರುವುದಿಲ್ಲ. ಅಷ್ಟು ಆಭರಣ ಪ್ರಿಯರು . ಆದರೆ ನಾವು ಧರಿಸುವ ಆಭರಣಗಳು ಬೇಗ ಧೂಳು. ಕೊಳೆ ತುಂಬಿಕೊಂಡು ನೋಡಲು ಸಹ ಆಗುವುದಿಲ್ಲ. ಅಷ್ಟು ಕೊಳೇ ತುಂಬಿಕೊಂಡು ಕಪ್ಪಾಗಿರುತ್ತವೇ. ಅದಕ್ಕಾಗಿ ಈ ಒಡವೆಗಳನ್ನು ಸ್ವಚ್ಛಗೊಳಿಸಲು ನಾವು ಅಂಗಡಿಗಳ ಬಳಿ ತೆಗೆದು ಕೊಂಡು ಹೋಗುತ್ತವೆ. ಆದರೆ ಅವರು ಇಷ್ಟ ಬಂದ ರೀತಿಯಲ್ಲಿ ದುಡ್ಡು ಹೇಳಿ ಮಾಡಿಕೊಡುತ್ತಾರೆ. ಜೊತೆಗೆ ಎಲ್ಲಿ ಆಭರಣಗಳನ್ನು ಬದಲಿಸುತ್ತಾರೋ ಎಂಬ ಭಯ ಕೂಡ ಇರುತ್ತದೆ. ಆದರೂ ನಾವುಗಳು ವಿಧಿ ಇಲ್ಲದೆ ಮಾಡಿಸಲೇ ಬೇಕಾಗುತ್ತದೆ.

ಆದರೆ ನಾವು ಆಭರಣಗಳನ್ನು ಪಳ ಪಳ ಹೊಳೆಯುವ ರೀತಿಯಲ್ಲಿ ನಮ್ಮ ಮನೆಯಲ್ಲೇ ನಾವೇ ನಮ್ಮ ಆಭರಣಗಳನ್ನು ಸ್ವಚ್ಛ ಮಾಡಿಕೊಳ್ಳಬಹುದು. ಅದು ಹೇಗೆ ಎಂದು ಯೋಚಿಸುತ್ತಾ ಇದ್ದಿರ ಬನ್ನಿ ತಿಳಿದುಕೊಳ್ಳಿ.

ನಮ್ಮ ಮನೆಯಲ್ಲಿಯೇ ಇರುವ ಗೃಹೋಪಯೋಗೀ ಸಾಧನಗಳಾದ ಆಮ್ಲ ಪ್ರತಿಬಂಧಕ. ಅಲ್ಯೂಮಿನಿಯಂನ ಹಾಳೆ ಮತ್ತು ವಿನೆಗರ್ ಇವುಗಳನ್ನು ಬಳಸಿಕೊಂಡು ನಮ್ಮ ಆಭರಣಗಳನ್ನು ಸ್ವಚ್ಚಗೊಳಿಸಿಕೊಳ್ಳಬಹುದು. ಅದು ಹೇಗೆ ನೋಡೋಣ.

ಹರಳುಗಳು ಮತ್ತು ಮುತ್ತುಗಳುಳ್ಳ ಆಭರಣಗಳಿಗೆ ರಾಸಾಯನಿಕ ಹಾಗೂ ಇತರ ಕಠಿಣವಾದ ಉಜ್ಜುವಿಕೆಯಂತಹ ಸಾಧನಗಳನ್ನು ಉಪಯೋಗಿಸಿ ಸ್ವಚ್ಚಗೊಳಿಸಬೇಡಿ.ಇದಕ್ಕೆ ಸೋಪು ಮತ್ತು ನೀರನ್ನು ಮಾತ್ರವೇ ಉಪಯೋಗಿಸಿರಿ.

ವಜ್ರಗಳಿಂದ ಕೂಡಿರುವ ಆಭರಣವನ್ನು ಸ್ವಚ್ಛಮಾಡಲು ಸ್ವಲ್ಪ ಬೆಚ್ಚಗಿನ ನೀರು ಮತ್ತು ಸ್ವಲ್ಪ ಅಮೋನಿಯಾ ಮಿಶ್ರಣದ ದ್ರಾವಣದಲ್ಲಿ 15 ನಿಮಿಷಗಳ ಕಾಲ ಒಡವೆಗಳನ್ನು ನೆನೆಸಿ ನಂತರ ಒಂದು ನಯವಾದ ಕೂದಲುಗಳುಳ್ಳ ಟೂಥ್ ಬ್ರಶ್ ಅನ್ನು ಉಪಯೋಗಿಸಿಕೊಂಡು, ಉಳಿದಿರುವ ಧೂಳನ್ನು, ವಿಶೇಷವಾಗಿ ಆಭರಣದ ಕುಸುರಿ ಕೆಲಸದ ಭಾಗಗಳಲ್ಲಿ ಮತ್ತು ಆಭರಣದ ಅಡಿಭಾಗದಲ್ಲಿನ ಧೂಳನ್ನು ತಿಕ್ಕಿ ತೆಗೆಯಬಹುದು.

ಚಿನ್ನ ಮತ್ತು ಹರಳುಗಳ ಆಭರಣಗಳನ್ನು ಸುಲಭವಾಗಿ ಸ್ವಚ್ಚ ಮಾಡವ ವಸ್ತು ಬಿಳಿ ವಿನೆಗರ್ ಇದನ್ನು ಒಂದು ಡಬ್ಬಿಗೆ ಹಾಕಿ ಅದರ ಒಳಗೆ ನಮ್ಮ ಆಭರಣವನ್ನು ಇಟ್ಟು ಸುಮಾರು 20 ನಿಮಿಷಗಳ ಕಾಲ ಹಾಗೆಯೇ ಇಟ್ಟುಬಿಡಬೇಕು ಹಾಗೂ ಮಧ್ಯೆ ಮಧ್ಯೆ ಸ್ವಲ್ಪ ಮಟ್ಟಿಗೆ ಆ ಅಲುಗಾಡಿಸುತ್ತಿರಬೇಕು. ನಂತರ ಆಭರಣವನ್ನು ಹೊರತೆಗೆದು, ಅಗತ್ಯವೆನಿಸಿದರೆ ನಯವಾದ ಕೂದಲುಳ್ಳ ಟೂಥ್ ಬ್ರಶ್ ನಿಂದ ಉಜ್ಜಬೇಕು.

ನಮ್ಮ ಹೊಟ್ಟೆಯನ್ನು ಅಮ್ಲಪ್ರಕೋಪದಿಂದ ಶಮನಗೊಳಿಸಲು ಕೆಲಸ ಮಾಡುವ ಆಮ್ಲ ಪ್ರತಿಬಂಧಕದ ಬುರುಗು ಅಥವಾ ನೊರೆಯ ಶಕ್ತಿಯು, ನಮ್ಮ ಆಭರಣಗಳನ್ನೂ ಕೂಡ ಸ್ವಚ್ಚ ಮಾಡಿಬಿಡಬಲ್ಲದು. ಈ ಆಮ್ಲ ಪ್ರತಿಬಂಧಕದ ಎರಡು ಗುಳಿಗೆಗಳನ್ನು ಬೆಚ್ಚಗಿನ ನೀರಿರುವ ಲೋಟದಲ್ಲಿ ಹಾಕಿ, ನೊರೆಯುoಟಾಗುವoತೆ ಮಾಡಿ. ಅದಕ್ಕೆ ನಮ್ಮ ಆಭರಣವನ್ನು ಎರಡು ನಿಮಿಷಗಳ ಕಾಲ ಇಟ್ಟು ನಂತರ ಹೊರತೆಗೆದು ತೊಳೆಯಬೇಕು.

ನಮ್ಮ ಬೆಳ್ಳಿಯ ಪಾತ್ರೆಗಳನ್ನು ತೊಳೆಯಲು ಉಪಯೋಗಿಸುವ ರೀತಿಯಲ್ಲಿಯೇ, ನಮ್ಮ ಕಾಂತಿಯನ್ನು ಕಳೆದುಕೊಂಡ ಬೆಳ್ಳಿಯ ಆಭರಣಗಳನ್ನು ಸ್ವಚ್ಚ ಗೊಳಿಸಲು ಅಲ್ಯೂಮಿನಿಯಂನ ತೆಳುವಾದ ಹಾಳೆಯನ್ನು ಬಳಸಬಹುದು. ಅಲ್ಯೂಮಿನಿಯಂ ನ ಒಂದು ಚೂರಿನಿಂದ, ಒಂದು ಟ್ರೇಯ ಮೇಲೆ ರೇಖೆಯನ್ನು ಎಳೆದು, ನಮ್ಮ ಬೆಳ್ಳಿಯ ಆಭರಣಗಳನ್ನು ಆ ರೇಖೆಯ ಮೇಲಿಡಿರಿ. ನಮ್ಮ ಆಭರಣದ ಮೇಲೆ ಈಗ ಅಡುಗೆ ಸೋಡಾದ ಒಂದು ಪದರವನ್ನು ಚಿಮುಕಿಸಿರಿ, ನಂತರ ಕುಡಿಯುವ ನೀರನ್ನು ಅದರ ಮೇಲೆ ನಿಧಾನವಾಗಿ ಸುರಿಯಿರಿ. ನಮ್ಮ ಆಭರಣದ ಮೇಲಿದ್ದ ಕಲೆಗಳು ಈಗ ಅಲ್ಯೂಮಿನಿಯಂ ನ ಚೂರಿಗೆ ವರ್ಗಾಯಿಸಲ್ಪಡುತ್ತವೆ. ನಮ್ಮ ಆಭರಣದ ಎಲ್ಲಾ ಭಾಗಗಳೂ ಕೂಡ ಅಲ್ಯೂಮಿನಿಯಂ ನ ಸಂಪರ್ಕಕ್ಕೆ ಬರುವಂತೆ ಅದನ್ನು ನಡುನಡುವೆ ಅತ್ತಿತ್ತ ಚಲಿಸುತ್ತಿರಬೇಕಾಗಬಹುದು. ಇದಾದ ನಂತರ ನಮ್ಮ ಆಭರಣವನ್ನು ತೆಗೆದು ನೀರಿನಿಂದ ತೊಳೆಯಬೇಕು.

ಮುತ್ತುಗಳು ಮತ್ತು ಪೂರ್ಣಪ್ರಮಾಣದ ಆಭರಣಗಳಲ್ಲದ, ನಾಜೂಕಾದ ಮತ್ತು ರಂಧ್ರಗಳಿರುವ ಅಲಂಕಾರಿಕ ವಸ್ತುಗಳನ್ನು ಸ್ವಚ್ಚಗೊಳಿಸಲು, ಅವುಗಳು ಅತ್ಯುತ್ತಮವಾದ ರೀತಿಯಲ್ಲಿ ಕಾಣುವಂತೆ ಮಾಡಲು ನಮಗೆ ಸೋಪು ಮತ್ತು ನೀರಿನ್ನು ಹೊರತುಪಡಿಸಿ ಬೇರಾವುದರ ಅವಶ್ಯಕತೆಯೂ ಇರುವುದಿಲ್ಲ.

ಒಂದು ಲೋಟ ಬೆಚ್ಚಗಿನ ನೀರು ಮತ್ತು ಕೆಲವು ಹನಿಗಳಷ್ಟು ಹದವಾದ ಮಾರ್ಜಕಗಳ ಮಿಶ್ರಣವುಳ್ಳ ದ್ರಾವಣವೊಂದರಲ್ಲಿ ನಮ್ಮ ಮುತ್ತುಗಳ ಹಾರವನ್ನು ಕೂಡಲೇ ಅದ್ದುವುದರ ಮೂಲಕ ಸ್ವಚ್ಚಗೊಳಿಸಬಹುದು.

ನಮ್ಮ ಹಾರದ ಪ್ರತಿಯೊಂದು ಮುತ್ತನ್ನೂ ಸಹ ಒಂದು ತೆಳುವಾದ, ಒಣ ಹತ್ತಿ ಬಟ್ಟೆಯನ್ನು ಉಪಯೋಗಿಸಿ ಒರೆಸಬೇಕು ಮತ್ತು ಆ ಮಾಲೆಯನ್ನು ನೆಲದ ಮೇಲಿಟ್ಟು ಒಣಗಲು ಬಿಡಬೇಕು.

ಪೂರ್ಣ ಪ್ರಮಾಣವಲ್ಲದ ಆಭರಣಗಳನ್ನು ಸ್ವಚ್ಚಗೊಳಿಸಲು ಸೋಪಿನ ಅವಶ್ಯಕತೆಯೂ ಇಲ್ಲ. ನಯವಾದ ಕೂದಲುಗಳುಳ್ಳ ಒಂದು ಟೂಥ್ ಬ್ರಶ್ ಅನ್ನು ಹಾಗೆಯೇ ಸುಮ್ಮನೆ ಬೆಚ್ಚಗಿನ ನೀರಿನಲ್ಲಿ ಒಮ್ಮೆ ಅದ್ದಿ ತೆಗೆದು ಆ ಆಭರಣದ ಕಲ್ಲುಗಳನ್ನು ಉಜ್ಜಿಬಿಡಿರಿ. ನಂತರ ಒಂದು ಸ್ವಚ್ಚವಾದ ಬಟ್ಟೆಯಿಂದ ಅದನ್ನು ಒರೆಸಿ ಒಣಗಿಸಿ ತದನಂತರ ಅದನ್ನು ಒಳಗಿಡುವ ಮೊದಲು ಕೆಲವು ಘಂಟೆಗಳ ಕಾಲ ಗಾಳಿಯಲ್ಲಿ ಒಣಗಲು ಬಿಡಬೇಕು.

ಮಹಿಳೆಯರು ತಮ್ಮ ಕೂದಲಿನ ಒಳಪಿಗೆ ಪಳಸುವ ಅಂಟು ಬಳ್ಳಾದ ಕಾಯಿಯನ್ನು ಚೆನ್ನಾಗಿ ಕೆಚ್ಚಿ ಬಿಸಿನೀರಿಗೆ ಹಾಕಿ ಹಲ್ಲಾಡಿಸಿದರೆ ನೊರೆ ಬರುತ್ತದೆ ಅದರ ಒಳಗೆ ಆಭರಣಗಳನ್ನು ಹಾಕಿ 30 ನಿಮಿಷ ಬಿಟ್ಟು ತೊಳೆಯಬೇಕು.

ನಮ್ಮ ಬೆಳ್ಳಿ ಆಭರಣಗಳನ್ನು ತೊಳೆಯಲು ನಾವು ಹಲ್ಲು ಸ್ವಚ್ಛ ಮಾಡಲು ಬಳಸುವ ಟೂತ್ ಫೆಸ್ಟ್ ಅನ್ನು ಒಂದು ಮೆತ್ತನೆಯ ಬ್ರೆಸ್ಗೆ ಹಾಕಿಕೊಂಡು ಉಜ್ಜಿದರೆ ಪಳ ಪಳ ಹೊಳೆಯುತ್ತವೆ.

ತಿಳಿದಿರಲ್ಲ ಹೇಗೆ ನಮ್ಮ ಆಭರಣಗಳನ್ನು ನಮ್ಮ ಮನೆಯಲ್ಲಿಯೇ ಸ್ವಚ್ಛಮಾಡಬಹುದು ಎಂದು. ಅದಕ್ಕಾಗಿ ನೀವು ಸಹ ಆಭರಣಗಳನ್ನು ಅಂಗಡಿಗೆ ತೆಗೆದುಕೊಂಡು ಹೋಗುವ ಬದಲು ನೀವೇ ಸ್ವಚ್ಛಮಾಡಿಕೊಳ್ಳಿ.

LEAVE A REPLY

Please enter your comment!
Please enter your name here