ಕೂದಲು ಉದುರುವುದು, ಆರೈಕೆ, ಹಾಗೂ ಪೋಷಣೆ ಹೇಗೆ?

0
1272

ಕೂದಲು ಉದುರುವುದು, ಆರೈಕೆ, ಹಾಗೂ ಪೋಷಣೆ ಹೇಗೆ?

ನಮಗೆ ನಮ್ಮ ಕೂದಲು ಅತ್ಯಂತ ಪ್ರಿಯವಾದದ್ದು. ಸ್ವಲ್ಪ ಉದರಿದರೂ ಸಹಿಸಲಾಗದು. ಕೂದಲು ಉದುರುವ ಸಮಸ್ಯೆಯನ್ನು ಹೋಗಲಾಡಿಸಲು ಏನೆಲ್ಲಾ ಮಾಡಬಹುದು ಅನ್ನೋದನ್ನು ನೋಡೋಣ. ನಮ್ಮಲ್ಲಿ ನೈಸರ್ಗಿಕವಾಗಿ ಸಿಗುವ ನೆಲ್ಲಿಕಾಯಿ, ಸೀಗೆಕಾಯಿ, ದಾಸವಾಳ, ಮದರಂಗಿ, ಅಂಟವಾಳಕಾಯಿ, ನಿಂಬೆ ರಸ, ಮೊಸರು ಇವುಗಳನ್ನು ಬಳಸಿಕೊಂಡು ಕೂದಲ ಪೋಷಣೆಯನ್ನು ಸುಲಭವಾಗಿ ಮನೆಯಲ್ಲೇ ಮಾಡಿಕೊಳ್ಳಬಹುದು. ಅದಕ್ಕಾಗಿ ಸಾವಿರಾರು ರೂ.ಗಳನ್ನು ಖರ್ಚು ಮಾಡುವ ಅಗತ್ಯವಿಲ್ಲ.

೧. ಪ್ರೋಟೀನ್ ಭರಿತ ಆಹಾರಗಳಾದ ಈಸ್ಟ್, ಮಾಂಸ, ಮೊಟ್ಟೆ, ಮೀನು, ಸೊಪ್ಪುಗಳನ್ನು ತಿನ್ನುವುದರಿಂದ, ಹಾಲು ಕುಡಿಯುವುದರಿಂದ ತಲೆಹೊಟ್ಟು ಕಡಿಮೆಯಾಗುವುದರ ಜೊತೆಗೆ ಕೂದಲು ಕೂಡ ಸೊಂಪಾಗಿ ಬೆಳೆಯುತ್ತದೆ.

೨. ಕೂದಲು ಉದುರುವುದು, ತಲೆಹೊಟ್ಟು, ತಲೆ ತುರಿಕೆಯ ಸಮಸ್ಯೆ ಇದ್ದಲ್ಲಿ ನೆಲ್ಲಿಕಾಯಿಯನ್ನು ಪೇಸ್ಟ್ ಮಾಡಿ ಕೊಬ್ಬರಿ ಎಣ್ಣೆಯೊಂದಿಗೆ ಕುದಿಸಿ ತಲೆಗೆ ಹಚ್ಚಬಹುದು. ಅಥವಾ ನೆಲ್ಲಿಕಾಯಿ ಪೇಸ್ಟ್ ನ್ನು ಮೊಸರಿನೊಂದಿಗೂ ಸೇರಿಸಿ ಹಚ್ಚಬಹುದು.

೩. ಮೊಸರಿನೊಂದಿಗೆ ಜೇನುತುಪ್ಪ, ನಿಂಬೆರಸ ಬೆರೆಸಿ ತಲೆಗೆ ಹಚ್ಚುವುದರಿಂದ ತಲೆ ಕೂದಲು ಉದುರುವುದು ಕಡಿಮೆಯಾಗುವುದು‌.

೪. ವಾರಕ್ಕೊಮ್ಮೆ ಮೆಹಂದಿಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲ ಶೈನಿಂಗ್ ಹೆಚ್ಚಾಗುತ್ತದೆ.

೫. ತಲೆ ಸ್ನಾನ ಮಾಡಿದ ಬಳಿಕ ಸ್ವಲ್ಪ ನೀರಿಗೆ ಸ್ವಲ್ಪ ವಿನೇಗರನ್ನು ಹಾಕು ಕೂದಲಿಗೆ ಸವರುವುದರಿಂದ ಕೂದಲು ಮೃದುವಾಗುವುದು.

೬. ವಾರಕ್ಕೊಮ್ಮೆ ಮೆಂತೆ ಪೇಸ್ಟನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ದಪ್ಪವಾಗಿ ಬೆಳೆಯುತ್ತದೆ.

೭. ಮೊಟ್ಟೆಯ ಬಿಳಿಬಾಗವನ್ನು ಕೂದಲಿಗೆ ಹಚ್ಚಿ ಅರ್ದ ಗಂಟೆಯ ಬಳಿಕ ಸ್ನಾನ ಮಾಡಿ. ತಲೆಯ ಕೂದಲು ನಯವಾಗಿ ಬೆಳೆಯುತ್ತದೆ.

೮. ಕೂದಲು ಕಪ್ಪಾಗಿ ಬೆಳೆಯಲು ಅಗಾಗ ಹರಳೆಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ ನಂತರ ತಲೆ ಸ್ನಸನ ಮಾಡಿ.

೯.ಕೂದಲಿಗೆ ಅಲೋವೆರಾ ಹಚ್ಚುವುದರಿಂದ ಕೂದಲಿಗೆ ವಿಟಾಮಿನ ಬಿ ದೊರೆಯುತ್ತದೆ. ಅದರಿಂದ ಕೂದಲು ಕವಲೊಡೆಯುವುದು ನಿಲ್ಲುತ್ತದೆ.

೧೦. ದಾಸವಾಳದ ಎಲೆಯನ್ನು ಅಥವಾ ಬಿಳಿದಾಸವಾಳದ ಹೂವನ್ನು ಪೇಸ್ಟ್ ಮಾಡಿ ಮೊಸರಿನೊಂದಿಗೆ ಕಲಸಿ ಕೂದಲಿಗೆ ಹಚ್ಚಿ. ನಿಮ್ಮ ಕೂದಲು ಕಪ್ಪಾಗಿ ದಪ್ಪಾವಾಗಿ ಬೆಳೆಯುತ್ತದೆ.

೧೧. ಕೂದಲು ಒಣಗಿದಂತಾಗುವುದನ್ನು ತಡೆಗಟ್ಟಲು ವಾರಕ್ಕೊಮ್ಮೆ ತೆಂಗಿನ ಹಾಲನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡುತ್ತಿರಿ.

೧೨. ಅಂಗಡಿಯಲ್ಲಿ ಸಿಗುವ ಕೆಮಿಕಲ್ ಭರಿತ ಶ್ಯಾಂಪೂ ಬಳಸುವ ಬದಲು ನೈಸರ್ಗಿಕವಾಗಿ ಸಿಗುವ ಅಂಟವಾಳಕಾಯಿಯನ್ನು ನೀರಿನಲ್ಲಿ ನೆನೆಯಿಸಿ ನಂತರ ಆ ನೀರಿನಿಂದ ಸ್ನಾನ ಮಾಡಿ. ಇದು ಶ್ಯಾಂಪೂ ತರ ಕೆಲಸ ಮಾಡುತ್ತದೆ.

೧೩. ಅಷ್ಟೇ ಅಲ್ಲ ಸೀಗಾಕಾಯಿಯ ಪುಡಿಯನ್ನು ಹಾಕಿ ಕೂಡ ತಲೆಸ್ನಾನ ಮಾಡಬಹುದು. ಇದು ನಿಮ್ಮ ಕೂದಲನ್ನು ಉದುರದಂತೆ ತಡೆಗಟ್ಟುತ್ತದೆ.

೧೪. ಆದಷ್ಟು ಹೇರ್ ಡ್ರೈಯರ್ ನಿಂದ ದೂರವಿರಿ. ಅದು ನಮ್ಮ ಕೂದಲನ್ನು ಇನ್ನಷ್ಟು ಉದುರುವಂತೆ ಮಾಡುತ್ತದೆ.

೧೫. ಕೂದಲಿಗೆ ಮಲಗುವ ಸಮಯದಲ್ಲಿ ತೆಂಗಿನ ಎಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ಕ್ರಮೇಣ ಕೂದಲು ಸೊಗಸಾಗಿ ಉದ್ದವಾಗಿ ಬೆಳೆಯುತ್ತದೆ.

LEAVE A REPLY

Please enter your comment!
Please enter your name here