ಗೋಬಿ ಬಟಾಣಿ ಸೈಡ್ ರೆಸಿಪಿ

0
1070

ನಮ್ಮ ಭಾರತೀಯ ಅಡುಗೆಯಲ್ಲಿ ಪ್ರತಿಯೊಂದು ತರಕಾರಿಗಳಿಗೂ ಅದರದ್ದೇ ಆದ ರುಚಿ ಸ್ವಾದ ನಾವೀನ್ಯತೆ ಇದೆ. ಬೇರೆ ಬೇರೆ ತರಕಾರಿಗಳನ್ನು ಬಳಸಿಕೊಂಡು ರುಚಿಕರ ಮತ್ತು ಸ್ವಾದಿಷ್ಟ ವ್ಯಂಜನಗಳನ್ನು ನಮಗೆ ತಯಾರಿಸಿಕೊಳ್ಳಬಹುದು. ಇಂದು ನಾವು ನಿಮಗಿಲ್ಲಿ ಉಣಬಡಿಸುತ್ತಿರುವ ತರಕಾರಿ ಡಿಶ್ ಕಾಲಿಫ್ಲವವರ್ ಅಥವಾ ಗೋಬಿ ಬಟಾಣಿ ಸೈಡ್ ಡಿಶ್ ಆಗಿದೆ. ಕಾಲಿಫ್ಲವರ್ ಅಧಿಕ ಪ್ರೋಟೀನ್ ಹಾಗೂ ನ್ಯೂಟ್ರಿನ್‌ಗಳನ್ನು ಹೊಂದಿದೆ. ಇದರಲ್ಲಿರುವ ಬೇಟಾ-ಕ್ಯಾರೊಟೀನ್ ಹಾಗೂ ಫೈಟೋನ್ಯೂಟ್ರಿಯೆಂಟ್ಸ್ ರೋಗವನ್ನು ದೂರವಿರಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಪಾಕ ಪದ್ಧತಿಯನ್ನೇ ಸೊಗಸಾಗಿಸುವ ಗುಣ ಗೋಬಿಗಿದೆ. ಇದರಿಂದ ಸುಲಭ ಸರಳ ಹಾಗೂ ರುಚಿಕರವಾದದ್ದನ್ನು ತಯಾರಿಸಬೇಕೆಂಬ ಇಚ್ಛೆ ನಿಮಗಿದ್ದರೆ ಇಲ್ಲಿದೆ ಗೋಬಿ ಬಟಾಣಿ ರೆಸಿಪಿ. ಇದನ್ನು ತಯಾರಿಸಿ ನಿಮ್ಮ ಊಟದ ವೈಭೋಗವನ್ನು ಹೆಚ್ಚಿಸಿಕೊಳ್ಳಿ.

ಪ್ರಮಾಣ: 3 ಜನರಿಗೆ ಸಾಕಾಗುವಷ್ಟು
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 25-30 ನಿಮಿಷಗಳು

ಸಾಮಾಗ್ರಿಗಳು :
1.ಗೋಬಿ ಎಸಳುಗಳು – 250 ಗ್ರಾಂಗಳು
2.ಬಟಾಣಿ – 100 ಗ್ರಾಂ
3.ಹಸಿಮೆಣಸು – 2-3 (ಕತ್ತರಿಸಿದ್ದು)
4.ಅರಶಿನ – 1ಟೇಸ್ಪೂನ್
5.ಮೆಣಸಿನ ಹುಡಿ – 1 ಟೇಸ್ಪೂನ್
6.ಕೊತ್ತಂಬರಿ ಹುಡಿ – 1/2 ಟೇಸ್ಪೂನ್
7.ಗರಂ ಮಸಾಲಾ – 1ಟೇಸ್ಪೂನ್
8.ಜೀರಿಗೆ – 1 ಟೇಸ್ಪೂನ್
9.ಬೇ ಲೀಫ್ – 1
10.ಉಪ್ಪು ರುಚಿಗೆ ತಕ್ಕಷ್ಟು
11.ಎಣ್ಣೆ – 1ಟೇಸ್ಪೂನ್

ವಿಧಾನ :
1.ಗೋಬಿ ಎಸಳುಗಳನ್ನು ಬಿಸಿ ನೀರಿನಲ್ಲಿ 20 -25 ನಿಮಿಷಗಳ ಕಾಲ ನೆನೆಸಿಡಿ. ಹೀಗೆ ಮಾಡುವುದರಿಂದ ಗ್ಯಾಸ್ ಉತ್ಪತ್ತಿಯಾಗುವುದಿಲ್ಲ. ಅಲ್ಲದೆ ಬಿಸಿ ನೀರಿನಲ್ಲಿ ಗೋಬಿಯನ್ನು ನೆನೆಸಿಡುವುದು ಅಡುಗೆಗೆ ಸುಲಭವಾಗುತ್ತದೆ.
2.ಪ್ಯಾನ್ ಅನ್ನು ಗ್ಯಾಸ್ ಮೇಲೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಜೀರಿಗೆ ಬೇ ಲೀಫ್‌ನ ಒಗ್ಗರಣೆ ಮಾಡಿಕೊಳ್ಳಿ.
3.ಇದೀಗ ಗೋಬಿಯನ್ನು ಪ್ಯಾನ್‌ಗೆ ಹಾಕಿ. ಸಣ್ಣ ಉರಿಯಲ್ಲಿ 2 ನಿಮಿಷ ಬೇಯಿಸಿಕೊಳ್ಳಿ.
4.ಅರಶಿನ ಹುಡಿ ಮತ್ತು ಉಪ್ಪು ಸೇರಿಸಿಕೊಳ್ಳಿ. ಇದು ಅಡುಗೆಯನ್ನು ಸುಲಭ ಹಾಗೂ ವೇಗಗೊಳಿಸುತ್ತದೆ.
5.ಎಲ್ಲವನ್ನೂ ಸೌಟಿನಲ್ಲಿ ಮಿಶ್ರ ಮಾಡಿಕೊಂಡು ಗೋಬಿ ಸ್ವಲ್ಪ ಬೇಯುವವರೆಗೆ ಹಾಗೂ ಕಂದು ಬಣ್ಣಕ್ಕೆ ತಿರುಗುವವರೆಗೆ 8-10 ನಿಮಿಷ ಬೇಯಿಸಿಕೊಳ್ಳಿ.
6.ಹಸಿರು ಬಟಾಣಿ, ಹಸಿಮೆಣಸನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. 2 ನಿಮಿಷಗಳಷ್ಟು ಕಾಲ ಬೇಯಿಸಿಕೊಳ್ಳಿ.
7.ಇದೀಗ ಮೆಣಸಿನ ಹುಡಿ, ಗರಂ ಮಸಾಲಾ ಮತ್ತು ಕೊತ್ತಂಬರಿ ಹುಡಿಯನ್ನು ಸೇರಿಸಿ. ಸ್ವಲ್ಪ ಇವುಗಳನ್ನು ಬೇಯಿಸಿಕೊಳ್ಳಿ ನಂತರ ಗ್ಯಾಸ್ ಆಫ್ ಮಾಡಿ. ಗೋಬಿ ಬಟಾಣಿ ಪಲ್ಯ ಸವಿಯಲು ಸಿದ್ಧಗೊಂಡಿದೆ. ಬಿಸಿ ಬಿಸಿಯಾಗಿ ಅನ್ನ, ಚಪಾತಿ, ನಾನ್‌ನೊಂದಿಗೆ ಸೇವಿಸಿ.

LEAVE A REPLY

Please enter your comment!
Please enter your name here