ಘಾಟಿ ಸುಬ್ರಹ್ಮಣ್ಯದ ವಿಶೇಷತೆ ಏನು? ಈ ಸ್ಥಳಕ್ಕೆ ಈ ಹೆಸರು ಬರಲು ಕಾರಣ ಎನು? ಇಲ್ಲಿದೆ ಉತ್ತರ.
ಘಾಟಿ ಸುಬ್ರಹ್ಮಣ್ಯವು ದೊಡ್ಡಬಳ್ಳಾಪುರದಿಂದ ೧೪ ಕಿ.ಮೀ, ಬೆಂಗಳೂರಿನಿಂದ ೫೧ ಕಿ.ಮೀ ದೂರದಲ್ಲಿದೆ.ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರ. ಇಲ್ಲಿ ಸುಬ್ರಹ್ಮಣ್ಯ ದೇವರನ್ನು ನಾಗ ರೂಪದಲ್ಲಿ ಆರಾಧಿಸಲಾಗುತ್ತದೆ. 600 ವರುಷಕ್ಕೂ ಹೆಚ್ಚು ಹಳೆಯದಾಗಿರುವ ಈ ದೇವಾಲಯವನ್ನು ಕಟ್ಟಿಸಿದ್ದು ಬೆಳ್ಳಾರಿ ಬಳಿ ಇರುವ ಸಂಡೂರಿನ ಗೋರ್ಫಡೆ ರಾಜರು.
ಸುಬ್ರಹ್ಮಣ್ಯ ಸ್ವಾಮಿ ಮತ್ತು ನರಸಿಂಹ ಸ್ವಾಮಿ ಇಲ್ಲಿನ ಮುಖ್ಯ ದೇವರುಗಳಾಗಿದ್ದು, ಈ ದೇವಾಲಯ ಮುಕ್ತಿ ಸ್ಥಳಗಳಲ್ಲಿ ಒಂದು ಎಂದು ಪ್ರಖ್ಯಾತಿ ಪಡೆದಿದೆ. ಈ ದೇವಾಲಯಕ್ಕೆ ಮೆರುಗು ಕೊಡುವುದಕ್ಕೆ ಆದಿ ಶೇಷನ ಮತ್ತು ವಾಸುಕಿಯ ಮೂರ್ತಿಗಳಿವೆ. ಗರ್ಭ ಗುಡಿಯ ಮುಂದೆ ಆಕರ್ಷಿಣೀಯವಾಗಿರುವಂಥ ಗರುಡ ಸ್ಥಂಭ ಒಂದಿದೆ.
ವಿಶೇಷವೆಂದರೆ, ಇಲ್ಲಿನ ದೇವರುಗಳು ಒಂದೇ ಮೂರ್ತಿಯಲ್ಲಿದ್ದು, ಒಂದರ ಹಿಂದೆ ಒಂದಿದೆ. ಸುಬ್ರಹ್ಮಣ್ಯ ಸ್ವಾಮಿ ದೇವರ ಪ್ರತಿಮೆ ಮುಂದೆ ಇದ್ದರೆ, ಲಕ್ಷ್ಮೀ ನರಸಿಂದ ಸ್ವಾಮಿಯ ಪ್ರತಿಮೆ ಅದರ ಹಿಂಭಾಗದಲ್ಲಿದೆ. ಲಕ್ಷ್ಮೀ ನರಸಿಂಹ ದೇವರ ದರುಶನವನ್ನು ಎದುರಲ್ಲೇ ತೂಗು ಹಾಕಿರುವ ಕನ್ನಡಿಯ ಮುಖಾಂತರ ಮಾಡ ಬಹುದು.
ಪುರಾಣಗಳ ಪ್ರಕಾರ, ತಾರಕಾಸುರ ಎಂಬ ರಾಕ್ಷಸನನ್ನು ಸುಬ್ರಹ್ಮಣ್ಯ ಸ್ವಾಮಿ ಕೊಂದಿದ್ದರಿಂದ ಈ ಸ್ಥಳಕ್ಕೆ ಘಾಟಿ ಸುಬ್ರಹ್ಮಣ್ಯ ಎಂದು ಹೆಸರು ಬಂದಿದೆ. ದೇವಸ್ಥಾನದ ಪುರಾಣಗಳ ಪ್ರಕಾರ, ಸುಬ್ರಹ್ಮಣ್ಯ ಸ್ವಾಮಿ ತಾರಕಾಸುರ ಎಂಬ ರಾಕ್ಷಸನನ್ನು ಕೊಲ್ಲಲು ಸರ್ಪದ ರೂಪದಲ್ಲಿ, ಒಂದು ಗುಹೆಯಲ್ಲಿ ಕೂತು ತಪಸ್ಸನ್ನು ಮಾಡಿದ್ದರು. ಈ ಗುಹೆ, ಈಗ ನೆಲೆಸಿರೋ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಬೆಟ್ಟದ ಸಾಲಿನಲ್ಲಿತ್ತು. ಸುಬ್ರಹ್ಮಣ್ಯ ಸ್ವಾಮಿ ಈ ಬೆಟ್ಟದ ಮಧ್ಯೆದಲ್ಲಿ ಕೂತು ತಪಸ್ಸು ಮಾಡಿ ತಾರಕಾಸುರನನ್ನು ಕೊಂದಿದ್ದಕ್ಕ, ಈ ದೇವಸ್ಥಾನಕ್ಕೆ ಘಾಟಿ ಸುಬ್ರಹ್ಮಣ್ಯ ಎಂದು ಹೆಸರು ಬಂದಿದೆ ಎಂಬ ನಂಬಿಕೆ ಇದೆ.
ಬಹಳ ವಿಶೇಷಗಳನ್ನು ಹೊಂದಿರುವ ಈ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಸುಸೂತ್ರವಾಗಿ ನೆರವೇರಿದ ನಂತರ ಬಹುತೇಕ ದಂಪತಿಗಳಿಗೆ ಮಕ್ಕಳಾಗಿದ್ದಾರೆ.
ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.