ಮನೆಯಲ್ಲಿ ನಿಂಬು ಬೆಳೆಯುವುದು ತುಂಬಾ ಸುಲಭ

0
912

ಸಿಟ್ರಸ್ ಹಣ್ಣುಗಳ ತೋಟಗಾರಿಕೆ ಮನೆಯಲ್ಲೇ ಬೆಳೆಯುವುದು ತುಂಬಾ ಸರಳ ಮತ್ತು ಸುಲಭ

ನಮ್ಮ ಪ್ರತಿದಿನದ ಅಡುಗೆಯಲ್ಲಿ ಅದಕ್ಕಿಂತ ಹೆಚ್ಚಾಗಿ ನಮ್ಮ ಜೀವನದಲ್ಲಿ ನಮ್ಮ ಸಹಭಾಗಿಯಂತೆ, ನಮ್ಮ ಜೊತೆಗಾರನಂತೆ ಸಿಟ್ರಸ್‌ನ್ನು ನೆಚ್ಚಿಕೊಂಡಿದ್ದೇವೆ. ಸಿಟ್ರಸ್ ಹಣ್ಣುಗಳು ನಮ್ಮ ಆಹಾರ ಮತ್ತು ಪಾನೀಯಗಳಲ್ಲಿ ಪರಿಪೂರ್ಣ ರುಚಿಯನ್ನು ನೀಡುವ ಕಾರಣಕ್ಕೆ ಮಾತ್ರವಲ್ಲ, ಇದರಲ್ಲಿರುವ ವಿಟಮಿನ್ ಸಿ ಅತ್ಯುತ್ತಮ ಮೂಲದಿಂದಾಗಿ ಇವು ಪರಿಣಾಮಕಾರಿ ಮನೆಯ ಮದ್ದುಗಳಾಗಿಯೂ ಕೆಲಸ ಮಾಡುತ್ತವೆ.

ಆಂಟಿ ಆಕ್ಸಿಡೆಂಟ್ಸ್ ವಾಹಕಗಳವಾಗಿರುವ ಸಿಟ್ರಸ್ ಹಣ್ಣುಗಳು ಸೂರ್ಯನ ಕಿರಣಗಳಿಂದ ಉಂಟಾಗುವ ಚರ್ಮದ ಹಾನಿ, ಇದರಿಂದ ಉಂಟಾಗಬಹುದಾದ ಕ್ಯಾನ್ಸರ್, ಹೃದಯ ರೋಗಗಳು ಹೀಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತವೆ.

ಸಿಟ್ರಸ್ ಹಣ್ಣುಗಳ ತಾಜಾರಸದಿಂದ ನಮ್ಮ ಪಾನೀಯಗಳು ಮತ್ತು ಆಹಾರ ವಸ್ತುಗಳನ್ನು ತಯಾರಿಸುತ್ತೇವೆ. ತಮ್ಮ ಆರೋಗ್ಯ ಪ್ರಯೋಜನಗಳು ಮತ್ತು ತಾಜಾ ಪರಿಮಳದಿಂದಾಗಿ ಸಿಟ್ರಸ್ ಹಣ್ಣುಗಳನ್ನು ಬಹುಮುಖ ಪ್ರತಿಭೆಯ ಹಣ್ಣುಗಳು ಎಂದು ಪರಿಗಣಿಸಲಾಗಿದೆ ಮತ್ತು ಹೀಗೆ ಪ್ರಪಂಚದಾದ್ಯಂತ ಜನಪ್ರಿಯವಾಗಿದೆ. ಜೊತೆಗೆ ಸಿಟ್ರಸ್ ಮರ ಅಲಂಕಾರಿಕ ಮರವಾಗಿಯೂ ಕೂಡ ಜನಪ್ರಿಯವಾಗಿವೆ ಸಿಟ್ರಸ್ ಹಣ್ಣುಗಳು ಪ್ರಭೇದಗಳಲ್ಲಿ ಸಾಮಾನ್ಯವಾಗಿ ಹೆಚ್ಚು ತಿಳಿಯಲ್ಪಟ್ಟಿರುವ ಸಿಟ್ರಸ್ ಹಣ್ಣುಗಳೆಂದರೆ: ನಿಂಬೆ, ಕಿತ್ತಳೆ, ಟ್ಯಾಂಜೆಲೊ, ದ್ರಾಕ್ಷಿ.

ಈ ಸಿಟ್ರಸ್ ಹಣ್ಣುಗಳ ತೋಟಗಾರಿಕೆ ಹೇಗೆ ಮಾಡುವುದು ತಿಳಿಯೋಣ..

ಸಿಟ್ರಸ್ ಮರಗಳು ಕನಿಷ್ಠ ಐದು ಗಂಟೆಗಳ ಕಾಲ ಸೂರ್ಯನ ಬೆಳಕನ್ನು ಪಡೆಯಬೇಕು. ಆದ್ದರಿಂದ ಕಿತ್ತಳೆ/ನಿಂಬೆ ಗಿಡದ ತೋಟಗಾರಿಕೆ ಮಾಡಬೇಕಾದರೆ, ನಿಮ್ಮ ಮರ ಯಶಸ್ವಿಯಾಗಿ ಬೆಳೆಯಲು ಒಂದು ಪ್ರಕಾಶಮಾನವಾದ ಬಿಸಿಲು ಬೀಳುವ ಸ್ಥಳವನ್ನೇ ಆಯ್ಕೆ ಮಾಡಿಕೊಂಡು ವಸಂತ ಋತುವಿನಲ್ಲಿ ಸಾಮಾನ್ಯವಾಗಿ ಸಿಟ್ರಸ್ ಸಸ್ಯಗಳು ಬೆಳೆಯಲು ಆದ್ಯತೆ ನೀಡಲಾಗುತ್ತದೆ. ಕಿತ್ತಳೆ ಮರಗಳನ್ನು ಬೆಳೆಯಲು ದೊಡ್ಡ ಹಿತ್ತಲಿನ ಅಗತ್ಯವಿಲ್ಲ ಇದು ಸಾಮಾನ್ಯವಾಗಿ 3 ರಿಂದ 5 ಅಡಿ ಎತ್ತರದಲ್ಲಿ ಬೆಳೆಯುತ್ತವೆ.

ಕುಬ್ಜ ಜಾತಿಯ ಸಿಟ್ರಸ್ ಮರಗಳು ಸಾಮಾನ್ಯವಾಗಿ ಕುಂಡಗಳಲ್ಲಿಯೇ ಚೆನ್ನಾಗಿ ಬೆಳೆಯುತ್ತವೆ. ಚಳಿಗಾಲದ ರಾತ್ರಿ ಸಮಯದಲ್ಲಿ, ತೀವ್ರ ಶೀತ ಹವಾಮಾನದಿಂದ ಸಸ್ಯಕ್ಕೆ ಉಂಟಾಗುವ ಹಾನಿಯನ್ನು ತಪ್ಪಿಸಲು ಕುಂಡಗಳನ್ನು ಮನೆಯೊಳಗೆ ಇಡುವುದು ಒಳ್ಳೆಯದು.

ಒಂದು ಕುಂಡದಲ್ಲಿ ಕುಬ್ಜ ಸಿಟ್ರಸ್ ಸಸ್ಯವನ್ನು ಬೆಳೆಸಲು ಸೂರ್ಯನ ಪ್ರಕಾಶ ಬೀಳುವ ಸ್ಥಳದಲ್ಲಿಯೇ ಕುಂಡವನ್ನಿಟ್ಟರೆ ಸಸ್ಯ ಚೆನ್ನಾಗಿ ಬೆಳೆಯಲು ಸಾಧ್ಯ. ಆದಾಗ್ಯೂ, ಕುಂಡಗಳಲ್ಲಿ ಕಿತ್ತಳೆ ಗಿಡಗಳನ್ನು ಬೆಳೆಸುವಾಗ ನಿರಂತರ ಎಚ್ಚರಿಕೆ ಅಗತ್ಯ.

ಆರಂಭದಲ್ಲಿ,  ಕುಂಡ ಸಸ್ಯ ಸಮೃದ್ಧವಾಗಿ ಬೆಳೆಯಲು ಸಾಕಷ್ಟು ಜಾಗವನ್ನು ಹೊಂದಿದೆಯೇ ಎಂಬುದನ್ನು ಖಚಿತಪಡಿಸಿಕೊಂಡು ನಂತರ ಸರಿಯಾದ ಬಿಸಿಲು, ಮತ್ತು ಸ್ಥಿರವಾಗಿ ನೀರುಣಿಸುವುದು ಸಿಟ್ರಸ್ ಸಸ್ಯ ಬೆಳೆಯಲು ಅತ್ಯಗತ್ಯ.

ಒಂದು ಸಣ್ಣ ಸಸ್ಯೋದ್ಯಾನವನ್ನು ಬೆಳೆಯಲು ಬಯಸುವವರು, ಸಿಟ್ರಸ್ ಸಸ್ಯಗಳನ್ನು ಅವುಗಳ ಕಾಂಡ ಕೊಳೆಯದಂತೆ ರಕ್ಷಿಸಲು ಇತರ ಸಸ್ಯಗಳಿಂದ ದೂರವಿರುವಂತೆ ನೋಡಿಕೊಳ್ಳಬೇಕು.ಜೊತೆಗೆ ಸಿಟ್ರಸ್ ಸಸ್ಯಗಳ ನಾಟಿ ಮಾಡುವಾಗ, ಸಸ್ಯಗಳ ನಡುವೆ ಕನಿಷ್ಠ ಎರಡು ಮೀಟರ್ ಅಂತರವಿರುವಂತೆ ನೋಡಿಕೊಳ್ಳಬೇಕು.

ಸಿಟ್ರಸ್ ಸಸ್ಯಗಳು ಸಾಯಲು ಸಾಮಾನ್ಯ ಕಾರಣಗಳು ಹಿಮ, ಕಳಪೆ ಒಳಚರಂಡಿ, ಅತಿಯಾದ ನೀರು ಇತ್ಯಾದಿಗಳು ಎಳೆಯ ಸಿಟ್ರಸ್ ಸಸ್ಯಗಳ ಸಾವಿಗೆ ಹಾಗೂ ಹಳೆಯ ಮರಗಳ ಸಾವಿಗೆ ಕಾಲರ್ ಕೊಳೆತ ಕಾರಣವಾಗಬಹುದು.

ಒಮ್ಮೆ ಸಂಪೂರ್ಣವಾಗಿ ಬೆಳೆದ ನಂತರ, ಸಿಟ್ರಸ್ ಹಣ್ಣುಗಳು ರೋಮಾಂಚಕ ಬಣ್ಣವನ್ನು ಹೊಂದಿ, ಕಟಾವಿಗೆ ಸಿದ್ಧವಾಗುತ್ತವೆ! ಸಾಮಾನ್ಯವಾಗಿ ಸರಾಸರಿ 3 ಅಡಿ ಎತ್ತರದ ಮರ ಒಂದು ಸಮಯದಲ್ಲಿ 20 ಹಣ್ಣುಗಳಿಗಿಂತ ಅಧಿಕ ಭಾರವನ್ನು ತಡೆಯುವುದಿಲ್ಲ. ಹಾಗಾಗಿ ನೀವು ಯಾವ ವಿಧಾನದಲ್ಲಿ ಸಿಟ್ರಸ್ ಸಸ್ಯಗಳನ್ನು ಬೆಳೆಯುತ್ತಿರಿ ಎಂದು ನೋಡಿಕೊಂಡು ತುಂಬಾ ಮುಂಜಾಗ್ರತೆ ವಹಿಸಿ ಸಸ್ಯಗಳನ್ನು ಬೆಳೆಸಿ.

 

LEAVE A REPLY

Please enter your comment!
Please enter your name here