ಶೂ ಪಾಲಿಷ್ ಖಾಲಿ ಆಗಿದೆಯೇ? ಇವುಗಳನ್ನು ಬಳಸಿ ಪಾಲಿಷ್ ಮಾಡಿ

0
740

ಶೂ ಪಾಲಿಷ್ ಖಾಲಿ ಆಗಿದೆಯೇ? ಇವುಗಳನ್ನು ಬಳಸಿ ಪಾಲಿಷ್ ಮಾಡಿ.

ಎಷ್ಟೋ ದಿನ ನಮಗೆ ಆಪೀಸಿಗೆ ಹೊರಡುವ ಸಮಯದಲ್ಲಿ ಅರ್ಜಂಟಾಗಿ ಶೂ ಪಾಲಿಷ್ ಮಾಡಿಕೊಂಡು ಹೋಗಬೇಕಾಗುತ್ತದೆ. ಆದರೆ ಸಮಯ ಇರುವುದಿಲ್ಲ. ಅಂತಹ ಸಮಯದಲ್ಲಿ ನಾವು ಹೇಳಿದ ಈ ಟಿಪ್ಸ್ ಉಪಯೋಗಿಸಿ ನೋಡಿ. ನೀವು ಖರೀದಿಸಿದ ಶೂವನ್ನು ಬಳಸುವ ಮುನ್ನ ಅದಕ್ಕೆ ಸರಿಯಾಗಿ ಪಾಲಿಶ್‌ ಮಾಡಿ. ಪ್ರತಿ ಬಾರಿ ನೀವು ಹೊರಗೆ ಹೋಗುವಾಗ ಶೂ ಪಾಲಿಶ್‌ ಮಾಡಿ. ಕೆಲವೊಮ್ಮೆ ಶೂ ಕ್ಲೀನ್‌ ಮಾಡಲು ಸ್ಪಾಂಜ್‌ ಬಳಕೆ ಮಾಡಲಾಗುತ್ತದೆ. ಆದರೆ ಇದನ್ನು ಬಳಕೆ ಮಾಡುವುದರಿಂದ ಶೂ ಮೇಲಿನ ಪಾಲಿಶ್‌ ಹಾಳಾಗುವ ಸಾಧ್ಯತೆ ಇದೆ. ಆದುದರಿಂದ ಸ್ಪಾಂಜ್‌ ಅವಾಯ್ಡ್‌ ಮಾಡಿ. ಯಾವುದೋ ಕ್ವಾಲಿಟಿಯ ಒಂದು ಶೂ ಖರೀದಿ ಮಾಡಲು ಹೋಗಬೇಡಿ. ಬದಲಾಗಿ ಉತ್ತಮ ಕ್ವಾಲಿಟಿಯ ಶೂ ಬಳಕೆ ಮಾಡಿ. ಇದರಿಂದ ನಿಮ್ಮ ಶೂ ಕೂಡಾ ತುಂಬಾ ಕಾಲದವರೆಗೂ ಹೊಸದರಂತೆ ಕಾಣಲು ನೆರವಾಗುತ್ತದೆ.

ಶೂ ಪಾಲಿಶ್ ನ್ನು ಮಾಡಲು ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ:

ನಿಂಬೆ ಹಣ್ಣನ್ನು ನಮ್ಮ ದಿನ ನಿತ್ಯದ ಆಹಾರದಲ್ಲಿ ಉಪಯೋಗಿಸುತ್ತೇವೆ. ನಿಂಬೆ ಹಣ್ಣಿನಿಂದ ಹಲವಾರು ಪ್ರಯೋಜನವಿದೆ. ಆದರೆ ಇಲ್ಲಿ ನಾವು ಹೇಳುತ್ತಿರುವುದೇ ಬೇರೆ. ಹೌದು. ಶೂ ಪಾಲಿಷ್ ಖಾಲಿ ಅಗಿದೆ ಎಂದಾಗ ಮೊದಲು ಶೂ ಮೇಲಿನ ದೂಳನ್ನು ಒಂದು ಸ್ವಚ್ಛವಾದ ಬಟ್ಟೆಯಿಂದ ಒರೆಸಿ. ನಂತರ ಒಂದು ನಿಂಬೆ ಹಣ್ಣಿನ ಅರ್ಧ ಭಾಗವನ್ನು ತೆಗೆದುಕೊಂಡು ನಿಮ್ಮ ಶೂ ಮೇಲೆ ಪಾಲಿಷ್ ಮಾಡಿ. ನಿಮ್ಮ ಶೂ ಶೈನಿಂಗ್ ಬರುತ್ತದೆ.

ಪಾಲಿಷ್ ಮಾಡಲು ಇನ್ನೂ ಒಂದು ಉಪಾಯವಿದೆ. ನಿಮ್ಮ ಶೂ ಮೇಲಿನ ದೂಳನ್ನು ಒರೆಸಿದ ನಂತರ ಬಾಳೆ ಹಣ್ಣಿನ ಸಿಪ್ಪೆಯನ್ನು ಶೂ ಮೇಲೆ ಉಜ್ಜಿ ಪಾಲಿಷ್ ಮಾಡಬಹುದು. ಇದರಿಂದ ಸಹ ತಂಬಾ ಶೈನಿಂಗ್ ಬರುತ್ತದೆ. ಬಾಳೆಹಣ್ಣನ್ನು ತಿಂದು ಸಿಪ್ಪೆ ಬಿಸಾಕುವ ಬದಲು ಹೀಗೆ ಮಾಡಿ ಉಪಯೋಗ ತೆಗೆದುಕೊಳ್ಳಿ.

ಮನೆಯಲ್ಲಿ ಬಳಕೆ ಬಾರದ ವಸ್ತುಗಳಿವು ಎಂದು ಬಿಸಾಕುತ್ತೇವೆ. ಆದರೆ ಅವೂ ಸಹ ಕೆಲವು ಸಮಯದಲ್ಲಿ ಬಳಕೆಗೆ ಬರುತ್ತವೆ. ಅದು ನಮಗೆ ಗೊತ್ತಿರಬೇಕಷ್ಟೆ.

LEAVE A REPLY

Please enter your comment!
Please enter your name here