ಅಡುಗೆ ಮನೆಯ ಸಿಂಕ್ ಅನ್ನು ಶುಚಿಗೊಳಿಸುವ ಅಡುಗೆ ಸೋಡಾ.

0
1245

ಪ್ರತಿಯೊಬ್ಬ ಮಹಿಳೆಯರಿಗೂ ಅಡುಗೆ ಮನೆಯ ಅಂದವನ್ನು ಶುಚಿತ್ವವನ್ನು ಕಾಪಾಡಲು ಹರಸಹಾಸ ಪಡುತ್ತಾರೆ. ಎಷ್ಟು ಕಷ್ಟ ಪಟ್ಟು ಎಷ್ಟು ಸ್ವಚ್ಛತೆ ಕಾಪಾಡಿದರು ಮತ್ತೆ ಅದು ಹಾಳಾಗುತ್ತದೆ. ಅದರಲ್ಲೂ ಹೆಚ್ಚಾಗಿ ಅಡುಗೆ ಮನೆಯ ಸಿಂಕ್ ಗಳಿಂದ ಅಡುಗೆ ಮನೆಯ ಅಂದ. ಶುಚಿತ್ವ ಕೆಡುತ್ತದೆ. ಆದರೂ ನಮ್ಮ ಮನೆಯ ಸಿಂಕ್ ಅನ್ನು ಶುಚಿಯಾಗಿ ಇಟ್ಟುಕೊಳ್ಳುವುದು ನಮ್ಮ ಅಡುಗೆ ಮನೆಯ ಅಂದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಅಡುಗೆ ಮನೆಯ ಸಿಂಕ್ ಅನ್ನು ಶುಚಿಯಾಗಿಟ್ಟು ಕೊಳ್ಳುವುದು ತುಂಬಾ ಮುಖ್ಯ. ಈ ಕಿಚನ್ ಸಿಂಕ್ ನ್ನು ಶುಚಿಗೊಳಿಸಲು ಅತ್ಯುತ್ತಮ ಕ್ಲೀನಿಂಗ್ ಏಜೆಂಟ್ ಬಳಸುವುದು ಸಹ ಅತ್ಯಗತ್ಯ.

ಅಡುಗೆ ಮನೆಯ ಸಿಂಕ್ ನ್ನು ಶುಚಿಗೊಳಿಸಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ದ್ರಾವಣಗಳು ಲಭ್ಯವಿದೆ. ಆದರೆ ಮಾರುಕಟ್ಟೆಯಲ್ಲಿನ ಉತ್ಪನ್ನಗಳಿಗಿಂತ ತುಂಬಾ ಸುಲಭ ಹಾಗೂ ಪರಿಣಾಮಕಾರಿ ಕೆಲಸ ಮಾಡಬಲ್ಲ ನೈಸರ್ಗಿಕ ಉತ್ಪನ್ನಗಳು ಮನೆಯಲ್ಲಿಯೇ ಇವೆ.
ಹಾಗಾದರೆ ಅವುಗಳು ಯಾವುವು ಎಂದು ತಿಳಿಯೋಣ..

ನಿಮ್ಮ ಅಡುಗೆ ಮನೆಯ ವಸ್ತುವಾದ ಅಡುಗೆ ಸೋಡಾ ಇದು ನಮ್ಮ ಅಡುಗೆ ಮನೆಯ ಸಿಂಕ್ ನ್ನು ಶುಚಿ ಮತ್ತು ಹೊಳೆಯುವಂತೆ ಮಾಡುತ್ತದೆ. ಅಡುಗೆ ಮನೆ ಸ್ವಚ್ಛಗೊಳಿಸಲು ಅಡುಗೆ ಸೋಡಾವನ್ನು ಬಳಸಿದರೆ ಆಗ ಹಠಮಾರಿ ಕಲೆ ಮತ್ತು ಕೊಳೆಯನ್ನು ತೆಗೆದುಹಾಕುತ್ತದೆ. ಸ್ಟೈನ್ ಲೆಸ್ ಸ್ಟೀಲ್ ಸಿಂಕ್ ನ್ನು ಶುಚಿಗೊಳಿಸಲು ಅಮೋನಿಯಾ, ಬ್ಲೀಚ್ ಅಥವಾ ಒರಟು ಕ್ಲೀನರ್ ಗಳನ್ನು ಬಳಸಲೇಬಾರದು. ಒರಟಾದ ಸ್ಪಂಜ್ ಗಳನ್ನು ಬಳಸುವುದರಿಂದ ಗೆರೆ ಬಿದ್ದು ಅದು ಅಡುಗೆ ಮನೆಯ ಸಿಂಕ್ ನ ಮೇಲೆ ಪರಿಣಾಮ ಬೀರಬಹುದು. ಅಡುಗೆ ಸೋಡಾ ಬಳಸಿಕೊಂಡು ಅಡುಗೆ ಮನೆ ಸಿಂಕ್ ನ್ನು ಶುಚಿಗೊಳಿಸುವಾಗ ಕೆಲವೊಂದು ಮಹತ್ವದ ಅಂಶಗಳನ್ನು ನೋಡೋಣ..

ಮೊದಲು ಸಿಂಕ್ ನ್ನು ಸ್ವಚ್ಛಗೊಳಿಸಿ ಬಳಿಕ ಅಡುಗೆ ಸೋಡಾ ಹಾಕಿ. ಸಿಂಕ್ ನ ಪ್ರತಿಯೊಂದು ಮೂಲೆಗೆ ಬಿಸಿ ನೀರು ಹಾಕಿ ಶುಚಿಗೊಳಿಸಬೇಕು. ಸಿಂಕ್ ನಲ್ಲಿ ಇರುವ ಎಲ್ಲಾ ಪಾತ್ರೆಗಳು ಮತ್ತು ಅಳಿದುಳಿದ ಆಹಾರವನ್ನು ತೆಗೆಯಿರಿ. ನಲ್ಲಿಗಳು, ಡ್ರೈನ್ ಮತ್ತು ಹೊರಗಿನ ರಿಮ್ ನ್ನು ಸೋಪ್, ಬಟ್ಟೆ ಮತ್ತು ಬಿಸಿ ನೀರು ಬಳಸಿ ಶುಚಿಗೊಳಿಸಿ. ಅಡುಗೆ ಸೋಡಾ ಬಳಸುವ ಮೊದಲು ನಿಮ್ಮ ಸಿಂಕ್ ತುಂಬಾ ಶುಚಿಯಾಗಿರಬೇಕು.

ಅಡುಗೆ ಸಿಂಕ್ ಶುಚಿಗೊಳಿಸಲು ಅಡುಗೆ ಸೋಡಾ ಬಳಸುವ ಮೊದಲು ನಾವು ಅದರೊಳಗೆ ಒಮ್ಮೆ ಬಿಸಿ ನೀರು ಹಾಕಬೇಕು. ಇದರಿಂದ ದುರ್ಗಂಧ ಹೋಗುತ್ತದೆ ಮತ್ತು ಡ್ರೈನ್ ನಲ್ಲಿ ಉಳಿದಿರುವ ಯಾವುದೇ ವಸ್ತುಗಳನ್ನು ಮೆದುವಾಗಿಸುತ್ತದೆ. ಶುಚಿಗೊಳಿಸಿದ ಬಳಿಕ ನಮ್ಮ ಸಿಂಕ್ ನ್ನು ಒಣಗಿಸಿ ಮತ್ತು ಅಡುಗೆ ಸೋಡಾ ಹಾಕಿ.

ಅಡುಗೆ ಸೋಡಾ ಬಳಸಿ ಮೊದಲು ಸಿಂಕ್ ನ ಮೇಲ್ಭಾಗವನ್ನು ಶುಚಿಗೊಳಿಸಬೇಕು. ನಂತರ ಮೇಲ್ಭಾಗಕ್ಕೆ ಅಡುಗೆ ಸೋಡಾ ಸಿಂಪಡಿಸಿ ಮತ್ತು ಸಿಂಕ್ ನ್ನು ಶುಚಿಗೊಳಿಸಬೇಕು. ಅಡುಗೆ ಸೋಡಾದ ಪೇಸ್ಟ್ ಮಾಡಿ ಅದನ್ನು ಸಿಂಕ್ ಮೇಲೆ ಹಚ್ಚಿ ಶುಚಿಗೊಳಿಸಬಹುದು.

ಮೊದಲು ಡ್ರೈನ್ ನ ಒಳಗೆ ಅರ್ಧಕಪ್ ನಷ್ಟು ಅಡುಗೆ ಸೋಡಾ ಹಾಕಿ. ಇದರ ಬಳಿಕ ಒಂದು ಕಪ್ ನಷ್ಟು ಬಿಳಿ ವಿನೇಗರ್ ಹಾಕಿ. ಇದರ ಬಳಿಕ ಕುದಿಯುವ ನೀರು ಡ್ರೈನ್ ನೊಳಗೆ ಹಾಕಿ. ಆಗ ಎಲ್ಲವೂ ತೊಳೆದುಕೊಂಡು ಹೋಗುತ್ತದೆ.

ಅಡುಗೆ ಸೋಡಾ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ. ಇದನ್ನು ಸಿಂಕ್ ನ ಮೇಲ್ಭಾಗಕ್ಕೆ ಬಳಸಬೇಕು. ಅಡುಗೆ ಸೋಡಾ ಮತ್ತು ನಿಂಬೆರಸ ಮಿಶ್ರಣ ಮಾಡಿ ಅಡುಗೆ ಮನೆ ಸಿಂಕ್ ನ್ನು ಶುಚಿಗೊಳಿಸಿದ ನಂತರ ಈ ದ್ರಾವಣ ಒಣಗಿದ ಬಳಿಕ ಬಿಳಿ ವಿನೇಗರ್ ಹಾಕಬೇಕು.

ಒಂದು ಪಾತ್ರೆಯಲ್ಲಿ ಅಡುಗೆ ಸೋಡಾ ಮತ್ತು ಲಿಕ್ವಿಡ್ ಸೋಪ್ ನ್ನು ಮಿಶ್ರಣ ಮಾಡಿ. ಇದನ್ನು ನೀರಿನೊಂದಿಗೆ ಬೆರೆಸಿ ಮತ್ತು ವಿನೇಗರ್ ಹಾಕಿ. ಮಿಶ್ರಣವನ್ನು ಸರಿಯಾಗಿ ತಿರುಗಿಸಿ ಮತ್ತು ಬಾಟಲಿಗೆ ಹಾಕಿ ಇಡಿ. ಉಪಯೋಗಿಸುವ ಮೊದಲು ಸರಿಯಾಗಿ ಅಲುಗಾಡಿಸಿ.

ಒಮ್ಮೆ ನಮ್ಮ ಶುಚಿಗೊಳಿಸುವ ಕೆಲಸ ಮುಗಿದ ಬಳಿಕ ಸಿಂಕ್ ನ್ನು ಜಾಲಾಡಿ. ಅಚ್ಚುಕಟ್ಟಾಗಿ ಶುಚಿಗೊಳಿಸಿ ಮತ್ತು ಹತ್ತಿ ಬಟ್ಟೆಯಿಂದ ಅದನ್ನು ಒರೆಸಿ. ಪ್ರತೀ ಸಲ ಸಿಂಕ್ ನ್ನು ಬಳಸಿದ ಬಳಿಕ ಶುಚಿಗೊಳಿಸಿ. ಪ್ರತೀ ದಿನ ಸಿಂಕ್ ನ್ನು ಶುಚಿಗೊಳಿಸುವುದರಿಂದ ನಮ್ಮ ಅಡುಗೆ ಮನೆಯ ಸಿಂಕ್ ನ್ನು ಸ್ವಚ್ಛ ಮತ್ತು ಹೊಳೆಯುವಂತೆ ಮಾಡಬಹುದು.
ಜೊತೆಗೆ ನಮ್ಮ ಅಡುಗೆ ಮನೆಯ ಅಂದವು ಹೆಚ್ಚುತ್ತದೆ.

ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.

 

LEAVE A REPLY

Please enter your comment!
Please enter your name here