ಈ ಲಕ್ಷಣಗಳು ಇದ್ರೆ ಅದು ಪಾರ್ಶ್ವವಾಯು ಆಗಿರಬಹುದು ಒಮ್ಮೆ ತಿಳಿದುಕೊಳ್ಳಿ

0
1643

ಪಾರ್ಶ್ವವಾಯು ಲಕ್ಷಣಗಳು.

ಮೆದುಳು ನಮ್ಮ ನರಮಂಡಲದ ಕೇಂದ್ರ ಕಾರ್ಯಾಗಾರ. ಇದು ದೇಹದ ಎಲ್ಲ ಅಂಗಗಳ ಕೆಲಸಗಳನ್ನು ನಿಯಂತ್ರಿಸುತ್ತದೆ. ಇತರೆ ಅಂಗಗಳಂತೆ ಮೆದುಳಿಗೂ ರಕ್ತನಾಳಗಳ ಮೂಲಕವೇ ರಕ್ತ ಪೂರೈಕೆಯಾಗುತ್ತದೆ. ಕೆಲವೊಮ್ಮೆ ಈ ರಕ್ತನಾಳಗಳಿಗೆ ದಕ್ಕೆಯಾಗಬಹುದು ಅಥವಾ ಮುಚ್ಚಿಹೋಗಬಹುದು. ಆಗ ಮೆದುಳಿನ ಯಾವುದೋ ಒಂದು ಭಾಗಕ್ಕೆ ರಕ್ತ ಸಂಚಾರ ನಿಲ್ಲುತ್ತದೆ. ಆ ಭಾಗವನ್ನು ನಿಯಂತ್ರಿಸಲ್ಪಡುವ ದೇಹದ ಅಂಗಾಂಗಗಳು ಸ್ವಾಧೀನ ಕಳೆದುಕೊಳ್ಳುತ್ತವೆ. ಇದೇ ಪಾರ್ಶ್ವವಾಯು ಅಥವಾ ಲಕ್ವಾ.

ಪಾರ್ಶ್ವವಾಯು ಯಾರಿಗೆ, ಯಾವಾಗ, ಎಲ್ಲಿ ಬೇಕಾದರೂ ಬರಬಹುದು. ಇದಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಚಿಕ್ಕವರಿಂದ ಅಂದರೆ ತಾಯಿಯ ಗರ್ಭದಲ್ಲಿರುವ ಮಗುವಿನಿಂದ ಹಿಡಿದು 90ರ ವಯೋವೃದ್ಧರನ್ನೂ ಇದು ಕಾಡಬಹುದು. ಒಟ್ಟಿನಲ್ಲಿ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ನಂತರ ಇದನ್ನು ವಿಶ್ವದ ಮೂರನೇ ಅತಿ ದೊಡ್ಡ ತೊಂದರೆ ಎಂದು ಪರಿಗಣಿಸಲಾಗುತ್ತದೆ.

ಮೆದುಳಿಗೆ ರಕ್ತ ಪೂರೈಕೆಯಾಗುವ ರಕ್ತನಾಳ ಮುಚ್ಚಿಕೊಳ್ಳುವುದಕ್ಕೆ ಇಸ್ಕಿಮಿಕ್ ಪಾರ್ಶ್ವವಾಯು ಎನ್ನುವರು. ರಕ್ತನಾಳ ಕಿರಿದಾಗುವುದರಿಂದ ಅಥವಾ ಹೆಪ್ಪುಗಟ್ಟುವುದರಿಂದ ಅಥವಾ ಗಟ್ಟಿಯಾಗುವುದರಿಂದ ಪಾರ್ಶ್ವ ಅಥವಾ ಸಂಪೂರ್ಣ ರಕ್ತ ಪೂರೈಕೆ ನಿಂತಾಗ ಈ ಲಕ್ವ ಹೊಡೆಯುತ್ತದೆ.

ಪಾರ್ಶ್ವವಾಯು ಉಂಟಾಗಲು ಕಾರಣವೇನು?

ಹೆಚ್ಚಿದ ರಕ್ತದ ಒತ್ತಡ. ಮದ್ಯಪಾನ. ಧೂಮಪಾನ ಸೇವನೆ. ರಕ್ತನಾಳಗಳು ಚಿಕ್ಕದಾಗಿರುವುದು. ರಕ್ತನಾಳಗಳಲ್ಲಿ ಕೊಬ್ಬು ಶೇಕರಣೆಯಾದಾಗ. ಹೃದಯದ ಸಮಸ್ಯೆಗಳಿಂದ. ಕೊಲೆಸ್ಟ್ರಾಲ್ ಹೆಚ್ಚಿರುವ ಆಹಾರಗಳನ್ನು ಸೇವಿಸುವುದರಿಂದ. ಅನುವಂಶಿಯತೆ. ಮಧುಮೇಹ ಸಮಸ್ಯೆಗಳಿಂದ. ಮೆದುಳಿನ ಸಮಸ್ಯೆಗಳಿಂದ . ಈ ಎಂಬುದು ಬರುತ್ತದೆ.

ಹಾಗಾದರೆ ಈ ಪಾರ್ಶ್ವವಾಯುವಿನ ಲಕ್ಷಣಗಳು ಏನು ಎಂದು ತಿಳಿದುಕೊಳ್ಳೋಣ ಬನ್ನಿ.

ದೇಹದ ಚಲನವಲನಗಳ ಮೇಲೆ ಮೆದುಳಿನ ನಿಯಂತ್ರಣ ಕ್ಷೀಣಿಸುವುದು ಅಥವಾ ದೇಹದ ಕೆಲವು ಭಾಗಗಳು ಸ್ವಾಧೀನ ಕಳೆದುಕೊಳ್ಳುವುದಂತೆ ಭಾಸವಾಗುವುದು.

ಮುಖವು ಜುಮ್ಮು ಹಿಡಿಯುತ್ತದೆ. ಮುಖ ಜೋತು ಬೀಳುವ ಹಾಗೆ ಕಾಣಿಸುತ್ತದೆ.

ತೋಳುಗಳಲ್ಲಿ ಶಕ್ತಿ ಇರುವುದಿಲ್ಲ. ಕೈಗಳನ್ನು ಎತ್ತಲು. ಇಳಿಸಲು ಆಗುವುದಿಲ್ಲ.

ಮಾತನಾಡಲು ತೊಂದರೆಯಾಗುತ್ತದೆ. ಸರಿಯಾಗಿ ಮಾತುಗಳು ಬರುವುದಿಲ್ಲ .ತೊದಲು ಮಾತುಗಳು ಬರುತ್ತವೆ.

ದೇಹವನ್ನು ಸಮತೋಲನದಲ್ಲಿ ಹಿಡುವುದಕ್ಕೆ ಆಗುವುದಿಲ್ಲ.ದೇಹ ಭಾರವೆನ್ನಿಸುತ್ತದೆ.

ವಿಪರೀತ ತಲೆನೋವು ಕಾಣಿಸುತ್ತದೆ. ತಲೆಯನ್ನು ಯಾವ ಭಾಗಕ್ಕೂ ಚಲಿಸಲು ಆಗುವುದಿಲ್ಲ.

ನೆನಪಿನ ಶಕ್ತಿ ಕುಗ್ಗುತ್ತದೆ. ಯಾವುದೇ ವಿಷಯಗಳು ನೆನಪಿಗೆ ಬರುವುದಿಲ್ಲ.

ಕಣ್ಣುಗಳು ಮಂಜಾಗುತ್ತದೆ. ಸರಿಯಾಗಿ ಕಣ್ಣುಗಳು ಕಾಣಿಸುವುದಿಲ್ಲ.

ತಲೆನೋವು ಬಂದು ತಲೆ ಸುತ್ತುತ್ತದೆ. ಯಾವುದು ನಮ್ಮ ಸಮತೋಲನಕ್ಕೆ ಸಿಗುವುದಿಲ್ಲ. ಆಹಾರವನ್ನು ಸೇವಿಸಲು ಆಗುವುದಿಲ್ಲ. ಭಾವನೆಗಳ ಮೇಲೆ ನಿಯಂತ್ರಣ ತಪ್ಪುತ್ತದೆ.

ಲಕ್ವಕ್ಕೆ ಯಾವುದೇ ಪ್ರಥಮ ಚಿಕಿತ್ಸೆ ಇಲ್ಲ. ಆದ್ದರಿಂದ ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಬೇಕು. ಚಿಕಿತ್ಸೆ ವಿಳಂಬವಾದಷ್ಟೂ ಮೆದುಳಿನ ಆಘಾತದ ಪ್ರಮಾಣ ಹೆಚ್ಚಾಗುವುದು. ಒಂದರ್ಧ ಗಂಟೆ ವಿಳಂಬವಾದರೂ ಮೆದುಳಿನ 10-20 ಲಕ್ಷ ನರಕೋಶಗಳು ಸತ್ತು ಹೋಗುತ್ತವೆ ಅಥವಾ ನಿಯಂತ್ರಣ ಕಳೆದುಕೊಳ್ಳುತ್ತವೆ. ಸೂಕ್ತ ಚಿಕಿತ್ಸೆ ದೊರೆತಲ್ಲಿ ಶೇ.80-95ರಷ್ಟು ಮೆದುಳಿನ ಆಘಾತದ ಪ್ರಮಾಣವನ್ನು ಕಡಿಮೆ ಮಾಡಬಹುದು. ಅದಕ್ಕೆ ಕೂಡಲೇ ತಜ್ಞರ ಬಳಿಯೇ ಕರೆದೊಯ್ದರೆ ಸಮಸ್ಯೆ ಕಡಿಮೆಯಾಗುತ್ತದೆ.

ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.

LEAVE A REPLY

Please enter your comment!
Please enter your name here