ತೂಕ ಇಳಿಸಲು ಆಯುರ್ವೇದ ಔಷಧಿ.

0
1585

ಅತಿಯಾದ ತೂಕವು ಇಂದಿನ ದಿನಗಳಲ್ಲಿ ಒಂದು ದೊಡ್ಡ ಸಮಸ್ಯೆಯಾಗಿ ಎಲ್ಲರನ್ನು ಕಾಡುತ್ತಿದೇ.  ಈ ತೂಕವನ್ನು ಕಡಿಮೆ ಮಾಡಿಕೊಳ್ಳಲು ಹರಸಹಾಸವನ್ನೇ ಮಾಡಬೇಕಾಗಿದೆ. ಈ ತೂಕ ಇಳಿಕೆಗೆ ಹಲವಾರು ರೀತಿಯ ಆಹಾರಗಳು. ವ್ಯಾಯಾಮ. ಜಿಮ್ ಎಂದು ಮಾಡಿದರು ತೂಕ ಮಾತ್ರ ಕಡಿಮೆಯಾಗುತ್ತಿಲ್ಲ. ಇನ್ನು ಹಲವಾರು ರೀತಿಯ ಮಾತ್ರೆ .ಔಷಧಿಗಳನ್ನು ಪ್ರಯೋಗ ಮಾಡುತ್ತಿದ್ದಾರೆ. ಆದರೆ ಇವುಗಳೆಲ್ಲ ಅಡ್ಡ ಪರಿಣಾಮ ಬೀರುತ್ತದೆ. ಅದಕ್ಕಾಗಿ ಈ ಎಲ್ಲ ರೀತಿಯ ಅಡ್ಡ ಪರಿಣಾಮಗಳನ್ನು ಬಿಟ್ಟು ನೈಸರ್ಗಿಕವಾದ ಮತ್ತು ತುಂಬಾ ಪುರಾತನವಾದ ಆಯುರ್ವೇದದಿಂದ ನಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಹಾಗಾದರೆ ಅದು ಹೇಗೆ ಎಂದು ನೋಡೋಣ ಬನ್ನಿ.

ತೂಕ ಕಡಿಮೆ ಮಾಡಿಕೊಳ್ಳಲು ಆಯುರ್ವೇದ ಚಿಕಿತ್ಸೆ ಆರಂಭವಾಗುವುದು ದೇಹದಲ್ಲಿರುವ ಜೀವಾಣು ವಿಷವನ್ನು ಹೊರತೆಗೆಯುವುದರ ಮೂಲಕ. ಈ ಪ್ರಕ್ರಿಯೆಯನ್ನು ಅಮಾ’ ಎಂದು ಕರೆಯಲಾಗುತ್ತದೆ ಮತ್ತು ಇದು ತೂಕ ಕಡಿಮೆ ಮಾಡುವ ಮೂಲಕ್ರಮ. ಆಯುರ್ವೇದ ಚಿಕಿತ್ಸೆಯಲ್ಲಿ ಪ್ರಮುಖವಾಗಿ ಅಮಾ’ ದೇಹದಲ್ಲಿರುವ ಜೀವಾಣು ವಿಷಗಳನ್ನು ಹೊರಹಾಕುತ್ತದೆ. ಕೊಬ್ಬಿನ ಕೋಶಗಳನ್ನು ಕುಗ್ಗಿಸುವ ಮೂಲಕ ಅದು ಪರಿಣಾಮಕಾರಿಯಾಗುತ್ತದೆ.

ವಯಸ್ಸು ಹೆಚ್ಚಾದಂತೆ ಕೊಬ್ಬಿನ ಹೊರಹಾಕುವಿಕೆ ಅಧಿಕವಾಗುತ್ತದೆ. ಸತತವಾಗಿ ಈ ಚಿಕಿತ್ಸೆಯಿಂದಾಗಿ ದೇಹದಲ್ಲಿರುವ ಜೀವಾಣು ವಿಷಾಣುಗಳು ಮತ್ತು ಕಲ್ಮಶಗಳನ್ನು ಹೊರಹಾಕಲು ಸಾಧ್ಯವಾಗುತ್ತದೆ. ಇಷ್ಟು ಮಾತ್ರವಲ್ಲದೆ ಭವಿಷ್ಯದಲ್ಲಿ ಹೆಚ್ಚುವರಿ ತೂಕವನ್ನು ಪಡೆಯುವುದನ್ನು ಇದು ತಡೆಯುತ್ತದೆ.

ನಮ್ಮ ಆರೋಗ್ಯಕರ ಜೀವನಶೈಲಿಯಲ್ಲಿ ಆಹಾರ ಕ್ರಮವೂ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆಯುರ್ವೇದದಲ್ಲಿ ತಜ್ಞರು ರೋಗಿಗಳಿಗೆ ಹಣ್ಣು ಹಾಗೂ ತರಕಾರಿಯನ್ನು ಅಧಿಕ ಸೇವನೆ ಮಾಡುವಂತೆ ಸೂಚಿಸುತ್ತಾರೆ. ನೈಸರ್ಗಿಕ ಆಹಾರ ಮತ್ತು ಪೋಷಕಾಂಶಗಳು ಅಧಿಕವಾಗಿರುವ ಹಣ್ಣುಗಳು ಇದರಲ್ಲಿ ಮುಖ್ಯವಾದದ್ದು. ಆಯುರ್ವೇದದ ಮೂಲಕ ತೂಕ ಇಳಿಸಿಕೊಳ್ಳುವಾಗ ಸಂಸ್ಕರಿಸಿದ ಮತ್ತು ಸಂರಕ್ಷಿಸಿದ ಆಹಾರವನ್ನು ತ್ಯಜಿಸಬೇಕು.

ಅತಿಯಾದ ದೇಹ ತೂಕವನ್ನು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಕಡಿಮೆಗೊಳಿಸುವುದು ಹೇಗೆ ನೋಡೋಣ..

ಬೆಳಿಗ್ಗೆ ಎದ್ದ ತಕ್ಷಣ ಟೀ ಕಾಫಿ.ಕುಡಿಯುವ ಬದಲು ಜೇನು ತುಪ್ಪ ಹಾಕಿದ ಲಿಂಬೆ ರಸವನ್ನು ಸೇವಿಸುತ್ತ ಬಂದರೆ ಇದು ನಮ್ಮ ದೇಹದ ಒಳ್ಳೆಯ ಜೀವಾಣುವಿಷ ನಿಯಂತ್ರಕ ಮತ್ತು ಇದು ಪರಿಣಾಮಕಾರಿಯಾಗಿ ದೇಹದಲ್ಲಿರುವ ಜೀವಾಣು ವಿಷವನ್ನು ಹೊರಹಾಕುವ ಕೆಲಸ ಮಾಡುತ್ತದೆ.

ಯಾವುದೇ ಆಹಾರವನ್ನು ಒಂದೇ ಸಲ ತುಂಬಾ ತಿನ್ನುವ ಬದಲು ಸ್ವಲ್ಪ ಸ್ವಲ್ಪವೇ ಹಲವು ಸಲ ತಿನ್ನಿ. ದಿನದಲ್ಲಿ ಮೂರು ಸಲ ಊಟ ಮಾಡುತ್ತಿದ್ದರೆ ಅದನ್ನು ಆರು ಭಾಗಗಳಾಗಿ ಮಾಡಿ ಸೇವಿಸಬೇಕು. ಇದು ತುಂಬಾ ವೇಗವಾಗಿ ಪರಿಣಾಮ ಬೀರುತ್ತದೆ. ತುಂಬಾ ಪರಿಣಾಮಕಾರಿಯಾಗಲು ತಾಜಾ ಹಣ್ಣುಗಳು ಮತ್ತು ಹಸಿರು ತರಕಾರಿಯನ್ನು ನಮ್ಮ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಬೇಕು.

ನಿದ್ದೆ ಕೂಡ ನಮ್ಮ ಜೀವನಕ್ಕೆ ತುಂಬಾ ಮುಖ್ಯವಾದದ್ದು ಆದ್ದರಿಂದ ನೀವು ಎಷ್ಟೇ ಒತ್ತಡದಲ್ಲಿದ್ದರೂ ಕೂಡ ದಿನದಲ್ಲಿ ಕನಿಷ್ಠ 8 ಗಂಟೆ ನಿದ್ದೆ ಮಾಡಬೇಕು.

ಸಂಸ್ಕರಿಸಿದ ಜಂಕ್ ಫುಡ್ ನ್ನು ತ್ಯಜಿಸಬೇಕು.ಹಾಗೂ ನಾರಿನಾಂಶ ಹೆಚ್ಚಾಗಿರುವ ಧಾನ್ಯಗಳು, ಮಸೂರವನ್ನು ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಬೇಕು.

ತಾಜಾ ಅರಿಶಿನ, ಶುಂಠಿ, ಬೆಳ್ಳುಳ್ಳಿ, ಜೀರಿಗೆ ಮತ್ತು ಕರಿಮೆಣಸು ಈ ರೀತಿಯ ಗಿಡಮೂಲಿಕೆಗಳನ್ನು ಹೆಚ್ಚು ಹೆಚ್ಚು ಬಳಸಬೇಕು.
ಈ ಮಸಾಲೆಗಳು ಕೆಟ್ಟ ಕೊಲೆಸ್ಟ್ರಾಲ್ ನ್ನು ನಿಯಂತ್ರಿಸುತ್ತದೆ ಮತ್ತು ಚಯಾಪಚಯಾ ಕ್ರಿಯೆಯನ್ನು ವರ್ಧಿಸುತ್ತದೆ.

ನೀವು ಪ್ರಾಮಾಣಿಕವಾಗಿ ಬೊಜ್ಜನ್ನು ನಿಯಂತ್ರಿಸಲು ಪ್ರಯತ್ನಿಸುವುದಾದರೆ ಕೇವಲ ಪಥ್ಯದ ಮೇಲೆ ಮಾತ್ರ ಅವಲಂಬಿತರಾಗಿಬೇಡಿ. ಪಥ್ಯದೊಂದಿಗೆ ವ್ಯಾಯಾಮವನ್ನು ಮಾಡಿ. ಅತಿಯಾದ ತೂಕವನ್ನು ವೇಗವಾಗಿ ಹಾಗೂ ಸುರಕ್ಷಿತವಾಗಿ ಕಡಿಮೆ ಮಾಡಲು ಯೋಗ ತುಂಬಾ ಶಕ್ತಿಶಾಲಿ ವಿಧಾನ.

ಆಧುನೀಕರಣದಲ್ಲಿ ಬದುಕಿ. ಆದರೆ ಜೀವನದಲ್ಲಿ ಒಂದು ಮಿತಿಯನ್ನು ಮೀರದಿರಿ. ಇದು ಆಯುರ್ವೇದದ ಮೂಲ ಮಂತ್ರ. ಮದ್ಯಪಾನವನ್ನು ಬಿಡಲು ಸಾಧ್ಯವಿಲ್ಲವೆಂದಾದರೆ ಅದನ್ನು ಒಂದು ಮಿತಿಯಲ್ಲಿ ಸೇವನೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಜೀವನದ ಉಳಿದೆಲ್ಲಾ ವಿಷಯಗಳಿಗೂ ಅನ್ವಯವಾಗುತ್ತದೆ.

ಬೊಜ್ಜು ಹೆಚ್ಚಾಗಿರುವ ಭಾಗಕ್ಕೆ ಹರಳೆಣ್ಣೆಯ ಮಸಾಜ್ ಮಾಡುತ್ತೀರಿ.

ಬೆಳಿಗ್ಗೆ ಎದ್ದ ತಕ್ಷಣ ಬಿಸಿನೀರನ್ನೂ ಕುಡಿಯಲು ಅಭ್ಯಾಸ ಮಾಡಿಕೊಳ್ಳಿ.ಜೊತೆಗೆ ಹೆಚ್ಚು ಹೆಚ್ಚು ನೀರು ಸೇವನೆ ಮಾಡಿ. ಎಣ್ಣೆಯುಕ್ತ ಆಹಾರಗಳನ್ನು ಸೇವಿಸಬೇಡಿ.

ಇವುಗಳನ್ನು ಪಾಲಿಸಿ ಯಾವುದೇ ಅಡ್ಡ ಪರಿಣಾಮಗಳು ಇಲ್ಲದಾಗೆ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಿ.

ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.

LEAVE A REPLY

Please enter your comment!
Please enter your name here