ನಿಮ್ಮ ಮನೆಯಲ್ಲಿ ಜೇಡರ ಬಲೆಯಿದ್ದರೆ ಅದು ಕಷ್ಟದ ಸಂಕೇತ

0
982

ಮನೆಯಲ್ಲಿ ಜೇಡರ ಬಲೆಯಿದ್ದರೆ ಮೊದಲು ತೆಗೆದುಬಿಡಿ. ಅದು ನಿಮಗೆ ಬರುವ ಕಷ್ಟದ ಸಂಕೇತ.

ಜನರಿಲ್ಲದ ಕಟ್ಟಡದಲ್ಲಿ, ಎಷ್ಟೋ ದಿನದಿಂದ ಪೊರಕೆಯ ಸುಳಿವಿಲ್ಲದ ಸ್ಥಳದಲ್ಲಿ ಹೆಚ್ಚಾಗಿ ಕಂಡು ಬರುವುದು ಜೇಡರಬಲೆ. ಜೀವಶಾಸ್ತ್ರೀಯವಾಗಿ ಜೇಡ Arachnid ಕುಟುಂಬದ ಸದಸ್ಯ. ಜೇಡ ತನ್ನ ದೇಹದಿಂದ ಸ್ರವಿಸುವ ಲೋಳೆಯಂಥ ವಸ್ತುವಿನಿಂದ ಅದು ಬಲೆಯನ್ನು ಹೆಣೆಯುತ್ತದೆ.

ನಿಮ್ಮ ಮನೆ ಸುಂದರವಾಗಿರಬೇಕು ಅಲ್ಲವೇ. ಎಲ್ಲರೂ ಅದನ್ನೇ ಬಯಸ್ತಾರೆ. ಮನೆಯ ಸ್ವಚ್ಛತೆಗೂ ಮಹತ್ವ ನೀಡ್ತಾರೆ. ಆದರೆ ಕೆಲವೊಮ್ಮೆ ಮನೆಯನ್ನು ಎಷ್ಟು ಸ್ವಚ್ಛವಾಗಿಟ್ಟುಕೊಂಡರೂ ಯಾವುದೋ ಒಂದು ಮೂಲೆಯಲ್ಲಿ ಜೇಡ ಮನೆ ಮಾಡಿಕೊಡು ಇರುತ್ತದೆ.ಅದು ನಮ್ಮಬಕಣ್ಣಿಗೆ ಬೀಳುವುದೇ ಇಲ್ಲ. ಕೆಲವಮ್ಮೆ ಕಣ್ಣಿಗೆ ಕಂಡರೂ ಕೇವಲ ನೆಲ ಗುಡಿಸಿಕೊಂಡು ಹೋಗಿರುತ್ತೇವೆ. ಕೆಲವರು ಜೇಡವನ್ನು ನೋಡಿಯೂ ಸುಮ್ಮನಿರುತ್ತಾರೆ. ಮತ್ತೆ ಕೆಲವರು ವಾರಗಟ್ಟಲೆ ಜೇಡ ಕಟ್ಟಿರುವುದನ್ನು ನೋಡಿರುವುದಿಲ್ಲ. ನಿಮಗೆ ಆಶ್ಚರ್ಯವಾಗಬಹುದು ಶಾಸ್ತ್ರದ ಪ್ರಕಾರ ಮನೆಯಲ್ಲಿ ಜೇಡ ಕಟ್ಟುವುದು ಅಶುಭ.

ಇದು ಜೀವನದ ಅನೇಕ ತೊಂದರೆಗೆ ಕಾರಣವಾಗುತ್ತದೆ. ಮನೆಯ ಗೋಡೆಗೆ ಕಟ್ಟುವ ಜೇಡ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆಯಂತೆ. ಮನೆಯಲ್ಲಿ ನೆಗೆಟಿವ್‌ ಶಕ್ತಿಗಳಿದ್ದರೆ ಅಲ್ಲಿ ಸುಖ ಸಮೃದ್ಧಿ ನಿಲ್ಲುವುದಿಲ್ಲ. ಅಲ್ಲಿ ದೇವಿ, ದೇವತೆಗಳ ಕೃಪೆ ಇರುವುದಿಲ್ಲ ಎನ್ನಲಾಗುತ್ತದೆ. ಯಾವ ಮನೆಯಲ್ಲಿ ಸ್ವಚ್ಛತೆ ಇಲ್ಲವೋ, ಶುಚಿತ್ವ ಇಲ್ಲವೋ, ಜೇಡರ ಬಲೆ ಇದೆಯೋ ಅಲ್ಲಿ ಲಕ್ಷ್ಮೀಯ ಕೃಪೆ ಇರೋದಿಲ್ಲ. ಹಾಗೂ ಪ್ರತಿ ಕ್ಷಣ ದುಡ್ಡಿನ ತಾಪತ್ರಯ ಇರುತ್ತದೆ.

ಜೇಡರ ಬಲೆ ಮನೆಯ ಅಂದ ಕೆಡಿಸುವುದು ಮಾತ್ರವಲ್ಲ ಮನುಷ್ಯನ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಇದು ಅನೇಕ ರೋಗಗಳನ್ನು ಹರಡುತ್ತವೆ. ರೋಗಕ್ಕೆ ತುತ್ತಾಗದಿರಿ. ಮೊದಲು ಎಲ್ಲಾ ಮೂಲೆಯಲ್ಲಿನ ಜೇಡರ ಬಲೆಯನ್ನು ಸ್ವಚ್ಛಗೊಳೊಸಿ.

ಅಷ್ಟೇ ಅಲ್ಲ ಮನಸಿನ ಒತ್ತಡಕ್ಕೆ ಒಂದು ಮಹತ್ವದ ಕಾರಣ ಜೇಡ ಎನ್ನುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದು ಮನುಷ್ಯನ ಮಾನಸಿಕ ರೋಗಕ್ಕೆ ಕಾರಣವಾಗುತ್ತದೆಯಂತೆ. ಜೇಡ ಕಟ್ಟಿದ ಮನೆಯಲ್ಲಿ ವಾಸಿಸುವ ವ್ಯಕ್ತಿಗಳ ಮನಸ್ಸು ಸ್ಥಿರವಾಗಿರುವುದಿಲ್ಲ. ಇದರಿಂದ ಅಲ್ಲಿ ಹೆಚ್ಚಾಗಿ ಕೋಪ ತಾಪಗಳು ಕಂಡುಬರುತ್ತದೆ. ಮಕ್ಕಳ ಮೇಲೆ ಇದು ಪ್ರಭಾವ ಬೀರುತ್ತದೆ. ಆರೋಗ್ಯ ಮತ್ತು ಬುದ್ಧಿ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಜೇಡ ಕಟ್ಟಿದ ಮನೆಯವರನ್ನು ಸದಾ ಸಮಸ್ಯೆಗಳು ಕಾಡುತ್ತದೆ.ಒಂದು ಸಮಸ್ಯೆ ಪರಿಹಾರವಾಯಿತು ಎನ್ನುವುದರಲ್ಲಿ ಮತ್ತೊಂದು ಸಮಸ್ಯೆ ಬಂದಿರುತ್ತದೆ.

ಜೇಡರ ಬಲೆ ಮನೆಯಲ್ಲಿದ್ದರೆ ಅಲ್ಲಿ ನೆಲೆಸುವ ಜನರ ಯೋಚನಾ ಶಕ್ತಿ ಕಡಿಮೆಯಾಗುತ್ತದೆ. ಅವರು ಯಾವಾಗಲೂ ಟೆನ್ಶನ್‌ನಲ್ಲಿರುತ್ತಾರೆ ಹಾಗೂ ಯಾವಾಗ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಅವರಿಗೆ ತಿಳಿಯುವುದಿಲ್ಲ. ಇದರಿಂದ ಪ್ರತಿಯೊಂದು ವಿಷಯದಲ್ಲೂ ಅವರು ಅಸಫಲರಾಗುತ್ತಾರೆ.

ಮನೆಯ ಎಲ್ಲ ಸಧಸ್ಯರ ಸುಖ-ಸಮೃದ್ಧಿ ಸರ್ವನಾಶವಾಗುತ್ತದೆ. ಜೇಡರ ಬಲೆ ದರಿದ್ರದ ಸಂಕೇತ ಎಂದು ಹಿರಿಯರು ಹೇಳುತ್ತಿದ್ದರು.ಇದು ಸತ್ಯ ಕೂಡ. ಜೇಡದ ಬಳಿಯಲ್ಲಿ ಅನಾರೋಗ್ಯಕ್ಕೆ ಕಾರಣವಾಗುವ ಸೂಕ್ಷ್ಮ ಜೀವಿಗಳಿರುತ್ತವೆ. ಅವು ಅನೇಕ ರೋಗಕ್ಕೆ ಆಹ್ವಾನ ನೀಡುತ್ತವೆ ಎಂಬುದನ್ನು ವಿಜ್ಞಾನಿಗಳು ಹೇಳಿದ್ದಾರೆ.

ಬಲೆಯನ್ನು ತೆಗೆಯುವಾಗ ಬಲೆಯ ಒಳಗೆ ಅಥವಾ ಸುತ್ತಮುತ್ತ ಜೀವಂತ ಜೇಡಗಳು ಅಥವಾ ಕೀಟಗಳು ಇವೆಯೇ ಎಂದು ನೋಡಿಕೊಳ್ಳಿ. ನೀವು ಬಲೆಯನ್ನು ಸ್ವಚ್ಛಗೊಳಿಸುವ ಮೊದಲೇ ಅವುಗಳನ್ನು ಹೊಡೆದು ಹಾಕಬೇಕು ಇಲ್ಲದಿದ್ದರೆ ಅಲ್ಲಿದ್ದ ಜೇಡರ ಹುಳು ಎಲ್ಲಕಡೆಯೂ ಹರಿದಾಡಿ ಮತ್ತೊಂದು ಕಡೆ ಬಲೆ ಹೆಣೆಯುತ್ತದೆ. ಆಗ ಮತ್ತೆ ಸ್ವಚ್ಛಗೊಳಿಸಲು ಕಷ್ಟ ಪಡಬೇಕಾಗುತ್ತದೆ. ಆದುದರಿಂದ ನಿಮ್ಮ ಮನೆಯನ್ನು ಸದಾ ಕಾಲ ಸ್ವಛವಾಗಿಯೇ ಇಟ್ಟುಕೊಳ್ಳಿ.

ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.

LEAVE A REPLY

Please enter your comment!
Please enter your name here