ಹುಷಾರಿಲ್ಲ ಎನ್ನುವ ಸಮಯದಲ್ಲಿ ಈ ಆಹಾರಗಳನ್ನು ಸೇವಿಸಬೇಡಿ.

0
847

ಯಾವುದೇ ಮನುಷ್ಯನಿಗೂ ಸಹ ಒಂದಲ್ಲ ಒಂದು ದಿನಗಳಲ್ಲಿ ಜ್ವರ. ಶೀತ.ಕೆಮ್ಮು ಈ ರೀತಿಯ ಸಮಸ್ಯೆಗಳು ಬಂದೆ ಬರುತ್ತದೆ.ಅದಕ್ಕೆ ಕಾರಣ ಅವನು ಸೇವಿಸುವ ಆಹಾರಗಳು ತುಂಬಾ ಪರಿಣಾಮ ಬೀರುತ್ತವೆ. ಆದರೆ ಕೆಲವು ಜನರು ಈ ಸಮಸ್ಯೆಗಳನ್ನು ತುಂಬಾ ಗಾಂಭೀರವಾಗಿ ತೆಗೂಡುಕೊಳ್ಳುತ್ತಾರೆ ಆದರೆ ಇನ್ನೂ ಕೆಲವರು ಇದನ್ನು ಚಿಂತಿಸುವುದಿಲ್ಲ. ಆದರೂ ಈ ಸಮಸ್ಯೆಗಳು ಸಾಮಾನ್ಯ ಸಮಸ್ಯೆ ಆದರೂ ಕೆಲವು ಸಲ ಇದು ಗಂಭೀರವಾಗಿ ತುಂಬಾ ತೊಂದರೆಗಳನ್ನು ಅನುಭವಿಸಬೇಕಾಗುವ ಸಂದರ್ಭ ಹೋದಗಿ ಬರುತ್ತದೆ.

ಕೆಲವರು ಈ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಂಡುಕೊಳ್ಳಲು ಹಲವಾರು ರೀತಿಯ ಮಾತ್ರೆ. ಔಷಧಿಗಳ ಮೊರೆ ಹೋಗಿ ಅದನ್ನು ಒಂದು ಅಡ್ಡ ಪರಿಣಾಮಕ್ಕೆ ಒಡ್ಡಿಕೊಳ್ಳುತ್ತಾರೆ. ಆದರೆ ಈ ಸಮಸ್ಯೆಗಳು ಬಂದಾಗ ಕೆಲವು ರೀತಿಯ ಆಹಾರಗಳನ್ನು ಸೇವಿಸಬಾರದು. ಏಕೆಂದರೆ ಕೆಲವು ಆಹಾರಗಳು ನಮ್ಮ ಸಮಸ್ಯೆಗಳನ್ನು ಹೆಚ್ಚಿಸುತ್ತವೆ. ಅಗಾಗಿ ಇಂತಹ ಆಹಾರಗಳ ಬದಲಾಗಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರ ಸೇವಿಸುವುದರಿಂದ ರೋಗದಿಂದ ಬೇಗ ಗುಣಮುಖರಾಗಬಹುದು.

ಆದರೆ ಯಾವುದೇ ಕಾರಣಕ್ಕೂ ನಿಮಗೆ ಹುಷಾರಿಲ್ಲದ ಸಮಯದಲ್ಲಿ ಈ ಆಹಾರಗಳನ್ನು ಸೇವಿಸಬೇಡಿ. ಸಿಹಿ ತಿಂಡಿಗಳಲ್ಲಿ ಒಂದಾಗಿರುವ ಕ್ಯಾಂಡಿಗಳನ್ನು ಸೇವಿಸಬೇಡಿ. ಇವುಗಳಲ್ಲಿ ಕೊಬ್ಬಿನಂಶ ಹೆಚ್ಚಿರುತ್ತದೆ.ಇವು ಜೀರ್ಣಾಂಗಗಳ ಮೇಲೆ ಒತ್ತಡವುಂಟುಮಾಡುತ್ತದೆ. ಕೆಲವೊಮ್ಮೆ ಇಂತಹ ಸಿಹಿತಿಂಡಿಗಳೇ ನಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತವೆ.

ಸಂಸ್ಕರಿಸಲಾದ ಮಾಂಸಗಳಲ್ಲಿ ಸಕ್ಕರೆ ಅಥವ ಉಪ್ಪು ಸೇರಿರುತ್ತದೆ. ಈ ಸಂಸ್ಕರಿಸಲಾದ ಮಾಂಸದಲ್ಲಿ ನೈಟ್ರೇಟ್ ನೈಟ್ರೈಟ್ಸ್ ಆಗಿ ಪರಿವರ್ತಿತವಾಗುತ್ತದೆ. ಇದು ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಆರೋಗ್ಯ ಸರಿಯಿಲ್ಲದಿದ್ದಾಗ ನಮ್ಮ ರೋಗ ನಿರೋಧಕ ಶಕ್ತಿಯ ಮೇಲೆ ಈ ನೈಟ್ರೈಟ್ಸ್ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಕಿತ್ತಳೆ ಹಣ್ಣಿನ ರಸವನ್ನು ಆರೋಗ್ಯಕ್ಕೆ ಒಳ್ಳೆಯದು ಎಂದೇ ಹೇಳಲಾಗುತ್ತದೆ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ, ಫೈಬರ್ ಮತ್ತು ಮೈಕ್ರೋನ್ಯೂಟ್ರಿಯೆಂಟ್ಸ್ ಇರುತ್ತದೆ. ಆದರೆ ಕಿತ್ತಳೆಯ ರಸವನ್ನು ಹಿಂಡಿದಾಗ ಅದರಲ್ಲಿ ಸೋಡಾದಲ್ಲಿರುವಷ್ಟೇ ಸಕ್ಕರೆ ಅಂಶ ಇರುತ್ತದೆ.ಇದು ಅನಾರೋಗ್ಯದ ಸಮಯದಲ್ಲಿ ಸಕ್ಕರೆ ಕೂಡ ಒಳ್ಳೆಯದಲ್ಲ. ಈ ಸಮಯದಲ್ಲಿ ಆ್ಯಸಿಡ್ ಗಳು ಹೊಟ್ಟೆಯನ್ನು ಹಾಳುಮಾಡುತ್ತದೆ.

ಹುಷಾರಿಲ್ಲದೆ ಇರುವ ಸಮಯದಲ್ಲಿ ಎಲ್ಲ ತರಹದ ಕಾಳುಗಳಿಂದ ದೂರವಿರುವುದು ಒಳ್ಳೆಯದು. ಅದರಲ್ಲೂ ಕಡಲೆಬೀಜ ಶೀತವಾದಾಗ ಹೆಚ್ಚಿನ ಮ್ಯೂಕಸ್ ಉತ್ಪಾದನೆ ಮಾಡಿ ತೊಂದರೆ ಉಂಟುಮಾಡುತ್ತದೆ. ಕಾಳುಗಳು ಮಲಬದ್ಧತೆಗೂ ಕಾರಣವಾಗುತ್ತವೆ.

ಕಾಳುಗಳಂತೆ ಕೆಂಪುಮಾಂಸ ಕೂಡ ಅನಾರೋಗ್ಯದ ಸಮಯದಲ್ಲಿ ಹಾನಿಕಾರಕ. ನಮಗೆ ಶೀತವಾದಾಗ ಬರ್ಗರ್ ಜೊತೆ ಇದನ್ನು ತಿಂದಿರಾದರೆ ಎದೆಗೂಡಿನಲ್ಲಿ ಮತ್ತು ಮೂಗಿನಲ್ಲಿ ಹೆಚ್ಚಿನ ದ್ರವ ಶೇಖರಣೆಯಾಗಿ ತೊಂದರೆಯಾಗುತ್ತದೆ.

ಮಾಂಸದಲ್ಲಿರುವ ಕೊಬ್ಬಿನಂಶ ಅನಾರೋಗ್ಯದ ಸಮಯದಲ್ಲಿ ಜೀರ್ಣಾಂಗದ ಮೇಲೆ ಒತ್ತಡ ಹೆಚ್ಚಿಸಿ ತೊಂದರೆ ಉಂಟುಮಾಡುತ್ತದೆ. ಅನಾರೋಗ್ಯ ಸಮಯದಲ್ಲಿ ದೇಹ ಒತ್ತಡದಲ್ಲಿರುತ್ತದೆ. ಇಂತಹ ಆಹಾರದ ಸೇವನೆಯಿಂದ ಇನ್ನಷ್ಟು ಪರಿಸ್ಥಿತಿ ಹದಗೆಡುತ್ತದೆ.

ಆಲ್ಕೋಹಾಲ್ ನಾವು ತೆಗೆದುಕೊಳ್ಳುವ ಎಲ್ಲ ಔಷಧಿಗಳ ಮೇಲೂ ಪ್ರಭಾವಬೀರಿ ಅವುಗಳನ್ನು ನಿಸ್ತೇಜ ಮಾಡಿಬಿಡುತ್ತದೆ. ಹೆಚ್ಚಿನ ಆಲ್ಕೋಹಾಲ್ ಸೇವನೆಯಿಂದ ಆ್ಯಸಿಡ್ ಉತ್ಪತ್ತಿ ಹೆಚ್ಚುತ್ತದೆ ಇದು ಹೊಟ್ಟೆಯ ಮೇಲೆ ಕೆಟ್ಟ ಪರಿಣಾಮವುಂಟುಮಾಡುತ್ತದೆ.

ಕೆಫೈನ್ ಕೂಡ ಅನಾರೋಗ್ಯದ ಸಮಯದಲ್ಲಿ ಹಾನಿಕಾರಿ. ಸೋಡ, ಕಾಫಿ ಮತ್ತು ಚಾಕೊಲೇಟ್ನ ಮಿತವಾದ ಸೇವನೆ ಯಾವಾಗಲೂ ಆರೋಗ್ಯಕ್ಕೆ ಒಳ್ಳೆಯದು. ಕೆಫೈನ್ ಹೆಚ್ಚಿರುವ ಆಹಾರ ಮತ್ತು ಪಾನೀಯಗಳೆಲ್ಲವೂ ಯಾವಾಗಲೂ ಸಕ್ಕರೆಯ ಅಂಶ ಹೆಚ್ಚಿರುತ್ತದೆ. ಆದ್ದರಿಂದ ಇವುಗಳಿಂದ ದೂರವಿರಬೇಕು.

ಹುಷಾರಿಲ್ಲದ ಸಮಯದಲ್ಲಿ ಮಸಾಲೆಭರಿತ ಆಹಾರದಿಂದ ದೂರವಿರಬೇಕು.

ಹಸಿ ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು. ಆದರೂ ಅನಾರೋಗ್ಯದಿಂದ ಮಲಗಿ ಚೇತರಿಸಿಕೊಳ್ಳುತ್ತಿರುವಾಗ ಬೇಯಿಸಿದ ಆಹಾರ ತಿನ್ನುವುದು ಒಳ್ಳೆಯದು. ಹಸಿಯಾಗಿ ತಿಂದಾಗ ಅನಾರೋಗ್ಯದ ಸಮಯದಲ್ಲಿ ಬ್ಯಾಕ್ಟೀರಿಯಾ ಸೋಂಕು ಹೆಚ್ಚಾಗುವ ಸಂಭವವಿರುತ್ತದೆ.

ಹಾಲಿನ ಉತ್ಪನ್ನಗಳಲ್ಲಿ ಕೊಬ್ಬಿನಂಶ ಹೆಚ್ಚಿರುತ್ತದೆ. ಇವು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಕೆಲವರಿಗೆ ಹಾಲಿನಿಂದ ಅಲರ್ಜಿ ಕೂಡ ಆಗುತ್ತದೆ.

ಎಣ್ಣೆಯುಕ್ತ ಪದಾರ್ಥಗಳನ್ನು ಸೇವಿಸಬಾರದು ಇವು ನಮ್ಮ ದೇಹದಲ್ಲಿ ಕೊಬ್ಬಿನಂಶ ಹೆಚ್ಚಿಸಿ ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ.

ಹುಷಾರಿಲ್ಲದ ಸಮಯದಲ್ಲಿ ತುಂಬಾ ತಣ್ಣನೆಯ ನೀರನ್ನು ಸೇವಿಸಬಾರದು. ಹುಷಾರಿಲ್ಲದ ಸಮಯದಲ್ಲಿ ಫಾಸ್ಟ್ ಫುಡ್. ಜಂಕ್ ಫುಡ್ ಗಳಿಂದ ದೂರವಿರಬೇಕು.

ಒಟ್ಟಾರೆ ನಿಮಗೆ ಯಾವುದೇ ರೀತಿಯ ಶೀತ. ನೆಗಡಿ. ಜ್ವರ. ಈ ರೀತಿಯ ಹಲವಾರು ಸಮಸ್ಯೆಗಳು ಇದ್ದಾಗ ಈ ಆಹಾರಗಳನ್ನು ತೇಜಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.

LEAVE A REPLY

Please enter your comment!
Please enter your name here