ನಟಿ ಚೈತ್ರಾ ಬಾಳಲ್ಲಿ ಬಿರುಗಾಳಿ ಪಾಪ

0
798

ನಟಿ ಚೈತ್ರ ಪೋತ್​ರಾಜ್​ 2006ರಲ್ಲಿ ಬಾಲಾಜಿ ಪೋತ್​ರಾಜ್​ ಎಂಬುವರನ್ನು ಮದುವೆಯಾಗಿದ್ದು,ಎರಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.ಈ ನಡುವೆ ಚೈತ್ರ ಪೋತರಾಜ್ ಸ್ಯಾಂಡಲ್​ವುಡ್ ನಟಿ ಚೈತ್ರಾ ಬಾಳಲ್ಲಿ ಬಿರುಕು ಮೂಡಿದ್ದು, ಪತಿ ಬಾಲಾಜಿ ಪೋತ್​ರಾಜ್ ವಿರುದ್ಧ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಸವನಗುಡಿ ಮಹಿಳಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.. ಏಪ್ರಿಲ್ ​ 14 ರಂದು ಬಾಲಾಜಿ ಪೋತ್​ರಾಜ್​ ವಿರುದ್ಧ ದೂರು ಸ್ವೀಕರಿಸಿರುವ ಪೊಲೀಸರು ಎಫ್​ಐಆರ್​ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕನ್ನಡದ ಶಿಷ್ಯ, ಖುಷಿ ಚಿತ್ರದಲ್ಲಿ ನಟಿಸಿದ್ದಾರೆ.. ಚೈತ್ರಾ ನೀಡಿರುವ ದೂರಿನ ಪ್ರಕಾರ ಗಂಡ ಬಾಲಾಜಿ ಪೋತ್ ರಾಜ್ ಮದುವೆಯಾದ ನಂತರ ಪ್ರತಿನಿತ್ಯವೂ ದೈಹಿಕ ಕಿರುಕುಳ ನೀಡುತ್ತಿದ್ದರಂತೆ.. ಎರಡನೇ ಮಗುವಾದ ಮೇಲೆ ಚೈತ್ರಾ ಜೊತೆಗೆ ದೈಹಿಕ ಸಂಪರ್ಕವನ್ನು ಇಟ್ಟುಕೊಳ್ಳದೆ, ಚೈತ್ರಾರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದರು ಎಂದು ದೂರಿದ್ದಾರೆ.

ಈ ಆರೋಪಗಳ ಜೊತೆಗೆ ಸಿನಿಮಾಗಳಲ್ಲಿ ನಟಿಸಬಾರದು ಎಂದು ಕಿರುಕುಳ ನೀಡುತ್ತಿದ್ದರು. ಇದೇ ವಿಚಾರಕ್ಕೆ ಜಗಳವಾಗಿದ್ದು ಇದೇ ತಿಂಗಳ 14ರಂದು ಬಾಲಾಜಿ ಪೋತರಾಜ್ ತೀವ್ರವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ರಂತೆ.. ಆರೋಪಿ ಬಾಲಾಜಿ ಪೋತರಾಜ್ ಗೆ ಬೇರೆ ಬೇರೆ ಯುವತಿಯರ ಜೊತೆ ಅಕ್ರಮ ಸಂಬಂಧ ಇರುವುದರಿಂದ ನನ್ನ ಜೊತೆ ದೈಹಿಕ ಸಂಪರ್ಕ ಮಾಡದೆ ಬೇರೆ ಕಡೆ ಹೋಗುತ್ತಾ ನನಗೆ ದೈಹಿಕ ಹಿಂಸೆ ನೀಡ್ತಿದ್ದಾರೆ ಅಂತ ಆರೋಪ ಮಾಡಿದ್ದಾರೆ.

 

LEAVE A REPLY

Please enter your comment!
Please enter your name here