ಇತ್ತೀಚಿನ ದಿನಗಳಲ್ಲಿ ಕಾಯಿಲೆಗಳು ಮನುಷ್ಯರ ಕಿತ್ತು ತಿನ್ನುತ್ತಿರುವ ಒಂದು ದೊಡ್ಡ ಸಮಸ್ಯೆಯಾಗಿದೆ. ಅದಕ್ಕೆ ಕಾರಣ ಕೂಡ ನಾವೇ ಏಕೆ ಅಂದ್ರೆ ನಾವು ಪ್ರತಿ ದಿನ ತಿನ್ನುವ ಆಹಾರ ಅಷ್ಟರ ಮಟ್ಟಿಗೆ ಕಲುಷಿತವಾಗಿದೆ, ಅದಕ್ಕೆ ಪರಿಹಾರ ಕೂಡ ನಾವು ತಿನ್ನುವ ಹಣ್ಣು ಹಂಪಲು ಮನೆ ಮದ್ದಿನಿಂದ ಸರಿ ಮಾಡಿಕೊಳ್ಳಬೇಕು. ಈ ಸಮಸ್ಯೆ ಇಂದ ದೂರವಾಗಲು ಜನರು ಈ ಎಲ್ಲ ಕಾಯಿಲೆಗಳನ್ನು ತಡೆಗಟ್ಟಲು ಅಗತ್ಯವಾದ ವಿಟಮಿನ್ ಗಳ ಪೂರೈಕೆಗೆ ಸಂಶೋಧಕರು ಪ್ರಯೋಗಾತ್ಮಕ ಹಳದಿ ಬಣ್ಣದ ಆಲೂಗಡ್ಡೆಯನ್ನು ಅಭಿವೃದ್ಧಿಪಡಿಸಿದ್ದಾರೆ.
ಜನರು ಸಾಮಾನ್ಯವಾಗಿ ಅಕ್ಕಿ, ಗೋಧಿ ಮತ್ತು ಜೋಳ. ಮತ್ತು ಎಲ್ಲ ರೀತಿಯ ತರಕಾರಿಗಳಲ್ಲಿ ಹೆಚ್ಚು ತಿನ್ನುವ ಆಹಾರ ಪದಾರ್ಥ ಆಲೂಗಡ್ಡೆಯಾಗಿದೆ. ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾ ದೇಶಗಳಲ್ಲಿ ಆಲೂಗಡ್ಡೆ ಪ್ರಧಾನ ಆಹಾರ ಕೂಡ ಹೌದು.
ಆಲೂಗೆಡ್ಡೆ ಮನುಷ್ಯನ ದೇಹದಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಇ ಯ ಕೊರತೆಯನ್ನು ನೀಗಿಸುತ್ತದೆ. ಮನುಷ್ಯನ ದೇಹದ ಆರೋಗ್ಯಕ್ಕೆ ಬಿಳಿ ಆಲೂಗಡ್ಡೆಗಿಂತ ಹಳದಿ ಬಣ್ಣದ ಆಲೂಗಡ್ಡೆ ಉತ್ತಮ ಎಂದು ಸಂಶೋಧನೆ ಹೇಳುತ್ತದೆ. ಅಟ್ಲಾಸ್ ರಾಜ್ಯ ವಿಶ್ವವಿದ್ಯಾಲಯದ ಸಂಶೋಧಕರು ಈ ಪ್ರಯೋಗ ನಡೆಸಿದ್ದು, ಹಳದಿ-ಕಂದು ಮಿಶ್ರಿತ ಆಲೂಗಡ್ಡೆಯಲ್ಲಿ ಶೇ 42ರಷ್ಟು ವಿಟಮಿನ್ ಎ ಇರುತ್ತದೆ ಎಂದು ಹೇಳಿದ್ದಾರೆ.
ವಿಟಮಿನ್ ಎ ಮಕ್ಕಳ ದಿನನಿತ್ಯದ ಆಹಾರದಲ್ಲಿದ್ದರೆ ಒಳ್ಳೆಯದು. ಇದರಿಂದ ದೃಷ್ಟಿಯ ಬೆಳವಣಿಗೆ, ರೋಗನಿರೋಧಕ ಶಕ್ತಿ, ಅಂಗಾಂಗಗಳ ಬೆಳವಣಿಗೆಗೆ ಮತ್ತು ಸಂತಾನೋತ್ಪತ್ತಿ ಆರೋಗ್ಯವನ್ನು ಹೆಚ್ಚಿಸುತ್ತದೆ.
ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.
ಚಿನ್ನದ ಬಣ್ಣದ ಆಲೂಗಡ್ಡೆಯಲ್ಲಿ ಶೇ.38 ರಷ್ಟು ವಿಟಮಿನ್ ಇ ಸಹ ಇದ್ದು ಅದು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತ, ನರಗಳು, ಸ್ನಾಯುಗಳು, ದೃಷ್ಟಿ ಮತ್ತು ಪ್ರತಿರಕ್ಷಣಾ ವ್ಯವಸ್ಥೆಗೆ ಹಾನಿಯಾಗುವುದರ ವಿರುದ್ಧ ರಕ್ಷಣೆ ನೀಡುತ್ತದೆ. ಸಂತಾನೋತ್ಪತ್ತಿ ಸಮಯದಲ್ಲಿ 100 ಗ್ರಾಂನಷ್ಟು ಆಲೂಗಡ್ಡೆಯನ್ನು ಸೇವಿಸುತ್ತಿದ್ದರೆ ದೇಹಕ್ಕೆ ಶೇ.10 ರಷ್ಟು ವಿಟಮಿನ್ ಎ ಮತ್ತು ಶೇಕಡಾ 20 ರಷ್ಟು ವಿಟಮಿನ್ ಈ ದೊರಕುತ್ತದೆ.
ದೇಹಕ್ಕೆ ಶಕ್ತಿ ಸಿಗಲು ಸುಮಾರು 80 ಲಕ್ಷ ಮಂದಿ ಆಲೂಗಡ್ಡೆ ಸೇವನೆಯನ್ನು ಅವಲಂಬಿಸಿಕೊಂಡಿದ್ದು ಹಲವರು ಈ ಪೌಷ್ಟಿಕಾಂಶಗಳನ್ನು ಸರಿಯಾಗಿ ಸೇವಿಸುವುದಿಲ್ಲ ಎಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮಾರ್ಕ್ ಫೈಲ್ಲಾ ತಿಳಿಸಿದ್ದಾರೆ.
ಆದ್ದರಿಂದ ಈ ಬಿಳಿ ಆಲೂಗೆಡ್ಡೆ ಬದಲು ಹಳದಿ ಬಣ್ಣದ ಆಲೂಗೆಡ್ಡೆ ತಿನ್ನಲು ಪ್ರಾರಂಭಿಸಿ.ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.
ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.