ಧೂಳಿನ ಅಲರ್ಜಿಯ ಇದ್ಯ ಅದು ಕ್ಯಾನ್ಸರ್ ತರಬಹುದು ತಿಳಿದುಕೊಳ್ಳಿ

0
1090

ಇಂದಿನ ಜನಸಂಖ್ಯೆ. ಅದಕ್ಕೆ ತಕ್ಕಂತೆ ಫಾಕ್ಟ್ರಿ ಗಳು. ವಾಹನಗಳು. ಹೊಗೆ. ಗಾಳಿ. ಧೂಳು. ಇವುಗಳಿಂದ ದೂರ ಸರಿಯಲು ಆಗುವುದಿಲ್ಲ. ಬೆಳಿಗ್ಗೆ ಎದ್ದರೆ ಸಂಜೆಯವರೆಗೂ ಹೊರಿಗಿನ ಕೆಲಸಗಳೇ ಹೆಚ್ಚು ಇರುವುದರಿಂದ ಈ ಎಲ್ಲ ಧೂಳು. ಗಾಳಿಗೆ ನಮ್ಮ ದೇಹವು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಧೂಳಿಗೆ ನಮ್ಮ ದೇಹವು ಅನಾರೋಗ್ಯದಿಂದ ಒದ್ದಾಡುತ್ತದೆ. ಅತೀ ಹೆಚ್ಚು ಧೂಳು ಶ್ವಾಸಕೋಶ  ಹಾಳು ಮಾಡಿ ಕೊನೆಗೆ ಕ್ಯಾನ್ಸರ್ ತರುವ ಸಾಧ್ಯತೆ ಇರುತ್ತೆ, ಈ ಧೂಳಿನ ಅಲರ್ಜಿಯಿಂದಾಗಿ ಕೆಲವೊಮ್ಮೆ ಮೂಗು ಕಟ್ಟುವಿಕೆ, ಮಲಗಲು ತೊಂದರೆ ಮತ್ತು ಉಬ್ಬಸ, ಉಸಿರಾಟದ ತೊಂದರೆಗಳು ಕಂಡುಬರುತ್ತದೆ. ನಾವು ಹೇಳಿರುವ ಮಾಹಿತಿ ಓದಿ ಅದನ್ನ ಪಾಲಿಸಿ.

ಈ ಧೂಳಿನ ಅಲರ್ಜಿಯ ಪ್ರಮುಖ ಲಕ್ಷಣವೆಂದರೆ ಸಾಮಾನ್ಯ ಶೀತ, ಆದರೆ ಇದು ಧೂಳಿನ ಅಲರ್ಜಿಯಿಂದ ಬಂದಿರುತ್ತದೆ ಎಂದು ತಿಳಿದುಕೊಳ್ಳುವುದು ಕಷ್ಟವಾಗುತ್ತದೆ. ಧೂಳಿನ ಅಲರ್ಜಿಯ ಸಾಮಾನ್ಯ ಲಕ್ಷಣಗಳೆಂದರೆ ಸೀನುವಿಕೆ, ಸ್ರವಿಸುವ ಮೂಗು, ತುರಿಕೆ, ಕಣ್ಣು ಕೆಂಪಾಗುವುದು ಅಥವಾ ನೀರು ಬರುವುದು, ಮೂಗು ಕಟ್ಟುವಿಕೆ, ಮೂಗು ತುರಿಸುವುದು ಇತ್ಯಾದಿ.

ಧೂಳಿನ ಅಲರ್ಜಿಯಾಗುವವರು ಕೆಲವೊಂದು ಮನೆಮದ್ದು ಮತ್ತು ಸರಳ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವುದು ತುಂಬಾ ಮುಖ್ಯ. ಹಾಗದರೆ ಅದು ಏನು ಎಂದು ನೋಡೋಣ.

ಧೂಳಿನ ಅಲರ್ಜಿಯಿಂದ ಸಾಮಾನ್ಯ ಶೀತ, ಇದು ವಾರಕ್ಕಿಂತ ಹೆಚ್ಚಿನ ಸಮಯ ಇದ್ದರೆ ಆಗ ಅದು ಧೂಳಿನ ಅಲರ್ಜಿಯೆಂದು ಪರಗಣಿಸಬೇಕು. ಕೆಲವೊಮ್ಮೆ ಧೂಳಿನ ಅಲರ್ಜಿ ಅಸ್ತಮಾಗೆ ಕಾರಣವಾಗಬಹುದು ಮತ್ತು ಇದು ನಮಗೆ ಕಿರಿಕಿರಿ ಉಂಟು ಮಾಡಬಹುದು.

ರೋಗನಿರೋಧಕ ವ್ಯವಸ್ಥೆ ಹೊರಗಿನ ಅಂಶಗಳಾದ ಪರಾಗ, ಸಾಕುಪ್ರಾಣಿಗಳೊಂದಿಗೆ ಅಡ್ಡಾಡುವುದು ಮತ್ತು ಧೂಳಿನ ಕ್ರಿಮಿಗಳಿಗೆ ಪ್ರತಿಕ್ರಿಯಿಸಿದಾಗ ಧೂಳಿನ ಅಲರ್ಜಿ ಉಂಟಾಗುತ್ತದೆ. ಧೂಳಿನ ಅಲರ್ಜಿಯಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಧೂಳಿನಿಂದ ದೂರವಿರಬೇಕು.

ಮ್ಯಾಟ್, ಹಾಸಿಗೆ ಮತ್ತು ಪೀಠೋಪಕರಣಗಳ ಮೇಲೆ ಧೂಳಿನ ಕ್ರಿಮಿಗಳು ಅಡಗಿರುತ್ತದೆ. ನಮ್ಮ ಮನೆ ಮತ್ತು ವಾಸದ ಕೋಣೆಗಳನ್ನು ಸ್ವಚ್ಛ ಮತ್ತು ಧೂಳಿನಿಂದ ಮುಕ್ತವಾಗಿಡಬೇಕು. ನೀವು ಕೆಲಸ ಮಾಡುವಂತಹ ಸ್ಥಳವು ನಿಯಮಿತವಾಗಿ ಸ್ವಚ್ಛಗೊಳಿಸಲಾಗುತ್ತಿದೆಯಾ ಮತ್ತು ಧೂಳಿನಿಂದ ಮುಕ್ತವಾಗಿದೆಯಾ ಎಂದು ಗಮನಿಸಬೇಕು. ನಾವು ಹೊರಗಡೆ ಹೋಗುವಾಗ ಮೂಗಿಗೆ ಮಾಸ್ಕ್ ಅಥವಾ ಮೂಗನ್ನು ಬಟ್ಟೆಯಿಂದ ಮುಚ್ಚುವುದರಿಂದ ಧೂಳಿನ ಅಲರ್ಜಿಯಿಂದ ನಮ್ಮನ್ನು ದೂರವಿಡಬಹುದು.

ಧೂಳಿನ ಅಲರ್ಜಿಯ ಕೆಲವೊಂದು ಲಕ್ಷಣಗಳು ಹೀಗಿವೆ.

ಧೂಳಿನ ಅಲರ್ಜಿಯಿಂದ ಉಂಟಾಗುವ ಅತ್ಯಂತ ಸಾಮಾನ್ಯ ಅಲರ್ಜಿ ರೋಗವೆಂದರೆ ಏರಿಳಿತದ ಜ್ವರ. ಇದು ತುರಿಕೆ, ಕಣ್ಣಿನಲ್ಲಿ ನೀರು, ಪದೇ ಪದೇ ಸೀನು, ಮೂಗು ಕಟ್ಟುವಿಕೆ, ಬಾಯಿಯ ಮೇಲ್ಭಾಗದಲ್ಲಿ ತುರಿಕೆ, ಕಫ, ಗಂಟಲಿನಲ್ಲಿ ಕೆರೆತ.

ಏರಿಳಿತದ ಜ್ವರಕ್ಕೆ ಚಿಕಿತ್ಸೆ:
ಆಂಟಿಹಿಸ್ಟಾಮೈನ್ ಮಾತ್ರೆ ಅಥವಾ ಸಿರಫ್ ನಮ್ಮ ದೇಹದಲ್ಲಿ ಹಿಸ್ಟಮಿನ್ ಉತ್ಪತ್ತಿಯಾಗುವುದನ್ನು ತಡೆದು ಅಲರ್ಜಿಯಿಂದ ಉಂಟಾಗುವ ಅಲರ್ಜಿಯ ರೋಗ ತಡೆಯುತ್ತದೆ.

ಕೆಲವು ಸಲ ಧೂಳಿನ ಅಲರ್ಜಿಯು ಅಸ್ತಮಾಕ್ಕೆ ಕಾರಣವಾಗಬಹುದು. ಪರಾಗ, ಧೂಳು ಮತ್ತು ಧೂಳಿನ ಕ್ರಿಮಿಗಳಲ್ಲಿ ಇರುವ ಕೆಲವೊಂದು ಅಲರ್ಜಿಕಾರಕಗಳು ಅಸ್ತಾಮಾಕ್ಕೆ ಕಾರಣವಾಗಬಹುದು. ಅಸ್ತಮಾ ದೀರ್ಘಕಾಲದ ರೋಗವಾಗಿದ್ದು, ಇದರಿಂದ ಬಳಲುವ ರೋಗಿಗಳು ಉಸಿರಾಟದ ತೊಂದರೆ ಮತ್ತು ಕೆಮ್ಮುವಿಕೆ ಉಂಟಾಗುತ್ತದೆ. ಕೆಲವೊಮ್ಮೆ ಅಸ್ತಮಾದಿಂದ ಉಸಿರಾಟದ ತೊಂದರೆ, ಚರ್ಮದ ಬಣ್ಣ ನೀಲಿಯಾಗುವುದು, ಅರೆನಿದ್ರಾವಸ್ಥೆ ಇತ್ಯಾದಿ ಉಂಟಾಗಬಹುದು.

ಅಸ್ತಮಾ ಚಿಕಿತ್ಸೆ:
ದೀರ್ಘಾವಧಿ ತನಕ ಧೂಳು ಮತ್ತು ಹೊಗೆ ಹತ್ತಿರ ಇರುವುದನ್ನು ಕಡೆಗಣಿಸಿ. ನಿಮ್ಮ ವಾಸಿಸುವ ಸ್ಥಳವು ಧೂಳಿನಿಂದ ಮುಕ್ತವಾಗಿರಲಿ ಮತ್ತು ನಿಯಮಿತವಾಗಿ ಸ್ವಚ್ಛಗೊಳಿಸುವ ಕಾರಣ ಧೂಳಿನ ಕ್ರಿಮಿಗಳು ಕಡಿಮೆಯಾಗುತ್ತದೆ. ಅಸ್ತಮಾವನ್ನು ಸಂಪೂರ್ಣವಾಗಿ ನಿವಾರಿಸುವುದು ಕಷ್ಟ. ಆದರೆ ಅದರ ಗುಣಲಕ್ಷಣಗಳನ್ನು ನೋಡಿಕೊಂಡು ಚಿಕಿತ್ಸೆ ಮಾಡಬಹುದು. ನೀವು ರಿಲೀವರ್ ಗಳನ್ನು ಬಳಸಬಹುದು. ಇದು ತಕ್ಷಣ ಪರಿಣಾಮ ಉಂಟುಮಾಡುವ ಔಷಧಿ. ವಾಯುಮಾರ್ಗದ ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ ಅಥವಾ ತಡೆಯುತ್ತದೆ. ಇದು ತುಂಬಾ ದೀರ್ಘಾವಧಿಗೆ ಕೆಲಸ ಮಾಡುತ್ತದೆ ಮತ್ತು ವಾಯುಮಾರ್ಗದಲ್ಲಿರುವ ಉರಿಯೂತ ತಗ್ಗಿಸುತ್ತದೆ.

ಇಸಬು ಚರ್ಮದ ನವೆ ಉರಿಯೂತ. ಚರ್ಮದ ಹಾನಿಗೊಳಗಾದ ಭಾಗವು ಕೆಂಪಾಗುವುದು ಇದರ ಒಂದು ಚಿಹ್ನೆ. ದಪ್ಪಗಾದ ಒಣಚರ್ಮದ ಪಟ್ಟಿ, ಉಂಡೆಗಳು ಮತ್ತು ಚರ್ಮದಲ್ಲಿ ಬೊಕ್ಕೆಗಳು ಏಳುವುದು, ಬಾಹ್ಯ ಸೋಂಕಿನ ಚಿಹ್ನೆಗಳು. ಇದು ಹೆಚ್ಚಾಗಿ ಮಕ್ಕಳನ್ನು ಭಾದಿಸುತ್ತದೆ ಮತ್ತು 40 ಮೀರಿದ ವಯಸ್ಕರನ್ನು ಇದು ಕಾಡುವುದಿಲ್ಲ. ಮನೆ ಹಾಗೂ ಇತರ ಕೆಲವು ಸ್ಥಳಗಳಲ್ಲಿ ಇರುವ ಧೂಳಿನ ಕ್ರಿಮಿಗಳು ಸತತವಾಗಿ ದೇಹದ ಮೇಲೆ ದಾಳಿ ಮಾಡುವುದರಿಂದ ಇಸಬು ಹೆಚ್ಚುತ್ತದೆ.

ಇಸಬು ಚಿಕಿತ್ಸೆ :
ಹೆಚ್ಚಿನ ಜನರಿಗೆ ಇಸಬುಗೆ ಚಿಕಿತ್ಸೆ ಪರಿಣಾಮಕಾರಿಯಾಗುತ್ತದೆ. ಆದರೆ ಇದನ್ನು ಸಂಪೂರ್ಣವಾಗಿ ಗುಣಪಡಿಸುವುದು ಕಷ್ಟ. ಚಿಕಿತ್ಸೆಯ ಮೂಲಭೂತ ಅಂಶಗಳನ್ನು ಅನುಸರಿಸಿಕೊಂಡು ಹೋದರೆ ಅದು ಸಾಮಾನ್ಯವಾಗಿ ಒಳ್ಳೆಯ ರೀತಿ ಕೆಲಸ ಮಾಡುತ್ತದೆ. ಇಸಬುನ್ನು ಸಂಪೂರ್ಣವಾಗಿ ನಿವಾರಣೆಯಾಗುವುದು ತುಂಬಾ ಅಪರೂಪ. ಅಗಾಗಿ ಆದಷ್ಟು ಧೂಳಿನಿಂದ ದೂರವಿದ್ದು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ.

ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.

LEAVE A REPLY

Please enter your comment!
Please enter your name here